KGF 2: ಅಪ್ಪನಿಗೂ ರಾಕಿ ಭಾಯ್ ಇಷ್ಟ, `ಅಧೀರ’ನ ಮಕ್ಕಳಿಗೂ ಯಶ್​ ಅಂದ್ರೆ ಪಂಚಪ್ರಾಣವಂತೆ! ಇದಕ್ಕಿಂತ ಇನ್ನೇನು ಬೇಕು

ರಾಕಿಂಗ್​ ಸ್ಟಾರ್ ಯಶ್​.. ಸದ್ಯಕ್ಕೆ ಇಡೀ ವಿಶ್ವದಲ್ಲೇ ಇವರ ಹೆಸರು ರಾರಾಜಿಸುತ್ತಿದೆ. ಇವರನ್ನು ಕಂಡರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಇದೀಗ ಸಂಜಯ್​ ದತ್​ ಕೂಡ ಯಾರಿಗೂ ಗೊತ್ತಿರುದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಸಂಜಯ್​ ದತ್​ ಹಲವಾರು ಕಾರ್ಯಕ್ರಮಗಳಲ್ಲಿ ಯಶ್​ ಕಂಡರೆ ಇಷ್ಟ ಎಂದು ಹೇಳಿಕೊಂಡಿದ್ದಾರೆ.

ಸಂಜಯ್​ ದತ್​, ಯಶ್​

ಸಂಜಯ್​ ದತ್​, ಯಶ್​

  • Share this:
’ಕೆಜಿಎಫ್ 2’(KGF 2) ಸಿನಿಮಾ ದಾಖಲೆ(Records)ಗಳ ಮೇಲೆ ದಾಖಲೆಗಳನ್ನು ರಚಿಸುತ್ತಿದೆ. ಈ ಸಿನಿಮಾ ದಾಖಲೆಗಳನ್ನು ಬರೆಯಲಿದೆ ಎಂಬುದು ನಿರೀಕ್ಷಿತವೇ ಆಗಿತ್ತು. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ದಾಖಲೆಗಳನ್ನು ಸೃಷ್ಟಿ ಮಾಡಿರುವುದು ಕನ್ನಡ(Kannada) ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ. ಕೆಜಿಎಫ್​  2 ಸಿನಿಮಾ ಕನ್ನಡಿಗರ ಹೆಮ್ಮೆ ಎಂದರೆ ತಪ್ಪಾಗಲಾರದು.ಹಿಂದಿ(Hindi)ಯಲ್ಲಿ ಅತಿ ದೊಡ್ಡ ಓಪನಿಂಗ್(Biggest Opening) ಪಡೆದ ಸಿನಿಮಾ ಎಂಬ ದಾಖಲೆಯನ್ನು ಬರೆದಿರುವ ’ಕೆಜಿಎಫ್ 2’ ಬಾಲಿವುಡ್‌(Bollywood)ನ ಸ್ಟಾರ್ ನಟರನ್ನೇ ಹಿಂದಿಕ್ಕಿಬಿಟ್ಟಿದ್ದಾರೆ. ಘಟಾನುಘಟಿ ಹೃತಿಕ್ ರೋಷನ್(Hritik Roshan), ಆಮಿರ್ ಖಾನ್ (Aamir Khan)ಅಂಥಹವರ ಸಿನಿಮಾಗಳ ಕಲೆಕ್ಷನ್ ಅನ್ನೇ ಯಶ್‌(Yash)ರ ಈ ಸಿನಿಮಾ ಹಿಂದಿಕ್ಕಿದೆ. ಈ ಸಿನಿಮಾದಲ್ಲಿ ಸಂಜು(Sanju) ಬಾಬಾ ಕೂಡ ನಟಿಸಿದ್ದಾರೆ. ಅಧೀರನ ಪಾತ್ರದಲ್ಲಿ ಸಂಜಯ್​ ದತ್(Sanjay Dutt) ಅಬ್ಬರಿಸಿ ಬೊಬ್ಬಿರಿದ್ದಾರೆ. ಈ ಪಾತ್ರದಲ್ಲಿ ಸಂಜು ಬಾಬಾ ಬಿಟ್ಟರೆ ಮತ್ತೆ ಬೇರೆಯವರನ್ನು ಉಹಿಸಿಕೊಳ್ಳಲು ಕಷ್ಟ.

ಸಂಜಯ್​ ದತ್​ ಮಕ್ಕಳಿಗೂ ಯಶ್​ ಅಂದ್ರೆ ಇಷ್ಟವಂತೆ!

ರಾಕಿಂಗ್​ ಸ್ಟಾರ್ ಯಶ್​.. ಸದ್ಯಕ್ಕೆ ಇಡೀ ವಿಶ್ವದಲ್ಲೇ ಇವರ ಹೆಸರು ರಾರಾಜಿಸುತ್ತಿದೆ. ಇವರನ್ನು ಕಂಡರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಇದೀಗ ಸಂಜಯ್​ ದತ್​ ಕೂಡ ಯಾರಿಗೂ ಗೊತ್ತಿರುದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಸಂಜಯ್​ ದತ್​ ಹಲವಾರು ಕಾರ್ಯಕ್ರಮಗಳಲ್ಲಿ ಯಶ್​ ಕಂಡರೆ ಇಷ್ಟ ಎಂದು ಹೇಳಿಕೊಂಡಿದ್ದಾರೆ. ಹೊಸ ವಿಚಾರ ಅಂದರೆ, ಸಂಜಯ್​ ದತ್​ ಮಕ್ಕಳಿಗೂ ರಾಕಿಂಗ್​ ಸ್ಟಾರ್ ಯಶ್​ ಅಂದರೆ ಸಖತ್​ ಇಷ್ಟವಂತೆ. ಅವರ ಮಕ್ಕಳಾದ ಶಹರಾನ್ ಮತ್ತು ಇಕ್ರಾ ಅವರು ತಮ್ಮ ಕೆಜಿಎಫ್ 2 ಲುಕ್ ಅನ್ನು ಹೇಗೆ ಕಂಡುಕೊಂಡರು ಎಂಬುದನ್ನು ಅವರು ನಟ ಬಹಿರಂಗಪಡಿಸಿದರು. ಅದೇ ಸಮಯದಲ್ಲಿ, ಅವರು ತಮ್ಮ ನೆಚ್ಚಿನ ನಟರ ಹೆಸರನ್ನು ಬಹಿರಂಗಪಡಿಸಿದ್ದಾರೆ

ಯಶ್​, ಟೈಗರ್​ ಶ್ರಾಫ್​ ನೆಚ್ಚಿನ ನಟರಂತೆ!

ಸಂಜಯ್ ದತ್ ಅವರು ತಮ್ಮ ಮಕ್ಕಳಿಗೆ ತಾವು ನಟ ಎಂದು ತಿಳಿದಿದ್ದಾರೆ. ಆದರೆ ಅವರು ತಮ್ಮ ನೆಚ್ಚಿನ ನಾಯಕರನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದರು. ಅವರ ಮಕ್ಕಳಿಗೆ ಯಶ್​, ಟೈಗರ್​ ಶ್ರಾಫ್​, ವರುಣ್​ ಧವನ್​ ಅಂದರೆ ಇಷ್ಟ. ನನಗೂ ಯಶ್​ ಕಂಡರೆ ಇಷ್ಟ ಎಂದು ಸಂಜಯ್​ ದತ್​​ ಹೇಳಿದ್ದಾರೆ. ಸ್ಯಾಂಡಲ್​ವುಡ್​ ರಾಕಿಂಗ್​ ಸ್ಟಾರ್​ ಈಗ ಇಂಡಿಯಾ ಸೇರಿ ವಿಶ್ವದಲ್ಲೇ ಖ್ಯಾತಿಗಳಿಸಿದ್ದಾರೆ.

ಕೆಜಿಎಫ್​ 2 ಎಡಿಟರ್​ಗೆ ಜಸ್ಟ್​ 19 ವರ್ಷ!

ಸೂಪರ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ 2 ಎಡಿಟಿಂಗ್ ಮಾಡಲು 19 ವರ್ಷದ ಹುಡುಗನನ್ನು ಆಯ್ಕೆ ಮಾಡಿದ್ದಾರೆ. ಆತನ ಮೇಲೆ ನಂಬಿಕೆ ಇಟ್ಟು ಇಷ್ಟು ದೊಡ್ಡ ಜವಾಬ್ದಾರಿಯನ್ನು ನೀಡಿದ್ದರು. ಅದನ್ನು ಇವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಇದನ್ನೂ ಓದಿ: KGF Chpater ಒಂದರಲ್ಲಿದ್ದ ಈ 4 ಪಾತ್ರಗಳು ಪಾರ್ಟ್​ 2ನಲ್ಲಿ ಮಾಯ! ಅನಂತ್ ನಾಗ್​ ಮಾತ್ರ ಮಿಸ್ಸಿಂಗ್​ ಅಲ್ಲ

ಸಿನಿಮಾದ ಎಡಿಟಿಂಗ್​ಗೆ ಬಹಳ ತಾಳ್ಮೆ ಮತ್ತು ಅನುಭವ ಬೇಕು. ‘ಕೆಜಿಎಫ್ 2’ನಂತಹ ಭಿನ್ನ ಮಾದರಿಯ, ನಾನ್ ಲೀನಿಯರ್ ಕತೆಯುಳ್ಳ ಸಿನಿಮಾವನ್ನು ಎಡಿಟ್ ಮಾಡುವುದಂತೂ ಸಿಕ್ಕಾಪಟ್ಟೆ ಕಷ್ಟ .ಆದರೆ ಆ ಕೆಲಸ 'ಕೆಜಿಎಫ್ 2' ನಲ್ಲಿ ಅದ್ಭುತವಾಗಿ ಆದೆ.ಸಿನಿಮಾದವನ್ನು ಅದ್ಭುತವಾಗಿ ಎಡಿಟ್ ಮಾಡಿರುವ ಉಜ್ವಲ್ ಕುಲಕರ್ಣಿಗೆ ಇನ್ನೂ 20 ವರ್ಷವೂ ಆಗಿಲ್ಲ. ಆಗಲೇ ತನ್ನ ಕೆಲಸದಿಂದ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದಾನೆ.

ಇದನ್ನೂ ಓದಿ: KGF 2 ಜಸ್ಟ್​ ಗ್ಯಾಂಗ್​ಸ್ಟರ್​ ಸಿನಿಮಾ ಅಲ್ಲ.. ಬಾಲಿವುಡ್​ ಮಂದಿಗೆ ಭಯ ಹುಟ್ಟಿಸೋ ಹಾರರ್​ ಚಿತ್ರ ಎಂದ RGV

ಸಲಾರ್​ ಸಿನಿಮಾಗೂ ಇವ್ರೇ ಎಡಿಟರ್​?

ಕೆಜಿಎಫ್​ 2 ಸಿನಿಮಾದ ಯಶಸ್ಸಿನಿಂದ ಉಜ್ವಲ್​ಗೆ ಹಲವಾರು ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಇದರ ನಡುವೆ ಪ್ರಶಾಂತ್​ ನೀಲ್ ನಿರ್ದೇಶನದ, ಪ್ರಭಾಸ್​ ನಟಿಸಿರುವ ‘ಸಲಾರ್​’ ಸಿನಿಮಾಗೂ ಇವರೇ ಎಡಿಟರ್​ ಆಗಲಿದ್ದಾರೆ ಎಂಬ ಟಾಕ್​ ಕೂಡ ಇದೆ. ಆದರೆ, ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈ ರೀತಿಯ ಯುವಕರಿಗೆ ಅವಕಾಶ ನೀಡಿದ್ದು, ಪ್ರಶಾಂತ್ ಹಾಗೂ ಯಶ್​ ಅವರ ದೊಡ್ಡ ಗುಣ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
Published by:Vasudeva M
First published: