• Home
 • »
 • News
 • »
 • entertainment
 • »
 • ನವೆಂಬರ್​ನಿಂದ ಕೆಜಿಎಫ್2 ಚಿತ್ರತಂಡದ ಭಾಗವಾಗಲಿದ್ದಾರೆ ಸಂಜಯ್​ ದತ್​; ಸ್ಪಷ್ಟಪಡಿಸಿದ ಬಾಲಿವುಡ್ ನಟ

ನವೆಂಬರ್​ನಿಂದ ಕೆಜಿಎಫ್2 ಚಿತ್ರತಂಡದ ಭಾಗವಾಗಲಿದ್ದಾರೆ ಸಂಜಯ್​ ದತ್​; ಸ್ಪಷ್ಟಪಡಿಸಿದ ಬಾಲಿವುಡ್ ನಟ

ಸಂಜಯ್​ ದತ್​.

ಸಂಜಯ್​ ದತ್​.

ನವೆಂಬರ್​ ತಿಂಗಳಲ್ಲಿ ಕೆಜಿಎಫ್​ ಚಿತ್ರತಂಡದೊಂದಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿರುವ ನಟ ಸಂಜಯ್​ ದತ್, ತಾವು ಅಧೀರ ಎಂಬ ಪಾತ್ರಕ್ಕಾಗಿ ಗಡ್ಡವನ್ನೂ ಬೆಳೆಸುತ್ತಿದ್ದೇನೆ. ಅಲ್ಲದೆ, ಪಾತ್ರಕ್ಕಾಗಿ ತೂಕವನ್ನೂ ಹೆಚ್ಚಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಮುಂದೆ ಓದಿ ...
 • Share this:

  ನಿರ್ದೇಶಕ ಪ್ರಶಾಂತ್​ ನೀಲ್ ನಿರ್ದೇಶನದ ಕೆಜಿಎಫ್​ ಸ್ಯಾಂಡಲ್​ವುಡ್​ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗ ಕನ್ನಡದ ಚಂದನವನದತ್ತ ತಿರುಗಿ ನೋಡುವಂತೆ ಮಾಡಿದ್ದ ಚಿತ್ರ. ಕನ್ನಡಲ್ಲಿ ನೂರು ಕೋಟಿ ಕ್ಲಬ್ ಸೇರಿದ್ದ ಮೊದಲ ಚಿತ್ರವೂ ಹೌದು. ಕೆಜಿಎಫ್​ ಮೊದಲ ಭಾಗದ ಯಶಸ್ಸಿನ ಅಲೆಯಲ್ಲಿರುವ ಚಿತ್ರತಂಡ ಈ ಚಿತ್ರದ ಎರನೇ ಸೀಕ್ವೆಲ್ ಭಾಗದ ಚಿತ್ರೀಕರಣವನ್ನು ಬಹುತೇಕ ಮುಗಿಸಿದೆ. ಈ ನಡುವೆ ಕೆಜಿಎಫ್​-2 ರ ಪ್ರಮುಖ ಆಕರ್ಷಣೆ ಎಂದರೆ ಬಾಲಿವುಡ್​ ನಟ ಸಂಜಯ್​ ದತ್​. ಈ ಎರಡನೇ ಭಾಗದಲ್ಲಿ ಅವರು ಯಶ್​ ಎದುರು ಖಳ ನಾಯಕನಾಗಿ ನಟಿಸಲಿದ್ದಾರೆ ಎಂದು ಚಿತ್ರತಂಡ ಈ ಹಿಂದೆಯೇ ತಿಳಿಸಿತ್ತು. ಅಲ್ಲದೆ, ಸಂಜಯ್​ ದತ್ ಅವರ ಮೋಷನ್​ ಪೋಸ್ಟರ್​ ಸಹ ಬಿಡುಗಡೆ ಮಾಡಿತ್ತು. ಆದರೆ, ಚಿತ್ರೀಕರಣ ಆರಂಭವಾಗುತ್ತಿದ್ದಂತೆ ನಟ ಸಂಜಯ್​ ದತ್  ಅವರಿಗೆ ಕ್ಯಾನ್ಸರ್​ ಇರುವುದು ದೃಢಪಟ್ಟಿದ್ದು ಚಿಕಿತ್ಸೆಗಾಗಿ ಅವರು ವಿದೇಶಕ್ಕೆ ಹೊರಟಿದ್ದರು. ಆದರೆ, ಚಿಕಿತ್ಸೆ ಮುಗಿಸಿ ನವೆಂಬರ್​ ವೇಳೆಗೆ ತಾವು ಮಹತ್ವದ ಕೆಜಿಎಫ್​-2 ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದು ಸ್ವತಃ ಸಂಜಯ್​ ದತ್​ ಸ್ಪಷ್ಟಪಡಿಸಿದ್ದು ಚಿತ್ರತಂಡದ ಸಂತೋಷಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.


  ಕನ್ನಡದ ಸ್ಟಾರ್ ನಟ ಯಶ್ ಈಗಾಗಲೇ ಕೆಜಿಎಫ್ ಚಿತ್ರದ ಮುಂದುವರಿದ ಭಾಗದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಆದರೆ, ಕೊರೋನಾ ಬಿಕ್ಕಟ್ಟಿನಿಂದಾಗಿ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ, ಇದೀಗ ಮತ್ತೆ ಚಿತ್ರೀಕರಣ ಆರಂಭವಾಗಿದ್ದು, ಮಹತ್ವದ ಪಾತ್ರ ನಿರ್ವಹಿಸಬೇಕಿದ್ದ ಸಂಜಯ್​ ದತ್ ಚಿತ್ರೀಕರಣಕ್ಕೆ ಲಭ್ಯರಾಗುತ್ತಾರಾ? ಎಂಬ ಪ್ರಶ್ನೆ ಚಿತ್ರ ತಂಡವನ್ನು ಬಹುವಾಗಿ ಕಾಡಿತ್ತು. ಆದರೆ, ಈ ಎಲ್ಲಾ ಪ್ರಶ್ನೆಗಳಿಗೂ ನಟ ಸಂಜಯ್​ ದತ್​ ಇಂದು ಉತ್ತರ ನೀಡಿದ್ದಾರೆ.
  ನವೆಂಬರ್​ ತಿಂಗಳಲ್ಲಿ ಕೆಜಿಎಫ್​ ಚಿತ್ರತಂಡದೊಂದಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿರುವ ನಟ ಸಂಜಯ್​ ದತ್, "ತಾವು ಅಧೀರ ಎಂಬ ಪಾತ್ರಕ್ಕಾಗಿ ಗಡ್ಡವನ್ನೂ ಬೆಳೆಸುತ್ತಿದ್ದೇನೆ. ಅಲ್ಲದೆ, ಪಾತ್ರಕ್ಕಾಗಿ ತೂಕವನ್ನೂ ಹೆಚ್ಚಿಸಿಕೊಳ್ಳುತ್ತಿದ್ದೇನೆ" ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ : HBD Raanna: ಹುಟ್ಟುಹಬ್ಬದ ಸಂಭ್ರಮದಲ್ಲಿ ಏಕ್​ ಲವ್​ ಯಾ ಸಿನಿಮಾದ ನಾಯಕ ರಾಣಾ: ಹೊಸ ಪೋಸ್ಟರ್​ ರಿಲೀಸ್​ ಮಾಡಿದ ಪ್ರೇಮ್​..!


  ಕೆಜಿಎಫ್​ ಅಲ್ಲದೆ, ಅಕ್ಷಯ್​ ಕುಮಾರ್​ ಹಾಗೂ ಮನುಷಿ ಚಿಲ್ಲರ್​ ಜೊತೆಗಿನ ಐತಿಹಾಸಿಕ ಚಿತ್ರದಲ್ಲೂ ಸಂಜಯ್​ ದತ್​ ನಟಿಸಲಿದ್ದು, ದೀಪಾವಳಿ ಹಬ್ಬದ ನಂತರ ಈ ಚಿತ್ರದ ಚಿತ್ರೀಕರಣವೂ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.


  ಕ್ಯಾನ್ಸರ್​ ಖಾಯಿಲೆಯಿಂದಾಗಿ ಇತ್ತೀಚೆಗೆ ನಟ ಸಂಜಯ್ ದತ್​ ಸಾಕಷ್ಟು ಸುದ್ದಿಯಲ್ಲಿದ್ದರು. ಈ ಕುರಿತು ವಿಡಿಯೋ ಸಹ ಬಿಡುಗಡೆ ಮಾಡಿದ್ದ ನಟ ತನಗೆ ಕ್ಯಾನ್ಸರ್​ ಇರುವುದನ್ನು ಖಚಿತಪಡಿಸಿದ್ದರು. ಅಲ್ಲದೆ, ತಾವು ಶೀಘ್ರದಲ್ಲೇ ಈ ಕ್ಯಾನ್ಸರ್​ ಅನ್ನು ಸೋಲಿಸಿ ಗುಣಮುಖನಾಗುತ್ತೇನೆ ಎಂದು ತಿಳಿಸಿದ್ದರು. ಇದೀಗ ಅವರು ತಮ್ಮ ಕುಟುಂಬದೊಂದಿಗೆ ದುಬೈನಲ್ಲಿ ಕಾಲ ಕಳೆಯುತ್ತಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ.

  Published by:MAshok Kumar
  First published: