ಮುನ್ನಾ ಭಾಯಿ 3ರಲ್ಲಿ ಒಂದಾಗಲಿದೆಯಾ ಸಂಜು-ರಣಬೀರ್​ ಜೋಡಿ?

news18
Updated:July 20, 2018, 4:31 PM IST
ಮುನ್ನಾ ಭಾಯಿ 3ರಲ್ಲಿ ಒಂದಾಗಲಿದೆಯಾ ಸಂಜು-ರಣಬೀರ್​ ಜೋಡಿ?
news18
Updated: July 20, 2018, 4:31 PM IST
ನ್ಯೂಸ್​ 18 ಕನ್ನಡ 

ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರ 'ಸಂಜು' ಸಿನಿಮಾದಲ್ಲಿ ಸಂಜಯ್​ ದತ್​ ಅವರ ಪತ್ರಕ್ಕೆ ಜೀವ ತುಂಬಿದ್ದ ರಣಬೀರ್​ ಕಪೂರ್​ ಅವರ ಅಭಿನಯಕ್ಕೆ ಎಲ್ಲೆಡೆ ಪ್ರಸಂಶೆ ವ್ಯಕ್ತವಾಗಿದೆ. ಅಲ್ಲದೆ ಈ ಸಿನಿಮಾ ಬಾಕ್ಸಾಫಿಸ್​ನಲ್ಲಿ ದೂಳೆಬ್ಬಿಸಿದ್ದು ಸಾಕಷ್ಟು ದಾಖಲೆಗಳನ್ನು ಮುರಿದಿದೆ.

ಈ ಸಿನಿಮಾದ ಕೊನೆಯಲ್ಲಿ ಪ್ರಸಾರವಾಗುವ ಒಂದು ಹಾಡಿನಲ್ಲಿ ಸಂಜು-ರಣಬೀರ್​ ಕಾಣಸಿಕೊಂಡಿದ್ದರು. ಆದರೆ ಈಗ 'ಮುನ್ನಾ ಭಾಯಿ 3' ಸಿನಿಮಾದಲ್ಲೂ ರಣಬೀರ್​-ಸಂಜಯ್​ ಜತೆ ತೆರೆ ಹಂಚಿಕೊಳ್ಳಲಿದ್ದಾರಂತೆ. ಹೀಗೆಂದು ಹೇಳುತ್ತಿರುವುದು ಫಿಲ್ಮ್​ಫೇರ್​ ವರದಿ.

ಹೌದು 'ಸಂಜು' ಸಿನಿಮಾದಲ್ಲಿ ರಣಬೀರ್​ ಅಭಿನಯದಿಂದ ಪ್ರೇರಿತರಾಗಿ ಅವರಿಗೆ 'ಮುನ್ನಾ ಭಾಯಿ 3' ಸಿನಿಮಾದಲ್ಲಿ ಸರ್ಕೀಟ್​ ಪಾತ್ರವನ್ನು ನೀಡುವ ಆಲೋಚನೆ ಸಿನಿಮಾದ ನಿರ್ದೇಶಕರಿಗಿದೆ ಎನ್ನಲಾಗುತ್ತಿದೆ. ಈ ಪಾತ್ರವನ್ನು ಈ ಹಿಂದಿನ ಸಿನಿಮಾಗಳಲ್ಲಿ ಅರ್ಷದ್​ ವಾರ್ಸಿ ಅಭಿನಯಿಸಿದ್ದರು. ಈ ಪಾತ್ರ ಎರಡೂ ಸಿನಿಮಾಗಳಲ್ಲೂ ಸಾಕಷ್ಟು ಹೆಸರು ಮಾಡಿತ್ತು.

First published:July 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...