Sanjjanaa Galrani: ಮಗನ ಮುಖ ರಿವೀಲ್ ಮಾಡಿದ ಸಂಜನಾ - ಫೋಟೋ ಫುಲ್ ವೈರಲ್

Sanjjanaa Galrani: ಸಂಜನಾ ಗಲ್ರಾನಿ ಏನೇ ಮಾಡಿದರೂ ಸುದ್ದಿಯಾಗುತ್ತದೆ. ಅವರು ಸಾಮಾಜಿಕ ಜಾಲಾತಾಣದಲ್ಲಿ ಹೆಚ್ಚು ಆಕ್ಟೀವ್​ ಆಗಿರುವ ಅವರು ತಮ್ಮ ಜೀವನದ ಪ್ರತಿಕ್ಷಣವನ್ನು ಹಂಚಿಕೊಳ್ಳುತ್ತಾರೆ.

 ಸಂಜನಾ ಗಲ್ರಾನಿ

ಸಂಜನಾ ಗಲ್ರಾನಿ

  • Share this:
ಕೆಲ ದಿನಗಳ ಹಿಂದೆಯಷ್ಟೇ ಸ್ಯಾಂಡಲ್​ವುಡ್ ​(Sandalwood) ನಟಿ ಸಂಜನಾ ಗಲ್ರಾನಿ (Sanjjanaa Galrani) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಸಂಜನಾಗೆ ಚಿಕಿತ್ಸೆ ನೀಡಿದ ವೈದ್ಯರು ಸ್ವತಃ ತಮ್ಮ ಇನ್ಸ್ಟಾಗ್ರಾಂ (Instagram) ಖಾತೆಯಲ್ಲಿ ಸಂಜನಾ ಜೊತೆ ಗಂಡು ಮಗುವಿನ (Baby Boy) ಫೋಟೋವನ್ನು ಹಂಚಿಕೊಳ್ಳುವ ಮೂಲಕ ಮಗುವಿನ ಜನನದ ಸ್ಪಷ್ಟನೆ ನೀಡಿದ್ದರು. ಅಲ್ಲದೇ, ಮಗುವಿನ ಜನನದ ನಂತರ ಆಸ್ಪತ್ರೆಯಿಂದ ಮನೆಗೆ ಬಂದ ವಿಡಿಯೋವನ್ನು ಕೂಡ ಸಂಜನಾ ತಮ್ಮ ಸಾಮಾಜಿಕ ಜಾಲಾತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಸಂಜನಾ ಅವರ ಮುದ್ದು ಮಗನ ಫೋಟೋವನ್ನು ಹಂಚಿಕೊಂಡಿದ್ದಾರೆ.  

ಸಂಜನಾ ಗಲ್ರಾನಿ ಏನೇ ಮಾಡಿದರೂ ಸುದ್ದಿಯಾಗುತ್ತದೆ. ಅವರು ಸಾಮಾಜಿಕ ಜಾಲಾತಾಣದಲ್ಲಿ ಹೆಚ್ಚು ಆಕ್ಟೀವ್​ ಆಗಿರುವ ಅವರು ತಮ್ಮ ಜೀವನದ ಪ್ರತಿಕ್ಷಣವನ್ನು ಹಂಚಿಕೊಳ್ಳುತ್ತಾರೆ. ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ನೋಡಿದ ಬಳಿಕ ಸಾಮಾಜಿಕ ಕಾರ್ಯದಲ್ಲಿ ಬ್ಯುಸಿ ಇರುವ ಅವರು ಕಳೆದ ವರ್ಷ ತಾವು ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ಅಭಿಮಾನಿಗಳ ಜೊತೆ ಶೇರ್​ ಮಾಡಿಕೊಂಡಿದ್ದು, ಈಗ ಮುದ್ದು ಕಂದಮ್ಮನ ಜೊತೆ ಸಂತಸದಿಂದ ಇದ್ದಾರೆ.

ಮಗು ಮುಖ ವೈರಲ್​ 

ಮೊನ್ನೆಯೊಂದು ಫೊಟೋವನ್ನು ಸಂಜನಾ ಹಾಕಿಕೊಂಡಿದ್ದು, ಅದರಲ್ಲಿ ಮಗನ ಮುಖವನ್ನು ರಿವೀಲ್ ಮಾಡಿದ್ದಾರೆ.  ಇದೀಗ ಆ ಫೋಟೋ ಫುಲ್ ವೈರಲ್​ ಆಗಿದೆ.  ಗರ್ಭಿಣಿಯಾದ ನಂತರ ಸಹ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಲ್ಲದೇ, ಅದರ ಮುದ್ದಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಅಲ್ಲದೇ ಅವರಿಗೆ ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯದಂತೆ ಸೀಮಂತವನ್ನು ಸಹ ಮಾಡಲಾಗಿತ್ತು. ಅದರ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿದ್ದ ಸಂಜನಾ ಅಭಿಮಾನಿಗಳ ಆಶಿರ್ವಾದವನ್ನು ಸಹ ಕೇಳಿದ್ದರು.

ಇದನ್ನೂ ಓದಿ: ಮುದ್ದು 'ಬೇಬೀ'ಸ್ ಜೊತೆ ಅಣ್ಣಮ್ಮನ ದರ್ಶನ ಪಡೆದ 'ಐಶೂ'! ಅಮೂಲ್ಯಾ ಫೋಟೋಸ್ ಫುಲ್ ವೈರಲ್

ಇನ್ನು ಇತ್ತೀಚೆಗೆ ಮಗುವಿನ ಬಗ್ಗೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಅವರು, ತಾಯ್ತನದ ಈ ಹೊಸ ಹಂತದ ಬಗ್ಗೆ ನಾನು ಉತ್ಸುಕಳಾಗಿದ್ದೇನೆ. ನನ್ನ ಬದುಕಿನಲ್ಲಿ ಏನಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ ಎಂದು ಹೇಳಿಕೊಂಡಿದ್ದರು. ಇನ್ನು ನನ್ನ ಜೊತೆ ನನ್ನ ಪ್ರೀತಿಪಾತ್ರರು ಇದ್ದರು ಹಾಗಾಗಿ ನನಗೆ ಯಾವುದೇ ತೊಂದರೆಯಾಗಿಲ್ಲ ಮತ್ತು ನನ್ನ ಮಗನನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳಲು ನಾನು ಕಾಯಲು ಸಾಧ್ಯವಿಲ್ಲ ಎಂದು ಸಂಜನಾ ಸಂತಸ ವ್ಯಕ್ತಪಡಿಸಿದ್ದರು.

ಸಂತಸದಲ್ಲಿ ಸಂಜನಾ ಕುಟುಂಬ

ಸದ್ಯ ಸಂಜನಾ ಹಾಗೂ ಕುಟುಂಬದವರು ಸಂತಸದಲ್ಲಿದ್ದಾರೆ. ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿರುವ ಸಂತಸದಲ್ಲಿ ಸಂಜನಾ ಮತ್ತು ಡಾ. ಅಜೀಜ್ ಪಾಷಾ ಇದ್ದು, ಸೋಶಿಯಲ್ ಮೀಡಿಯಾದಲ್ಲಿಸಂಜನಾ ಅಭಿಮಾನಿಗಳು ಮಗುವಿನ ಆಗಮನಕ್ಕೆ ಶುಭ ಕೋರುತ್ತಿದ್ದಾರೆ. ಇನ್ನು, ಸಂಜನಾ ಈ ಮೊದಲೇ ತಮಗೆ ಗಂಡು ಮಗುವಾಗುವ ನಿರೀಕ್ಷೆಯಿದೆ ಎಂದು ಹೇಳಿಕೊಂಡಿದ್ದರು. ಅವರ ಆಸೆಯಂತೆ ಇದೀಗ ಸಂಜನಾ ದಂಪತಿಗೆ ಮುದ್ದಾದ ಗಂಡು ಹುಟ್ಟಿದೆ.

ಇದನ್ನೂ ಓದಿ: ಮಹರ್ಷಿಯನ್ನು ವರಿಸಿದ ಮಾತಿನ ಮಲ್ಲಿ! ಆರ್‌ಜೆ ಸಿರಿ ಮದುವೆ ಫೋಟೋಗಳು ವೈರಲ್

ನಟಿ ಸಂಜನಾ ಗಲ್ರಾನಿ ಅವರು ಕನ್ನಡದ ಗಂಡ - ಹೆಂಡತಿ ಚಿತ್ರದ ಮೂಲಕ ಸ್ಯಾಂಡಲ್​ ವುಡ್​ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಅನೇಕ ಚಿತ್ರಗಳಲ್ಲಿ ಸಂಜನಾ ಬಣ್ಣ ಹಚ್ಚಿದ್ದಾರೆ. ಚಿತ್ರಗಳಲ್ಲಿ ಅಷ್ಟೇ ಅಲ್ಲದೇ ರಿಯಾಲಿಟಿ ಶೋಗಳಲ್ಲೂ ನಟಿ ಸಂಜನಾ ಗಲ್ರಾನಿ ಅವರು ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಕನ್ನಡ, ಮುಜ್ಞೆ ಶಾದಿ ಕರೋಗೆ? ಎಂಬ ರಿಯಾಲಿಟಿ ಶೋಗಳಲ್ಲೂ ನಟಿ ಸಂಜನಾ ಅವರು ಭಾಗವಹಿಸಿದ್ದರು.
Published by:Sandhya M
First published: