ನಾನು Akshay Kumarನ್ನೂ ಮದ್ವೆ ಆಗ್ತೀನಿ: Sania Mirza ಈ ಮಾತನ್ನ ಪತಿ Shoaib Malikಗೇ ಹೇಳಿದ್ರು, ವಿಡಿಯೋ ನೋಡಿ

ಅಕ್ಷಯ್ ಅವರನ್ನು ಮದುವೆಯಾಗಲು ಮತ್ತು ಹಾಲಿವುಡ್ ಸೂಪರ್ ಸ್ಟಾರ್ ಅನ್ನು ತೊರೆಯಲು ಇಚ್ಛಿಸುತ್ತೇನೆ ಎಂದು ಸಾನಿಯಾ ಮಿರ್ಜಾ ಪ್ರತಿಕ್ರಿಯಿಸಿದ್ದಾರೆ

ಸಾನಿಯಾ ಮಿರ್ಜಾ, ಶೋಯೆಬ್ ಮಲಿಕ್

ಸಾನಿಯಾ ಮಿರ್ಜಾ, ಶೋಯೆಬ್ ಮಲಿಕ್

  • Share this:
ಇನ್ಸ್ಟಾಗ್ರಾಮ್‌ನ(Instagram) 'ವರ್ಚುವಲ್ ಡೇಟ್' (Virtual Date) ನಲ್ಲಿ, ಶೋಯೆಬ್ ಮಲಿಕ್ (Shoaib Malik ) ಅವರು ಸಾನಿಯಾ ಮಿರ್ಜಾಗೆ ಟಾಮ್ ಕ್ರೂಸ್ ಮತ್ತು ಅಕ್ಷಯ್ ಕುಮಾರ್ (Akshay Kumar) ನಡುವೆ ಯಾರನ್ನಾದರೂ ಆಯ್ಕೆ ಮಾಡುವಂತೆ ಹೇಳಿದಾಗ ಶೋಯೆಬ್‌ನ ಅಚ್ಚರಿಯ ಪ್ರಶ್ನೆಗೆ ಸಾನಿಯಾ ಪ್ರತಿಕ್ರಿಯಿಸಿದ್ದು ಹೀಗೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಪ್ರಚಲಿತವಾಗಿರುವ ಇಬ್ಬರು ಕ್ರೀಡಾ ಸೆಲೆಬ್ರಿಟಿಗಳೆಂದರೆ ಅದು ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್. ಸಾನಿಯಾ ಮಿರ್ಜಾ (Sania Mirza) ಭಾರತದ ಅತ್ಯಂತ ಪ್ರಸಿದ್ಧ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರಾದರೆ, ಅವರ ಪತಿ ಪಾಕಿಸ್ತಾನದ ಕ್ರಿಕೆಟ್ ಜಗತ್ತಿನಲ್ಲಿ ಹೆಚ್ಚು ಗೌರವಾನ್ವಿತರಾಗಿದ್ದಾರೆ. 2010ರಲ್ಲಿ, ಭಾರತದ ಅತ್ಯಂತ ಯಶಸ್ವಿ ಮಹಿಳಾ ಟೆನಿಸ್ ಆಟಗಾರ್ತಿ ಸಾನಿಯಾ ತನ್ನ ಬಾಳಿನ ಪ್ರೀತಿಯನ್ನು ಬಾಳಸಂಗಾತಿಯನ್ನಾಗಿಸಿಕೊಂಡರು. ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾನಿಯಾ ಮತ್ತು ಶೋಯೆಬ್ ಸಾಂಪ್ರದಾಯಿಕ ಮುಸ್ಲಿಂ ವಿವಾಹ ಸಮಾರಂಭದಲ್ಲಿ ಮದುವೆ ಮಾಡಿಕೊಂಡರು.

ವಿಶೇಷ ಲೈವ್ ಸೆಷನ್
ಶೋಯೆಬ್ ಮತ್ತು ಸಾನಿಯಾ ತಮ್ಮ ಪ್ರೀತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸಲು ಎಂದಿಗೂ ಹಿಂಜರಿಯುವುದಿಲ್ಲ. ಇವರಿಬ್ಬರೂ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ, ವಿಶೇಷವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದಾರೆ.

ಸಾನಿಯಾ ಅವರ ಸಂದರ್ಶನ ಮಾಡುವ ಸಲುವಾಗಿ ಶೋಯಾಬ್ ಅವರು ಇನ್ಸ್ಟಾಗ್ರಾಮ್‌ನಲ್ಲಿ ವಿಶೇಷ ಲೈವ್ ಸೆಷನ್ ಅನ್ನು ನಡೆಸಿದರು. ಅದರಲ್ಲಿನ ಒಂದು ಸಂಭಾಷಣೆಯಲ್ಲಿ, ಮಾಜಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸಾನಿಯಾಗೆ ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಮತ್ತು ಹಾಲಿವುಡ್ ಐಕಾನ್ ಟಾಮ್ ಕ್ರೂಸ್ ನಡುವೆ ಆಯ್ಕೆ ಮಾಡಲು ಕೇಳಿದರು. ಸಂದರ್ಶನದ ಸಮಯದಲ್ಲಿ, ಮಲಿಕ್ ಸಾನಿಯಾಗೆ 'ಯಾರನ್ನು ತೊರೆಯಲು ಅಥವಾ ಮದುವೆಯಾಗಲು' ಬಯಸುತ್ತೀರಿ ಎಂದು ಕೇಳಿದರು.

ಇದನ್ನೂ ಓದಿ: Sania Mirza: ನಿವೃತ್ತಿ ಘೋಷಿಸಿದ ಟೆನಿಸ್​ ತಾರೆ ಸಾನಿಯಾ ಮಿರ್ಜಾ

ಅಕ್ಷಯ್‌ ಅಭಿಮಾನಿ
ಅಕ್ಷಯ್ ಅವರನ್ನು ಮದುವೆಯಾಗಲು ಮತ್ತು ಹಾಲಿವುಡ್ ಸೂಪರ್ ಸ್ಟಾರ್ ಅನ್ನು ತೊರೆಯಲು ಇಚ್ಛಿಸುತ್ತೇನೆ" ಎಂದು ಸಾನಿಯಾ ಮಿರ್ಜಾ ಪ್ರತಿಕ್ರಿಯಿಸಿದರು. ಅಲ್ಲದೆ, 35 ವರ್ಷದ ಟೆನಿಸ್ ತಾರೆ ತಾನು ಜನಪ್ರಿಯ ಬಾಲಿವುಡ್ ನಟನ ದೀರ್ಘ ಕಾಲದ ಅಭಿಮಾನಿ ಎಂದು ಬಹಿರಂಗಪಡಿಸಿದ್ದಾರೆ. ಮೊಹ್ರಾ (1994ರ ಬಾಲಿವುಡ್ ಚಲನಚಿತ್ರ) ದ ಕಾಲದಿಂದಲೇ ನಾನು ಅಕ್ಷಯ್ ಕುಮಾರ್ ಅವರನ್ನು ಇಷ್ಟಪಟ್ಟಿದ್ದೇನೆ, ನಾನು ಅವರನ್ನು ತೊರೆಯುವುದಿಲ್ಲ . ಯಾರೂ ಅಕ್ಷಯ್‌ನನ್ನು ಇಷ್ಟಪಡದಿದ್ದ ಕಾಲದಿಂದಲೂ ನಾನು ಅಕ್ಷಯ್‌ನನ್ನು ಇಷ್ಟಪಟ್ಟಿದ್ದೇನೆ ಎಂದು ಖ್ಯಾತ ಟೆನ್ನಿಸ್‌ ತಾರೆ ಹೇಳಿದರು.

ವಿಡಿಯೋ ನೋಡಿ:
ಕೊನೆಯ ಪಂದ್ಯಾವಳಿ
ಆಸ್ಟ್ರೇಲಿಯನ್ ಓಪನ್‌ನ 2022ರ ಆವೃತ್ತಿಯಲ್ಲಿ ಸ್ಪರ್ಧಿಸುತ್ತಿರುವ ಸಾನಿಯಾ, ಪಂದ್ಯಾವಳಿಯ ಕೊನೆಯಲ್ಲಿ ತಾನು ನಿವೃತ್ತಿ ಹೊಂದುವುದಾಗಿ ದೃಢಪಡಿಸಿದರು. ಗುರುವಾರದಂದು ಇಂಡೋ-ಅಮೆರಿಕನ್ ಜೋಡಿ ಸಾನಿಯಾ ಮತ್ತು ರಾಜೀವ್ ರಾಮ್ ಅವರು ಸರ್ಬಿಯಾದ ಅಲೆಕ್ಸಾಂಡ್ರಾ ಕ್ರುನಿಕ್ ಮತ್ತು ನಿಕೋಲಾ ಕ್ಯಾಸಿಕ್ ಅವರನ್ನು ಸೋಲಿಸಿ ಆಸ್ಟ್ರೇಲಿಯನ್ ಓಪನ್‌ನ ಎರಡನೇ ಸುತ್ತಿಗೆ ಪ್ರವೇಶಿಸಿದರು.

ತನ್ನ ಟ್ರೋಫಿಗಳಿಂದ ತುಂಬಿದ ಟೆನಿಸ್ ವೃತ್ತಿಜೀವನದಲ್ಲಿ, 35 ವರ್ಷ ವಯಸ್ಸಿನ ಸಾನಿಯಾ 6 ಗ್ರ್ಯಾನ್‌ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸ್ವಿಸ್ ಟೆನಿಸ್ ತಾರೆ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಸಾನಿಯಾ ಮೂರು ಗ್ರ್ಯಾನ್‌ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸೆಪ್ಟೆಂಬರ್‌ನಲ್ಲಿ, ಭಾರತೀಯ ಟೆನಿಸ್ ತಾರೆ ಆಸ್ಟ್ರಾವ ಓಪನ್‌ನಲ್ಲಿ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು.

ಇದನ್ನೂ ಓದಿ: Sania Mirza- ಭಾರತ-ಪಾಕ್ ಪಂದ್ಯದಲ್ಲಿ ನಿಮ್ಮ ಬೆಂಬಲ ಯಾರಿಗೆ? ಸಾನಿಯಾ ಕೊಟ್ಟ ಅಚ್ಚರಿ ಉತ್ತರ ಇದು

ಜಾಗತಿಕವಾಗಿ 68ನೇ ಸ್ಥಾನ
ನಾನು ಋತುವಿನ ಕೊನೆಯವರೆಗೆ ಉಳಿಯಬಲ್ಲೆನೇ ಅನ್ನುವುದು ನನಗೆ ತಿಳಿದಿಲ್ಲ, ಆದರೆ ಉಳಿಯುವ ಭರವಸೆ ಖಂಡಿತಾ ಇದೆ" ಎಂದು ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಮಿರ್ಜಾ ಹೇಳಿದರು ಎನ್ನುವುದನ್ನು ಆಕೆಯ ತಂದೆ ಇಮ್ರಾನ್ ಮಿರ್ಜಾ ಮತ್ತು ತರಬೇತುದಾರರು ESPNಗೆ ದೃಢಪಡಿಸಿದರು. ಸಿಂಗಲ್ಸ್‌ನಲ್ಲಿ ಅವರ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವು 27 ಆಗಿತ್ತು ಮತ್ತು ಅವರು ಡಬಲ್ಸ್‌ನಲ್ಲಿ ಮಾಜಿ ವಿಶ್ವ ನಂ. 1 ಆಗಿದ್ದರು. ಅವರು ಪ್ರಸ್ತುತ ಜಾಗತಿಕವಾಗಿ 68ನೇ ಸ್ಥಾನದಲ್ಲಿದ್ದಾರೆ.
Published by:vanithasanjevani vanithasanjevani
First published: