HOME » NEWS » Entertainment » SANDALWOOD VETERAN ACTRESS SUREKHA PASSED AWAY SHE SHARING SCREEN WITH DR RAJKUMAR LG

Actress Surekha Passed Away: ಡಾ.ರಾಜ್​​ ಜೊತೆ ನಟಿಸಿದ್ದ ಸ್ಯಾಂಡಲ್​​ವುಡ್​ ಹಿರಿಯ ನಟಿ ಸುರೇಖಾ ಇನ್ನಿಲ್ಲ..!

ಇವರು ಡಾ.ರಾಜ್​ಕುಮಾರ್​ ಅವರ ಜೊತೆ ತ್ರಿಮೂರ್ತಿ ಸಿನಿಮಾದಲ್ಲಿ ನಟಿಸುವ ಜೊತೆಗೆ, ಇನ್ನೂ 6 ಸಿನಿಮಾಗಳಲ್ಲಿ ರಾಜ್​ಗೆ ಜೋಡಿಯಾಗಿ ತೆರೆ ಹಂಚಿಕೊಂಡಿದ್ದರು.

news18-kannada
Updated:June 6, 2021, 2:41 PM IST
Actress Surekha Passed Away: ಡಾ.ರಾಜ್​​ ಜೊತೆ ನಟಿಸಿದ್ದ ಸ್ಯಾಂಡಲ್​​ವುಡ್​ ಹಿರಿಯ ನಟಿ ಸುರೇಖಾ ಇನ್ನಿಲ್ಲ..!
ಹಿರಿಯ ನಟಿ ಸುರೇಖಾ
  • Share this:
ಬೆಂಗಳೂರು(ಜೂ.06): ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಜಯಾ ಸಾವಿನ ಸುದ್ದಿ ಮಾಸುವ ಮುನ್ನವೇ ಚಂದನವನಕ್ಕೆ ಮತ್ತೊಂದು ನಷ್ಟ ಆಗಿದೆ. ಸ್ಯಾಂಡಲ್​ವುಡ್​ನ ಮತ್ತೊಬ್ಬ​ ಹಿರಿಯ ನಟಿ ಸುರೇಖಾ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವರನಟ ಡಾ.ರಾಜ್​ಕುಮಾರ್​ ಸೇರಿದಂತೆ ಅನೇಕ ದಿಗ್ಗಜರ ಜೊತೆ ನಟಿಸುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದ ನಟಿ ಇಂದು ಇಹಲೋಕ ತ್ಯಜಿಸಿದ್ದಾರೆ.

ಸುರೇಖಾ(66) ಅವರಿಗೆ ನಿನ್ನೆ ರಾತ್ರಿ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದುರಾದೃಷ್ಟವಶಾತ್ ಬದುಕುಳಿಯಲಿಲ್ಲ. ನಿನ್ನೆ ರಾತ್ರಿ 9.30ಕ್ಕೆ ನಟಿ ಕೊನೆಯುಸಿರೆಳೆದರು. ಇಂದು ಬನಶಂಕರಿ ಚಿತಾಗಾರದಲ್ಲಿ ಸುರೇಖಾ ಅವರ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ:Dilip Kumar Hospitalized: ಉಸಿರಾಟ ಸಮಸ್ಯೆಯಿಂದ ಖ್ಯಾತ ಬಾಲಿವುಡ್ ನಟ ದಿಲೀಪ್ ಕುಮಾರ್​​​ ಆಸ್ಪತ್ರೆಗೆ ದಾಖಲು

ಇವರು ಡಾ.ರಾಜ್​ಕುಮಾರ್​ ಅವರ ಜೊತೆ ತ್ರಿಮೂರ್ತಿ ಸಿನಿಮಾದಲ್ಲಿ ನಟಿಸುವ ಜೊತೆಗೆ, ಇನ್ನೂ 6 ಸಿನಿಮಾಗಳಲ್ಲಿ ರಾಜ್​ಗೆ ಜೋಡಿಯಾಗಿ ತೆರೆ ಹಂಚಿಕೊಂಡಿದ್ದರು. ಸುರೇಖಾ ಸುಮಾರು 160ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನೇಕ ಸ್ಟಾರ್ ನಟರ ಜೊರೆ ತೆರೆ ಹಂಚಿಕೊಂಡಿದ್ದಾರೆ.ಸುರೇಖಾ ನಟಿಸಿರುವ ಚಿತ್ರಗಳಲ್ಲಿ ತ್ರಿಮೂರ್ತಿ, ಗಿರಿಕನ್ಯೆ ಸಾಕ್ಷಾತ್ಕಾರ, ಹುಲಿಯ ಹಾಲಿನ ಮೇವು, ಮಣ್ಣಿನ ಮಕ್ಕಳು, ಸಂಭ್ರಮ, ಕಿಂಗ್, ಶಂಕರ್ ಸುಂದರ್, ಬಿಳಿಗಿರಿ ಬನದಲ್ಲಿ, ಆಲೆಮನೆ ಪ್ರಮುಖವಾದವುಗಳಾಗಿವೆ.

ಇದನ್ನೂ ಓದಿ:Rohini Sindhuri: ಟ್ರಾನ್ಸ್​ಫರ್ ಕ್ಯಾನ್ಸಲ್ ಮಾಡುವಂತೆ ರೋಹಿಣಿ ಸಿಂಧೂರಿ ಮನವಿ; ಬಿಲ್​ಕುಲ್ ಆಗಲ್ಲ ಎಂದ ಸಿಎಂನಟಿ ಮಾತ್ರವಲ್ಲದೇ ನೃತ್ಯಗಾರ್ತಿಯೂ ಆಗಿದ್ದ ಸುರೇಖಾ ಭರತನಾಟ್ಯ ಮತ್ತು ಕೂಚುಪಡಿಯನ್ನು ಕರಗತ ಮಾಡಿಕೊಂಡಿದ್ದರು. ಇವರ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Latha CG
First published: June 6, 2021, 2:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories