• Home
  • »
  • News
  • »
  • entertainment
  • »
  • Rajiv Gandhi: ಟಿಪ್ಪು ಸುಲ್ತಾನ್ ಸೆಟ್‌ನಲ್ಲಿ ನಡೆದಿತ್ತು ಅಗ್ನಿ ಅವಘಡ; ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಹಾಯ ಸ್ಮರಿಸಿದ ನಟ ಸಂಜಯ್ ಖಾನ್

Rajiv Gandhi: ಟಿಪ್ಪು ಸುಲ್ತಾನ್ ಸೆಟ್‌ನಲ್ಲಿ ನಡೆದಿತ್ತು ಅಗ್ನಿ ಅವಘಡ; ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಹಾಯ ಸ್ಮರಿಸಿದ ನಟ ಸಂಜಯ್ ಖಾನ್

ಸಂಜಯ್​ ಖಾನ್

ಸಂಜಯ್​ ಖಾನ್

ಘಟನೆಯ ಬಗ್ಗೆ ಖಾನ್ ಹಲವಾರು ಬಾರಿ ಮಾತನಾಡಿದ್ದು ತಮ್ಮ ಆತ್ಮಚರಿತ್ರೆ ದಿ ಬೆಸ್ಟ್ ಮಿಸ್ಟೇಕ್ಸ್ ಆಫ್ ಮೈ ಲೈಫ್‌ನಲ್ಲಿ ಆ ದಿನದ ಘಟನೆಯನ್ನು ಯಥಾವತ್ತಾಗಿ ಬಣ್ಣಿಸಿದ್ದಾರೆ. ತಮ್ಮ ಆತ್ಮಕಥೆಯಲ್ಲಿ ಪತ್ನಿ ಜರೀನ್ ಖಾನ್ ಬೆಂಬಲವನ್ನು ಅವರು ಸ್ಮರಿಸಿಕೊಂಡಿದ್ದು ಆಕೆಯೇ ನನ್ನ ಕಷ್ಟದ ದಿನಗಳಲ್ಲಿ ಬೆನ್ನುಲುಬಾಗಿ ಇದ್ದಳು ಎಂದು ತಿಳಿಸಿದ್ದಾರೆ. ಇದೇ ಸಮಯದಲ್ಲಿ ಆಗಿನ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ನಟನಿಗೆ ಹೇಗೆ ಸಹಾಯ ಮಾಡಿದರು ಎಂಬುದನ್ನು ಸ್ಮರಿಸಿಕೊಂಡಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

1962 ರಲ್ಲಿ ಸಿನಿ ರಂಗ ಪ್ರವೇಶಿಸಿರುವ ಸಂಜಯ್ ಖಾನ್ ಹಲವಾರು ಚಿತ್ರಗಳಲ್ಲಿ ಕಥಾ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅದೇ ರೀತಿ ನಾಗಿನ್, ಲಾಕ್, ಮೇಳ ಮೊದಲಾದ ಖ್ಯಾತ ನಿರ್ಮಾಣಗಳ ಸೀರಿಯಲ್‌ಗಳಲ್ಲಿ (Serial) ಕೂಡ ನಟಿಸಿ ಹೆಸರುವಾಸಿಯಾಗಿದ್ದಾರೆ. ದ ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್ ಟಿವಿ (Tv) ಧಾರವಾಹಿಯಲ್ಲಿ ಟಿಪ್ಪುವಾಗಿ ಬಣ್ಣ ಹಚ್ಚಿ ಹೆಸರುವಾಸಿಯಾದವರು. ನಟ ಟಿಪ್ಪು ಸುಲ್ತಾನ್ ಸೆಟ್‌ನಲ್ಲಿ ನಡೆದ ಅಗ್ನಿ ಅವಘಡದ (Fire Accident) ನೆನಪುಗಳನ್ನು ಹಂಚಿಕೊಂಡಿದ್ದು ಅಂದಿನ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ (Rajiv Ghandi) ಸಹಾಯವನ್ನು ಸ್ಮರಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಪತ್ನಿ ನೀಡಿದ ಧೈರ್ಯದ ಬೆಂಬಲದಿಂದ ತಾನು ಚೇತರಿಸಿಕೊಂಡೆ ಎಂಬ ನೆನಪುಗಳನ್ನು ಹಂಚಿಕೊಂಡಿದ್ದಾರೆ.


ಟಿಪ್ಪುವಿನ ಜೀವನ ಚರಿತ್ರೆ ಆಧರಿಸಿದ ಧಾರವಾಹಿ


ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್ ಭಾರತೀಯ ಐತಿಹಾಸಿಕ ಟಿವಿ ಧಾರವಾಹಿಯಾಗಿದ್ದು, ಇದನ್ನು ಫೆಬ್ರವರಿ 1990 ರಲ್ಲಿ ಡಿಡಿ ನ್ಯಾಷನಲ್‌ನಲ್ಲಿ ಮೊದಲ ಬಾರಿಗೆ ಪ್ರಸಾರ ಮಾಡಲಾಯಿತು. ಧಾರವಾಹಿ ಟಿಪ್ಪುವಿನ ಜೀವನ ಚರಿತ್ರೆಯನ್ನು ಒಳಗೊಂಡಿದೆ.


ಚಿತ್ರೀಕರಣದ ಸೆಟ್‌ನಲ್ಲಿ ನಡೆದಿತ್ತು ಅಗ್ನಿ ದುರಂತ


ಸಂಜಯ್ ಖಾನ್ ತಮ್ಮದೇ ಪ್ರೊಡಕ್ಶನ್ ಹೌಸ್‌ನಲ್ಲಿ ನಡೆದ ಅಗ್ನಿ ದುರಂತದಿಂದ ಚೇತರಿಸಿಕೊಳ್ಳಲು ವರ್ಷಗಳನ್ನೇ ತೆಗೆದುಕೊಂಡರು ಎಂಬುದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಮೈಸೂರಿನಲ್ಲಿ ಭಗವಾನ್ ಎಸ್ ಗಿಡ್ವಾನಿಯವರ ಪುಸ್ತಕ ಆಧಾರಿತ ದ ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್ ಧಾರವಾಹಿಯ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಸೆಟ್‌ನಲ್ಲೇ ಆಕಸ್ಮಿಕ ಬೆಂಕಿ ದುರಂತ ಕಾಣಿಸಿಕೊಂಡಿತ್ತು. ಬೆಂಕಿ ಅಪಘಾತದಿಂದ 62 ಜನ ಮೃತಪಟ್ಟರು ಹಾಗೂ ಟಿವಿ ಸರಣಿಯ ಪ್ರಮುಖ ಪಾತ್ರಧಾರಿ, ನಿರ್ದೇಶಕರು ನಿರ್ಮಾಪಕರಿಗೂ ತೀವ್ರ ಗಾಯಗಳಾಗಿ ಚೇತರಿಸಿಕೊಳ್ಳಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ಬೇಕಾಯಿತು.


ಇದನ್ನೂ ಓದಿ: Sunil Babu Passes Away: ಪ್ರಸಿದ್ಧ ಕಲಾ ನಿರ್ದೇಶಕ ಸುನಿಲ್ ಬಾಬು ಇನ್ನಿಲ್ಲ

ರಾಜೀವ್ ಗಾಂಧಿಯ ಸಹಾಯ ನೆನಪು ಮಾಡಿಕೊಂಡ ನಟ


ಈ ಘಟನೆಯ ಬಗ್ಗೆ ಖಾನ್ ಹಲವಾರು ಬಾರಿ ಮಾತನಾಡಿದ್ದು ತಮ್ಮ ಆತ್ಮಚರಿತ್ರೆ ದಿ ಬೆಸ್ಟ್ ಮಿಸ್ಟೇಕ್ಸ್ ಆಫ್ ಮೈ ಲೈಫ್‌ನಲ್ಲಿ ಆ ದಿನದ ಘಟನೆಯನ್ನು ಯಥಾವತ್ತಾಗಿ ಬಣ್ಣಿಸಿದ್ದಾರೆ. ತಮ್ಮ ಆತ್ಮಕಥೆಯಲ್ಲಿ ಪತ್ನಿ ಜರೀನ್ ಖಾನ್ ಬೆಂಬಲವನ್ನು ಅವರು ಸ್ಮರಿಸಿಕೊಂಡಿದ್ದು ಆಕೆಯೇ ನನ್ನ ಕಷ್ಟದ ದಿನಗಳಲ್ಲಿ ಬೆನ್ನುಲುಬಾಗಿ ಇದ್ದಳು ಎಂದು ತಿಳಿಸಿದ್ದಾರೆ. ಇದೇ ಸಮಯದಲ್ಲಿ ಆಗಿನ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ನಟನಿಗೆ ಹೇಗೆ ಸಹಾಯ ಮಾಡಿದರು ಎಂಬುದನ್ನು ಸ್ಮರಿಸಿಕೊಂಡಿದ್ದಾರೆ.ವಿಶೇಷ ವೈದ್ಯರ ಏರ್ಪಾಡು


ಸಂಜಯ್ ಖಾನ್‌ರನ್ನು ಚಿಕಿತ್ಸಿಸಲೆಂದೇ ರಾಜೀವ್ ಗಾಂಧಿ ಏಮ್ಸ್‌ನಿಂದ ವಿಶೇಷ ವೈದ್ಯರ ಏರ್ಪಾಡು ಮಾಡಿದ್ದರು ಎಂದು ತಿಳಿಸಿದ್ದಾರೆ. ತಮ್ಮ ಬಗ್ಗೆ ರಾಜೀವ್ ಗಾಂಧಿ ತುಂಬಾ ಕಾಳಜಿವಹಿಸಿದ್ದರು ಎಂದು ಜ್ಞಾಪಿಸಿಕೊಂಡಿದ್ದಾರೆ. ಖಾನ್ ಬದುಕುಳಿಯುವ ಸಾಧ್ಯತೆ 10% ಮಾತ್ರ ಎಂದು ವೈದ್ಯರು ತಿಳಿಸಿದಾಗ ಅವರ ಪತ್ನಿ ಧೈರ್ಯಗುಂದಲಿಲ್ಲ ಎಂದೇ ತಿಳಿಸಿದ್ದಾರೆ. ಬಾಲಿವುಡ್ ಹಂಗಾಮಾಗೆ ಖಾನ್ ನೀಡಿದ ಸಂದರ್ಶನದಲ್ಲಿ ತಮ್ಮ ಪತ್ನಿಯ ಧೈರ್ಯದ ಮಾತುಗಳನ್ನು ಖಾನ್ ಸ್ಮರಿಸಿಕೊಂಡಿದ್ದಾರೆ.ಪತ್ನಿ ನೀಡಿದ ಸಹಕಾರವೇ ಧೈರ್ಯ ನೀಡಿತು


ತಮ್ಮ ಪತ್ನಿ ನೀಡಿದ ಧೈರ್ಯದ ಮಾತುಗಳು, ಆಕೆ ತಮ್ಮನ್ನು ನೋಡಿಕೊಂಡ ರೀತಿ, ಆಕೆಯ ಸಾಂತ್ವಾನ ತುಂಬಿದ ಕಾಳಜಿಯೇ ನಾನು ಶೀಘ್ರ ಚೇತರಿಸಿಕೊಳ್ಳಲು ಸಹಕಾರಿಯಾಯಿತು ಎಂದು ತಿಳಿಸಿದ್ದಾರೆ. 13 ತಿಂಗಳಲ್ಲಿ ಚೇತರಿಸಿಕೊಂಡ ಸಂಜಯ್ ಖಾನ್ ತಮ್ಮೆಲ್ಲಾ ಕಷ್ಟಗಳನ್ನೆಲ್ಲಾ ಬದಿಗೊತ್ತಿ ಹೊಸ ಜನ್ಮ ಪಡೆದವರಂತೆ ಟಿಪ್ಪು ಸುಲ್ತಾನ್ ಟಿವಿ ಸರಣಿಯನ್ನು ನಿರ್ಮಿಸಿದೆ ಎಂದು ತಿಳಿಸಿದ್ದಾರೆ.


ಪೈರಸಿ ಸಮಸ್ಯೆಯಿಂದ ಚಲನಚಿತ್ರ ನಿರ್ಮಿಸಲಿಲ್ಲ


ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್ ಅನ್ನು ಆರಂಭದಲ್ಲಿ ಒಂದು ವೈಶಿಷ್ಟ್ಯಪೂರ್ಣ ಚಲನಚಿತ್ರವಾಗಿ ನಿರ್ಮಿಸುವ ಇರಾದೆ ಚಿತ್ರತಂಡಕ್ಕಿತ್ತು, ಆದರೆ ಆ ದಿನಗಳಲ್ಲಿ ಹೆಚ್ಚಾಗಿದ್ದ ಪೈರಸಿ ಸಮಸ್ಯೆಯಿಂದ ಈ ನಿರ್ಧಾರವನ್ನು ಕೈಬಿಡಲಾಯಿತು ಎಂದು ಖಾನ್ ತಿಳಿಸಿದ್ದಾರೆ. ತಮ್ಮ ಪ್ರದರ್ಶನದ ನಿರ್ಮಾಣ ಮೌಲ್ಯವು ತುಂಬಾ ಹೆಚ್ಚಾಗಿದೆ ಮತ್ತು ಧಾರವಾಹಿಯನ್ನು ಮಾಡಲು ಮೈಸೂರು ಸರಕಾರದ ಸಂಪೂರ್ಣ ಬೆಂಬಲವಿದೆ ಎಂದು ಖಾನ್ ಹೇಳಿಕೊಂಡಿದ್ದರು. ಪ್ರದರ್ಶನವು ಅಂತಿಮವಾಗಿ ಫೆಬ್ರವರಿ 1990 ರಲ್ಲಿ ಡಿಡಿ ನ್ಯಾಷನಲ್‌ನಲ್ಲಿ ಪ್ರಸಾರವಾಯಿತು.


First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು