Covid Death: ಸ್ಯಾಂಡಲ್​ವುಡ್​ಗೆ ಮತ್ತೊಂದು ಕೊರೋನಾಘಾತ: ಚಿರನಿದ್ರೆಗೆ ಜಾರಿದ ಯುವ ನಿರ್ಮಾಪಕ..!

RIP RAjashekar: ಕನ್ನಡ ಚಿತ್ರತಂಗವನ್ನು ಕೊರೋನಾ ಮಹಾಮಾರಿ ತೀವ್ರವಾಗಿ ಕಾಡುತ್ತಿದೆ. ಸಿನಿಮಾದ ತುಂಬಾ ದೊಡ್ಡ‌ ಕನಸೊತ್ತಿದ್ದ ಮನಸು ಇನ್ನಿಲ್ಲ. ಪಾಪ್ ಕಾರ್ನ್ ಮಂಕಿ‌ಟೈಗರ್, ಬ್ಯಾಡ್ ಮ್ಯಾನರ್ಸ್, ಪೆಟ್ರೋಮ್ಯಾಕ್ಸ್ ಚಿತ್ರಗಳ‌ ಉತ್ಸಾಹಿ ನಿರ್ಮಾಪಕರು ರಾಜಶೇಖರ್, ಪೆಟ್ರೋಮ್ಯಾಕ್ಸ್​ ಸಿನಿಮಾ ರಿಲೀಸ್​ ಆಗುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ.

ಕಾರ್ಯಕಾರಿ ನಿರ್ಮಾಪಕ ರಾಜಶೇಖರ್​

ಕಾರ್ಯಕಾರಿ ನಿರ್ಮಾಪಕ ರಾಜಶೇಖರ್​

  • Share this:
ಕೊರೋನಾ ಲಾಕ್​ಡೌನ್​ನಿಂದಾಗಿ ಈಗಾಗಲೇ ಸ್ಯಾಂಡಲ್​ವುಡ್​ ಸಾಕಷ್ಟು ಸಂಕಷ್ಟದಲ್ಲಿದೆ. ರಿಲೀಸ್​ಗೆ ರೆಡಿಯಾಗಿರುವ ಸಿನಿಮಾಗಳು ರಿಲೀಸ್​ ಆಗದೆ ನಿರ್ಮಾಪಕರಿಂದ ಹಿಡಿದು ಇಡೀ ಚಿತ್ರತಂಡ ಕೆಲಸ ಹಾಗೂ ಹಣವಿಲ್ಲ ತುಂಬಾ ಕಷ್ಟದಲ್ಲಿದ್ದಾರೆ. ಲಾಕ್​ಡೌನ್​ಗೂ ಮೊದಲು ರಿಲೀಸ್ ಆದ ಸಿನಿಮಾಗಳು ಚೆನ್ನಾಗಿದ್ದರೂ ಕೊರೋನಾ ಆತಂಕದಿಂದ ಜನರು ಸಿನಿಮಾ ಮಂದಿರಗಳತ್ತ ಬರುವುದನ್ನು ಕಡಿಮೆ ಮಾಡಿದ್ದರು. ಹೀಗಿರುವಾಗಲೇ ಕೊರೋನಾ ಸೋಂಕಿನಿಂದಾಗಿ ಸ್ಯಾಂಡಲ್​ವುಡ್​ನಲ್ಲೂ ಸಾಲು ಸಾಲು ಸಾವುಗಳು ಸಂಭವಿಸುತ್ತಿವೆ. ಇತ್ತೀಚೆಗಷ್ಟೆ ನಿರ್ಮಾಪಕ ಕೋಟಿ ರಾಮು ಕೊರೋನಾಗೆ ಬಲಿಯಾದರು. ಈ ಘಟನೆಯ ಬೆನ್ನಲ್ಲೇ ರನ್ನ ಸಿನಿಮಾದ ನಿರ್ಮಾಪಕ ಚಂದ್ರಶೇಖರ್ ಅವರೂ  ಕೋವಿಡ್​ನಿಂದಾಗಿ ಕೊನೆಯುಸಿರೆಳೆದರು. ಈಗ ಮತ್ತೋರ್ವ ಯುವ ನಿರ್ಮಾಪಕ ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ. ಕನ್ನಡ ಸಿನಿರಂಗದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿರುವ ರಾಜಶೇಖರ್​ ನಿನ್ನೆ ಕೊರೋನಾ ಸೋಂಕಿನಿಂದಾಗಿ ನಿಧನರಾಗಿದ್ದಾರೆ. ಯುವ ನಿರ್ಮಾಪಕನ ಅಗಲಿಕೆಗೆ ಸಿನಿರಂಗದ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಇನ್ನೇನು ತೆರೆ ಕಾಣಬೇಕಿರುವ ಪೆಟ್ರೋಮ್ಯಾಕ್ಸ್​  ಕನ್ನಡ  ಸಿನಿಮಾದ ಕಾರ್ಯಕಾರಿ ನಿರ್ಮಾಪಕ ರಾಜಶೇಖರ್​ ಚಿರನಿದ್ರೆಗೆ ಜಾರಿದ್ದಾರೆ. 

ಕನ್ನಡ ಚಿತ್ರತಂಗವನ್ನು ಕೊರೋನಾ ಮಹಾಮಾರಿ ತೀವ್ರವಾಗಿ ಕಾಡುತ್ತಿದೆ. ಸಿನಿಮಾದ ತುಂಬಾ ದೊಡ್ಡ‌ ಕನಸೊತ್ತಿದ್ದ ಮನಸು ಇನ್ನಿಲ್ಲ. ಪಾಪ್ ಕಾರ್ನ್ ಮಂಕಿ‌ಟೈಗರ್, ಬ್ಯಾಡ್ ಮ್ಯಾನರ್ಸ್, ಪೆಟ್ರೋಮ್ಯಾಕ್ಸ್ ಚಿತ್ರಗಳ‌ ಉತ್ಸಾಹಿ ನಿರ್ಮಾಪಕರು ರಾಜಶೇಖರ್, ಪೆಟ್ರೋಮ್ಯಾಕ್ಸ್​ ಸಿನಿಮಾ ರಿಲೀಸ್​ ಆಗುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ.

Sandalwood producer Rajasekhar, Rajasekhar passed away due to corona, coronavirus, producer death, Ninasam Sathish, ನಿರ್ಮಾಪಕ ರಾಜಶೇಖರ್ ನಿಧನ, ನಿರ್ಮಾಪಕ ರಾಜಶೇಖರ್ ಕೊರೊನಾಗೆ ಬಲಿ, ನಿರ್ಮಾಪಕರ ನಿಧನ, ಸತೀಶ್ ನೀನಾಸಂ ಸಂತಾಪ
ಕಾರ್ಯಕಾರಿ ನಿರ್ಮಾಪಕ ರಾಜಶೇಖರ್​


ವಿಜಯ ಪ್ರಸಾದ್​ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹಾಗೂ ನೀನಾಸಂ ಸತೀಶ್​, ಹರಿಪ್ರಿಯಾ ಅಭಿನಯದ ಸಿನಿಮಾ ಪೆಟ್ರೋಮ್ಯಾಕ್ಸ್​ ಸಿನಿಮಾದಲ್ಲಿ ರಾಜಶೇಖರ್​ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ದುನಿಯಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ‌ಟೈಗರ್ ಸಿನಿಮಾದಲ್ಲಿ ಕೆಲಸ ಮಾಡಿದ್ದರು.

Sandalwood producer Rajasekhar, Rajasekhar passed away due to corona, coronavirus, producer death, Ninasam Sathish, ನಿರ್ಮಾಪಕ ರಾಜಶೇಖರ್ ನಿಧನ, ನಿರ್ಮಾಪಕ ರಾಜಶೇಖರ್ ಕೊರೊನಾಗೆ ಬಲಿ, ನಿರ್ಮಾಪಕರ ನಿಧನ, ಸತೀಶ್ ನೀನಾಸಂ ಸಂತಾಪ
ಕಂಬನಿ ಮಿಡಿದ ಸತೀಶ್​ ನೀನಾಸಂ


ರಾಜು, ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟುವ ಹಂತದಲ್ಲಿದ್ದ ಮಹಾತ್ವಾಕಾಂಕ್ಷಿ. ನಮ್ಮ ಪೆಟ್ರೋಮ್ಯಾಕ್ಸ್​ ಚಿತ್ರ ಆಗಲು ಮುಖ್ಯವಾದ ವ್ಯಕ್ತಿ ಜಗಳಪ್ರೀತಿ ಎಲ್ಲವೂ ಇತ್ತು. ನಮ್ಮ ಜೊತೆ ಕಾರ್ಯಕಾರಿ ನಿರ್ಮಾಪಕರಾಗಿ 2 ತಿಂಗಳು ಜೊತೆಗಿದ್ದರು. ಪೆಟ್ರೋಮ್ಯಾಕ್ಸ್​ ಗೆದ್ದು ಅದರ ಅದ್ಧೂರಿ ಸಮಾರಂಭ ಮಾಡುವ ಆಸೆ ಹೊತ್ತಿದ್ದರು. ಯಾವಾಗಲೂ ನಗುತ್ತಾ ಸೆಟ್​ನಲ್ಲಿ ಕೂರುತ್ತಿದ್ದ ನೆನಪುಗಳನ್ನು ನೆನೆಸಿಕೊಂಡರೆ ಎದೆಗೆ ಭರ್ಜಿ ಚುಚ್ಚಿದಂತಾಗುತ್ತದೆ. ಮೈಸೂರಿನಲ್ಲಿ ರಾತ್ರಿಯಲ್ಲ ಜೊತೆಗಿದ್ದು ಕಾರು ಕತ್ತಿಸಿ ನಾವು ಗೆಲ್ತೀವಿ ಸಾರ್​ ನೆಮ್ಮದಿಯಿಂದ ನಿದ್ದೆ ಮಾಡಿ ಎಂದು ಚಿರನಿದ್ರೆಗೆ ಜಾರಿದ ರಾಜು ಇದು ತಪ್ಪಲ್ಲವೇ ಎಂದು ಸತೀಶ್​ ನೀನಾಸಂ ನೊಂದು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: Suniel Shetty: ಕೊರೋನಾ ಸಂಕಷ್ಟ: ಬೆಂಗಳೂರಿಗರ ನೆರವಿಗೆ ಬಂದ ನಟ ಸುನೀಲ್ ಶೆಟ್ಟಿ..!

ಸತೀಶ್​ ನೀನಾಸಂ ಸಾಮಾಜಿಕ ಜಾಲತಾಣದ ಮೂಲಕ ಕೊರೋನಾ ಕುರಿತಾಗಿ ಅರಿವು ಮೂಡಿಸು ಪ್ರಯತ್ನ ಮಾಡುತ್ತಿದ್ದಾರೆ. ಸದಾ ಮಾಸ್ಕ್​ ಧರಿಸಿ ಎನ್ನುವ ಸತೀಸ್​ ಕೊರೋನಾ ಯಾವೆಲ್ಲ ರೀತಿ ಸಂಕಷ್ಟಕ್ಕೆ ದೂಡುತ್ತಿದೆ ಎಂದು ವಿವರಿಸಿದ್ದಾರೆ.

ಬರೀ ನಾವು ಚೆನ್ನಾಗಿದ್ರೆ ಸಾಲದು...#stayhome #StaySafe pic.twitter.com/lFPLnXJiCvನಾವು ಚೆನ್ನಾಗಿದ್ದರೆ ಸಾಲದು, ನಮ್ಮ ಸುತ್ತಮುತ್ತ ಇರುವವರೂ ಚೆನ್ನಾಗಿರಬೇಕು ಎನ್ನುವ ಸತೀಶ್​ ನೀನಾಸಂ, ಕೊರೋನಾ ಕಾರಣದಿಂದಾಗಿ ತನ್ನ ದೊಡ್ಡಮ್ಮ ಕೊನೆಯುರಿರೆಳೆದರೂ ಹೋಗಿ ಅಂತಿಮ ದರ್ಶನ ಪಡೆಯಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bigg Boss 8 Kannada: ಈ ವಾರವೂ ಕಿಚ್ಚನ ಅನುಪಸ್ಥಿತಿಯಲ್ಲೇ ನಡೆಯಲಿದೆ ಬಿಗ್ ಬಾಸ್​: ವಿಭಿನ್ನವಾದ ಬೇಡಿಕೆಯಿಟ್ಟ ಕಿಚ್ಚನ ಅಭಿಮಾನಿಗಳು

ಈಗ ಆಗುತ್ತಿರುವುದಕ್ಕೇ ನಾವೇ ಕಾರಣ. ಮಾಸ್ಕ್​ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದರೆ ಪರಿಸ್ಥಿತಿ ಇನ್ನೂ ಕೈ ಮೀರುತ್ತದೆ. ದಯವಿಟ್ಟು ಎಲ್ಲರೂ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ನೀವು ಚೆನ್ನಾಗಿರಿ, ಬೇರೆಯವರನ್ನೂ ಬದುಕಲು ಬಿಡಿ ಎಂದು ಮನವಿ ಮಾಡಿದ್ದಾರೆ ಸತೀಶ್​ ನೀನಾಸಂ.
Published by:Anitha E
First published: