Sanjana Galrani: ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ; ನಟಿ ಸಂಜನಾ ಗಲ್ರಾನಿ ಸಿಸಿಬಿ ವಶಕ್ಕೆ
Sandalwood Drug Mafia: ಈ ಹಿಂದೆ ರಾಗಿಣಿ ಮನೆ ಮೇಲೆ ರೇಡ್ ಮಾಡಿದಾಗ ಸಾಕ್ಷಿಗಳ ಸಮಕ್ಷದಲ್ಲಿ ತನಿಖೆ ನಡೆದಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಸರ್ಕಾರಿ ಸಾಕ್ಷಿಗಳ ಸಮಕ್ಷಮ ದಲ್ಲಿ ಶೋಧಕಾರ್ಯ ನಡೆದಿದೆ.
ಡ್ರಗ್ ಜಾಲಕ್ಕೂ ನಟಿ ಸಂಜನಾ ಗಲ್ರಾನಿಗೂ ಸಂಬಂಧ ಇದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ನನಗೂ ಇದಕ್ಕೂ ಸಂಬಂಧವೇ ಇಲ್ಲ. ದಯವಿಟ್ಟು ಇದನ್ನು ಇಲ್ಲಿಯೇ ಬಿಟ್ಟು ಬಿಡಿ ಎಂದು ಸಂಜನಾ ಗಲ್ರಾನಿ ಕಣ್ಣೀರಿಟ್ಟಿದ್ದರು. ಅವರು ಡ್ರಗ್ ಜಾಲದಲ್ಲಿದ್ದಾರೆ ಎನ್ನುವುದಕ್ಕೆ ಯಾವುದೇ ಪೂರಕ ಮಾಹಿತಿ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಸಿಸಿಬಿ ಅಧಿಕಾರಿಗಳು ಸಂಜನಾ ಮನೆಯ ಮೇಲೆ ರೇಡ್ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ನಂತರ ಅವರನ್ನು ವಶಕ್ಕೆ ಪಡೆದಿದ್ದಾರೆ. ದೊಡ್ಡ ಪಾರ್ಟಿಗಳನ್ನು ನಡೆಸುತ್ತಿದ್ದ ಸಂಜನಾ ಆಪ್ತೆ ಪೃಥ್ವಿ ಶೆಟ್ಟಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅವರು ನೀಡಿದ ಮಾಹಿತಿ ಆಧರಿಸಿ ಸಿಸಿಬಿ ಈ ದಾಳಿ ನಡೆಸಿದೆ ಎನ್ನಲಾಗಿದೆ.
ರಾಗಿಣಿ ತನಿಖಾಧಿಕಾರಿಗಳಾದ ಇನ್ಸ್ ಪೆಕ್ಟರ್ ಪುನೀತ್ ನೇತೃತ್ವದ ಆರು ಜನರ ತಂಡ ಇಂದು ಮುಂಜಾನೆ ಇಂದಿರಾನಗರದ 100 ಫೀಟ್ ರಸ್ತೆಯಲ್ಲಿರುವ ಸಂಜನಾ ಮನೆಯ ಮೇಲೆ ದಿಢೀರ್ ದಾಳಿ ನಡೆಸಿದೆ. ರಾಹುಲ್ ಹಾಗೂ ಪೃಥ್ವಿ ವಿಚಾರಣೆ ವೇಳೆ ಕೊಟ್ಟ ಮಾಹಿತಿ ಆಧರಿಸಿ ರೇಡ್ ನಡೆದಿದೆ ಎನ್ನಲಾಗಿದೆ. ಈ ಹಿಂದೆ ರಾಗಿಣಿ ಮನೆ ಮೇಲೆ ರೇಡ್ ಮಾಡಿದಾಗ ಸಾಕ್ಷಿಗಳ ಸಮಕ್ಷದಲ್ಲಿ ತನಿಖೆ ನಡೆದಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಸರ್ಕಾರಿ ಸಾಕ್ಷಿಗಳ ಸಮಕ್ಷಮ ದಲ್ಲಿ ಸಂಜನಾ ಮನೆಯ ಶೋಧಕಾರ್ಯ ನಡೆದಿದೆ.
ನಿನ್ನೆ ಸಿಸಿಬಿ ಪೊಲೀಸರು ಕೋರ್ಟ್ನಿಂದ ಸರ್ಚ್ ವಾರೆಂಟ್ ಪಡೆದಿದ್ದರು. ಹೀಗಾಗಿ ಇಂದು ಇಂದು ಬೆಳ್ಳಂ ಬೆಳ್ಳಗೆ ಧಿಡೀರ್ ದಾಳಿ ನಡೆಸಿದ್ದಾರೆ. ಗೇಟ್ ತೆಗೆಯುವ ಸದ್ದು ಕೇಳೆ ಸಂಜನಾ ತಾಯಿ ರೇಷ್ಮ ಹೊರ ಬಂದಿದ್ದರು. ನಂತರ ರೇಡ್ ಬಗ್ಗೆ ಸಂಜನಾಗೆ ತಾಯಿ ತಿಳಿಸಿದ್ದರು. ನೀವು ಧಾರಾಳವಾಗಿ ಸರ್ಚ್ ನಡೆಸಬಹುದು ಎಂದು ಸಂಜನಾ ಹೇಳಿದ್ದಾರೆ ಎನ್ನಲಾಗಿದೆ.
ಸಂಜನಾ ಸಿಸಿಬಿ ವಶಕ್ಕೆ:
ಶೋಧಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ನಟಿ ಸಂಜನಾ ಕೂಗಾಡಿದ್ದಾರೆ. ಮನೆಯಲ್ಲಿ ಏನೂ ಸಿಗದೇ ಇದ್ದರೂ ಏಕೆ ನನ್ನನ್ನು ವಶಕ್ಕೆ ಪಡೆಯುತ್ತಿದ್ದೀರಿ ಎಂದು ವಾಗ್ವಾದ ನಡೆಸಿದ್ದಾರೆ. ಶೀಘ್ರವೇ ಅವರನ್ನು ಸಿಸಿಬಿ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿದೆ.
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ