ಸಂಜನಾ ಗಲ್ರಾನಿ (Sanjjanaa Galrani), ಈ ಹೆಸರು ಕಳೆದ ಎರಡು, ಮೂರು ವರ್ಷಗಳಿಂದ ಭಾರೀ ಸುದ್ದಿಯಲ್ಲಿದೆ. ಲಾಕ್ಡೌನ್ (Lockdown) ಸಮಯದಲ್ಲಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದರು. ಹಲವಾರು ರೀತಿಯಲ್ಲಿ ಹಲವಾರು ಜನರಿಗೆ ನೆರವಾಗಿದ್ದರು. ವಿವಾದಗಳು ಅದೆಷ್ಟೇ ಬಂದರೂ ದಿಟ್ಟವಾಗಿ ಎದುರಿಸಿದ ನಟಿ (Actress) ಎಂದರೆ ತಪ್ಪಾಗಲಾರದು. ಯಾವಾಗಲೂ ಒಂದೆಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗಿದ್ದ ಸಂಜನಾ ಸದ್ಯ ಮಗನ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ.
ಕಳೆದ ತಿಂಗಳು ಗಂಡು ಮಗುವಿಗೆ ಜನ್ಮ ನೀಡಿದ್ದ ನಟಿ
ಕಳೆದ ಮೇ 19ರಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದ ಸಂಜನಾ ತಾಯ್ತನದ ಖುಷಿಯಲ್ಲಿದ್ದಾರೆ. ಮೊನ್ನೆಯಷ್ಟೇ ಮಗನ ನಿಕ್ ನೇಮ್ ರಿವೀಲ್ ಮಾಡಿದ್ದ ನಟಿ ಇದೀಗ ಮಗನ ಹೆಸರನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕ್ಯೂಟ್ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿರುವ ಸಂಜನಾ ಮಗನ ಹೆಸರನ್ನು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಮಗುವಿನ ನಾಮಕರಣ ನೆರವೇರಿದ್ದು, ʻಅಲಾರಿಕ್ʼ ಎಂಬ ಹೆಸರನ್ನು ಇಡಲಾಗಿದೆ. ಅಲ್ಲದೇ ಈ ವಿಡಿಯೋದಲ್ಲಿ ಸಂಜನಾ ಪತಿ ಅಜೀಜ್ ಪಾಷ ಮಗುವಿನ ಆರೈಕೆ ಮಾಡುತ್ತಿರುವುದನ್ನು ನೋಡಬಹುದಾಗಿದೆ.
ಇನ್ನು ವಿಡಿಯೋ ಕೆಳಗೆ, ಇಂದು ನಾನು ನಿಮಗೆ ನನ್ನ ಪರಿಚಯವನ್ನು ಅಧಿಕೃತವಾಗಿ ನೀಡುತ್ತಿದ್ದೇನೆ. ನನ್ನ ಹೆಸರು " ಅಲಾರಿಕ್ " . ನನಗೆ ಒಂದು ತಿಂಗಳ ವಯಸ್ಸು ಮತ್ತು ನಾನು Instagram ಗೆ ಹೊಸ ಪರಿಚಯ. ನನ್ನ ಪ್ರೊಫೈಲ್ ಅನ್ನು ನನ್ನ ಸೂಪರ್ ಅಮ್ಮ @sanjjanaagalrani ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ, ನನ್ನ ತಂದೆಗೆ ನಾನು ಥ್ಯಾಂಕ್ಯೂ ಹೇಳುತ್ತೇನೆ. ಅವರು ನನ್ನ ಬಹಳ ಕೇರ್ ಮಾಡುತ್ತಾರೆ ಎಂದು ಬರೆದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ವಿಶ್ ತಿಳಿಸುತ್ತಿದ್ದಾರೆ.
ನಿಕ್ ನೇಮ್ ರಿವೀಲ್ ಮಾಡಿದ್ದರು
ಅಲ್ಲದೇ, ಕೆಲ ದಿನಗಳ ಹಿಂದೆಯಷ್ಟೇ ಸಂಜನಾ ಮಗನ ನಿಕ್ ನೇಮ್ ಪ್ರಿನ್ಸ್ ಎಂದು ತಿಳಿಸಿ, ಅವನ ಇನ್ಸಟಾಗ್ರಾಂ ಖಾತೆಯನ್ನು ಸಹ ಆರಂಭಿಸಿದ್ದರು. ಸಂಜನಾ ಇತ್ತೀಚೆಗಷ್ಟೇ ಮಗನ ಜೊತೆ ಫೋಟೋ ಶೂಟ್ ಮಾಡಿಸಿದ್ದಾರೆ. ಆದರೆ ಆ ಫೋಟೋಗಳನ್ನು ಇನ್ನು ಹಂಚಿಕೊಂಡಿಲ್ಲ. ಅಭಿಮಾನಿಗಳು ಸಹ ಮುದ್ದು ಮಗುವಿನ ಫೋಟೋವನ್ನು ನೋಡಲು ಕಾಯುತ್ತಿದ್ದಾರೆ. ಅಲ್ಲದೇ ಕಳೆದ ವಾರ ಅವರು ಶೇರ್ ಮಾಡಿದ್ದ ವಿಡಿಯೋದಲ್ಲಿ ಮಗು ಮುಖವನ್ನು ರಿವೀಲ್ ಮಾಡಿದ್ದರು.
ಇದನ್ನೂ ಓದಿ: ಕನ್ನಡತಿ ವರೂಧಿನಿ ಸೂಪರ್ ಪೋಸ್, ರಿಯಲ್ ಲೈಫ್ನಲ್ಲೂ ಸಾರಾ ಅಣ್ಣಯ್ಯ ಸಖತ್ ಸ್ಟೈಲಿಶ್
ಇನ್ನು ಅಜೀಜ್ ಪಾಷಾ ಅವರನ್ನು ಮದುವೆಯಾಗಿರುವ ಸಂಜನಾ ಕಳೆದ ವರ್ಷ ತಾವೂ ತಾಯಿಯಾಗುತ್ತಿರುವ ಸಂತೋಷದ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು ಸಂಜನಾ. ಯಾವಾಗಲೂ ಸಾಮಾಜಿಕ ಜಾಲಾತಾಣದಲ್ಲಿ ಆಕ್ಟಿವ್ ಇರುವ ಸಂಜನಾ ಜೀವನದ ಸಂತೋಷದ ಕ್ಷಣದ ಕುರಿತು ವಿಡಿಯೋ ಹಾಗೂ ಫೋಟೋ ಮಾಡಿ ಹಾಕಿಕೊಳ್ಳುತ್ತಿರುತ್ತಾರೆ. ಕೆಲ ಸಮಯದಿಂದ ಚಿತ್ರರಂಗದಿಂದ ದೂರವಿದ್ದರೂ ಸಹ ಸಾಮಾಜಿಕ ಜಾಲಾತಾಣದ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
ಗರ್ಭಿಣಿಯಾದ ನಂತರ ಸಹ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಲ್ಲದೇ, ಅದರ ಮುದ್ದಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಅಲ್ಲದೇ ಅವರಿಗೆ ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯದಂತೆ ಸೀಮಂತವನ್ನು ಸಹ ಮಾಡಲಾಗಿತ್ತು. ಅದರ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿದ್ದ ಸಂಜನಾ ಅಭಿಮಾನಿಗಳ ಆಶೀರ್ವಾದವನ್ನು ಸಹ ಕೇಳಿದ್ದರು.
ಇದನ್ನೂ ಓದಿ: ಗಾರ್ಗಿಗೆ ಸಾಥ್ ಕೊಟ್ಟ ಜ್ಯೋತಿಕಾ, ಸೂರ್ಯ; ಥ್ಯಾಂಕ್ಯೂ ಎಂದ ಸಾಯಿ ಪಲ್ಲವಿ
ಸದ್ಯ ಸಂಜನಾ ಹಾಗೂ ಕುಟುಂಬದವರು ಸಂತಸದಲ್ಲಿದ್ದಾರೆ. ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿರುವ ಸಂತಸದಲ್ಲಿ ಸಂಜನಾ ಮತ್ತು ಡಾ. ಅಜೀಜ್ ಪಾಷಾ ಇದ್ದು, ಸೋಶಿಯಲ್ ಮೀಡಿಯಾದಲ್ಲಿಸಂಜನಾ ಅಭಿಮಾನಿಗಳು ಮಗುವಿನ ಆಗಮನಕ್ಕೆ ಶುಭ ಕೋರುತ್ತಿದ್ದಾರೆ. ಇನ್ನು, ಸಂಜನಾ ಈ ಮೊದಲೇ ತಮಗೆ ಗಂಡು ಮಗುವಾಗುವ ನಿರೀಕ್ಷೆಯಿದೆ ಎಂದು ಹೇಳಿಕೊಂಡಿದ್ದರು. ಅವರ ಆಸೆಯಂತೆ ಇದೀಗ ಸಂಜನಾ ದಂಪತಿಗೆ ಮುದ್ದಾದ ಗಂಡು ಹುಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ