ಸಂಜನಾ ಗಲ್ರಾನಿ (Sanjjanaa Galrani), ಈ ಹೆಸರು ಕಳೆದ ಎರಡು, ಮೂರು ವರ್ಷಗಳಿಂದ ಭಾರೀ ಸುದ್ದಿಯಲ್ಲಿದೆ. ಲಾಕ್ಡೌನ್ (Lockdown) ಸಮಯದಲ್ಲಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದರು. ಹಲವಾರು ರೀತಿಯಲ್ಲಿ ಹಲವಾರು ಜನರಿಗೆ ನೆರವಾಗಿದ್ದರು. ವಿವಾದಗಳು ಅದೆಷ್ಟೇ ಬಂದರೂ ದಿಟ್ಟವಾಗಿ ಎದುರಿಸಿದ ನಟಿ (Actress) ಎಂದರೆ ತಪ್ಪಾಗಲಾರದು.
ಇನ್ನು ಅಜೀಜ್ ಪಾಷಾ ಅವರನ್ನು ಮದುವೆಯಾಗಿರುವ ಸಂಜನಾ ಕಳೆದ ವರ್ಷ ತಾವೂ ತಾಯಿಯಾಗುತ್ತಿರುವ ಸಂತೋಷದ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು ಸಂಜನಾ. ಯಾವಾಗಲೂ ಸಾಮಾಜಿಕ ಜಾಲಾತಾಣದಲ್ಲಿ ಆಕ್ಟಿವ್ ಇರುವ ಸಂಜನಾ ಜೀವನದ ಸಂತೋಷದ ಕ್ಷಣದ ಕುರಿತು ವಿಡಿಯೋ ಹಾಗೂ ಫೋಟೋ ಮಾಡಿ ಹಾಕಿಕೊಳ್ಳುತ್ತಿರುತ್ತಾರೆ. ಕೆಲ ಸಮಯದಿಂದ ಚಿತ್ರರಂಗದಿಂದ ದೂರವಿದ್ದರೂ ಸಹ ಸಾಮಾಜಿಕ ಜಾಲಾತಾಣದ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
ಗರ್ಭಿಣಿಯಾದ ನಂತರ ಸಹ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಲ್ಲದೇ, ಅದರ ಮುದ್ದಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಅಲ್ಲದೇ ಅವರಿಗೆ ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯದಂತೆ ಸೀಮಂತವನ್ನು ಸಹ ಮಾಡಲಾಗಿತ್ತು. ಅದರ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿದ್ದ ಸಂಜನಾ ಅಭಿಮಾನಿಗಳ ಆಶಿರ್ವಾದವನ್ನು ಸಹ ಕೇಳಿದ್ದರು.
ಇನ್ನು ಕಳೆದ ಗುರುವಾರ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿರುವ ಸಂಜನಾ, ಮತ್ತೊಂದು ವಿಡಿಯೋ ಶೇರ್ ಮಾಡಿದ್ದು, ಫುಲ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸಂಜನಾ ಮುದ್ದು ಮಗನನ್ನ ಕರೆದುಕೊಂಡು ಮನೆಗೆ ಬಂದಿದ್ದು, ಹಿರಿಯರು ಆರತಿ ಮಾಡಿ ಒಳಗೆ ಕರೆದುಕೊಳ್ಳುತ್ತಿರುವುದನ್ನ ನಾವು ನೋಡಬಹುದಾಗಿದೆ.
ಇನ್ನು ವಿಡಿಯೋ ಕೆಳಗೆ ನಾನು ನನ್ನ ಸಂತೋಷದ ಗಣಿಯನ್ನು ಸ್ವಾಗತಿಸುತ್ತಿದ್ದು, ನನ್ನ ಬದುಕಿಗೆ ಹೊಸ ಅರ್ಥ ನೀಡಿದ್ದಕ್ಕೆ ಹಾಗೂ ಜವಾಬ್ದಾರಿಯ ಅರ್ಥವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಕಂದ ಎಂದು ಬರೆದುಕೊಂಡಿದ್ದಾರೆ. ಗಂಡ – ಹೆಂಡತಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶ ಮಾಡಿದ ನಟಿ ಸಂಜನಾ ಗಲ್ರಾನಿ, ಕನ್ನಡ ಮಾತ್ರವಲ್ಲದೇ ಪರಭಾಷೆ ಚಿತ್ರಗಳಲ್ಲಿ ಸಹ ಅಭಿನಯಿಸಿದ್ದಾರೆ.
ಇದನ್ನೂ ಓದಿ: ಹೃದಯಾಘಾತದಿಂದ ನಿರ್ದೇಶಕ ಕೆಎನ್ ಮೋಹನ್ ಕುಮಾರ್ ನಿಧನ - ಟಿಎನ್ ಸೀತಾರಾಂ ಸಂತಾಪ
ಇನ್ನು ಇತ್ತೀಚೆಗೆ ಮಗುವಿನ ಬಗ್ಗೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಅವರು, ತಾಯ್ತನದ ಈ ಹೊಸ ಹಂತದ ಬಗ್ಗೆ ನಾನು ಉತ್ಸುಕಳಾಗಿದ್ದೇನೆ. ನನ್ನ ಬದುಕಿನಲ್ಲಿ ಏನಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ ಎಂದು ಹೇಳಿಕೊಂಡಿದ್ದರು. ಇನ್ನು ನನ್ನ ಜೊತೆ ನನ್ನ ಪ್ರೀತಿಪಾತ್ರರು ಇದ್ದರು ಹಾಗಾಗಿ ನನಗೆ ಯಾವುದೇ ತೊಂದರೆಯಾಗಿಲ್ಲ ಮತ್ತು ನನ್ನ ಮಗನನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳಲು ನಾನು ಕಾಯಲು ಸಾಧ್ಯವಿಲ್ಲ ಎಂದು ಸಂಜನಾ ಸಂತಸ ವ್ಯಕ್ತಪಡಿಸಿದ್ದರು.
ಸದ್ಯ ಸಂಜನಾ ಹಾಗೂ ಕುಟುಂಬದವರು ಸಂತಸದಲ್ಲಿದ್ದಾರೆ. ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿರುವ ಸಂತಸದಲ್ಲಿ ಸಂಜನಾ ಮತ್ತು ಡಾ. ಅಜೀಜ್ ಪಾಷಾ ಇದ್ದು, ಸೋಶಿಯಲ್ ಮೀಡಿಯಾದಲ್ಲಿಸಂಜನಾ ಅಭಿಮಾನಿಗಳು ಮಗುವಿನ ಆಗಮನಕ್ಕೆ ಶುಭ ಕೋರುತ್ತಿದ್ದಾರೆ. ಇನ್ನು, ಸಂಜನಾ ಈ ಮೊದಲೇ ತಮಗೆ ಗಂಡು ಮಗುವಾಗುವ ನಿರೀಕ್ಷೆಯಿದೆ ಎಂದು ಹೇಳಿಕೊಂಡಿದ್ದರು. ಅವರ ಆಸೆಯಂತೆ ಇದೀಗ ಸಂಜನಾ ದಂಪತಿಗೆ ಮುದ್ದಾದ ಗಂಡು ಹುಟ್ಟಿದೆ.
ಇದನ್ನೂ ಓದಿ: 'ಹಳ್ಳಿ' ಹುಡುಗಿ ಬಾಳಲ್ಲಿ ಬರಲೇ ಇಲ್ಲ 'ಚೈತ್ರ'ಕಾಲ! ಗೋಲ್ಡ್ ಲೋನ್ ಕಿರಿಕ್ಗೆ ಪತಿ ವಿರುದ್ಧವೇ ನಟಿ ದೂರು
ನಟಿ ಸಂಜನಾ ಗಲ್ರಾನಿ ಅವರು ಕನ್ನಡದ ಗಂಡ - ಹೆಂಡತಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಅನೇಕ ಚಿತ್ರಗಳಲ್ಲಿ ಸಂಜನಾ ಬಣ್ಣ ಹಚ್ಚಿದ್ದಾರೆ. ಚಿತ್ರಗಳಲ್ಲಿ ಅಷ್ಟೇ ಅಲ್ಲದೇ ರಿಯಾಲಿಟಿ ಶೋಗಳಲ್ಲೂ ನಟಿ ಸಂಜನಾ ಗಲ್ರಾನಿ ಅವರು ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಕನ್ನಡ, ಮುಜ್ಞೆ ಶಾದಿ ಕರೋಗೆ? ಎಂಬ ರಿಯಾಲಿಟಿ ಶೋಗಳಲ್ಲೂ ನಟಿ ಸಂಜನಾ ಅವರು ಭಾಗವಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ