Sanjay Dutt: ಚಿಕಿತ್ಸೆಯ ನಡುವೆಯೇ ಶಂಶೇರ ಸಿನಿಮಾದ ಚಿತ್ರೀಕರಣಕ್ಕೆ ಮರಳಿದ ನಟ ಸಂಜಯ್​ ದತ್​..!

Shamshera: ಸಂಜಯ್​ ದತ್​ ಸೋಮವಾರ ಯಶ್​ರಾಜ್​ ಸ್ಟುಡಿಯೋಸ್​ನಲ್ಲಿ ಕಾಣಿಸಿಕೊಂಡಿದ್ದು, ಶಂಶೇರ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್​ ಮುಗಿದ ನಂತರ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯಲು ಮರಳಲಿದ್ದಾರಂತೆ. ಇಲ್ಲಿಯವರೆಗೂ ಸಂಜಯ್​ ದತ್​ ಮುಂಬೈನಲ್ಲೇ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದರಂತೆ. ಇತ್ತೀಚೆಗಷ್ಟೆ ಸಂಜಯ್​ ದತ್​ ಕೀಮೋ ಥೆರಪಿ ಮಾಡಿಸಿಕೊಂಡಿದ್ದು, ಅವರ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡಿದೆ ಎನ್ನಲಾಗುತ್ತಿದೆ.

ಬಾಲಿವುಡ್​ನ ಖ್ಯಾತ ನಟ ಸಂಜಯ್​ ದತ್​

ಬಾಲಿವುಡ್​ನ ಖ್ಯಾತ ನಟ ಸಂಜಯ್​ ದತ್​

  • Share this:
ಶ್ವಾಸಕೋಶದ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದ ನಟ ಸಂಜಯ್​ ದತ್​ ಈಗ ಮತ್ತೆ ಸಿನಿಮಾದ ಚಿತ್ರೀಕರಣಕ್ಕೆ ಮರಳಿದ್ದಾರೆ. ಯಶ್​ ರಾಜ್​ ಫಿಲ್ಮ್ಸ್​ ಬ್ಯಾನರ್​ ಅಡಿ ನಿರ್ಮಾಣವಾಗುತ್ತಿರುವ ಸಂಶೇರ ಚಿತ್ರದಲ್ಲಿ ಸಂಜಯ್​ ದತ್​ ನಟಿಸುತ್ತಿದ್ದು, ಈಗ ಶೂಟಿಂಗ್​ನಲ್ಲಿ ಭಾಗವಹಿಸಿದ್ದಾರೆ. ನಟ ಸಂಜಯ್​ ದತ್​ಗೆ ಉಸಿರಾಟದ ತೊಂದರೆ ಇರುವ ಕಾರಣ ಅವರನ್ನು ಆ.8ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊದಲಿಗೆ ಕೋವಿಡ್​ ಇರಬಹುದು ಎಂದು ಅನುಮಾನಿಸಲಾಗಿತ್ತಾದರೂ, ಕೋವಿಡ್​ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿತ್ತು. ನಂತರ ನಟನಿಗೆ ಶ್ವಾಸಕೋಶದ ಕ್ಯಾನ್ಸರ್​ ಇರುವ ವಿಚಾರ ತಿಳಿಯಿತು. ಇದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಆತಂಕ ಮೂಡಿಸಿದೆ. ಆಗಲೇ ಸಂಜಯ್​ ದತ್​ ಅವರಿಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಬೇಕೆಂದು ವೈದ್ಯರು ತಿಳಿಸಿದ್ದರು. ಸಂಜಯ್​ ದತ್​ ಕನ್ನಡದ ಕೆಜಿಎಫ್​ ಚಾಪ್ಟರ್ 2 ಚಿತ್ರದಲ್ಲಿ ನಟಿಸುತ್ತಿದ್ದು, ಅದಾಗಲೇ ಸಂಜಯ್​ ದತ್​ ಅವರ ಫಸ್ಟ್​ಲುಕ್ ರಿಲೀಸ್​ ಆಗಿತ್ತು. 

ಸಂಜಯ್​ ದತ್​ ಸೋಮವಾರ ಯಶ್​ರಾಜ್​ ಸ್ಟುಡಿಯೋಸ್​ನಲ್ಲಿ ಕಾಣಿಸಿಕೊಂಡಿದ್ದು, ಶಂಶೇರ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್​ ಮುಗಿದ ನಂತರ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯಲು ಮರಳಲಿದ್ದಾರಂತೆ. ಇಲ್ಲಿಯವರೆಗೂ ಸಂಜಯ್​ ದತ್​ ಮುಂಬೈನಲ್ಲೇ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದರಂತೆ. ಇತ್ತೀಚೆಗಷ್ಟೆ ಸಂಜಯ್​ ದತ್​ ಕೀಮೋ ಥೆರಪಿ ಮಾಡಿಸಿಕೊಂಡಿದ್ದು, ಅವರ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡಿದೆ ಎನ್ನಲಾಗುತ್ತಿದೆ.

Sanjay dutt, shamshera, Vani Kapoor, Ranbir Kapoor, Yash Raj Films, Cancer,
ಸಂಜಯ್​ ದತ್​


ಆಗ, ಸಂಜಯ್ ದತ್​ ತಮಗೆ ಕ್ಯಾನ್ಸರ್​ ಇರುವ ವಿಚಾರವನ್ನು ನೇರವಾಗಿ ಹೇಳಿಕೊಳ್ಳಲಿಲ್ಲ. ಈ ಬಗ್ಗೆ ಟ್ವೀಟ್​ ಮಾಡಿದ್ದ ನಟ, 'ನಾನು ವೈದ್ಯಕೀಯ ಚಿಕಿತ್ಸೆಯ ದೃಷ್ಟಿಯಿಂದ ಚಿಕ್ಕ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕುಟುಂಬ ಹಾಗೂ ಗೆಳೆಯರು ಜೊತೆಗೆ ಇದ್ದಾರೆ. ನನ್ನ ಬಗ್ಗೆ ಚಿಂತೆ ಬೇಡ. ನಿಮ್ಮ ಹಾರೈಕೆ ನನ್ನ ಮೇಲಿರಲಿ. ನಾನು ಬೇಗ ವಾಪಾಸಾಗುತ್ತೇನೆ' ಎಂದು ಅವರು ಬರೆದುಕೊಂಡಿದ್ದರು.

Will Vani kapoor and Ranbir Kapoor starrer Shamshera movie release directly in OTT
ಶಂಶೇರ ಸಿನಿಮಾದ ಚಿತ್ರೀಕರಣದ ಸೆಟ್​ನಲ್ಲಿ ತೆಗೆದ ಚಿತ್ರದಲ್ಲಿ ರಣಬೀರ್ ಕಪೂರ್​


ಯಶ್​ ರಾಜ್​ ಬ್ಯಾನರ್​ ಅಡಿ ನಿರ್ಮಾಣವಾಗುತ್ತಿರುವ ಶಂಶೇರ ಸಿನಿಮಾದಲ್ಲಿ ರಣಬೀರ್ ಕಪೂರ್​ ನಾಯಕನಾಗಿ ನಟಿಸುತ್ತಿದ್ದು, ವಾಣಿ ಕಪೂರ್​ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಒಟಿಟಿ ಮೂಲಕ ಸದ್ಯದಲ್ಲೇ ರಿಲೀಸ್​ ಆಗಲಿದೆ ಎಂದು ಹೇಳಲಾಗುತ್ತಿದೆ.
Published by:Anitha E
First published: