ತೆಲುಗು ಚಿತ್ರರಂಗದ ಮತ್ತೊಬ್ಬ ಹಿರಿಯ ನಟಿ ಮೃತಪಟ್ಟಿದ್ದಾರೆ. ಸೌತ್ ಸಿನಿಮಾಗಳಲ್ಲಿ ದೊಡ್ಡಮಟ್ಟದಲ್ಲಿ ಮಿಂಚಿದ್ದ ಹಿರಿಯ ನಟಿ ಜಮುನಾ (Jamuna) ನಿಧನರಾಗಿದ್ದಾರೆ (Death). ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ತೆಲುಗು, ಕನ್ನಡ ಸೇರಿ ಬಹಳಷ್ಟು ಸಿನಿಮಾಗಳಲ್ಲಿ (Cinema) ನಟಿಸಿ ಪ್ರೇಕ್ಷಕರ ಮನಸು ಗೆದ್ದಿದ್ದರು ಜಮುನಾ. ಜನವರಿ 27 ರ ಶುಕ್ರವಾರದ ಮುಂಜಾನೆ ಜಮುನಾ ನಿಧನರಾಗಿದ್ದಾರೆ. ಅವರ ಕುಟುಂಬವು ಅವರ ನಿಧನದ ಸುದ್ದಿಯನ್ನು ದೃಢಪಡಿಸಿದೆ. ಜಮುನಾ ಅವರು ಹಲವು ವರ್ಷಗಳಿಂದ ಹಲವು ಆರೋಗ್ಯ ಸಮಸ್ಯೆಗಳಿಂದ (Health Problem) ಬಳಲುತ್ತಿದ್ದರು. ಅವರು ಶುಕ್ರವಾರ ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಜಮುನಾ ಅವರನ್ನು ದಕ್ಷಿಣ ಭಾರತದ ಚಿತ್ರರಂಗದ ಅತ್ಯುತ್ತಮ ನಟಿಯರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.
ಅವರು ನೂರಾರು ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಟಾಲಿವುಡ್ ದಿಗ್ಗಜರಾದ Sr NTR, ANR, SV ರಂಗರಾವ್, ಕೃಷ್ಣ ಮತ್ತು ಇತರರೊಂದಿಗೆ ನಟಿಸಿದ್ದಾರೆ. ಅವರು ವಿಶೇಷವಾಗಿ ಸತ್ಯಭಾಮಾ ಪಾತ್ರವನ್ನು ಮಾಡಿ ಅದಕ್ಕಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟರು.
ಅವರು ತೆಲುಗು ಕುಟುಂಬದಲ್ಲಿ ಜನಿಸಿದರು. ಅವರ ತಂದೆ ನಿಪ್ಪಾಣಿ ಶ್ರೀನಿವಾಸ ರಾವ್ ಮತ್ತು ತಾಯಿ ಕೌಸಲ್ಯದೇವಿ. ಜಮುನಾ ಯಶಸ್ವಿ ರಾಜಕಾರಣಿಯೂ ಆಗಿದ್ದರು. ಅವರು 1989 ರಲ್ಲಿ ರಾಜಮಹೇಂದ್ರವರಂನಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದರು.
ಕನ್ನಡದಲ್ಲಿ ಹಲವು ಸಿನಿಮಾ ಮಾಡಿದ್ದ ನಟಿ
ಸ್ಯಾಂಡಲ್ವುಡ್ನಲ್ಲಿ ಸಾಕ್ಷಾತ್ಕಾರ ಸಿನಿಮಾಗಾಗಿ ಗುರುತಿಸಲ್ಪಡುವ ನಟಿ ಕನ್ನಡದಲ್ಲಿ ಹಲವಾರು ಸಿನಿಮಾ ಮಾಡಿ ಪ್ರೇಕ್ಷಕರ ಮನಸು ಗೆದ್ದಿದ್ದಾರೆ. ಆದರ್ಶ ಸತಿ (1955), ತೆನಾಲಿ ರಾಮಕೃಷ್ಣ (1956), ಭೂಕೈಲಾಸ (1956), ರತ್ನಗಿರಿ ರಹಸ್ಯ (1957), ಸಾಕ್ಷಾತ್ಕಾರ (1971)
ಮಾಯೆಯ ಮುಸುಕು (1980), ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ (1980), ಪೊಲೀಸ್ ಮತ್ತು ದಾದಾ (1991) ಅವರು ನಟಿಸಿದ ಕನ್ನಡ ಸಿನಿಮಾಗಳು.
ತೆಲುಗು 88, ತಮಿಳಿನಲ್ಲಿ 27, ಕನ್ನಡದಲ್ಲಿ 8, ಹಿಂದಿಯಲ್ಲಿ 11 ಸಿನಿಮಾ ಸೇರಿ ಒಟ್ಟು 134 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ