ಚಂದನವನದಲ್ಲಿ ಈ ವಾರ ಸಂಕಷ್ಟಕರ ಗಣಪತಿಯ ಅವಾಂತರ

news18
Updated:July 25, 2018, 6:57 PM IST
ಚಂದನವನದಲ್ಲಿ ಈ ವಾರ ಸಂಕಷ್ಟಕರ ಗಣಪತಿಯ ಅವಾಂತರ
  • News18
  • Last Updated: July 25, 2018, 6:57 PM IST
  • Share this:
ನ್ಯೂಸ್​18 ಕನ್ನಡ

ಕಳೆದ ಎರಡ್ಮೂರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸಾಕಷ್ಟು ಪ್ರಯೋಗಾತ್ಮಕ ಸಿನಿಮಾಗಳು ತೆರೆ ಕಾಣುತ್ತಿವೆ. ಅದರಲ್ಲೂ ಸ್ಯಾಂಡಲ್​ವುಡ್​ನತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಯುವಕರು ಹೊಸಬಗೆಯ ಕಥೆ, ತಂಡದೊಂದಿಗೆ ಹೊಸ ರೀತಿಯ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ.

ಈ ವಾರ ತೆರೆ ಕಾಣುತ್ತಿರುವ ಅಪ್ಪಟ ರೊಮ್ಯಾಂಟಿಕ್​-ಕಾಮಿಡಿ ಮತ್ತು ವೈದ್ಯಕೀಯ ಕತೆಯನ್ನು ಹೊಂದಿರುವ 'ಸಂಕಷ್ಟಕರ ಗಣಪತಿ' ಕೂಡ ಅಂಥದ್ದೇ ಪ್ರೇರಣೆಯಿಂದ ಹುಟ್ಟಿದ ಹೊಸಬರ ತಂಡದ ಸಿನಿಮಾ. ಏಲಿಯನ್​ ಹ್ಯಾಂಡ್​ ನ್ಯೂರಾಲಾಜಿಕಲ್​ ಸಿಂಡ್ರೋಮ್​ನಿಂದ ಎಡಗೈ ಮೇಲೆ ನಿಯಂತ್ರಣ ಕಳೆದುಕೊಂಡ ಗಣಪತಿ ಎಂಬ ಹುಡುಗ ಯಾವ್ಯಾವ ರೀತಿಯಲ್ಲಿ ಅವಾಂತರ ಮಾಡಿಕೊಳ್ಳುತ್ತಾನೆ ಎಂಬ ಕಥೆಯೇ 'ಸಂಕಷ್ಟಕರ ಗಣಪತಿ'.'ಪನ್ಮಂಡ್ರಿ ಕ್ರಾಸ್'​ ಎಂಬ ಕಿರುಚಿತ್ರ ನಿರ್ದೇಶಿಸಿದ್ದಎಸ್​.  ಅರ್ಜುನ್​ ಕುಮಾರ್​ 'ಸಂಕಷ್ಟಕರ ಗಣಪತಿ'ಯ ಮೂಲಕ ಸ್ಯಾಂಡಲ್​ವುಡ್​ಗೆ ನಿರ್ದೇಶಕರಾಗಿ ಕಾಲಿಡುತ್ತಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಪರಿಚಿತರಾಗಿರುವ ಲಿಖಿತ್​ ಶೆಟ್ಟಿ ಈ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದು, ಕಾರ್ಟೂನಿಸ್ಟ್​ ಆಗಬೇಕೆಂಬ ಆಸೆಯಿದ್ದರೂ ಸಂಕಷ್ಟ'ಕರ'ವನ್ನು ಹೊತ್ತ ಹೀರೋವಾಗಿ ಕಾಣಿಸಿಕೊಳ್ಳಲಿದ್ದಾರೆ. ಶ್ರುತಿ ಗೊರಾಡಿಯಾ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ.ಟ್ರೆಂಡ್​ ಸೃಷ್ಟಿಸಿವೆ ಹಾಡುಗಳುಈಗಾಗಲೇ ಪುನೀತ್​ ರಾಜ್​ಕುಮಾರ್​ ಅವರ ಪಿಆರ್​ಕೆ ಆಡಿಯೋ ಮೂಲಕ ರಿಲೀಸ್​ ಆಗಿರುವ ಈ ಚಿತ್ರದ ಹಾಡುಗಳು ಎಲ್ಲರ ಮನಗೆದ್ದಿವೆ. ಈಗಾಗಲೇ ಎಫ್​ಎಂ, ಯೂಟ್ಯೂಬ್​, ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಕ್ರೇಜ್​ ಹುಟ್ಟಿಸಿರುವ ಸಂಕಷ್ಟಕರ ಗಣಪತಿ ಸಿನಿಮಾದ ಟೈಟಲ್​ ಸಾಂಗ್​ ಅನ್ನು ರಘು ದೀಕ್ಷಿತ್​ ಹಾಡಿದ್ದು, ಸಾಕಷ್ಟು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ವಾರ ರಿಲೀಸ್​ ಆಗಿರುವ ಡ್ಯುಯೆಟ್​ ಸಾಂಗ್​ ಕೂಡ ನಿರೀಕ್ಷೆ ಹುಟ್ಟುಹಾಕಿದೆ.ಈ ಸಿನಿಮಾದ ಹಾಡುಗಳ ಮೂಲಕ ಶಿವಮೊಗ್ಗದ ರಿತ್ವಿಕ್​ ಮುರಳೀಧರ್​ ಎಂಬ ಯುವ ಸಂಗೀತ ನಿರ್ದೇಶಕ ಸ್ಯಾಂಡಲ್​ವುಡ್​ನಲ್ಲಿ ಭರವಸೆ ಮೂಡಿಸಿದ್ದಾರೆ. ಉಳಿದಂತೆ, ತೆರೆಯ ಹಿಂದೆಯೂಯುವ ತಂತ್ರಜ್ಞರ ತಂಡವೇ ಕೆಲಸ ಮಾಡಿದ್ದು, ಡಿಒಪಿಯಲ್ಲಿ ಉದಯ್​ ಲೀಲಾ ಹಾಗೂ ಸಂಕಲನದಲ್ಲಿ ವಿಜೇತ್​ಚಂದ್ರ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಕಾಮಿಡಿ ಸಿನಿಮಾಗಳ ಸಂಖ್ಯೆ ಕನ್ನಡದಲ್ಲಿ ಕಡಿಮೆಯಾಗುತ್ತಿರುವುದರಿಂದ ಈ ಸಿನಿಮಾದ ಟ್ರೈಲರ್​ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವುದು ಸುಳ್ಳಲ್ಲ.

First published: July 25, 2018, 6:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading