Suicide: ಡೆತ್ ​ನೋಟ್​ ಬರೆದು ಆತ್ಮಹತ್ಯೆಗೆ ಶರಣಾದ ಉದಯೋನ್ಮುಖ ನಟಿ ಸೌಜನ್ಯ..!

ಸೌಜನ್ಯ ಅವರು ಕೊಡಗು ಜಿಲ್ಲೆಯ ಕುಶಾಲನಗರದ ಮೂಲದವರಾಗಿದ್ದು, ಚೌಕಟ್ಟು, ಫನ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾವಿಗೂ ಮುನ್ನ ಡೆತ್​ನೋಟ್ ಬರೆದಿರುವ ಸೌಜನ್ಯ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ. ನನ್ನನ್ನು ಕ್ಷಮಿಸಿ ಅಪ್ಪ-ಅಮ್ಮ ಅಂತ ಡೆತ್ ನೋಟ್​ನಲ್ಲಿ ಕ್ಷಮೆ ಕೇಳಿದ್ದಾರೆ. ಇನ್ನು ಸೌಜನ್ಯ ಖಿನ್ನಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. 

ಆತ್ಮಹತ್ಯೆ ಮಾಡಿಕೊಂಡ ನಟಿ ಸೌಜನ್ಯ

ಆತ್ಮಹತ್ಯೆ ಮಾಡಿಕೊಂಡ ನಟಿ ಸೌಜನ್ಯ

  • Share this:
ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಕಹಿ ಘಟನೆಗಳು ನಡೆಯುತ್ತಿವೆ. ಉದಯೋನ್ಮುಖ ನಟಿ ಜಯಶ್ರೀ ರಾಮಯ್ಯ ಅವರ ಸಾವಿನ ಕಹಿ ಸುದ್ದಿ ನೆನಪಿನಿಂದ ಮಾಸುವ ಮುನ್ನವೇ ಮತ್ತೊರ್ವ ನಟಿಯ ಸಾವಿನ ಸುದ್ದಿ ಬರ ಸಿಡಿಲಿನಂತೆ ಬಡಿದಿದೆ. ಉದಯೋನ್ಮುಖ ನಟಿಯೊಬ್ಬರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿದ್ದ ನಟಿ ಸೌಜನ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್​ ಬರೆದಿಟ್ಟು ಸೌಜನ್ಯ ನೇಣಿಗೆ ಶರಣಾಗಿದ್ದಾರೆ. ಕುಂಬಳಗೋಡಿನ ದೊಡ್ಡಬೆಲೆಯ ಸನ್ ವರ್ತ್ ಅಪಾರ್ಟ್​ಮೆಂಟ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂಬಳಗೂಡು ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. 

ಸೌಜನ್ಯ ಅವರು ಕೊಡಗು ಜಿಲ್ಲೆಯ ಕುಶಾಲನಗರದ ಮೂಲದವರಾಗಿದ್ದು, ಹಲವಾರು ಧಾರಾವಾಹಿ ಹಾಗೂ ಚೌಕಟ್ಟು, ಫನ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್​ನೋಟ್ ಬರೆದಿರುವ ಸೌಜನ್ಯ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ. ನನ್ನನ್ನು ಕ್ಷಮಿಸಿ ಅಪ್ಪ-ಅಮ್ಮ ಅಂತ ಡೆತ್ ನೋಟ್​ನಲ್ಲಿ ಕ್ಷಮೆ ಕೇಳಿದ್ದಾರೆ. ಇನ್ನು ಸೌಜನ್ಯ ಖಿನ್ನಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

Actress Soujanya committed suicide, Actress Soujanya Death note, ಕಿರುತೆರೆ ನಟಿ ಸೌಜನ್ಯ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ, Soujanya commits sucicide, tv actress Soujanya death, Soujanya commits suicide by hanging, Soujanya ends life by hanging, ಕನ್ನಡ ಕಿರುತೆರೆ ನಟಿ ಸೌಜನ್ಯ, ನಟಿ ಸೌಜನ್ಯ ಆತ್ಮಹತ್ಯೆ, ಸೌಜನ್ಯ ಆತ್ಮಹತ್ಯೆಗೆ ಕಾರಣ, ನಟಿ ಸೌಜನ್ಯ ಬಾಯ್‌ಫ್ರೆಂಡ್, ಸೌಜನ್ಯ ಸಿನಿಮಾಗಳು, Sandalwood Up coming actress Soujanya suicide here is a death note copy ae
ಸೌಜನ್ಯ ಅವರು ಬರೆದಿರುವ ಡೆತ್ ನೋಟ್​


ಮೂರು ದಿನದ ಹಿಂದೆಯೇ ಡೆತ್ ನೋಟ್ ಬರೆದಿಟ್ಟಿದ್ದ ಸೌಜನ್ಯ, ಅವರು ಸಾಯಲು ಇಷ್ಟವಿಲ್ಲದಿದ್ದರೂ ಆತ್ಮಹತ್ಯೆ ಮಾಡಿಕೊಂಡಿರೋ ರೀತಿ ಇದೆ ಅನ್ನೋದು ಡೆತ್​ನೋಟ್​ನಿಂದ ತಿಳಿಯುತ್ತಿದೆ ಎನ್ನಲಾಗಿದೆ. ಅಲ್ಲದೆ ತಮ್ಮ ಮಾನಸಿಕ ಆರೋಗ್ಯ ಅಷ್ಟಾಗಿ ಸರಿಯಾಗಿಲ್ಲ ಎಂದೂ ಮರಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪದೇ ಪದೇ ಪೋಷಕರು ಹಾಗೂ ಅಣ್ಣನ ಬಳಿ ಕ್ಷಮೆ ಕೇಳಿದ್ದು, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಅಪ್ಪನಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: RIP Jayashree Ramaiah: ಅಮ್ಮನಿಗೆ ಮದುವೆ ಮಾಡಿಸುವ ಪ್ರಯತ್ನದಲ್ಲಿದ್ದರಂತೆ ನಟಿ ಜಯಶ್ರೀ ರಾಮಯ್ಯ..!

ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ

ಬಿಗ್​ ಬಾಸ್ ಸೀಸನ್ 3ರಲ್ಲಿ ಭಾಗವಹಿಸಿದ್ದ ನಟಿ ಜಯಶ್ರೀ ರಾಮಯ್ಯ ಅವರು ನೇಣಿಗೆ ಶರಣಾಗಿದ್ದು ಗೊತ್ತೇ ಇದೆ.. ಕನ್ನಡ್ ಗೊತ್ತಿಲ್ಲ, ಉಪ್ಪು ಹುಳಿ ಖಾರ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಜಯಶ್ರೀ ರಾಮಯ್ಯ ಮಾಗಡಿ ರಸ್ತೆಯಲ್ಲಿರುವ ಗೊಲ್ಲರಹಟ್ಟಿಯಲ್ಲಿರುವ ಪ್ರಗತಿ ಬಡಾವಣೆಯಲ್ಲಿರುವ ಸಂಧ್ಯಾ ಕಿರಣ ವೃದ್ಧಾಶ್ರಮದಲ್ಲಿ ಕಳೆದ ವರ್ಷ ಜನವರಿಯಲ್ಲಿ ನೇಣಿಗೆ ಶರಣಾಗಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ಅವರ ದೇಹ ಮತ್ತೆಯಾಗಿತ್ತು. ಮಾಡಲು ಕೆಲಸ ಸಿಗದೆ ಖಿನ್ನತೆಯಿಂದ ಬಳಲುತ್ತಿದ್ದ ಈ ನಟಿಯ ಅಂತ್ಯ ನಿಜಕ್ಕೂ ದುರಂತವಾಗಿತ್ತು. ಅದಕ್ಕೂ ಮೊದಲು ಜಯಶ್ರೀ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು.
Published by:Anitha E
First published: