ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಮತ್ತು ನಿರ್ದೇಶಕ ಯೋಗರಾಜ್ ಭಟ್ (Director Yograj Bhat) ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ಗಾಳಿಪಟ-2' (Gaalipata 2) ಚಿತ್ರ 2022ರ ಆಗಸ್ಟ್ 12ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಇದಲ್ಲದೇ ನಿರ್ದೇಶಕ ಯೋಗರಾಜ್ ಭಟ್ ಸಹ ಫೇಸ್ಬುಕ್ ನಲ್ಲಿ (Facebook) ಈ ಕುರಿತು ಮಾಹಿತಿ ತಿಳಿಸಿದ್ದು, ಫೋಸ್ಟರ್ (Poster) ಒಂದನ್ನು ಸಹ ಹಂಚಿಕೊಂಡಿದ್ದಾರೆ. ಇನ್ನು, ಇದಕ್ಕೂ ಮೊದಲು, ಚಿತ್ರವನ್ನು ಜೂನ್ ತಿಂಗಳಿನಲ್ಲಿ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿತ್ತು. ಆದರೆ ಮಳೆಗಾಲದ ಹಿನ್ನಲೆ ಚಿತ್ರಮಂದಿರದತ್ತ ಜನರು ಬರುವುದು ಕಡಿಮೆ ಆಗಬಹುದು ಎಂದು ಚಿತ್ರತಂಡ ಈ ನಿರ್ಧಾರವನ್ನು ಕೈಬಿಟ್ಟಿತ್ತು. ಇದಾದ ಬಳಿಕ ಇದೀಗ ಮತ್ತೊಮ್ಮೆ ಚಿತ್ರತಂಡ ಹೊಸ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಈ ಕುರಿತು ಚಿತ್ರತಂಡ ಸಹ ಈ ಆಭರಿ ಅಧಿಕೃತವಾಗಿ ತಿಳಿಸಿದೆ.
ಫೇಸ್ಬುಕ್ನಲ್ಲಿ ಫೊಸ್ಟರ್ ಹಂಚಿಕೊಂಡ ಭಟ್ಟರು:
ನಿರ್ದೇಶಕ ಯೋಗರಾಜ್ ಭಟ್ ಎಂದರೆ ಒಂದು ರೀತಿಯ ಡಿಫರೆಂಟ್ ಎಂದು ಹೇಳಬಹುದು. ಅವರ ನಿಕರ್ದೇಶನದ ಗಾಳಿಪಟ ಚಿತ್ರದ ಸೀಕ್ವೆಲ್ ಆಗಿ ಗಾಳಿಪಟ 2 ತೆರೆಕಾಣಲು ಸಿದ್ದವಾಗಿದೆ. ಈ ಕುರಿತು ಫೆಸ್ಬುಕ್ ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು, ‘ಒಂದಿಷ್ಟು ಮೊಹಬ್ಬತ್ ಜೊತೆಗೆ ಮತ್ತೊಂದಷ್ಟು ಸ್ನೇಹವನ್ನು ಹೊತ್ತು ಇದೇ ಆಗಸ್ಟ್ 12ರಂದು ನಿಮ್ಮ ಮುಂದೆ ಬರ್ತಿದ್ದೀವಿ. ಅದೇ ಹಳೆಯ ಅಕ್ಕರೆ ಮತ್ತು ಪ್ರೀತಿಯನ್ನು ಬಯಸುವ ಗಾಳಿಪಟ 2 ಚಿತ್ರತಂಡ‘ ಎಂದು ಬರೆದುಕೊಂಡಿದ್ದಾರೆ. ಇನ್ನು, ನಟ ಗಣೇಶ್ ಸಹ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಟ್ವೀಟ್ ಮಾಡಿದ್ದು, ಗೆಟ್ ರೆಡಿ ಟು ಫ್ಲೈ ಆನ್ ಆಗಸ್ಟ್ 12. ಮಾರ್ಕ್ ದ ಡೇಟ್ ಎಂದು ಹೇಳಿದ್ದಾರೆ.
ಗಣಿ ಮತ್ತು ಭಟ್ಟರ ಮೇಲೆ ಹೆಚ್ಚಿನ ನಿರೀಕ್ಷೆ:
ಇನ್ನು, ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಶನ್ನಲ್ಲಿ ಮೂಡಿಬಂದಿದ್ದ ‘ಗಾಳಿಪಟ’ ಚಿತ್ರ ಸೂಪರ್ ಹಿಟ್ ಆಗಿತ್ತು. ಈಗ ಮತ್ತದೇ ಜೋಡಿ ಮತ್ತೂಮ್ಮೆ 'ಗಾಳಿಪಟ-2' ಚಿತ್ರವನ್ನು ಸಿದ್ಧಗೊಳಿಸಿದ್ದಾರೆ. ಹೀಗಾಗಿ ಇವರಿಬ್ಬರ ಮೇಲೆ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯಿದೆ. ಅಲ್ಲದೇ ಈಗಾಗಲೇ ಬಿಡುಗಡೆಯಾಗಿರುವ ಎಕ್ಸಾಂ ಲಿರಿಕಲ್ ವಿಡಿಯೋ ಸಾಂಗ್ ಸಖತ್ ಸದ್ದು ಮಾಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಚಿತ್ರವನ್ನು ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದು, ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ: Sandalwood ಬಾಕ್ಸ್ ಆಫೀಸ್ ಕ್ಲ್ಯಾಶ್! ಒಂದೇ ದಿನ ಇಬ್ಬರು ಸ್ಟಾರ್ಗಳ ಸಿನಿಮಾ ರಿಲೀಸ್
ದೇಶ - ವಿದೇಶದಲ್ಲಿ ಹಾರಾಡಲಿದೆ ಗಾಳಿಪಟ 2:
ಗಾಳಿಪಟ 2 ಚಿತ್ರವು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶ- ವಿದೇಶಗಳಲ್ಲಿಯೂ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಮತ್ತು ಹಾಡು ಸಖತ್ ಹಿಟ್ ಆಗಿದ್ದು, ಎಲ್ಲಡೇ ಗಾಳಿಪಟ ಹಾರಾಡಲು ಸಿದ್ಧವಾಗಿದೆ. ಬಹುತಾರಾಣಗಣ ಹಾಗೂ ಅದ್ಧೂರಿಯಾಗಿ ಸಿದ್ದವಾಗಿರುವ ಗಾಳಿಪಟ 2 ಇದೇ ಆಗಷ್ಟ್ 12ರಂದು ರಿಲೀಸ್ ಅಗಲಿದೆ.
ಇದನ್ನೂ ಓದಿ: Gaalipata 2: ಭಟ್ರು-ಗಣಿ ಗಾಳಿಪಟಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್, ದಾಖಲೆ ಮೊತ್ತಕ್ಕೆ `ಜೀ’ ಪಾಲಾಯ್ತು ಡಿಜಿಟಲ್ ರೈಟ್ಸ್!
ಬಹುತಾರಾಗಣದ ಗಾಳಿಪಟ 2:
ಇನ್ನು, ಚಿತ್ರದಲ್ಲಿ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್ ನಾಗ್, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರ ದಂಡೇ ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ