'ಸಂಜು' ಸಿನಿಮಾದ ಹೊಸ ಟೀಸರ್​ ಬಿಡುಗಡೆ ಮಾಡಿದ ಹಿರಾನಿ

news18
Updated:June 23, 2018, 2:55 PM IST
'ಸಂಜು' ಸಿನಿಮಾದ ಹೊಸ ಟೀಸರ್​ ಬಿಡುಗಡೆ ಮಾಡಿದ ಹಿರಾನಿ
news18
Updated: June 23, 2018, 2:55 PM IST
ನ್ಯೂಸ್​ 18 ಕನ್ನಡ 

ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರ ಬಹು ನಿರೀಕ್ಷಿತ 'ಸಂಜು' ಸಿನಿಮಾ ಬಿಡುಗಡೆಗೆ ಇನ್ನೇನು ಒಂದೇ ವಾರ ಬಾಕಿ ಇದೆ. ರಣಬೀರ್​ ಹಾಗೂ ಹಿರಾನಿ ಅಭಿಮಾನಿಗಳು ಈ ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅದಕ್ಕೆ ತಕ್ಕಂತೆ ನಿರ್ದೇಶಕ ಹಿರಾನಿ ಸಹ ಆಗಾಗ ಸಿನಿಮಾಗೆ ಸಂಬಂಧಿಸಿದ ಪೋಸ್ಟರ್​, ಹಾಡು ಹಾಗೂ ಟೀಸರ್​ಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಬಿಡುಗಡೆ ಮಾಡುತ್ತಲೇ ಇದ್ದಾರೆ.

ರಾಜ್​ಕುಮಾರ್​ ಹಿರಾನಿ 'ಸಂಜು' ಚಿತ್ರದ ಹೊಸ ಟೀಸರ್​ ಅನ್ನು ಬಿಡುಗಡೆ ಮಾಡಿದ್ದಾರೆ. ಸಂಜಯ್​ ದತ್​ ಅವರ 'ಮುನ್ನಾಭಾಯಿ ಎಂಬಿಬಿಎಸ್'​ನ ಮುನ್ನಾಭಾಯಿ ಪಾತ್ರದಲ್ಲಿ ರಣಬೀರ್​ ಅಭಿನಯಿಸಿರುವ ಹೊಸ ಟೀಸರ್​ ಬಿಡುಗಡೆಯಾಗಿದೆ.


Loading...

'ಇದನ್ನು ನೋಡುವಾಗ ಎಂಜಾಯ್​ ಮಾಡುತ್ತೀರಾ ಎಂದು ಅಂದುಕೊಂಡಿದ್ದೇನೆ. 15 ವರ್ಷಗಳ ನಂತರ ಈ ದೃಶ್ಯವನ್ನು ಮರುಸೃಷ್ಠಿ ಮಾಡಿದ್ದೇನೆ' ಎಂದು ಟೀಸರ್​ಗೆ ಶೀರ್ಷಿಕೆ ನೀಡಿದ್ದಾರೆ.

ಇದರಲ್ಲಿ ಮುನ್ನಾಭಾಯಿ ಜೊತೆಗಿರುವ ಸರ್ಕಿಟ್​ ಪಾತ್ರದ ಹರ್ಷದ್​ ವಾರಸಿ ಅವರನ್ನೂ ತೋರಿಸಲಾಗಿದೆ. ಮುಂದಿನ ಶುಕ್ರವಾರ ಜೂ.29ಕ್ಕೆ ಈ ಸಿನಿಮಾ ತೆರೆ ಕಾಣಲಿದ್ದು, ಇದರಲ್ಲಿ ರಣಬೀರ್​ ಜೊತೆಗೆ ಪರೇಶ್​ ರಾವಲ್​, ಸೋನಮ್ ಕಪೂರ್​, ಅನುಷ್ಕಾ ಶರ್ಮಾ, ಮೊನಿಶಾ ಕೊಯಿರಾಲಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
First published:June 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...