ಕನ್ನಡ ಚಿತ್ರರಂಗದಲ್ಲಿ ಕಪ್ಪು-ಬಿಳುಪು ಸಿನಿಮಾ (Veteran Actress Leelavathi) ದಿನಗಳಿಂದಲೂ ಲೀಲಾವತಿ ಅವರು ಅಭಿನಯಿಸುತ್ತಲೇ ಬಂದಿದ್ದಾರೆ. ತೀರಾ ಇತ್ತೀಚಿಗೆ ಅಂದ್ರೂ ಹೆಚ್ಚು ಕಡಿಮೆ 14 ವರ್ಷದ ಹಿಂದೆ ಲೀಲಾವತಿ ಅವರು ಅಭಿನಯಿಂದ ದೂರ ಉಳಿದ್ರು. ಪುತ್ರ ವಿನೋದ್ ರಾಜ್ ಅಭಿನಯದ "ಯಾರದು" ಸಿನಿಮಾ ಆದ್ಮೇಲೆ ಲೀಲಮ್ಮ ಸಿನಿಮಾ ಮಾಡಲೇ ಇಲ್ಲ. ಅಮ್ಮ ಮಗ ದೂರದ ಸೋಲ ದೇವನಹಳ್ಳಿಯ (Sandalwood Veteran Actress) ತೋಟದ ಮನೆಯಲ್ಲಿಯೇ ಉಳಿದು ಬಿಟ್ಟರು. ತೋಟ-ಮನೆ-ನಾಯಿಗಳು ಹೀಗೆ ಇವುಗಳ ಜೊತೆಗೆ ದಿನಗಳನ್ನ ಕಳೆದರು. ಹಳ್ಳಿ ಜನರ ಅನುಕೂಲಕ್ಕೆ ಒಂದ ಆಸ್ಪತ್ರೆಯನ್ನ ಕೂಡ (Special Celebration at home) ಕಟ್ಟಿಸಿದ್ದಾರೆ. ಇತ್ತೀಚಿಗೆ ಪಶು ಆಸ್ಪತ್ರೆಯನ್ನ ಕೂಡ ಓಪನ್ ಮಾಡಿದ್ದಾರೆ.
ಆದರೆ ಲೀಲಮ್ಮ ಈ ಮೊದಲಿನ ಹಾಗೆ ಈಗ ಅಷ್ಟೇನೂ ಲವಲವಿಕೆಯಿಂದ (Special Celebration) ಓಡಾಡೋದಿಲ್ಲ. ಹಾಸಿಗೆ ಮೇಲೇನೆ ದಿನಗಳನ್ನ ದೂಡುತ್ತಿದ್ದಾರೆ.
ಆದರೂ ಲೀಲಾವತಿ ಅವರಿಗೆ ಕಲಾದೇವಿ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ ನೋಡಿ. ಕಲಾದೇವಿಯನ್ನ ಆರಾಧಿಸೋ ಕಲಾವಿದರು ಮನೆಗೆ ಬಂದ್ರೆ ಸಾಕು, ಇನ್ನಿಲ್ಲದಂತಹ ಖುಷಿನೇ ಆಗುತ್ತದೆ. ಆಗಾಗ ಬಂದು ಆರೋಗ್ಯ ವಿಚಾರಿಸೋ ಸಿನಿಮಾ ಕುಟುಂಬದ ಮಂದಿಯನ್ನ ಕಂಡ್ರೆ ಲೀಲಮ್ಮನಿಗೆ ಇನ್ನಿಲ್ಲದೆ ಪ್ರೀತಿನೂ ಇದೆ.
ಹಿರಿಯ ನಟಿ ಲೀಲಾವತಿ ಅವರಿಗೆ ಪ್ರೀತಿಯ ಸನ್ಮಾನ
ಆದರೆ ಜೂನ್ -31 ತುಂಬಾನೆ ವಿಶೇಷವಾಗಿತ್ತು. ಆ ದಿನ ಸಿನಿಮಾರಂಗದ ಅನೇಕ ಕಲಾವಿದರು ಮನೆಗೆ ಬಂದಿದ್ದರು. ಹಳಬರು-ಹೊಸಬರು ಅನ್ನೋ ಹಂಗಿಲ್ಲದೇ ಕಲಾವಿದರು ಲೀಲಮ್ಮನ ಮನೆಯಲ್ಲಿ ಸೇರಿದ್ದರು.
ಇವರ ಈ ಒಂದು ಸಮಾಗಮಕ್ಕೆ ಒಂದು ಕಾರಣವೂ ಇದೆ. ಆ ಕಾರಣದ ಹೆಸರು ಬೇರೆ ಯಾರೋ ಅಲ್ಲ. ಅದು ಖುದ್ ಲೀಲಾವತಿ ಅವರೇ ಆಗಿದ್ದರು.
ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಅಮ್ಮ ಲೀಲಾವತಿ ಅವರಿಗೆ ಇಲ್ಲಿ ಸನ್ಮಾನ ನೆರವೇರಿತು. ಮಹಾರಾಜ ಚೇರ್ ಮೇಲೆ ಅಮ್ಮನನ್ನ ಕೂಡಿಸಿ ಎಲ್ಲರೂ ಸನ್ಮಾನಿಸಿದರು. ಅಷ್ಟೇ ಪ್ರೀತಿಯಿಂದ ಮೈಸೂರು ಪೇಟ ಹಾಕಿ ಶಾಲ್ ಹೊದಿಸಿದರು. ಕೇಕ್ ಕಟ್ ಮಾಡಿದರು. ಈ ಒಂದು ಕ್ಷಣವನ್ನ ನೋಡಲು ಎರಡು ಕಣ್ಣುಗಳು ಸಾಲದು ಬಿಡಿ.
ಇದೆಲ್ಲಕ್ಕೂ ಹೆಚ್ಚಾಗಿ ಲೀಲಾವತಿ ಅವರ ಮೊಗದಲ್ಲಿ ಮೂಡಿದ ಆ ನಗು, ಅಲ್ಲಿದವರಿಗೆಲ್ಲ ತುಂಬಾನೆ ಖುಷಿ ತಂದಿತ್ತು. ಹೌದು, ನಿಜಕ್ಕೂ ಲೀಲಾವತಿ ಅವರು ಗೆಲುವಾಗಿಯೇ ಇದ್ದರು.
ಲೀಲಮ್ಮನ ಮನಸ್ಸಿಗೆ ಖುಷಿ ನೀಡಿದ ಕಲಾವಿದರ ಸಂಗಮ
ಸದಾ ಬೆಡ್ ಮೇಲೆ ಮಲಗಿಕೊಂಡೇ ಇರೋ ಅಮ್ಮನಿಗೆ ಈ ದಿನ ವಿಶೇಷ ಶಕ್ತಿ ಬಂದಂತಿತ್ತು. ಕಲಾವಿದರೆಲ್ಲ ಒಂದೆಡೆ ತಮ್ಮ ಮನೆಯಲ್ಲಿ ಸೇರಿದ್ದಾರೆ ಅನ್ನೋ ಖುಷಿನೇ ಅದಾಗಿತ್ತು.
ಇಂಡಸ್ಟ್ರೀಯಲ್ಲಿ ಏನೇ ಆದರೂ ಸರಿಯೇ, ಲೀಲಾವತಿ ಅವರು ಪುತ್ರ ವಿನೋದ್ ರಾಜ್ ಜೊತೆಗೆ ಅಲ್ಲಿಗೆ ಆಗಮಿಸುತ್ತಿದ್ದರು. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ ನೋಡಿ. ವಯೋ ಸಹಜ ತೊಂದರೆಯಿಂದ ಬಳಲುತ್ತಿರೋ ಲೀಲಾವತಿ ಅವರಿಗೆ ಕನ್ನಡ ಚಿತ್ರರಂಗದ ಕಲಾವಿದರು ಗೌರವಿಸಿದ್ದಾರೆ.
ಅಮ್ಮನ ಮಡಿಲಲ್ಲಿ ಕನ್ನಡ ಕಲಾವಿದರ ಸಮಾಗಮ
ಈ ಒಂದು ಸುಂದರ ಸಮಯದಲ್ಲಿ ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ, ಹಿರಿಯ ನಟ ಸುಂದರ್ ರಾಜ್, ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ಹಿರಿಯ ನಟಿ ಲಕ್ಷ್ಮೀ ದೇವಿ, ಪದ್ಮಾವಾಸಂತಿ, ಗಿರಿಜಾ ಲೋಕೇಶ್ ಹೀಗೆ ಇನ್ನೂ ಅನೇಕ ಹಿರಿಯ-ಕಿರಿಯ ಕಲಾವಿದರು ಇಲ್ಲಿಗೆ ಆಗಮಿಸಿದ್ದರು.
ಇನ್ನೂ ಓದಿ: Sara Ali Khan: ಉಜ್ಜಯಿನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕೆ ಟ್ರೋಲ್ ಆದ ನಟಿ! ಮುಂದೇನಾಯ್ತು?
ಅಮ್ಮನ ಜೊತೆಗೆ ಸಾಕಷ್ಟು ಸಮಯ ಕಳೆದರು. ಆ ಒಂದು ನೆನಪಿಗಾಗಿಯೇ ಒಂದಷ್ಟು ಗ್ರೂಪ್ ಫೋಟೋಗಳನ್ನ ತೆಗೆದುಕೊಂಡು ಖುಷಿಪಟ್ಟರು. ಇಂದಿನ ದಿನಗಳಲ್ಲಿ ಕಲಾವಿದರು ಒಂದಡೆ ಸೇರೋದೇ ಅಪರೂಪವಾಗಿದೆ.
ಆದರೆ, ಇದೀಗ ಈ ಕಲಾವಿದರ ಈ ಅಪರೂಪದ ಸಮಾಗಮಕ್ಕೆ ಲೀಲಾವತಿ ಅವರ ತೋಟದ ಮನೆ ಸಾಕ್ಷಿ ಆಗಿದೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ