Sanjay Dutt: ಸಂಜಯ್​ ದತ್​ ತಾಯಿ ಹಾಗೂ ಮೊದಲ ಪತ್ನಿಯನ್ನು ಬಲಿ ಪಡೆದಿತ್ತು ಕ್ಯಾನ್ಸರ್​

ಸಂಜಯ್​ ದತ್​ ಮೊದಲ ಪತ್ನಿ ರಿಚಾ ಶರ್ಮಾ 1996ರಲ್ಲಿ ಕ್ಯಾನ್ಸರ್​ನಿಂದ ನಿಧನರಾಗಿದ್ದರು. ಆಗೀನ್ನೂ ಅವರಿಗೆ ಕೇವಲ 32 ವರ್ಷ. ಈಗ ಸಂಜಯ್​ ದತ್​ಗೆ ಕ್ಯಾನ್ಸರ್​ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಹಜವಾಗಿಯೇ ಆತಂಕ ಸೃಷ್ಟಿಸಿದೆ.

news18-kannada
Updated:August 12, 2020, 11:50 AM IST
Sanjay Dutt: ಸಂಜಯ್​ ದತ್​ ತಾಯಿ ಹಾಗೂ ಮೊದಲ ಪತ್ನಿಯನ್ನು ಬಲಿ ಪಡೆದಿತ್ತು ಕ್ಯಾನ್ಸರ್​
ಸಂಜಯ್​ ದತ್​ ಹಾಗೂ ಅವರ ತಾಯಿ
  • Share this:
ನಟ ಸಂಜಯ್​ ದತ್​ಗೆ  ಶ್ವಾಸಕೋಶದ ಕ್ಯಾನ್ಸರ್​ ಇರುವ ವಿಚಾರ ಕುಟುಂಬ ಹಾಗೂ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಶೀಘ್ರವೇ ಅಮೆರಿಕಕ್ಕೆ ತೆರಳಿ ಸಂಜಯ್​ ದತ್​ ಚಿಕಿತ್ಸೆ ಪಡೆಯಲಿದ್ದಾರಂತೆ. ವಿಚಿತ್ರ ಎಂದರೆ, ಅವರ ಕುಟುಂಬಕ್ಕೆ ಕ್ಯಾನ್ಸರ್ ಬಿಟ್ಟು ಬಿಡದೆ ಕಾಡುತ್ತಿದೆ.

ಸಂಜಯ್​ ದತ್​ಗೆ ಇತ್ತೀಚೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಕೊರೋನಾ ನೆಗೆಟಿವ್​ ಬಂದಿತ್ತು. ಆದರೆ, ಕ್ಯಾನ್ಸರ್​ ಇರುವ ವಿಚಾರ ಖಚಿತವಾಗಿತ್ತು. ಈ ಬಗ್ಗೆ ಬಾಲಿವುಡ್​ ಫಿಲ್ಮ್​ ಟ್ರೇಡ್​ ಪತ್ರಕರ್ತ ಕೋಮಲ್​ ನಹ್ತಾ ಟ್ವೀಟ್​ ಮಾಡಿದ್ದಾರೆ. ಸಂಜಯ್​ ದತ್​ಗೆ ಕೊರೋನಾ ಕಾಡುತ್ತಿಲ್ಲ. ಅವರಿಗೆ ಕಾಡುತ್ತಿರುವುದು ಕ್ಯಾನ್ಸರ್​ ಎಂದು ಬರೆದುಕೊಂಡಿದ್ದಾರೆ.

ಸಂಜಯ್​ ದತ್​ ಕುಟುಂಬಕ್ಕೆ ಬರೋದಾದರೆ ಅವರ ತಾಯಿ ಹಾಗೂ ಮೊದಲ ಪತ್ನಿ ಕ್ಯಾನ್ಸರ್​ನಿಂದಲೇ ಮೃತಪಟ್ಟಿದ್ದಾರೆ. ಹೌದು, ಸಂಜಯ್​ ದತ್​ ತಾಯಿ ನರ್ಗೀಸ್​ ದತ್​ ಕ್ಯಾನ್ಸರ್​ಗೆ ಬಲಿಯಾಗಿದ್ದರು. ನರ್ಗೀಸ್​ ಅವರಿಗೆ ಮೇಧೋಜ್ಜೀರಕ ಕ್ಯಾನ್ಸರ್ ಇತ್ತು. 1981ರಲ್ಲಿ ಅವರು ಮೃತಪಟ್ಟಿದ್ದರು. ಸಂಜಯ್​ ದತ್​ ಬಯೋಪಿಕ್​ನಲ್ಲಿ ಈ ವಿಚಾರ ಉಲ್ಲೇಖ ಮಾಡಲಾಗಿದೆ.

ಇನ್ನು, ಸಂಜಯ್​ ದತ್​ ಮೊದಲ ಪತ್ನಿ ರಿಚಾ ಶರ್ಮಾ 1996ರಲ್ಲಿ ಕ್ಯಾನ್ಸರ್​ನಿಂದ ನಿಧನರಾಗಿದ್ದರು. ಆಗೀನ್ನೂ ಅವರಿಗೆ ಕೇವಲ 32 ವರ್ಷ. ಈಗ ಸಂಜಯ್​ ದತ್​ಗೆ ಕ್ಯಾನ್ಸರ್​ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಹಜವಾಗಿಯೇ ಆತಂಕ ಸೃಷ್ಟಿಸಿದೆ.

ಕುಸಿದು ಬಿದ್ದ ಸಂಜಯ್​ ದತ್​:

ಸಂಜಯ್​ ದತ್​ಗೆ ತಾಯಿಯನ್ನು ಕಳೆದುಕೊಂಡ ನೋವು ಇಂದಿಗೂ ಇದೆಯಂತೆ. ನರ್ಗೀಸ್​ ಕ್ಯಾನ್ಸರ್​ನಿಂದ ಮೃತಪಟ್ಟಿದ್ದು ಸಂಜಯ್​ ದತ್​ಗೆ ಸಾಕಷ್ಟು ಆತಂಕ ಕಾಡಿತ್ತು. ಆದರೆ, ಈಗ ಅವರಿಗೆ ಸ್ವತಃ ಕ್ಯಾನ್ಸರ್​ ಕಾಣಿಸಿರುವುದು ಆಘಾತ ನೀಡಿದೆ. ಈ ವಿಚಾರ ಕೇಳಿ ಅವರು ಕುಸಿದು ಬಿದ್ದಿದ್ದರು ಎನ್ನಲಾಗಿದೆ.
ಸಂಜಯ್ ದತ್​ ತಮಗೆ ಕ್ಯಾನ್ಸರ್​ ಇರುವ ವಿಚಾರವನ್ನು ನೇರವಾಗಿ ಹೇಳಿಕೊಂಡಿಲ್ಲ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು​ ನಾನು ವೈದ್ಯಕೀಯ ಚಿಕಿತ್ಸೆ ದೃಷ್ಟಿಯಿಂದ ಚಿಕ್ಕ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕುಟುಂಬ ಹಾಗೂ ಗೆಳೆಯರು ನನ್ನ ಜೊತೆ ಇದ್ದಾರೆ. ನನ್ನ ಬಗ್ಗೆ ಚಿಂತೆ ಬೇಡ. ನಿಮ್ಮ ಹಾರೈಕೆ ನನ್ನ ಮೇಲಿರಲಿ. ನಾನು ಬೇಗ ವಾಪಾಸಾಗುತ್ತೇನೆ, ಎಂದು ಅವರು ಬರೆದುಕೊಂಡಿದ್ದಾರೆ.
Published by: Rajesh Duggumane
First published: August 12, 2020, 11:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading