news18-kannada Updated:August 28, 2020, 1:32 PM IST
ಸಂಜಯ್ ದತ್
ಸಂಜಯ್ ದತ್ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಂಡಿದೆ. ಈಗಾಗಲೇ ಅವರು ಸಾಕಷ್ಟು ಪರೀಕ್ಷೆಗಳಿಗೆ ಒಳಪಡುತ್ತಿದ್ದು, ಶೀಘ್ರವೇ ಅಮೆರಿಕ್ಕೆ ತೆರಳಿ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಸಂಜಯ್ ದತ್ ಅಮೆರಿಕಕ್ಕೆ ತೆರಳಲು ಸಿದ್ಧತೆ ನಡೆಸಿದ್ದು, ಐದು ವರ್ಷ ಅವಧಿಯ ವೀಸಾ ಪಡೆದುಕೊಂಡಿದ್ದಾರೆ.
ನಟ ಸಂಜಯ್ ದತ್ ಇತ್ತೀಚೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸಂಜಯ್ ದತ್ಗೆ ಶ್ವಾಸಕೋಶದ ಕ್ಯಾನ್ಸರ್ ಇರುವ ವಿಚಾರ ತಿಳಿದು ಬಂದಿತ್ತು. ಇದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಆತಂಕ ಮೂಡಿಸಿದೆ.
ಸದ್ಯ ಸಂಜಯ್ ದತ್ಗೆ ಕೋಕಿಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆ ನೀಡಲಾಗಿದೆ. ಮುಂಬರುವ ವರದಿಗಳನ್ನು ಆಧರಿಸಿ ಅವರು ಅಮೆರಿಕ್ಕೆ ತೆರಳುವ ದಿನಾಂಕ ನಿರ್ಧಾರ ಆಗಲಿದೆಯಂತೆ.
ಈಗಾಗಲೇ ಸಂಜಯ್ ದತ್ ಐದು ವರ್ಷಗಳ ಅವಧಿಗೆ ಅಮೆರಿಕ ವಿಸಾ ಮಾಡಿಸಿಕೊಂಡಿದ್ದಾರೆ. ಹೀಗಾಗಿ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅಲ್ಲಿಯೇ ಉಳಿದುಕೊಳ್ಳುವ ಬಗ್ಗೆ ಅವರು ನಿರ್ಧಾರ ಮಾಡಲಿದ್ದಾರಂತೆ.
ಸಂಜಯ್ ದತ್ ತಮಗೆ ಕ್ಯಾನ್ಸರ್ ಇರುವ ವಿಚಾರವನ್ನು ನೇರವಾಗಿ ಹೇಳಿಕೊಂಡಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಾನು ವೈದ್ಯಕೀಯ ಚಿಕಿತ್ಸೆ ದೃಷ್ಟಿಯಿಂದ ಚಿಕ್ಕ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕುಟುಂಬ ಹಾಗೂ ಗೆಳೆಯರು ನನ್ನ ಜೊತೆ ಇದ್ದಾರೆ. ನನ್ನ ಬಗ್ಗೆ ಚಿಂತೆ ಬೇಡ. ನಿಮ್ಮ ಹಾರೈಕೆ ನನ್ನ ಮೇಲಿರಲಿ. ನಾನು ಬೇಗ ವಾಪಾಸಾಗುತ್ತೇನೆ, ಎಂದು ಅವರು ಬರೆದುಕೊಂಡಿದ್ದರು.
ಸಿನಿಮಾ ವಿಚಾರಕ್ಕೆ ಬರುವುದಾದರೆ ಕೆಜಿಎಫ್2ನಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಅವರ ಜನ್ಮದಿನಕ್ಕೆ ಕೆಜಿಎಫ್-2ನ ಲುಕ್ ರಿವೀಲ್ ಆಗಿತ್ತು. ಇನ್ನು, ಸಡಕ್ 2 ಚಿತ್ರದಲ್ಲೂ ಸಂಜಯ್ ದತ್ ಅಭಿನಯಿಸುತ್ತಿದ್ದಾರೆ.
Published by:
Rajesh Duggumane
First published:
August 28, 2020, 1:32 PM IST