Movie Flashback: ಸಂಜು ವೆಡ್ಸ್ ಗೀತಾ ಸಿನಿಮಾ ಮಾಡೋಕೆ ಚೈನ್​ ಅಡ ಇಟ್ಟಿದ್ರಂತೆ ನಾಗಶೇಖರ್, ಸೂಪರ್ ಹಿಟ್​ ಸಿನಿಮಾದ ಮೇಕಿಂಗ್​ ಸ್ಟೋರಿ

Sandalwood: ಒಟ್ಟಾರೆಯಾಗಿ ಒಂದೊಂದು ಸೂಪರ್ ಹಿಟ್​ ಸಿನಿಮಾ ಕೂಡ ಒಂದೊಂದು ನೋವಿನ ಕತೆಯನ್ನು ತನ್ನ ಒಡಲಾಳದಲ್ಲಿ ಅಡಗಿಸಿಕೊಂಡಿರುವುದು ಸುಳ್ಳಲ್ಲ.

ಸಂಜು ವೆಡ್ಸ್ ಗೀತಾ

ಸಂಜು ವೆಡ್ಸ್ ಗೀತಾ

  • Share this:
ಸಂಜು ವೆಡ್ಸ್ ಗೀತಾ 2011ರಲ್ಲಿ ಸಿನಿಪ್ರಿಯರಿಗೆ ಬಹಳ ಇಷ್ಟವಾಗಿದ್ದ ಚಿತ್ರ. ಇದರ ಹಾಡುಗಳು ಇಂದಿಗೂ ಜನಜನಿತ. ಅದ್ಬುತ ಪ್ರೇಮಕಥೆಯನ್ನು ಹೊಂದಿದ್ದ ಈ ಸಿನಿಮಾ ಟ್ರಾಜಿಡಿಯಲ್ಲಿ ಕೊನೆಯಾಗುತ್ತದೆ. ಶ್ರೀನಗರ ಕಿಟ್ಟಿ ಹಾಗೂ ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಮುಖ್ಯಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾ ಸೂಪರ್ ಹಿಟ್​ ಆಗಿತ್ತು. ಇಂದಿಗೂ ಸಿನಿಪ್ರಿಯರಿಗೆ ಈ ಸಿನಿಮಾ ಎಂದರೆ ಬಹಳ ಇಷ್ಟ. ಆದರೆ ಈ ಸಿನಿಮಾ ಮಾಡುವಾಗ ನಿರ್ದೇಶಕರು ಹಾಗೂ ನಿರ್ಮಾಪಕರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಈ ಸಿನಿಮಾಗಾಗಿ ನಾಗಶೇಖರ್ ಪಟ್ಟ ಪಾಡು ಏನು, ಈ ಸಿನಿಮಾ ತಯಾರಾಗಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ.  

ಕತ್ತಿನಲ್ಲಿದ್ದ ಚೈನ್​ ಮಾರಿದ್ದ ನಾಗಶೇಖರ್

ಯಾವುದೇ ಸಿನಿಮಾವನ್ನು ನಿರ್ಮಾಣ ಮಾಡಲು ಕಷ್ಟಪಡಬೇಕಾಗುತ್ತದೆ. ಕೇವಲ ನಿರ್ಮಾಣ  ಎಂದರೆ ಅದರ ಪ್ರತಿಯೊಂದು ಕೆಲಸವೂ ಸುಲಭದ ಮಾತಲ್ಲ. ಒಂದು ಸಿನಿಮಾಗಾಗಿ ಸಾವಿರಾರು ಜನರು ಬೆವರು ಸುರಿಸಿರುತ್ತಾರೆ. ಕೆಲವೊಂದು ಚಿತ್ರವಂತೂ ಹೆಚ್ಚು ಕಷ್ಟಕೊಟ್ಟಿರುತ್ತದೆ. ಆದರೆ ಅದು ಯಶಸ್ವಿಯಾದಾಗ ಎಲ್ಲಾ ನೋವು ಮಾಯವಾಗುತ್ತದೆ ಎಂಬುದು ಸುಳ್ಳಲ್ಲ. ಅದಕ್ಕೆ ಉತ್ತಮ ಉದಾಹರಣೆ ಈ ಸಂಜು ವೆಡ್ಸ್ ಗೀತಾ ಸಿನಿಮಾ.

ಈ ಸಿನಿಮಾ ಮಾಡುವಾಗ ನಿರ್ದೇಶಕ ನಾಗಶೇಖರ್ ಪಟ್ಟ ಕಷ್ಟವನ್ನು ಆರ್ಟ್ ಡೈರೆಕ್ಟರ್ ಕನಕರಾಜು ವಿವರಿಸಿದ್ದಾರೆ. ಸೂಪರ್ ಹಿಟ್​ ಆಗಿದ್ದ ಚಿತ್ರ ಮಾಡುವ ಇಷ್ಟೆಲ್ಲಾ ಕಷ್ಟಪಡಬೇಕಾಯಿತಾ ಎಂದು ನಮಗೆ ಅನಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಕನಕರಾಜು ಹೇಳುವ ಪ್ರಕಾರ ಒಂದು ಹಾಡಿನ ಶೂಟಿಂಗ್ ಊಟಿಯಲ್ಲಿ ನಡೆಯುತ್ತಿತ್ತಂತೆ. ಅದಕ್ಕೆ ಇವರೇ ಒಂದು ಸೆಟ್​ ಹಾಕಿದ್ದರಂತೆ. ಅಲ್ಲಿ ಭಾರೀ ಮಳೆ ಅಂದರೆ ಮಳೆ. ಆ ದಿನ ನಿರ್ದೇಶಕ ನಾಗಶೇಖರ್ ತಮ್ಮ ಕತ್ತಿನಲ್ಲಿದ್ದ ಚೈನ್​ ಅನ್ನು ಅಡವಿಟ್ಟು ಸಿನಿಮಾಗೆ ದುಡ್ಡು ತಂದಿದ್ದರಂತೆ. ಈ ಘಟನೆಯನ್ನು ಕನಕರಾಜು ಈಗಲೂ ನೆನಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ ರಕ್ಷಿತ್ ಶೆಟ್ಟಿ, ಕಿರಿಕ್ ಪಾರ್ಟಿ 2 ಮಾಡೇ ಮಾಡ್ತಾರಂತೆ!

ಆರ್ಥಿಕವಾಗಿ ಸಮಸ್ಯೆ ಎದುರಿಸಿದ್ದ ಸಿನಿಮಾ

ಹೌದು, ಈ ಸಿನಿಮಾ ಆರಂಭವಾದಾಗ ಎಲ್ಲವೂ ಸರಿ ಇತ್ತು. ಆದರೆ ನಿಧಾನವಾಗಿ ಹಣ ಹೂಡುವವರು ಎಲ್ಲಾ ಹಿಂದೆ ಸರಿದಿದ್ದರು. ಹಾಗಾಗಿ ನಿರ್ದೇಶಕ ನಾಗಶೇಖರ್ ಬಹಳ ಕಷ್ಟಪಟ್ಟಿದ್ದರಂತೆ. ಸಿನಿಮಾ ಓಡಲ್ಲ ಹೀಗೆ ಒಂದೆಲ್ಲಾ ಒಂದು ಕಾರಣ ನೀಡಿ ಹಣ ನೀಡಲು ನಿರಾಕರಿಸಿದ್ದರಂತೆ. ಹಾಗಾಗಿ ಆರ್ಥಿಕವಾಗಿ ಬಹಳ ಸಮಸ್ಯೆಯಾಗಿತ್ತು. ಒಂದು ಶೂಟಿಂಗ್ ಸಮಯದಲ್ಲಿ ಗಡಿಯಾರ ಬೇಕಿತ್ತಂತೆ, ಆದರೆ ಅದನ್ನು ತರಲು ಹಣವಿರಲಿಲ್ಲ, ಆ ಸಮಯದಲ್ಲಿ ನಾಗಶೇಖರ್ ತಮ್ಮ ಹಣವನ್ನು ಪರಪ್ಪನ ಅಗ್ರಹಾರದ ಬಳಿ ಎಲ್ಲೋ ಒಂದು ಕಡೆ ಅಡವಿಟ್ಟು ಗಡಿಯಾರ ತಂದಿದ್ದರಂತೆ. ಈ ಸಿನಿಮಾ ಮಾಡಲು ನಾಗಶೇಖರ್ ಬಹಳ ಕಷ್ಟಪಟ್ಟಿದ್ದು, ಅವರು ಚೆನ್ನಾಗಿರಬೇಕು ಎನ್ನುತ್ತಾರೆ ಕನಕರಾಜು.

ಇನ್ನು ಈ ಸಿನಿಮಾದ ಸಂಗೀತ ಸಂಯೋಜನೆ ಮಾಡಿದ ಕಥೆ ಕೂಡ ಬಹಳ ಸ್ವಾರಸ್ಯಕರವಾಗಿದೆ. ಮೈಸೂರಿನ ಡಿ ಕ್ಲಬ್​ನಲ್ಲಿ ಸಂಗೀತ ನಿರ್ದೇಶಕ ಜಸ್ಸಿ ಗಿಫ್ಟ್ ಸಾಂಗ್ ಕಂಪೂಸ್​ ಮಾಡುತ್ತಿದ್ದರಂತೆ. ಅಲ್ಲಿಗೆ ನಾಗಶೇಖರ್ ಕನಕರಾಜು ಅವರನ್ನು ಕೂಡ ಕರೆದುಕೊಂಡು ಹೋಗಿದ್ದರಂತೆ. ಆಗ ಅಲ್ಲಿಗೆ ಹೋದಾಗ ಅವರಿನ್ನು ಒಳಗೆ ಹೋಗುವ ಮೊದಲೇ ಗಗನವೇ ಬಾಗಿ ಹಾಡಿನ ಮ್ಯೂಸಿಕ್ ಕೇಳಿಸಿತಂತೆ. ಅದಕ್ಕೆ ಕನಕರಾಜು ಸಂಗೀತ ನಿರ್ದೇಶಕರಿಗೆ ಈ ಟ್ಯೂನ್​ ಸೂಪರ್ ಇದೆ. ಸಿನಿಮಾ 100 ಡೇಸ್​ ಗ್ಯಾರೆಂಟಿ ಎಂದಿದ್ದರಂತೆ. ಹೀಗೆ ಆ ಹಾಡಿನ ಟ್ಯೂನ್ ಫಿಕ್ಸ್ ಆಗಿದ್ದಂತೆ.

ಇದನ್ನೂ ಓದಿ: ಮಾಜಿ ಸಿಎಂ ಸಿದ್ಧರಾಮಯ್ಯ ಭೇಟಿ ಮಾಡಿದ ಸತೀಶ್​ ನೀನಾಸಂ, ಡಿಯರ್ ವಿಕ್ರಮ್ ಸಿನಿಮಾ ನೋಡಲು ಆಹ್ವಾನ

ಒಟ್ಟಾರೆಯಾಗಿ ಒಂದೊಂದು ಸೂಪರ್ ಹಿಟ್​ ಸಿನಿಮಾ ಕೂಡ ಒಂದೊಂದು ನೋವಿನ ಕತೆಯನ್ನು ತನ್ನ ಒಡಲಾಳದಲ್ಲಿ ಅಡಗಿಸಿಕೊಂಡಿರುವುದು ಸುಳ್ಳಲ್ಲ.
Published by:Sandhya M
First published: