500 ಕೋಟಿ ಕ್ಲಬ್​ ಸೇರಿದ 'ಸಂಜು': ಬಿಡುಗಡೆಯಾಗಿ ಮೂರೇ ವಾರಕ್ಕೆ ದಾಖಲೆ ಬರೆದ ಸಿನಿಮಾ

news18
Updated:July 14, 2018, 9:40 PM IST
500 ಕೋಟಿ ಕ್ಲಬ್​ ಸೇರಿದ 'ಸಂಜು': ಬಿಡುಗಡೆಯಾಗಿ ಮೂರೇ ವಾರಕ್ಕೆ ದಾಖಲೆ ಬರೆದ ಸಿನಿಮಾ
news18
Updated: July 14, 2018, 9:40 PM IST
ನ್ಯೂಸ್​ 18 ಕನ್ನಡ
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದ 'ಸಂಜು' ಸಿನಿಮಾಗೆ ಮೊದಲ ದಿನದಿಂದಲೇ ಭರ್ಜರಿ ಸ್ವಾಗತ ಸಿಕ್ಕಿತ್ತು. ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡಿದ್ದ ಈ ಸಿನಿಮಾ ಬಾಲಿವುಡ್​ ನಟ ಸಂಜಯ್​ ದತ್​ ಜೀವನಕತೆಯನ್ನು ಆಧರಿಸಿದ್ದು ಮತ್ತು ರಾಜ್​ಕುಮಾರ್​ ಹಿರಾನಿ ನಿರ್ದೇಶನದ ಸಿನಿಮಾವಾದ್ದರಿಂದ ನಿರೀಕ್ಷೆಯೂ ಹೆಚ್ಚೇ ಇತ್ತು.

ಸಂಜು ಸಿನಿಮಾ ಬಿಡುಗಡೆಯಾಗಿ ಅತ್ಯಲ್ಪ ಅವಧಿಯಲ್ಲೇ ದೇಶಾದ್ಯಂತ 300 ಕೋಟಿ ಕಲೆಕ್ಷನ್​ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಈ ಮೂಲಕ ಈ ವರ್ಷದ ಯಶಸ್ವಿ ಸಿನಿಮಾದ ಪಟ್ಟಿಗೆ ಸಂಜು ಸೇರ್ಪಡೆಯಾಗಿದೆ. ನಟ ರಣಬೀರ್​ ಕಪೂರ್ ಸಿನಿ ಕೆರಿಯರ್​ನಲ್ಲಿ ಬಹು ಮುಖ್ಯ ತಿರುವು ನೀಡಿದ ಸಂಜು ಸಿನಿಮಾ ಬಿಡುಗಡೆಯಾಗಿ ಮೂರೇ ವಾರದಲ್ಲಿ 300 ಕೋಟಿ ದಾಟಿದೆ.

ಜಗತ್ತಿನ ನಾನಾ ದೇಶಗಳಲ್ಲೂ ಬಿಡುಗಡೆ ಕಂಡಿರುವ ಈ ಸಿನಿಮಾದ ಇದುವರೆಗಿನ ಜಾಗತಿಕ ಕಲೆಕ್ಷನ್​ 500 ಕೋಟಿ ದಾಟಿದೆ! ಈ ಮೂಲಕ ರಾಜ್​ಕುಮಾರ್​ ಹಿರಾನಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇದಾದ ನಂತರ ರಣಬೀರ್​ ಕಪೂರ್​ಗೆ ಬಾಲಿವುಡ್​ನಲ್ಲಿ ಹಲವು ಒಳ್ಳೆಯ ಆಫರ್​ಗಳು ಬರುತ್ತಿದೆ.
First published:July 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...