KGF Chpater 2 ಶೂಟಿಂಗ್​​ಗೆ ರೆಡಿ ಆದ್ರು ಸಂಜಯ್​ ದತ್​; ರಿವೀಲ್​ ಆಯ್ತು ಹೊಸ ಲುಕ್​

ಶೂಟಿಂಗ್​​ಗೂ ಮೊದಲು ಸಂಜಯ್​ ದತ್​ ಕುಟುಂಬ ಸಮೇತ ದುಬೈಗೆ ತೆರಳಿದ್ದಾರೆ. ಅಲ್ಲಿ ಕುಟುಂಬದ ಜೊತೆ ಸಮಯ ಕಳೆದು ಅವರು ಭಾರತಕ್ಕೆ ಆಗಮಿಸಲು ನಿರ್ಧರಿಸಿದ್ದಾರೆ.

  • Share this:
    ಕೆಜಿಎಫ್​​ ಚಿತ್ರ ನೋಡಿದ ಸಿನಿ ಪ್ರಿಯರು ಕೆಜಿಎಫ್​-2 ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿರುವ ಸಂಜಯ್​ ಚಾಪ್ಟರ್​ 2ನಲ್ಲಿ ನಟಿಸಲಿದ್ದಾರೆ ಎನ್ನುವ ವಿಚಾರ ಕೇಳಿದ ಮೇಲಂತೂ ಸಿನಿಪ್ರಿಯರು ಸಾಕಷ್ಟು ಖುಷಿಯಾಗಿದ್ದಾರೆ. ಹೀಗಿರುವಾಗಲೇ ಸಂಜಯ್​ ದತ್​ಗೆ ಕ್ಯಾನ್ಸರ್​ ಕಾಣಿಸಿಕೊಂಡಿತ್ತು. ಅವರು ಕೆಜಿಎಫ್​ 2 ಸಿನಿಮಾದಲ್ಲಿ ನಟಿಸುವುದಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಹೀಗಿರುವಾಗಲೇ ಸಂಜಯ್​​ ದತ್​ ಕೆಜಿಎಫ್​-2 ಚಿತ್ರದ ಶೂಟಿಂಗ್​ಗೆ ಸಿದ್ಧರಾಗಿದ್ದಾರೆ. ಹೊಸ ಹೇರ್​​ಸ್ಟೈಲ್​ನೊಂದಿಗೆ ಮಿಂಚೋಕೆ ಅವರು ರೆಡಿ ಆಗಿದ್ದಾರೆ.

    ಹೌದು, ಸಂಜಯ್​ ದತ್​ ಅವರ ಹೊಸ ಲುಕ್​ ರಿವೀಲ್​ ಆಗಿದ್ದು ಸಾಕಷ್ಟು ವೈರಲ್​ ಆಗುತ್ತಿದೆ. ಇತ್ತೀಚೆಗೆ ಸಂಜಯ್​ ದತ್​ ಖ್ಯಾತ ಕೇಶ ವಿನ್ಯಾಸಕ ಆಲಿಮ್​ ಹಕೀಮ್​ ಬಳಿ ತೆರಳಿದ್ದರು. ಈ ವೇಳೆ ಅವರು ಸಂಜಯ್​ ದತ್​ ಕೂದಲಿಗೆ ಬೆಳ್ಳಿ ಬಣ್ಣವನ್ನು ಬಳಿದು ಅವರ ಹೇರ್​ಸ್ಟೈಲ್​​ಅನ್ನೇ ಬದಲಾಯಿಸಿಬಿಟ್ಟಿದ್ದಾರೆ.

    ಶೂಟಿಂಗ್​​ಗೂ ಮೊದಲು ಸಂಜಯ್​ ದತ್​ ಕುಟುಂಬ ಸಮೇತ ದುಬೈಗೆ ತೆರಳಿದ್ದಾರೆ. ಅಲ್ಲಿ ಕುಟುಂಬದ ಜೊತೆ ಸಮಯ ಕಳೆದು ಅವರು ಭಾರತಕ್ಕೆ ಆಗಮಿಸಲು ನಿರ್ಧರಿಸಿದ್ದಾರೆ. ಇತ್ತೀಚೆಗೆ ಸೋನು ನಿಗಮ್​ ಹಾಗೂ ಸಂಜಯ್​ ದತ್​ ಒಂದೇ ವಿಮಾನದಲ್ಲಿ ದುಬೈಗೆ ತೆರಳಿದ್ದರು.

    ದುಬೈ ಪ್ರವಾಸದ ಬಳಿಕ ಸಂಜಯ್​ ದತ್​ ಹೈದರಾಬಾದ್​ಗೆ ತೆರಳಲಿದ್ದು, ಅಲ್ಲಿ ಕೆಜಿಎಫ್​ 2 ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನೂ ಕೆಲ ಹಂತದ ಶೂಟಿಂಗ್ ಬಾಕಿ ಇದ್ದು, ಶೀಘ್ರವೇ ಅದನ್ನು ಪೂರ್ಣಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

    ಸಂಜಯ್​ ದತ್​ ಇನ್ಸ್​ಟಾಗ್ರಾಂ ಪೋಸ್ಟ್​
    Published by:Rajesh Duggumane
    First published: