ಲಾಕ್ಡೌನ್ ಆರಂಭವಾಗುದಕ್ಕೂ ಮುಂಚೆ ‘ಯುವರತ್ನ‘ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು. ಆದಾದ ನಂತರ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದಂದು ಉಡುಗೊರೆಯಾಗಿ ಟೀಸರ್ ಬಿಡುಗಡೆ ಮಾಡಲಾಗಿತ್ತು. ಇದೀಗ ಲಾಕ್ಡೌನ್ ನಂತರ ಯುವರತ್ನ ಸಿನಿಮಾದ ಬಗ್ಗೆ ಯಾವುದೇ ಅಪ್ಡೇಟ್ ಸಿಗದೆ ಸುಮಾರು ಒಂದೂವರೆ ತಿಂಗಳು ಕಳೆದಿದೆ. ಅಭಿಮಾನಿಗಳು ಟ್ರೇಲರ್ ಅಥವಾ ಹಾಡು ಬಿಡುಗಡೆ ಮಾಡಿ ಎಂದು ಕೇಳುತ್ತಿದ್ದಾರೆ.
ಕಾರ್ಮಿಕರ ದಿನಾಚರಣೆ ವಿಶೇಷವಾಗಿ ‘ಯುವರತ್ನ‘ ಸಿನಿಮಾದ ನಿರ್ದೇಶಕ ಸಂತೋಷ್ ಆನಂದ್ ರಾಮ್ ವಿಡಿಯೋ ತುಣುಕಿನ ಮೂಲಕ ಶುಭಾಶಯ ಕೋರಿದ್ದರು. ಮಾತ್ರವಲ್ಲದೆ, ‘ಯುವರತ್ನ‘ ಸಿನಿಮಾ ಬಗ್ಗೆಯೂ ಅಪ್ಡೇಟ್ ಕೊಟ್ಟಿದ್ದಾರೆ. ಪರಿಸ್ಥಿತಿ ಎಲ್ಲವೂ ಸಹಜ ಸ್ಥಿತಿಗೆ ಮರಳಿದ ನಂತರ ‘ಯುವರತ್ನ‘ ಸಿನಿಮಾ ಹಾಡು ಮತ್ತು ಟ್ರೇಲರ್ ಬಿಡುಗಡೆ ಮಾಡುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ.
ಹಾಡುಗಳು ಹಾಗೂ ಟ್ರೇಲರ್ ಕುರಿತು ಅಭಿಮಾನಿಗಳಲ್ಲಿ ಬಹಳ ನಿರೀಕ್ಷೆಗಳಿವೆ. ಇದು ನಮ್ಮ ಜವಬ್ದಾರಿಯನ್ನು ಹೆಚ್ಚಿಸಿವೆ. ಸಂಗೀತ ನಿರ್ದೇಶಕ ಎಸ್ ತಮನ್ ‘ಯುವರತ್ನ‘ ಸಿನಿಮಾಗೆ ಐದು ಅತ್ಯುತ್ತಮ ಹಾಡನ್ನು ರಚಿಸಿದ್ದಾರೆ. ಈ ಹಾಡುಗಳನ್ನು ಹಂತ ಹಂತವಾಗಿ ಬಿಡಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸದ್ಯ ಲಾಕ್ಡೌನ್ ಅವಧಿಯಲ್ಲಿ ಪ್ರತಿಯೊಬ್ಬರು ಮನೆಯಲ್ಲಿ ಕುಳಿತುಕೊಂಡು ಸುರಕ್ಷತೆ ಬಗ್ಗೆ ಹೆಚ್ಚು ಕಾಳಜಿವಹಿಸಿ ಎಂದು ಕೋರಿದ್ದಾರೆ.
ಯುವರತ್ನ ಸಿನಿಮಾದಲ್ಲಿ ಪುನೀತ್ಗೆ ನಾಯಕಿಯಾಗಿ ಸಯೆಷಾ ಕಾಣಿಸಿಕೊಂಡಿದ್ದಾರೆ. ವಿಲನ್ ಪಾತ್ರದಲ್ಲಿ ಡಾಲಿ ದಣಂಜಯ್ ನಟಿಸುತ್ತಿದ್ದಾರೆ. ದಿಗಂತ್, ಸೋನು ಗೌಡ, ಪ್ರಕಾಶ್ ರೈ, ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.
KGF Chapter 2: ನರಾಚಿ ಸೆಟ್ನಲ್ಲಿ ಕ್ರಿಕೆಟ್ ಆಟ; ಬ್ಯಾಟ್ ಹಿಡಿದು ಧೂಳೆಬ್ಬಿಸಿದ್ದ ಕೆ.ಜಿ.ಎಫ್ ಡೈರೆಕ್ಟರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ