ವಿವಾದದಲ್ಲಿ 'ಸಂಜು' ಸಿನಿಮಾ:ಶುಕ್ರವಾರ ತೆರೆ ಕಾಣಬೇಕಿರುವ ಚಿತ್ರ

news18
Updated:June 27, 2018, 5:58 PM IST
ವಿವಾದದಲ್ಲಿ 'ಸಂಜು' ಸಿನಿಮಾ:ಶುಕ್ರವಾರ ತೆರೆ ಕಾಣಬೇಕಿರುವ ಚಿತ್ರ
news18
Updated: June 27, 2018, 5:58 PM IST
ನ್ಯೂಸ್​ 18 ಕನ್ನಡ

ರಾಜ್​ಕುಮಾರ್​ ಹಿರಾನಿ ಅವರ ಬಹು ನಿರೀಕ್ಷಿತ ಸಿನಿಮಾ 'ಸಂಜು' ಸದ್ಯ ವಿವಾದಕ್ಕೀಡಾಗಿದೆ. ಈ ಸಿನಿಮಾದ ಟ್ರೇಲರ್​ನಲ್ಲಿ ವೇಶ್ಯೆಯರ ಬಗ್ಗೆ ಅವಹೇಳನ ಮಾಡಿರುವ ಬಗ್ಗೆ ರಣಬೀರ್ ವಿರುದ್ಧ ದೂರು ದಾಖಲಿಸಲಾಗಿದೆ.

ಸಿನಿಮಾದ ಟ್ರೇಲರ್​ನಲ್ಲಿರುವ ಒಂದು ದೃಶ್ಯದಲ್ಲಿ ವೇಶ್ಯೆಯರಿಗೆ ಅವಮಾನ ಮಾಡಿರುವ ಬಗ್ಗೆ ದೂರು ದಾಖಲಿಸಲಾಗಿದೆ.ನಟ ರಣಬೀರ್​ ಕಪೂರ್​, ಸೋನಮ್​ ಕಪೂರ್​, ಅನುಷ್ಕಾ ಶರ್ಮಾ, ಪರೇಶ್​ ರಾವಲ್​, ಮೊನಿಶಾ ಕೊಯಿರಾಲಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಸಿನಿಮಾ ಶುಕ್ರವಾರ ತೆರೆಕಾಣಬೇಕಿತ್ತು.

ಸದ್ಯ ಚಿತ್ರತಂಡದ ಕಡೆಯಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಹೊರ ಬಿದ್ದಿಲ್ಲ. ಸದ್ಯ ಪ್ರಕರಣ ರಾಷ್ಟ್ರೀಯ ಮಹಿಳಾ ಆಯೋಗದ ಮೆಟ್ಟಿಲೇರಿದೆ. ಇದರಿಂದಾಗಿ ಸಂಜು ಸಿನಿಮಾ ಶುಕ್ರವಾರ ತೆರೆ ಕಾಣುತ್ತೋ ಇಲ್ಲವೋ ಅನ್ನೋ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

 
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...