Bigg Boss OTT: ಬಿಗ್​ ಬಾಸ್​ ಮನೆಯಲ್ಲಿ ಟ್ರೋಲ್ ರಾಣಿ ಕಿರಿಕ್; ಸೋನು ಗೌಡಗೆ ನೀನು ಲೂಸ್ ಎಂದು ಬೈದಿದ್ಯಾಕೆ ಸಾನ್ಯಾ?

ಸಾಂಗ್ ಜೋರಾಗಿ ಕೇಳಿಸ್ತಿತ್ತು ಇದರಲ್ಲಿ ನನ್ನ ತಪ್ಪಿಲ್ಲ ಎಂದು ಸೋನು ಶ್ರೀನಿವಾಸ್ ಗೌಡ ವಾದಿಸೋಕೆ ಶುರು ಮಾಡಿದರು. ಅಷ್ಟೇ ಅಲ್ಲ ಸಾನ್ಯಾ ಮೇಲೆಯೇ ತಪ್ಪನ್ನು ಎತ್ತಿ ಹಾಕಿದರು. ಈ ವಿಚಾರದಿಂದ ಸಾನ್ಯಾ ಸಿಕ್ಕಾಪಟ್ಟೆ ಬೇಸರಗೊಂಡರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಸಾನ್ಯಾ, ಸೋನುಗೌಡ

ಸಾನ್ಯಾ, ಸೋನುಗೌಡ

  • Share this:
ಈ ಬಾರಿ ಓಟಿಟಿಯಲ್ಲಿ (OTT) ಪ್ರಸಾರವಾಗ್ತಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು (Contestants) ತಮ್ಮ ಜೀವನ ಅನೇಕ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಮೊದಲ ವಾರ ಮುಗಿಸಿ ಸ್ಪರ್ಧಿಗಳು 2 ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಈಗಾಗಲೇ ಪ್ರೇಮಕಥೆಗಳು ಶುರುವಾಗಿದೆ.  ಹೀಗಾಗಿ ಎಲ್ಲೆಲ್ಲೂ ಬಿಗ್​ ಬಾಸ್​ ಸ್ಪರ್ಧಿಗಳ (Bigg Boss Contestants) ಕುರಿತ ಚರ್ಚೆಗಳು ಹೆಚ್ಚಾಗಿದೆ. ರೀಲ್ಸ್​ ಹಾಗೂ ಟಿಕ್​ಟಾಕ್ (Reels and Tiktok)​ ಮಾಡಿಕೊಂಡು ಫೇಮಸ್​ ಆಗಿದ್ದ ಸೋನು ಶ್ರೀನಿವಾಸ ಗೌಡ (Sonu Srinivasa Gowda) ಬಿಗ್ ಬಾಸ್ ಮನೆಯಲ್ಲೂ ಭಾರೀ ಸದ್ದು ಮಾಡ್ತಿದ್ದಾರೆ. ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗ್ತಾನೆ ಇರ್ತಾರೆ.  

ಸಾನ್ಯಾ, ಸೋನು ನಡುವೆ ಕಿತ್ತಾಟ ಯಾಕೆ? 

ಬಿಗ ಬಾಸ್​ ಸ್ಪರ್ಧಿಗಳಿಗೆ ಒಂದಲ್ಲ ಒಂದು ಟಾಸ್ಕ್ ಕೊಡಲಾಗುತ್ತದೆ. ಅದೇ ರೀತಿ  2 ಟೀಂ ಮಾಡಿ ಒಂದು ಟಾಸ್ಕ್ ನೀಡಿದ್ರು.  ಈ ಟಾಸ್ಕ್​ನ ಪ್ರಕಾರ 1 ಟೀಂನಿಂದ ಇಬ್ಬರು ಆಟಕ್ಕೆ ಇಳಿಯಬೇಕು. ಒಬ್ಬರ ಕಿವಿಗೆ ಹೆಡ್​ಫೋನ್​ ಹಾಕಿ ಸಾಂಗ್ ಹಾಕಲಾಗುತ್ತದೆ. ಎದುರು ಇದ್ದವರು ಬಿಗ್ ಬಾಸ್ ನೀಡಿದ ಲೈನ್​​ನ ಜೋರಾಗಿ ಹೇಳಬೇಕು. ಹೆಡ್​ಫೋನ್ ಹಾಕಿಕೊಂಡವರು ಇದನ್ನು ಗೆಸ್ ಮಾಡಬೇಕು. ಈ ಆಟವನ್ನು ಸೋನು ಹಾಗೂ ಸಾನ್ಯಾ ಆಡಿದ್ರು.

bigg boss kannada ott sonu srinivas gowda reveals about her Love and video leak
ಸೋನು ಶ್ರೀನಿವಾಸ್​ ಗೌಡ


ಟಾಸ್ಕ್​ ಮಾಡದೇ ಕೂಗಾಡಿದ ಸೋನು

ಸೋನು ಶ್ರೀನಿವಾಸ್ ಗೌಡ ಕಿವಿಗೆ ಹೆಡ್​ಫೋನ್​ ಹಾಕಿಕೊಂಡರೆ, ಸಾನ್ಯಾ ಲೈನ್​ಗಳನ್ನು ಹೇಳಿದರು. ಆದರೆ, ಒಂದೇ ಒಂದು ವಾಕ್ಯವನ್ನು ಸರಿಯಾಗಿ ಹೇಳಿಲ್ಲ ಸೋನು. ಹೆಡ್​ಫೋನ್​ನಲ್ಲಿ ಸಾಂಗ್ ದೊಡ್ಡದಾಗಿ ಬರುತ್ತಿದೆ ಎಂದು ಸುಮ್ಮನೆ ಕಿರುಚಾಡುತ್ತಿದ್ರು. ಬಳಿಕ ಸಾನ್ಯಾ ಕೋಪಗೊಂಡರು, ಇದೇ ವೇಳೆ ಇಬ್ಬರಿಗೂ ಕಿರಿಕ್ ಆಗಿ ಮಾತಿಗೆ ಮಾತು ಬೆಳೆಯಿತು.

Actress Sanya Iyer entered the house of Big Boss pvn
ಸಾನ್ಯ ಅಯ್ಯರ್


ನೀನು ಲೂಸಾ ಎಂದು ಕೇಳಿ ಅತ್ತ ಸಾನ್ಯಾ

ಸಾಂಗ್ ಜೋರಾಗಿ ಕೇಳಿಸ್ತಿತ್ತು ಇದರಲ್ಲಿ ನನ್ನ ತಪ್ಪಿಲ್ಲ ಎಂದು ಸೋನು ಶ್ರೀನಿವಾಸ್ ಗೌಡ ವಾದಿಸೋಕೆ ಶುರು ಮಾಡಿದರು. ಅಷ್ಟೇ ಅಲ್ಲ ಸಾನ್ಯಾ ಮೇಲೆಯೇ ತಪ್ಪನ್ನು ಎತ್ತಿ ಹಾಕಿದರು. ಈ ವಿಚಾರದಿಂದ ಸಾನ್ಯಾ ಸಿಕ್ಕಾಪಟ್ಟೆ ಬೇಸರಗೊಂಡರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ನೀನು ಲೂಸಾ ಎಂದು ಹೇಳುತ್ತಾ ಸಾನ್ಯಾ ಅಳೋಕೆ ಆರಂಭಿಸಿದರು.

ಅರ್ಜುನ್​ , ರೂಪೇಶ್​ ಶೆಟ್ಟಿ  ನಡುವೆ ಬಿಗ್ ಫೈಟ್

ಬಿಗ್​ ಬಾಸ್​ ಮನೆಯಲ್ಲಿ ಕಿತ್ತಾಟ ಕೂಡ ಸಹಜ, ಟಾಸ್ಕ್​ ವಿಚಾರಕ್ಕೆ ಗಲಾಟೆ ನಡೆದ್ರೆ ಮತ್ತೊಮ್ಮೆ ವೈಯಕ್ತಿಕ ವಿಚಾರಕ್ಕೂ ಜಗಳಗಳು ನಡೀತಾನೆ ಇರುತ್ತೆ. ಈ ಬಾರಿ ದೊಡ್ಮನೆಯಲ್ಲಿ ನಡೆದ ವಾರ್​ (War) ಗೆ ಕಾರಣವಾಗಿದ್ದು ಮಾತ್ರ, ಊಟದ ವಿಚಾರ. ಹೌದು ಊಟ ವೇಸ್ಟ್​ ಮಾಡಿದ್ದಕ್ಕೆ. ಅರ್ಜುನ್​ ಹಾಗೂ ರೂಪೇಶ್​ ಶೆಟ್ಟಿ  ನಡುವೆ ಬಿಗ್ ಫೈಟ್​ ನಡೆದಿದೆ.

ಇದನ್ನೂ ಓದಿ: Bigg Boss OTT: ಮೊದಲ ದಿನವೇ ಕಷ್ಟದ ಕಥೆ ಹೇಳಿಕೊಂಡು ಕಣ್ಣೀರಿಟ್ಟ ಸ್ಪರ್ಧಿಗಳು, ಫುಲ್ ಎಮೋಷನಲ್​ ಎಪಿಸೋಡ್

ಊಟವನ್ನು ಕಸದ ಬುಟ್ಟಿಗೆ ಹಾಕಿದ್ದ ರೂಪೇಶ್​
 ಬಿಗ್​ ಬಾಸ್ ಮನೆಯಲ್ಲಿ ರಾತ್ರಿ ಊಟದ ಬಳಿಕ ಎಲ್ಲರೂ ಒಳ್ಳೆಯ ನಿದ್ದೆಯ ಮೂಡ್​ನಲ್ಲಿದ್ದರು, ಆದ್ರೆ ರೂಪೇಶ್​ ಹಾಗೂ ಅರ್ಜುನ್​ ರಮೇಶ್​ ನಡುವಿನ ಗಲಾಟೆ ಸ್ಪರ್ಧಿಗಳ ನಿದ್ದೆಗೆಡಿಸಿದೆ. ರೂಪೇಶ್​ ಚಪಾತಿ ತಿನ್ನಲಾಗದೆ ಕಸದಬುಟ್ಟಿಗೆ ಬಿಸಾಡಿದ್ದಾರೆ.


ಕಸದ ಬುಟ್ಟಿಯಲ್ಲಿ ಊಟ ಬಿಸಾಡಿದ್ಯಾರು?


ಕಸದ ಬುಟ್ಟಿಯಲ್ಲಿ ಬಿಸಾಡಿರೋ ಚಪಾತಿ ನೋಡಿ ಸಿಟ್ಟಾದ ಅರ್ಜುನ್​ ರಮೇಶ್​, ಊಟ ಬಿಸಾಡಿದ್ದು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ನಾನೇ ಎಂದ ರೂಪೇಶ್, ನಂಗೆ ತಿನ್ನಲು ಆಗಿಲ್ಲ ಹೀಗಾಗಿ ಬಿಸಾಡಿದೆ ಎಂದಿದ್ದಾರೆ. ಅವರ ಮಾತಿಗೆ ಕೋಪಗೊಂಡ ಅರ್ಜುನ್ ರಮೇಶ್, ಊಟದ ಬೆಲೆ ಗೊತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.



ನಂಗೆ ಊಟದ ಬೆಲೆ ಗೊತ್ತಿದೆ?

ರೂಪೇಶ್​ ಹಾಗೂ ಅರ್ಜುನ್ ನಡುವೆ ಮಾತಿಗೆ ಮಾತಿ ಬೆಳೆದಿದೆ. ಎಷ್ಟೋ ಜನರು ಹಸಿವಿನಿಂದ ಸಾಯುತ್ತಿರುತ್ತಾರೆ. ನೀನು ಊಟ ಬಿಸಾಡಿದ್ಯಾ ಎಂದು ಅರ್ಜುನ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಿಮ್​ ಮಾತು ವಾಪಸ್​ ತೆಗೆದುಕೊಳ್ಳಿ ಎಂದು ರೂಪೇಶ್​ ಸಿಟ್ಟಾಗಿದ್ದಾರೆ.

Published by:Pavana HS
First published: