ಸ್ಯಾಂಡಲ್‍ವುಡ್‍ನಲ್ಲಿ ಯುಗಾದಿ ಸಂಭ್ರಮ! ಹೊಸ ವರ್ಷಕ್ಕೆ ಹೊಚ್ಚ ಹೊಸ ಸಿನಿಮಾಗಳ ಸಡಗರ

ಯುಗಾದಿ ಹಬ್ಬದಂದೇ ತಮ್ಮ ಸಿನಿಮಾದ ಹೊಸ ಅಪ್‍ಡೇಟ್ ಕೊಡಬೇಕು ಅಂತ ಚಿತ್ರತಂಡಗಳೂ ಕಾತರದಿಂದ ಕಾಯುತ್ತಿರುತ್ತವೆ. ಈ ಬಾರಿಯ ಯುಗಾದಿ ಹಬ್ಬದಲ್ಲೂ ಹಲವಾರು ಚಿತ್ರತಂಡಗಳು ಹೊಸ ಹೊಸ ಪೋಸ್ಟರ್‍ಗಳು, ಟೀಸರ್‍ಗಳು ಹಾಗೂ ಹಾಡುಗಳನ್ನು ರಿಲೀಸ್ ಮಾಡಿವೆ.

ಸಿನಿಮಾ

ಸಿನಿಮಾ

  • Share this:
ವರ್ಷದ ಮೊದಲ ಹಬ್ಬ ಯುಗಾದಿ ಬಂದರೆ ಸಾಕು ನಾಡಿನೆಲ್ಲೆಡೆ ಹೊಸ ಸಂವತ್ಸರದ, ಹೊಸ ಉತ್ಸಾಹ ಮೂಡುತ್ತದೆ. ಚಿತ್ರರಂಗವೂ ಇದರಿಂದ ಹೊರತಾಗಿಲ್ಲ. ಯುಗಾದಿ ಅಂದರೆ ಚಿತ್ರತಂಡಗಳಿಗೆ ಮಾತ್ರವಲ್ಲ ಸಿನಿಮಾ ಪ್ರೇಮಿಗಳಿಗೆ, ಅಭಿಮಾನಿಗಳಿಗೆ ಹೊಸತನ ನೀಡುವ ಹಬ್ಬ. ಈ ಯುಗಾದಿಯಲ್ಲೂ ಹಲವು ಸಿನಿಮಾ ಟೀಮ್‍ಗಳು ಪೋಸ್ಟರ್, ಟೀಸರ್ ಹಾಡುಗಳನ್ನು ರಿಲೀಸ್ ಮಾಡಿ ಸಂಭ್ರಮಿಸಿವೆ. ಹಬ್ಬದ ಸಡಗರವನ್ನು ದುಪ್ಪಟ್ಟಾಗಿಸಿವೆ.

ಸಿನಿಮಾಗಳಲ್ಲಿ ಹಾಗೂ ಸಿನಿಮಾಗಳಿಗೆ ಯುಗಾದಿ ಹಬ್ಬ ತುಂಬಾ ವಿಶೇಷ. ಹೀಗಾಗಿಯೇ ಯುಗಾದಿ ಹಬ್ಬದ ಕುರಿತ ಹಾಡುಗಳು, ಸೀನ್‍ಗಳು ಸಿನಿಮಾಗಳಲ್ಲಿ ಹೇರಳವಾಗಿವೆ. ಹಾಗೇ ಯುಗಾದಿ ಹಬ್ಬದಂದೇ ತಮ್ಮ ಸಿನಿಮಾದ ಹೊಸ ಅಪ್‍ಡೇಟ್ ಕೊಡಬೇಕು ಅಂತ ಚಿತ್ರತಂಡಗಳೂ ಕಾತರದಿಂದ ಕಾಯುತ್ತಿರುತ್ತವೆ. ಈ ಬಾರಿಯ ಯುಗಾದಿ ಹಬ್ಬದಲ್ಲೂ ಹಲವಾರು ಚಿತ್ರತಂಡಗಳು ಹೊಸ ಹೊಸ ಪೋಸ್ಟರ್‍ಗಳು, ಟೀಸರ್‍ಗಳು ಹಾಗೂ ಹಾಡುಗಳನ್ನು ರಿಲೀಸ್ ಮಾಡಿವೆ.

ಲವ್ ಮಾಕ್‍ಟೇಲ್ ಮೂಲಕ ಮನೆಮಾತಾದ ಡಾರ್ಲಿಂಗ್ ಕೃಷ್ಣ ಹಾಗೂ ರಾಬರ್ಟ್ ಸಿನಿಮಾದಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ನರ್ಸ್ ಪಾತ್ರದಲ್ಲಿ ಮಿಂಚಿದ್ದ ಸೋನಲ್ ಮೊಂಟೆರೋ ನಟಿಸಿರುವ ಶುಗರ್ ಫ್ಯಾಕ್ಟರಿ ಚಿತ್ರತಂಡ ಯುಗಾದಿ ಶುಭಾಶಯಗಳನ್ನು ಹೇಳುತ್ತಾ ಹೊಚ್ಚ ಹೊಸ ಪೋಸ್ಟರ್ ರಿಲೀಸ್ ಮಾಡಿದೆ.ದೊಡ್ಮನೆ ಕುಡಿ ಈಗಾಗಲೇ ಸಿದ್ಧಾರ್ಥ, ರನ್ ಆಂಟನಿ ರನ್ ಚಿತ್ರಗಳಲ್ಲಿ ನಟಿಸಿರುವ ವಿನಯ್ ರಾಜ್‍ಕುಮಾರ್ ಅವರ ಗ್ರಾಮಾಯಣ ಸದ್ಯ ರಿಲೀಸ್‍ಗೆ ರೆಡಿಯಿದೆ. ಅದರ ಬೆನ್ನಲ್ಲೇ ಈ ಯುಗಾದಿ ಹಬ್ಬದಂದು ಅವರ ಹೊಸ ಸಿನಿಮಾ ಪೆಪೆ ಪೋಸ್ಟರ್ ಕೂಡ ಲಾಂಚ್ ಆಗಿದೆ.ಬುಲ್‍ಬುಲ್, ಒಡೆಯ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಎಂಡಿ ಶ್ರೀಧರ್ ಆಕ್ಷನ್ ಕಟ್ ಹೇಳುತ್ತಿರುವ ಹೊಸ ಸಿನಿಮಾ ಜಂಬೂ ಸರ್ಕಸ್ ಪೋಸ್ಟರ್​ಗಳನ್ನೂ ಸಹ ಇಂದೇ ಲಾಂಚ್ ಮಾಡಲಾಗಿದೆ.

ಇನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹರಿಪ್ರಿಯಾ ಕಾಂಬಿನೇಷನ್‍ನಲ್ಲಿ ಹೊಸ ಸಿನಿಮಾದ ಹೊಚ್ಚ ಹೊಸ ಪೋಸ್ಟರ್ ಅನ್ನೂ ರಿಲೀಸ್ ಮಾಡಲಾಗಿದೆ. ಕೆ. ಮಾದೇಶ್ ನಿರ್ದೇಶಿಸಲಿರುವ ಈ ಚಿತ್ರಕ್ಕೆ ಲಗಾಮ್ ಎಂದು ಶೀರ್ಷಿಕೆ ಇಡಲಾಗಿದೆ.ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಆಶಿಕಾ ರಂಗನಾಥ್ ನಟಿಸುತ್ತಿರುವ ಮದಗಜ ಚಿತ್ರದ ಯುಗಾದಿ ಹಬ್ಬದ ವಿಶೇಷ ಪೋಸ್ಟರ್‍ಅನ್ನೂ ರಿಲೀಸ್ ಮಾಡಲಾಗಿದೆ.ಹಾಗೇ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸ್ಪೆಷಲ್ ಸ್ಟಾರ್ ಡಾಲಿ ಧನಂಜಯ ನಿರ್ಮಿಸುತ್ತಿರುವ ಬಡವ ರಾಸ್ಕಲ್ ಚಿತ್ರದ ಹೊಸ ಪೋಸ್ಟರ್‍ಅನ್ನೂ ಯುಗಾದಿ ವಿಶೇಷವಾಗಿ ಇಂದೇ ಲಾಂಚ್ ಮಾಡಲಾಗಿದೆ.ಹರಿ ಸಂತೋಷ್ ನಿರ್ದೇಶಿಸುತ್ತಿರುವ ಬಜಾರ್ ಹುಡುಗ ಧನವೀರ್ ಹಾಗೂ ಕಿಸ್ ಬೆಡಗಿ ಶ್ರೀಲೀಲಾ ನಟಿಸುತ್ತಿರುವ ಬೈಟು ಲವ್ ಚಿತ್ರದ ಪೋಸ್ಟರ್‍ಅನ್ನೂ ಚಿತ್ರತಂಡ ಯುಗಾದಿ ಹಬ್ಬದ ಸಂಭ್ರಮದಲ್ಲಿ ಇಂದೇ ಲಾಂಚ್ ಮಾಡಿದೆ.ಜೊತೆಗೆ ಯುವರಾಜ ನಿಖಿಲ್ ಕುಮಾರಸ್ವಾಮಿಯವರು ನಟಿಸುತ್ತಿರುವ ರೈಡರ್, ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅವರ ಬ್ಯಾಡ್ ಮ್ಯಾನರ್ಸ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಅಬ್ಬರ... ಹೀಗೆ ಹಲವಾರು ಸ್ಯಾಂಡಲ್‍ವುಡ್ ಸಿನಿಮಾಗಳ ಹೊಸ ಹೊಸ ಪೋಸ್ಟರ್‍ಗಳು ಈ ಬಾರಿಯ ಉಗಾದಿ ಹಬ್ಬದಂದು ಅಭಿಮಾನಿಗಳಿಗೆ ಹಬ್ಬದ ಸಂಭ್ರಮವನ್ನು ದ್ವಿಗುಣಗೊಳಿಸಿವೆ.
Published by:Harshith AS
First published: