• Home
  • »
  • News
  • »
  • entertainment
  • »
  • ಹಿರಿಯ ನಟ ದ್ವಾರಕೀಶ್​ ಪತ್ನಿ ಅಂಬುಜಾ ನಿಧನ!

ಹಿರಿಯ ನಟ ದ್ವಾರಕೀಶ್​ ಪತ್ನಿ ಅಂಬುಜಾ ನಿಧನ!

ಹಿರಿಯ ನಟ ದ್ವಾರಕೀಶ್​ -ಪತ್ನಿ ಅಂಬುಜಾ

ಹಿರಿಯ ನಟ ದ್ವಾರಕೀಶ್​ -ಪತ್ನಿ ಅಂಬುಜಾ

ಅಂಬುಜಾ ಅವರು ಶುಕ್ರವಾರ ಮಧ್ಯಾಹ್ನದಂದು ಎಚ್​.ಎಸ್​. ಆರ್​ ಲೇಜೌಟ್​ನಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ನಟ ದ್ವಾರಕೀಶ್​ ಅವರ ಮೊದಲ ಪತ್ನಿಯಾಗಿದ್ದಾರೆ.

  • Share this:

    ಸ್ಯಾಂಡಲ್​ವುಡ್​ನ ಹಿರಿಯ ನಟ, ಕನ್ನಡದ ಕುಳ್ಳ ಎಂದೇ ಪ್ರಸಿದ್ಧರಾಗಿರುವ ದ್ವಾರಕೀಶ್​ ಅವರ ಮೊದಲ ಪತ್ನಿ ಅಂಬುಜಾ ನಿಧರಾಗಿದ್ದಾರೆ. 83 ವರ್ಷ ವಯಸ್ಸಿನ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲವು ವರ್ಷಗಳಿಂದ ಮಂಡಿ ನೋವಿನ ಸಮಸ್ಯೆಗೂ ತುತ್ತಾಗಿದ್ದರು. ಆ ಬಳಿಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು ಚೇತರಿಕೆ ಕಾಣಲಿಲ್ಲ.


    ಅಂಬುಜಾ ಅವರು ಶುಕ್ರವಾರ ಮಧ್ಯಾಹ್ನದಂದು ಎಚ್​.ಎಸ್​. ಆರ್​ ಲೇಜೌಟ್​ನಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ನಟ ದ್ವಾರಕೀಶ್​ ಅವರ ಮೊದಲ ಪತ್ನಿಯಾಗಿದ್ದಾರೆ.


    ಹಿರಿಯ ನಟರಾದ ದ್ವಾರಕೀಶ್​ ಎರಡು ವಿವಾಹವಾಗಿದ್ದಾರೆ. ಅದರಲ್ಲಿ ಅಂಬುಜಾ ಅವರು ಮೊದಲಿನವರಾಗಿದ್ದು, ಪ್ರೀತಿಸಿ ಮದುವೆಯಾದರು. ಆ ಬಳಿಕ ಶೈಲಜಾ ಅವರನ್ನು ಕೂಡ ದ್ವಾರಕೀಶ್​ ಇಷ್ಟ ಪಟ್ಟು ವಿವಾಹವಾದರು. ದ್ವಾರಕೀಶ್​ ಅವರ ಎರಡನೇ ವಿವಾಹಕ್ಕೆ ಅಂಬುಜಾ ಅವರ ಒಪ್ಪಿಗೆ ಇತ್ತು. ಈ ವಿಚಾರವನ್ನು ಕಾರ್ಯಕ್ರಮವೊಂದರಲ್ಲಿ ದ್ವಾರಕೀಶ್​ ಹೇಳಿಕೊಂಡಿದ್ದರು.


    ಇನ್ನು ದ್ವಾರಕೀಶ್​ ಮತ್ತು ಅಂಬುಜಾ ಅವರಿಗೆ  ಇವರಿಗೆ ಐದು ಗಂಡು ಮಕ್ಕಳಿದ್ದಾರೆ.

    Published by:Harshith AS
    First published: