ಬೆಂಗಳೂರು (ಆಗಸ್ಟ್ 4): ಸ್ಯಾಂಡಲ್ವುಡ್ನಲ್ಲಿ ಸದ್ಯ ಡ್ರಗ್ ವಿಚಾರ ತುಂಬಾನೇ ಸುದ್ದಿ ಮಾಡುತ್ತಿದೆ. ಡ್ರಗ್ ಜಾಲ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಆಪ್ತ ಎಂದು ಹೇಳಲಾದ ರಾಹುಲ್ ಎಂಬಾತತನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಪೊಲೀಸರು ಆತನ ವಿಚಾರಣೆ ಮಾಡುತ್ತಿದ್ದಾರೆ. ಈ ವೇಳೆ ಆತ ಕೆಲ ಹೆಸರುಗಳನ್ನು ಹೇಳಿದ್ದಾನೆ ಎನ್ನಲಾಗಿದೆ. ಇನ್ನು, ಈ ಪ್ರಕರಣದಲ್ಲಿ ಸಂಜನಾ ಹೆಸರು ಕೂಡ ಕೇಳಿ ಬಂದಿದ್ದು, ಈ ಬಗ್ಗೆ ನಟಿ ಸಿಟ್ಟಾಗಿದ್ದಾರೆ. ಆತನನ್ನು ಬಂಧಿಸಿದರೆ ನನ್ನನ್ನೇಕೆ ಪ್ರಕರಣದಲ್ಲಿ ಎಳೆದು ತರುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ರಾಹುಲ್ ಬಗ್ಗೆ ಗೊತ್ತಿರುವ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.
ರಾಹುಲ್ ತುಂಬಾ ಪಾರ್ಟಿ ಮಾಡ್ತಾನೆ. ಏನೋ ಹುಡುಗಾಟದಲ್ಲಿ ಆತನನ್ನು ಕರೆದೊಯ್ದಿದ್ದಾರೆ ಅಂದುಕೊಂಡಿದ್ದೆ. ಆದರೆ ಇದುವರೆಗೂ ಆತನನ್ನು ಬಿಡುಗಡೆ ಮಾಡಿಲ್ಲ. ಆತನ ತಂದೆ, ತಾಯಿ ತುಂಬ ಒಳ್ಳೆಯವರು. ತಂದೆ ಹಾರ್ಟ್ ಪೇಷೆಂಟ್. ಆದರೆ, ಆತ ತಪ್ಪು ಮಾಡಿದ್ರೆ ನನ್ನನ್ಯಾಕೆ ಬಲಿ ಕಾ ಬಕ್ರಾ ಮಾಡುತ್ತಿದ್ದೀರಿ ಎಂಬುದು ನನಗೆ ಗೊತ್ತಾಗುತ್ತಿಲ್ಲ, ಎಂದು ಬೇಸರ ತೋಡಿಕೊಂಡಿದ್ದಾರೆ.
ಮುಂದುವರಿದು, ನನಗೆ ಇದುವರೆಗೂ ಸಿಸಿಬಿ ನೊಟೀಸ್ ಬಂದಿಲ್ಲ. ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಇರೋ ಬಗ್ಗೆ ನಾನು ಕೇಳಿಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ. ಅಪ್ಪಿ ತಪ್ಪಿ ಪಾರ್ಟಿಗಳಿಗೆ ಹೋಗುತ್ತಿದೆ. ಕಳೆದ ಡಿಸೆಂಬರ್ನಲ್ಲಿ ಅನಾಹುತವಾದ ಬಳಿಕ ಪಾರ್ಟಿಗೆ ಹೋಗೋದನ್ನೂ ಬಿಟ್ಟಿದ್ದೇನೆ. ಸ್ಯಾಂಡಲ್ವುಡ್ ನಟ, ನಟಿಯರು ಅಂತ ಜನರಲೈಸ್ ಮಾಡೋದು ಬೇಡ. ಯಾರು ಡ್ರಗ್ಸ್ ಬಳಸಿದ್ದಾರೋ ಅವರನ್ನು ಹುಡುಕಿ ಅವರ ಹೆಸರನ್ನು ಹೇಳಿ, ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ