Dangal ಚಿತ್ರಕ್ಕೆ ಶಾರ್ಟ್​ ಲಿಸ್ಟ್​ ಆಗಿದ್ದಕ್ಕೆ ಬೇಸರಗೊಂಡಿದ್ದರಂತೆ ಈ ನಟಿ.. ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ನಟ ಆಮೀರ್‌ ಖಾನ್ ಅವರೊಂದಿಗೆ ‘ದಂಗಲ್’(Dangal) ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ದೊಡ್ಡ ಪರದೆಗೆ ಪಾದಾರ್ಪಣೆ ಮಾಡಿದ ನಟಿ ಸನ್ಯಾ ಮಲ್ಹೋತ್ರಾ(Sanya Malhotra)‘ದಂಗಲ್’ ಚಿತ್ರಕ್ಕೆ ತನ್ನನ್ನು ಶಾರ್ಟ್ ಲಿಸ್ಟ್(Short List) ಮಾಡಿದ್ದಾಗ ತುಂಬಾನೇ ನಿರಾಶೆಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ನಟಿ ಸನ್ಯಾ ಮಲ್ಹೋತ್ರಾ

ನಟಿ ಸನ್ಯಾ ಮಲ್ಹೋತ್ರಾ

  • Share this:
ಬಾಲಿವುಡ್‌(Bollywood)ನಲ್ಲಿ ಮಿಸ್ಟರ್ ಪರ್ಫೆಕ್ಟ್‌(Mr. Perfect) ಎಂದೇ ಹೆಸರು ಪಡೆದಿರುವ ನಟ ಆಮೀರ್‌ ಖಾನ್(Aamir Khan) ಜೊತೆಗೆ ಸ್ಕ್ರೀನ್ ಹಂಚಿಕೊಳ್ಳುವುದು ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ..? ಯುವ ನಟರು ಮತ್ತು ನಟಿಯರು ಈ ನಾಯಕ ನಟನೊಂದಿಗೆ ಅಭಿನಯಿಸಲು ತುಂಬಾ ಕಾತುರತೆಯಿಂದ ಆ ಅವಕಾಶಕ್ಕೆ ಎದುರು ನೋಡುತ್ತಿರುತ್ತಾರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ನಟ ಆಮೀರ್‌ ಖಾನ್ ಅವರೊಂದಿಗೆ ‘ದಂಗಲ್’(Dangal) ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ದೊಡ್ಡ ಪರದೆಗೆ ಪಾದಾರ್ಪಣೆ ಮಾಡಿದ ನಟಿ ಸನ್ಯಾ ಮಲ್ಹೋತ್ರಾ(Sanya Malhotra)‘ದಂಗಲ್’ ಚಿತ್ರಕ್ಕೆ ತನ್ನನ್ನು ಶಾರ್ಟ್ ಲಿಸ್ಟ್(Short List) ಮಾಡಿದ್ದಾಗ ತುಂಬಾನೇ ನಿರಾಶೆಯಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಇದೇನಪ್ಪಾ ಈ ನಟಿಗೆ ಆಮೀರ್‌ ಖಾನ್ ಜೊತೆಯಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸುವವರಲ್ಲಿ ಇವರು ಒಬ್ಬರಾಗಿದ್ದು, ಏಕೆ ನಿರಾಶೆಯಾಗಿತ್ತು ಎಂದು ಹೇಳುತ್ತಿದ್ದಾರೆ ಎಂದು ನಿಮಗೆ ಪ್ರಶ್ನೆಯೊಂದು ಕಾಡಬಹುದು.

ಶಾರ್ಟ್ ಲಿಸ್ಟ್​ ಆಗಿದ್ದಕ್ಕೆ ಬೇಸರಗೊಂಡಿದ್ದರಂತೆ ಸನ್ಯಾ!

"ಈ ಚಿತ್ರಕ್ಕಾಗಿ ಸುಮಾರು ಶಾರ್ಟ್ ಲಿಸ್ಟ್ ಮಾಡಿದ 30 ಹುಡುಗಿಯರಲ್ಲಿ ನಾನು ಸಹ ಒಬ್ಬಳಾಗಿದ್ದ ಸುದ್ದಿ ನನಗೆ ತಿಳಿಯಿತು. ನಾನು ಶಾರ್ಟ್ ಲಿಸ್ಟ್ ಆದ ಹುಡುಗಿಯರಲ್ಲಿ 5 ಹುಡುಗಿಯರಿಗಿಂತಲೂ ಹೆಚ್ಚಿರುವುದಿಲ್ಲ ಎಂದು ಭಾವಿಸಿದ್ದೆ, ಆದರೆ ಅಲ್ಲಿ 30 ಹುಡುಗಿಯರನ್ನು ನೋಡಿ ನಾನು ತುಂಬಾನೇ ನಿರಾಶೆಗೊಂಡಿದ್ದೆ ಎಂದು ಸನ್ಯಾ ಮಲ್ಹೋತ್ರಾ ಹೇಳಿದರು. ಆದರೂ, ಆ ಚಿತ್ರದಲ್ಲಿರುವ ಪಾತ್ರವನ್ನು ನಾನೇ ಪಡೆಯುತ್ತೇನೆ ಎಂಬ ವಿಶ್ವಾಸ ಸಹ ಇತ್ತು ಎಂದು ಹೇಳಿದರು.

ಇದನ್ನು ಓದಿ: ಈ ವಾರವೂ ಸಿನಿರಸಿಕರಿಗೆ ಭರ್ಜರಿ ರಸದೌತಣ...ಒಟಿಟಿಯಲ್ಲಿ ಬಿಡುಗಡೆಯಾಗ್ತಿದೆ ಮಾರ್ವೆಲ್ಸ್​ನ `ಎಟರ್ನಲ್ಸ್​’ ಸಿನಿಮಾ!

ಬಬಿತಾ ಫೋಗಟ್​ ಪಾತ್ರ ನಿರ್ವಹಿಸಿದ್ದ ಸನ್ಯಾ ಮಲ್ಹೋತ್ರಾ !

ನಿತೇಶ್ ತಿವಾರಿ ನಿರ್ದೇಶನದ ‘ದಂಗಲ್’ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಅವರ ಜೀವನಾಧಾರಿತ ಕಥೆಯಾಗಿದ್ದು, ಅವರು ತಮ್ಮ ಇಬ್ಬರು ಪುತ್ರಿಯರಾದ ಗೀತಾ ಮತ್ತು ಬಬಿತಾಗೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಮತ್ತು ಭಾರತಕ್ಕೆ ಚಿನ್ನದ ಪದಕ ಗೆಲ್ಲುವ ಕನಸನ್ನು ನನಸು ಮಾಡಲು ಹೇಗೆ ಅವರ ಬಾಲ್ಯದಿಂದಲೇ ಅವರಿಗೆ ತರಬೇತಿ ನೀಡುತ್ತಾರೆ ಎಂಬುದು ಚಿತ್ರದ ಕಥಾ ಹಂದರವಾಗಿತ್ತು. ಈ ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಬಬಿತಾ ಫೋಗಟ್ ಪಾತ್ರವನ್ನು ನಿರ್ವಹಿಸಿದರು.

ಈ ಪಾತ್ರ ಸಿಗುತ್ತೆ ಎಂಬ ವಿಶ್ವಾಸವಿತ್ತು ಎಂದು ಸನ್ಯಾ!

ಸನ್ಯಾ ಈ ಚಿತ್ರದಲ್ಲಿ ಆಮೀರ್ ಅವರ ಮಗಳ ಪಾತ್ರವು ಅವರಿಗೆ ಸಿಕ್ಕ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ "ಆವಾಗ ಬಹಳಷ್ಟು ಜನರನ್ನು ಆಡಿಷನ್‌ಗೆ ಕರೆದಿದ್ದರು ಮತ್ತು ನಾನು ಅದರಲ್ಲಿ ಒಬ್ಬಳಾಗಿದ್ದೆ, ವಾಸ್ತವವಾಗಿ ನನ್ನನ್ನು ಶಾರ್ಟ್ ಲಿಸ್ಟ್ ಮಾಡಿದಾಗ ಇನ್ನೊಮ್ಮೆ ನಾನು ಆಡಿಷನ್‌ಗಾಗಿ ಅಲ್ಲಿಗೆ ಹೋದಾಗ 29 ರಿಂದ 30 ಹುಡುಗಿಯರನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ನಾನು ಅದನ್ನು ನೋಡಿ ಸಾಕಷ್ಟು ನಿರಾಶೆಗೊಂಡೆ. ಆದರೆ ಅದೇ ಸಮಯದಲ್ಲಿ ನಾನು ಬಾಲಿವುಡ್‌ನಲ್ಲಿ ಗ್ಯಾರಂಟಿ ಯಾವುದಾದರೂ ಚಲನಚಿತ್ರದ ಮೂಲಕ ಪದಾರ್ಪಣೆ ಮಾಡುತ್ತೇನೆ ಎಂದು ನಾನು ಸಾಕಷ್ಟು ಸಕಾರಾತ್ಮಕವಾಗಿದ್ದೆ” ಎಂದು ಹೇಳಿದರು.

ಇದನ್ನು ಓದಿ : ಈ ನಟಿಯ ಲುಕ್​ಗೆ ಕ್ಲೀನ್​ ಬೋಲ್ಡ್​ ಆದ್ರಾ ನಾಗಚೈತನ್ಯ? ಕಣ್ಣಲ್ಲೇ ಮಾತನಾಡಿಕೊಂಡ ವಿಡಿಯೋ ವೈರಲ್​!

‘ದಂಗಲ್​ ಸಿನಿಮಾಗೆ ಮೊದಲ ಆಡಿಷನ್​ ಕೊಟ್ಟಿದ್ದು’

“ನಾನು ಏಕೆ ನಿರಾಶೆಗೊಂಡಿದ್ದೆ ಎಂದು ನನಗೆ ಗೊತ್ತಿಲ್ಲ, ಆದರೆ ಇದು ಚಿತ್ರಕ್ಕಾಗಿ ನನ್ನ ಮೊದಲ ಆಡಿಷನ್ ಆಗಿತ್ತು ಮತ್ತು ನನಗೆ ತುಂಬಾ ವಿಶ್ವಾಸವಿತ್ತು, ಏನೇ ಆಗಲಿ ಆ ಪಾತ್ರವನ್ನು ನಾನೇ ಪಡೆಯುತ್ತೇನೆ ಎಂಬ ನಂಬಿಕೆ ಇತ್ತು, ಬಹುಶಃ ನನ್ನ ಆ ನಂಬಿಕೆಯೇ ನನ್ನನ್ನು ಆ ಪಾತ್ರಕ್ಕೆ ಆಯ್ಕೆ ಆಗಲು ಸಹಾಯಕವಾಯಿತು" ಎಂದು ಹೇಳಿದರು.ದಂಗಲ್‌ನಲ್ಲಿ ತನ್ನ ಹಿರಿಯ ಸಹೋದರಿ ಗೀತಾ ಫೋಗಟ್ ಪಾತ್ರವನ್ನು ಫಾತಿಮಾ ಸನಾ ಶೇಖ್ ನಿರ್ವಹಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ‘ದಂಗಲ್’ ಚಿತ್ರದ ನಂತರ ಸನ್ಯಾ ಮತ್ತು ಫಾತಿಮಾ ಅನುರಾಗ್ ಬಸು ಅವರ ‘ಲುಡೋ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದರು. ಆದರೆ ಚಿತ್ರದಲ್ಲಿ ಇವರಿಬ್ಬರು ಒಟ್ಟಿಗೆ ಇರುವ ಯಾವುದೇ ದೃಶ್ಯಗಳು ಚಿತ್ರದಲ್ಲಿರಲಿಲ್ಲ.
Published by:Vasudeva M
First published: