ಗಳಿಕೆಯಲ್ಲಿ ಬಾಹುಬಲಿ, ದಂಗಲ್​ ನಂತರದ ಸ್ಥಾನ ಪಡೆಯಲಿದೆಯಾ ಸಂಜು ಸಿನಿಮಾ!

news18
Updated:July 20, 2018, 5:38 PM IST
ಗಳಿಕೆಯಲ್ಲಿ ಬಾಹುಬಲಿ, ದಂಗಲ್​ ನಂತರದ ಸ್ಥಾನ ಪಡೆಯಲಿದೆಯಾ ಸಂಜು ಸಿನಿಮಾ!
news18
Updated: July 20, 2018, 5:38 PM IST
ನ್ಯೂಸ್​ 18 ಕನ್ನಡ

'ಸಂಜು' ಯಾವ ಪರಿ ಬಾಕ್ಸಾಫಿಸ್‍ಗೆ ಲಗ್ಗೆ ಇಟ್ಟಿದೆ ಅಂದರೆ ಮೂರನೇ ವಾರದಲ್ಲೇ ಸಲ್ಮಾನ್ ಖಾನ್ ಕೂಡ ಸೈಲೆಂಟ್ ಆಗಿದ್ದಾರೆ. ಹಾಗಾದರೆ ಸಂಜು ಯಾವ ನಟರ ದಾಖಲೆ ಮುರಿಯೋಕೆ ತಯಾರಾಗಿದ್ದಾನೆ ಗೊತ್ತಾ..? ಇಲ್ಲಿದೆ ವಿವರವಾದ ವರದಿ.

ಸಲ್ಮಾನ್ ಖಾನ್ ಬಾಲಿವುಡ್‍ನ ಬಾಕ್ಸಾಫಿಸ್ ಸುಲ್ತಾನ. ಆದರೆ ಈಗ ಸಲ್ಲೂ ಸಿನಿಮಾಗೇ ಸೆಡ್ಡು ಹೊಡೆಯುತ್ತಿದ್ದಾರೆ ರಣಬೀರ್​ ಕಪೂರ್. ರಾಜ್‍ಕುಮಾರ್ ಹಿರಾನಿ ಅವರ 'ಸಂಜು' ಚಿತ್ರದ ಮೂರು ವಾರದ ಕಲೆಕ್ಷನ್ 316 ಕೋಟಿ. ಮೂರು ವಾರದಲ್ಲೇ ಇಷ್ಟು ದೊಡ್ಡ ಗಳಿಕೆ, ರಾಜ್‍ಕುಮಾರ್ ಹಿರಾನಿ ಅವರ ಸಿನಿ ಜೀವನದಲ್ಲೂ ದಾಖಲೆಯೇ.

'ಭಜರಂಗಿ ಭಾಯಿಜಾನ್' ಚಿತ್ರ ಭಾರತದಲ್ಲಿ ಮಾಡಿದ್ದ ಒಟ್ಟು ಗಳಿಕೆ 320 ಕೋಟಿ. 'ಸಂಜು' ಪಾತ್ರದ ಮೂಲಕ ರಣಬೀರ್​ ಇದನ್ನು ನಾಲ್ಕನೆಯ ವಾರದಲ್ಲೇ ಮೀರಲಿದ್ದಾರೆ. ಬಾಲಿವುಡ್‍ನ ಮುಂದಿನ ಸೂಪರ್​ಸ್ಟಾರ್​ ರಣಬೀರ್ ಅನ್ನೋದನ್ನ ಮತ್ತೊಮ್ಮೆ ಕಪೂರ್ ವಂಶದ ಕುಡಿ ಎಂದು ಸಾಬೀತು ಮಾಡಿದ್ದಾರೆ.

ಸದ್ಯ 'ಸಂಜು' ಅಬ್ಬರಿಸುತ್ತಿರೋದು ನೋಡಿದ ಸಿನಿಪಂಡಿತರ ಲೆಕ್ಕಾಚಾರದ ಪ್ರಕಾರ ಈ ಸಿನಿಮಾ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆಯಲಿದೆ. ಇನ್ನು ವಿದೇಶದಲ್ಲಿ 'ಸಂಜು' ಬಿಡುಗಡೆಯಾದರೂ ಸದ್ಯ ಎರಡು ಸಾವಿರ ಕೋಟಿ ಗಳಿಕೆ ಮಾಡಿರೋ 'ಬಾಹುಬಲಿ-2' ಮತ್ತು 'ದಂಗಲ್' ಚಿತ್ರಗಳನ್ನು ಮೀರಿಸೋದು ಕಷ್ಟವೇ ಆಗಲಿದೆ ಅನ್ನೋದು ಸಿನಿಪಂಡಿತರ ಅಂದಾಜು.

ಒಟ್ಟಾರೆ ಆರು ತಿಂಗಳಿನಿಂದ ನೂರು ಕೋಟಿ ಮಾಡಿದ್ದ ಒಂದೆರಡು ಸಿನಿಮಾಗಳಿಂದ ಸೊರಗಿದ್ದ ಬಾಲಿವುಡ್, 'ಸಂಜು' ಮೂಲಕ ಸಂತೃಪ್ತಿ ಪಡೆದುಕೊಳ್ಳುತ್ತಿದೆ. ಕಲೆಕ್ಷನ್ ಕಿಂಗ್ ಆಗಿ ರಾಜ್‍ಕುಮಾರ್ ಹಿರಾನಿ ರಾರಾಜಿಸುತ್ತಿದ್ದಾರೆ...
Loading...

 
First published:July 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...