Bollywood ನಟಿ Sania Malhotra ಸಿನಿಮಾ ಸೆಟ್ನಿಂದ ಏನನ್ನು ಕದ್ದಿದ್ದಾರೆ ಗೊತ್ತೇ..?
ಮೀನಾಕ್ಷಿ ಸುಂದರೇಶ್ವರ್ ಸೆಟ್ನಿಂದ ತಾನು ಸೀರೆಗಳನ್ನು ಕದ್ದಿದ್ದೇನೆ ಎಂದು ಸಂವಾದವೊಂದರಲ್ಲಿ ಸಾನ್ಯಾ ಬಹಿರಂಗಪಡಿಸಿದರು. ಈ ಚಿತ್ರದಲ್ಲಿ ನಟಿ ಸಾನ್ಯಾ ಒಬ್ಬ ಮಧುರೈನ ದಕ್ಷಿಣ ಭಾರತದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನೀವು ಬಾಲಿವುಡ್ (Bollywood ) ನಟ ಆಮೀರ್ ಖಾನ್ (Aamir Khan) ಅಭಿನಯದ ‘ದಂಗಲ್’ ಚಿತ್ರ ನೋಡಿದ್ದರೆ, ಅದರಲ್ಲಿ ಆಮೀರ್ ಮಗಳ ಪಾತ್ರದಲ್ಲಿ ಅಭಿನಯಿಸಿದ ಸಾನ್ಯಾ ಮಲ್ಹೋತ್ರಾ (Sania Malhotra) ನಟನೆಯನ್ನು ನೀವು ನೋಡಿಯೇ ಇರುತ್ತೀರಿ.ಈ ನಟಿಯ ಬಗ್ಗೆ ಈಗೇಕೆ ಮಾತು ಅಂತೀರಾ..? ಹೌದು.. ಖುದ್ದು ಸಾನ್ಯಾ ಮಲ್ಹೋತ್ರಾ ಅವರೇ ತಮ್ಮ ಬಗ್ಗೆ ಬಹುತೇಕರಿಗೆ ಗೊತ್ತಿರದೆ ಇರುವಂತಹ ಒಂದು ಸುದ್ದಿಯನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಈ ನಟಿ ಚಿತ್ರದ ಸೆಟ್ನಿಂದ ಏನನ್ನು( Stolen ) ಕದ್ದಿದ್ದಾರೆ ಎಂದು ಅವರೇ ಮುಕ್ತವಾಗಿ (Freely Claimed ) ಹೇಳಿಕೊಂಡಿದ್ದಾರೆ ನೋಡಿ.
ಮಧುರೈನ ದಕ್ಷಿಣ ಭಾರತದ ಮಹಿಳೆಯ ಪಾತ್ರ
ನೆಟ್ಫ್ಲಿಕ್ಸ್ ಚಿತ್ರ ಮೀನಾಕ್ಷಿ ಸುಂದರೇಶ್ವರ್ ಸೆಟ್ನಿಂದ ತಾನು ಸೀರೆಗಳನ್ನು ಕದ್ದಿದ್ದೇನೆ ಎಂದು ಸಂವಾದವೊಂದರಲ್ಲಿ ಸಾನ್ಯಾ ಬಹಿರಂಗಪಡಿಸಿದರು. ಈ ಚಿತ್ರದಲ್ಲಿ ನಟಿ ಸಾನ್ಯಾ ಒಬ್ಬ ಮಧುರೈನ ದಕ್ಷಿಣ ಭಾರತದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಸೆಟ್ನಿಂದ ಕದ್ದಿದ್ದೇನೆ
ಅವಳು ಚಿತ್ರದ ದೃಶ್ಯಗಳಲ್ಲಿ ಕಾಟನ್ ಮತ್ತು ರೇಷ್ಮೆ ಬಣ್ಣದ ಸೀರೆಗಳನ್ನು ಧರಿಸಿದ್ದನ್ನು ನಾವು ನೋಡಬಹುದಾಗಿದೆ. ಈ ಚಿತ್ರದ ಸೆಟ್ಗಳಲ್ಲಿ ನಡೆದ ತನ್ನ ನೆಚ್ಚಿನ ಘಟನೆಯ ಬಗ್ಗೆ ಮಾತನಾಡಿದ ನಟಿ ಸಾನ್ಯಾ "ಈ ಪಾತ್ರಕ್ಕೆ ಸಿದ್ಧಳಾಗುವುದನ್ನು ನಾನು ತುಂಬಾನೇ ಇಷ್ಟ ಪಟ್ಟೆ. ನನ್ನ ಬಳಿ ಇನ್ನೂ ಆ ಸೀರೆಗಳಿವೆ. ನಾನು ಅವುಗಳನ್ನು ಸೆಟ್ನಿಂದ ಕದ್ದಿದ್ದೇನೆ ಮತ್ತು ಅವುಗಳಲ್ಲಿ ಒಂದನ್ನು ನನ್ನ ಸ್ನೇಹಿತರ ಮದುವೆಗೂ ಧರಿಸಿದ್ದೇನೆ" ಎಂದು ಹೇಳಿದರು.
ಸ್ಕ್ರಿಪ್ಟ್ನ ರೋಮ್ಯಾಂಟಿಕ್ ಬಿಟ್ ಇಷ್ಟ
ಇಬ್ಬರು ಮದುವೆಯಾದ ದಂಪತಿಗಳನ್ನೊಳಗೊಂಡ ರೋಮ್ಯಾಂಟಿಕ್ ಹಾಸ್ಯ ಕಥಾ ಹಂದರ ಹೊಂದಿರುವ ಮೀನಾಕ್ಷಿ ಸುಂದರೇಶ್ವರ್ ಚಿತ್ರದಲ್ಲಿ ಪಾತ್ರ ಮಾಡಲು ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ನಟಿ ಸಾನ್ಯಾ "ಸ್ಕ್ರಿಪ್ಟ್ನ ರೋಮ್ಯಾಂಟಿಕ್ ಬಿಟ್ ನನ್ನನ್ನು ಆಯ್ಕೆ ಮಾಡಿತು. ಇತ್ತೀಚಿನ ದಿನಗಳಲ್ಲಿ ನಾನು ಪ್ರಣಯ ಹಾಸ್ಯಗಳಿಗೆ ಆಕರ್ಷಿತಳಾಗಿದ್ದೇನೆ, ಆದ್ದರಿಂದ ನಾನು ಈ ಪಾತ್ರ ಮತ್ತು ಸ್ಕ್ರಿಪ್ಟ್ ಒಪ್ಪಿಕೊಂಡೆ. ನನಗೆ, ಇದರಲ್ಲಿರುವ ಮೀನಾಕ್ಷಿ ಪಾತ್ರದ ಜೊತೆಗೆ ಮೊದಲ ನೋಟದಲ್ಲೇ ಪ್ರೀತಿಯಾಗಿತ್ತು. ಧರ್ಮ ಪ್ರೊಡಕ್ಷನ್ಸ್ನೊಂದಿಗೆ ಕೆಲಸ ಮಾಡಲು ನಾನು ಬಯಸಿದ್ದೆ, ಅದು ನನ್ನ ಕನಸಾಗಿತ್ತು" ಎಂದು ಹೇಳಿದರು.
ಬಹು ನಿರೀಕ್ಷಿತ ಚಲನಚಿತ್ರ
ಈ ನಟಿಯ ಎರಡು ಚಿತ್ರಗಳಾದ ‘ಪಗ್ಲೇಟ್’ ಮತ್ತು ‘ಮೀನಾಕ್ಷಿ ಸುಂದರೇಶ್ವರ್’ ಈ ವರ್ಷ ಬಿಡುಗಡೆಯಾಗಿವೆ ಮತ್ತು ಮುಂಬರುವ ದಿನಗಳಲ್ಲಿ ನಟಿ ‘ಹಿಟ್: ದಿ ಫಸ್ಟ್ ಕೇಸ್, ‘ಸ್ಯಾಮ್ ಬಹದ್ದೂರ್’ ಮತ್ತು ‘ಲವ್ ಹಾಸ್ಟೆಲ್’ ನಂತಹ ಕೆಲವು ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಯಾಮ್ ಬಹದ್ದೂರ್’ ಚಿತ್ರದಲ್ಲಿ ನಟಿ ಸಾನ್ಯಾ ಸ್ಯಾಮ್ ಮಾಣಿಕ್ ಶಾ ಪತ್ನಿಯ ಪಾತ್ರ ಮಾಡಲಿದ್ದು, ನಟ ವಿಕ್ಕಿ ಕೌಶಲ್ 1971ರ ಯುದ್ಧದ ನಾಯಕ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಪಾತ್ರದಲ್ಲಿ ನಟಿಸಲಿದ್ದಾರೆ. ಫಾತಿಮಾ ಸನಾ ಶೇಖ್ ಕೂಡ ಚಿತ್ರದ ಭಾಗವಾಗಲಿದ್ದಾರೆ.
ಈ ನಟಿಯ ‘ಹಿಟ್’ ಚಿತ್ರವು ಅದೇ ಹೆಸರಿನ ತೆಲುಗು ಚಿತ್ರದ ರಿಮೇಕ್ ಆಗಿದ್ದು, ಇದರಲ್ಲಿ ನಟ ರಾಜ್ ಕುಮಾರ್ ರಾವ್ ಜೊತೆಗೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಒಂದು ಕೊಲೆಯ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರಾಜ್ ನಟಿಸಿದ್ದಾರೆ.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ