HOME » NEWS » Entertainment » SANDALWOOD TRIANGLE LOVE STORY MOVIE MAHISHASURA DIRECTED BY UDAY PRASANNA HG

ಮಹಿಷಾಸುರನ ತ್ರಿಕೋನ ಪ್ರೇಮಕಥೆ ತೆರೆಗೆ ಬರಲು ಸಿದ್ಧ!

ಮಹಿಷಾಸುರ, ಒಂದು ತ್ರಿಕೋನ ಪ್ರೇಮಕಥೆ. ನಿಜ ಜೀವನದಲ್ಲಿ ನಡೆದ ಘಟನೆಗಳನ್ನು ಆಧರಿಸಿ ಮಹಿಷಾಸುರ ಚಿತ್ರಕ್ಕೆ ಉದಯ್ ಪ್ರಸನ್ನ ಆಕ್ಷನ್ ಕಟ್ ಹೇಳಿದ್ದಾರೆ. ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಹಳ್ಳಿ ರಾಜಕೀಯ ಸುತ್ತ ಸುತ್ತುವ ಮಹಿಷಾಸುರ ಚಿತ್ರದಲ್ಲಿ ಅರ್ಜುನ್, ಬಿಂದುಶ್ರೀ, ಮಂಜು, ರಘು ಪಾಂಡೇಶ್ವರ, ರಾಕ್​ಲೈನ್​​ ಸುಧಾಕರ್, ಮಾಸ್ಟರ್ ತುಷಾರ್, ಮಾಸ್ಟರ್ ಸುಜಿತ್, ರವಿಚಂದ್ರ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದಾರೆ.

news18-kannada
Updated:September 7, 2020, 8:18 PM IST
ಮಹಿಷಾಸುರನ ತ್ರಿಕೋನ ಪ್ರೇಮಕಥೆ ತೆರೆಗೆ ಬರಲು ಸಿದ್ಧ!
ಬಿಂದುಶ್ರೀ
  • Share this:
ನೈಜ ಘಟನೆ ಆಧಾರಿತ ಅಥವಾ ಪ್ರೇರಿತ ಸಿನಿಮಾಗಳಿಗೇನೂ ಯಾವ ಚಿತ್ರರಂಗದಲ್ಲೂ ಕೊರತೆ ಇಲ್ಲ. ಅದರಲ್ಲಂತೂ ಇತ್ತೀಚಿನ ದಿನಗಳಲ್ಲಿ ರಿಯಲ್ ಇನ್ಸಿಡೆಂಟ್ ಬೇಸ್ಡ್​​​​​​ ಅಥವಾ ಪ್ರೇರಿತ ಸಿನಿಮಾಗಳು ಹೆಚ್ಚಾಗುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ಮಹಿಷಾಸುರ.

ಮಹಿಷಾಸುರ, ಒಂದು ತ್ರಿಕೋನ ಪ್ರೇಮಕಥೆ. ನಿಜ ಜೀವನದಲ್ಲಿ ನಡೆದ ಘಟನೆಗಳನ್ನು ಆಧರಿಸಿ ಮಹಿಷಾಸುರ ಚಿತ್ರಕ್ಕೆ ಉದಯ್ ಪ್ರಸನ್ನ ಆಕ್ಷನ್ ಕಟ್ ಹೇಳಿದ್ದಾರೆ. ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಹಳ್ಳಿ ರಾಜಕೀಯ ಸುತ್ತ ಸುತ್ತುವ ಮಹಿಷಾಸುರ ಚಿತ್ರದಲ್ಲಿ ಅರ್ಜುನ್, ಬಿಂದುಶ್ರೀ, ಮಂಜು, ರಘು ಪಾಂಡೇಶ್ವರ, ರಾಕ್​ಲೈನ್​​ ಸುಧಾಕರ್, ಮಾಸ್ಟರ್ ತುಷಾರ್, ಮಾಸ್ಟರ್ ಸುಜಿತ್, ರವಿಚಂದ್ರ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದಾರೆ.

ಮಳೇಕೋಟೆ ಮತ್ತು ಮೈತ್ರಿ ಪ್ರೊಡಕ್ಷನ್ ಸಂಸ್ಥೆ ಲಾಂಛನದಡಿ ತಯಾರಾಗಿರುವ ಮಹಿಷಾಸುರ ಚಿತ್ರ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಈಗಾಗಲೇ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು, ಖಡಕ್ ಡೈಲಾಗ್ಸ್ ಹಾಗೂ ಖತರ್ನಾಕ್ ಫೈಟ್ಸ್​ಗಳಿಂದ ಕೂಡಿದೆ. ಇನ್ನು ಈಗಾಗಲೇ ಸೆನ್ಸಾರ್ ಮಂಡಳಿ ಕದ ತಟ್ಟಿರುವ ಮಹಿಷಾಸುರನಿಗೆ ಸೆನ್ಸಾರ್ ಮಂಡಳಿ ಯು /ಎ ಪ್ರಮಾಣ ಪತ್ರ ನೀಡಿದೆ.

ಬಿಂದುಶ್ರೀ

ಲೀಲಾವತಿ ಸುರೇಶ್ ಕುಮಾರ್, ಪ್ರೇಮಾ ಚಂದ್ರಯ್ಯ, ನಾಗಸಂದ್ರ, ಮೈತ್ರಿ ಮಂಜುನಾಥ್ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಹಿಷಾಸುರನಿಗೆ ಸುನಿಲ್ ಕೌಶಿಕ್, ಸಾಯಿಕಿರಣ್ ಸಂಗೀತ, ಕೃಷ್ಣ ಛಾಯಾಗ್ರಹಣ, ರಾಘವೇಂದ್ರ ವಿ. ಹಿನ್ನೆಲೆ ಸಂಗೀತ, ವೆಂಕಿ ಡಿವಿಡಿ ಸಂಕಲನ, ರಾಕಿ ರಮೇಶ್ ಸಾಹಸ, ಸುಜಿತ್ ಕಿಶೋರ್ ನೃತ್ಯ ನಿರ್ದೇಶನ, ವಿರಾಟ್ ರಾಜು ಸಂಭಾಷಣೆ ನೀಡಿದ್ದಾರೆ.

ಇನ್ನು ಲಾಕ್​ಡೌನ್​ ಸಂಪೂರ್ಣವಾಗಿ ಅನ್​​ಲಾಕ್​​ ಆಗಿ, ಥಿಯೇಟರ್​​ಗಳು ಹಾಗೂ ಮಲ್ಟಿಫ್ಲೆಕ್ಸ್​ಗಳು ಪ್ರದರ್ಶನ ಮತ್ತೆ ಪ್ರಾರಂಭಿಸುತ್ತಲೇ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಮಹಿಷಾಸುರ ಚಿತ್ರತಂಡದ್ದು.
Published by: Harshith AS
First published: September 7, 2020, 8:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories