Sanjjanaa Galrani: ಮಗನಿಗೆ ಮುದ್ದಾದ ಹೆಸರಿಟ್ಟ ಸಂಜನಾ ಗಲ್ರಾನಿ, ಇನ್ಮೇಲೆ ಡೈರೆಕ್ಟಾಗಿ ಅವನನ್ನೇ ಮೀಟ್ ಮಾಡ್ಬಹುದಂತೆ

Sanjjanaa Galrani Baby Name: ಅಲ್ಲದೇ, ಅವನ ಮುದ್ದು ಫೋಟೋಗಳನ್ನು ಸಹ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ನನ್ನ ಜೀವನದ ಪ್ರತಿ ಹಂತದಲ್ಲಿ ನನಗೆ ಸಹಕಾರ ನೀಡಿದ ಹಾಗೂ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದಿದ್ದಾರೆ.

ನಟಿ ಸಂಜನಾ ಗಲ್ರಾನಿ

ನಟಿ ಸಂಜನಾ ಗಲ್ರಾನಿ

  • Share this:
ಸಂಜನಾ ಗಲ್ರಾನಿ (Sanjjanaa Galrani), ಈ ಹೆಸರು ಕಳೆದ ಎರಡು, ಮೂರು ವರ್ಷಗಳಿಂದ ಭಾರೀ ಸುದ್ದಿಯಲ್ಲಿದೆ. ಲಾಕ್ಡೌನ್ (Lockdown) ಸಮಯದಲ್ಲಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದರು. ಹಲವಾರು ರೀತಿಯಲ್ಲಿ ಹಲವಾರು ಜನರಿಗೆ ನೆರವಾಗಿದ್ದರು. ವಿವಾದಗಳು ಅದೆಷ್ಟೇ ಬಂದರೂ ದಿಟ್ಟವಾಗಿ ಎದುರಿಸಿದ ನಟಿ (Actress) ಎಂದರೆ ತಪ್ಪಾಗಲಾರದು. ಯಾವಾಗಲೂ ಒಂದೆಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗಿದ್ದ ಸಂಜನಾ ಕಳೆದ ತಿಂಗಳು ಗಂಡು ಮಗುವಿನ ತಾಯಿಯಾಗಿದ್ದಾರೆ. ಈ ಸಂತಸದ ಸುದ್ದಿಯನ್ನು ಅವರೇ ತಮ್ಮ ಸೋಷಿಯಲ್ ಮೀಡಿಯಾ(Social media)ದಲ್ಲಿ ಹಂಚಿಕೊಂಡಿದ್ದರು. ಇದೀಗ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ. ಆದರೆ ಅದು ಮಗನ ಪೆಟ್​ ನೇಮ್​ ಮಾತ್ರ.  

ಹೌದು, ತಮ್ಮ ಇನ್ಸ್​ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಸಂಜನಾ ಹಂಚಿಕೊಂಡಿದ್ದು, ಅದರಲ್ಲಿ ಪತಿ ಹಾಗೂ ಅವರ ಫೋಟೋಗಳಿದೆ. ಅಲ್ಲದೇ ಅದರ ಕೆಳಗೆ ಮಗನ ಪೆಟ್​ ನೇಮ್ ರಿವೀಲ್ ಮಾಡಿದ್ದು, ಅದರಲ್ಲಿ ಆ ಮುದ್ದು ಮಗುವಿನ ಇನ್ಸ್​ಟಾಗ್ರಾಂ ಖಾತೆಯನ್ನುಸಹ ಟ್ಯಾಗ್ ಮಾಡಿದ್ದಾರೆ.  ವಿಡಿಯೋ ಕೆಳಗೆ ಹೆಲೋ, ನನ್ನ ಮಗನ ಹೆಸರು ಪ್ರಿನ್ಸ್ ಪಾಷಾ, ಆದರೆ ಇದು ಕೇವಲ ಅವನ ನಿಕ್ ನೇಮ್​ ಆಗಿದೆ ಬೇಗ ಅವನ ನಿಜವಾದ ಹೆಸರನ್ನು ನಿಮಗೆ ತಿಳಿಸುತ್ತೇನೆ. ಅಲ್ಲದೇ, ಅವನ ಮುದ್ದು ಫೋಟೋಗಳನ್ನು ಸಹ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ನನ್ನ ಜೀವನದ ಪ್ರತಿ ಹಂತದಲ್ಲಿ ನನಗೆ ಸಹಕಾರ ನೀಡಿದ ಹಾಗೂ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದಿದ್ದಾರೆ.




ಸಂಜನಾ ಇತ್ತೀಚೆಗಷ್ಟೆ ಮಗನ ಜೊತೆ ಫೋಟೋ ಶೂಟ್​ ಮಾಡಿಸಿದ್ದಾರೆ. ಆದರೆ ಆ ಫೋಟೋಗಳನ್ನು ಇನ್ನು ಹಂಚಿಕೊಂಡಿಲ್ಲ. ಅಭಿಮಾನಿಗಳು ಸಹ ಮುದ್ದು ಮಗುವಿನ ಫೋಟೋವನ್ನು ನೋಡಲು ಕಾಡುತ್ತಿದ್ದಾರೆ. ಅಲ್ಲದೇ ಕಳೆದ ವಾರ ಅವರು ಶೇರ್ ಮಾಡಿದ್ದ ವಿಡಿಯೋದಲ್ಲಿ ಮಗು ಮುಖವನ್ನು ರಿವೀಲ್ ಮಾಡಿದ್ದರು.

ಇದನ್ನೂ ಓದಿ: ನಾಲ್ಕನೇ ದಿನವೂ ಚಾರ್ಲಿ ಅಬ್ಬರ, ಸಿನಿಮಾ ಒಟ್ಟು ಕಲೆಕ್ಷನ್ ಇಷ್ಟೊಂದಾ?

ಇನ್ನು ಅಜೀಜ್ ಪಾಷಾ ಅವರನ್ನು ಮದುವೆಯಾಗಿರುವ ಸಂಜನಾ ಕಳೆದ ವರ್ಷ ತಾವೂ ತಾಯಿಯಾಗುತ್ತಿರುವ ಸಂತೋಷದ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು ಸಂಜನಾ. ಯಾವಾಗಲೂ ಸಾಮಾಜಿಕ ಜಾಲಾತಾಣದಲ್ಲಿ ಆಕ್ಟಿವ್ ಇರುವ ಸಂಜನಾ ಜೀವನದ ಸಂತೋಷದ ಕ್ಷಣದ ಕುರಿತು ವಿಡಿಯೋ ಹಾಗೂ ಫೋಟೋ ಮಾಡಿ ಹಾಕಿಕೊಳ್ಳುತ್ತಿರುತ್ತಾರೆ. ಕೆಲ ಸಮಯದಿಂದ ಚಿತ್ರರಂಗದಿಂದ ದೂರವಿದ್ದರೂ ಸಹ ಸಾಮಾಜಿಕ ಜಾಲಾತಾಣದ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.




ಗರ್ಭಿಣಿಯಾದ ನಂತರ ಸಹ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಲ್ಲದೇ, ಅದರ ಮುದ್ದಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಅಲ್ಲದೇ ಅವರಿಗೆ ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯದಂತೆ ಸೀಮಂತವನ್ನು ಸಹ ಮಾಡಲಾಗಿತ್ತು. ಅದರ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿದ್ದ ಸಂಜನಾ ಅಭಿಮಾನಿಗಳ ಆಶಿರ್ವಾದವನ್ನು ಸಹ ಕೇಳಿದ್ದರು.

ಸದ್ಯ ಸಂಜನಾ ಹಾಗೂ ಕುಟುಂಬದವರು ಸಂತಸದಲ್ಲಿದ್ದಾರೆ. ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿರುವ ಸಂತಸದಲ್ಲಿ ಸಂಜನಾ ಮತ್ತು ಡಾ. ಅಜೀಜ್ ಪಾಷಾ ಇದ್ದು, ಸೋಶಿಯಲ್ ಮೀಡಿಯಾದಲ್ಲಿಸಂಜನಾ ಅಭಿಮಾನಿಗಳು ಮಗುವಿನ ಆಗಮನಕ್ಕೆ ಶುಭ ಕೋರುತ್ತಿದ್ದಾರೆ. ಇನ್ನು, ಸಂಜನಾ ಈ ಮೊದಲೇ ತಮಗೆ ಗಂಡು ಮಗುವಾಗುವ ನಿರೀಕ್ಷೆಯಿದೆ ಎಂದು ಹೇಳಿಕೊಂಡಿದ್ದರು. ಅವರ ಆಸೆಯಂತೆ ಇದೀಗ ಸಂಜನಾ ದಂಪತಿಗೆ ಮುದ್ದಾದ ಗಂಡು ಹುಟ್ಟಿದೆ.

ಇದನ್ನೂ ಓದಿ: ಹರಿ ಕಥೆ ಅಲ್ಲ, ಗಿರಿ ಕಥೆ ಸಿನಿಮಾದ ಟ್ರೈಲರ್ ಇಂದು ಬಿಡುಗಡೆ, ಇನ್ಯಾವ್ ಮೋಡಿ ಮಾಡ್ತಾರೋ ಶೆಟ್ರು

ನಟಿ ಸಂಜನಾ ಗಲ್ರಾನಿ ಅವರು ಕನ್ನಡದ ಗಂಡ - ಹೆಂಡತಿ ಚಿತ್ರದ ಮೂಲಕ ಸ್ಯಾಂಡಲ್​ ವುಡ್​ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಅನೇಕ ಚಿತ್ರಗಳಲ್ಲಿ ಸಂಜನಾ ಬಣ್ಣ ಹಚ್ಚಿದ್ದಾರೆ. ಚಿತ್ರಗಳಲ್ಲಿ ಅಷ್ಟೇ ಅಲ್ಲದೇ ರಿಯಾಲಿಟಿ ಶೋಗಳಲ್ಲೂ ನಟಿ ಸಂಜನಾ ಗಲ್ರಾನಿ ಅವರು ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಕನ್ನಡ, ಮುಜ್ಞೆ ಶಾದಿ ಕರೋಗೆ? ಎಂಬ ರಿಯಾಲಿಟಿ ಶೋಗಳಲ್ಲೂ ನಟಿ ಸಂಜನಾ ಅವರು ಭಾಗವಹಿಸಿದ್ದರು.
Published by:Sandhya M
First published: