ಕನ್ನಡದಲ್ಲಿ ವಿಭಿನ್ನ ಪ್ರಯತ್ನದ ಸಿನಿಮಾವೊಂದು ಕೆಲ ವರ್ಷಗಳ ಹಿಂದೆ ತೆರೆಕಂಡು ಸೂಪರ್ ಹಿಟ್ ಅಗಿತ್ತು. ಹೌದು ನಾವು ಮಾತನಾಡುತ್ತಿರುವುದು ಸ್ಯಾಂಡಲ್ವುಡ್ ನಲ್ಲಿ (Sandalwood) ತೆರೆಕಂಡ ‘ತಿಥಿ’ (Thithi) ಚಿತ್ರದ ಕುರಿತು. ಎಲ್ಲಾ ಕಲಾವಿದರುಗಳೂ ಸಹ ಯಾವುದೇ ಹಿನ್ನಲೆ ಇಲ್ಲದೇ ಬಂದು ಚಿತ್ರದಲ್ಲಿ ನಟಿಸಿ ಮೆಚ್ಚುಗೆ ಪಡೆದುಕೊಂಡಿದ್ದರು. ಚಿತ್ರದ ನಟಿ ಪೂಜಾ (Pooja) ಅವರ ನಟನೆಗೂ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಅದಾದ ಬಳಿಕ ಒಂದು ಸಿನಿಮಾದಲ್ಲಿ ನಟಿಸಿದ ಅವರು ಸದ್ಯ ಚಿತ್ರಂಗದಿಂದ ದೂರವಿದ್ದಾರೆ. ಆದರೆ ಇದೀಗ ಪೂಜಾ ಅವರು ಸದ್ದಿಲ್ಲದ್ದೇ ಎಂಗೇಜ್ ಮೆಂಟ್ (Engagement) ಆಗಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social media) ಹಂಚಿಕೊಂಡಿದ್ದಾರೆ. ನಟಿ ಪೂಜಾ ಅವರು ಸಾಫ್ಟ್ ವೇರ್ ಇಂಜಿನಿಯರ್ ಪ್ರೇಮ್ ಎಂಬುವವರ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.
ಸದ್ದಿಲ್ಲದೇ ಎಂಗೇಜ್ ಆದ ಪೂಜಾ:
ಹೌದು, ನಟಿ ಪೂಜಾ ಯಾವುದೇ ಮಾಹಿತಿ ಸಹ ಹೊರಹಾಕದೇ ಇದೀಗ ಎಂಗೆಜ್ ಮೆಂಟ್ ಆಗಿದ್ದಾರೆ. ಆದರೆ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ತಿಥಿ ಚಿತ್ರದಲ್ಲಿ ಕಾವೇರಿ ಪಾತ್ರ ಮಾಡಿದ್ದ ಪೂಜಾ ಎಸ್.ಎಂ ಅವರು ಇಂದು ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಪ್ರೇಮ್ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಡಿಸೆಂಬರ್ 3 ಮತ್ತು 4ರಂದು ನಟಿ ಪೂಜಾ ಮತ್ತು ಪ್ರೇಮ್ ಅವರ ವಿವಾಹ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಪೂಜಾ ಅವರಿಗೆ ತಿಥಿ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯಪ್ರಶಸ್ತಿ ಸಿಕ್ಕಿತ್ತು. ಅವರು ‘ದಾರಿ ಯಾವುದಯ್ಯ ವೈಕುಂಠಕೆ’ ಸೇರಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಪೂಜಾ ನಿಶ್ಚಿತಾರ್ಥದ ಫೋಟೋ
ತಿಥಿ ಚಿತ್ರದ ನಂತರ ಏನು ಮಾಡಿದರು ಪೂಜಾ?:
ಹೌದು, ತಿಥಿ ಚಿತ್ರದಲ್ಲಿ ನಾಯಕಿಯಯಾಗಿ ನಟಿಸಿದ್ದ ಪೂಜಾ ಅವರು, ನಂತರ ನಿಧಾನವಾಗಿ ಚಿತ್ರರಂಗದಿಂದ ದೂರವಾದರು. ತಿಥಿ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯಪ್ರಶಸ್ತಿ ಸಿಕ್ಕಿತ್ತು. ಇದಾದ ಬಳಿಕ ಅವರು ದಾರಿ ಯಾವುದಯ್ಯ ವೈಕುಂಠಕೆ ಮತ್ತು ನೀವು ಕರೆ ಮಾಡಿದ ಚಂದದಾರರು ಬಿಜಿಯಾಗಿದ್ದಾರೆ ಎಂಬ ಚಿತ್ರಗಳಲ್ಲಿ ನಟಿಸಿದರು. ನಂತರ ಯಾವುದೇ ಅವಕಾಶಗಳು ಸರಿಯಾಗಿ ಸಿಗದ ಕಾರಣ ಚಿತ್ರರಂಗದಿಂದ ದೂರ ಸರಿದು ಓದಿನ ಕಡೆ ಗಮನ ಹರಿಸಿದರು ಎನ್ನಲಾಗಿದೆ.
ಇನ್ನು, ಚಿತ್ರಗಳು ಸರಿಯಾಗ ಸಿಗದ ಕಾರಣ ಪೂಜಾ ಓದಿನತ್ತ ಸರಿದರು. ಪುಜಾ ಅವರು MCA ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸದ್ಯಕ್ಕೆ ಪ್ರೈವೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಪೂಜಾ ಅವರು ಮತ್ತೆ ಸ್ಯಾಂಡಲ್ವುಡ್ಗೆ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಉತ್ತಮ ಅವಕಾಶಗಳು ಸಿಕ್ಕಲ್ಲಿ ಖಂಡಿತವಾಗಿಯೂ ಮತ್ತೆ ಬಣ್ಣದ ಲೋಕಕ್ಕೆ ಬರುವುದಾಗಿ ಒಮ್ಮೆ ಸಂದರ್ಶನವೊಂದರಲ್ಲಿ ಪೂಜಾ ಹೇಳಿಕೊಂಡಿದ್ದರು.
ಇನ್ನು, ತಿಥಿ ಚಿತ್ರದ ಕುರಿತು ಹೊಸದಾಗಿ ಹೇಳುವುದೇನಿಲ್ಲ. ಚಿತ್ರವು 2016ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಸಹ ಆಗಿತ್ತು. ಎಲ್ಲರ ಮೆಚ್ಚುಗೆ ಈ ಸಿನಿಮಾ ಪಾತ್ರವಾಗಿತ್ತು. ರಾಮ್ ರೆಡ್ಡಿ ಅವರು ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ಇದರಲ್ಲಿ ಅಭಿನಯಿಸಿದ ಬಹುತೇಕ ನಟರು ಯಅವುದೇ ಕಲಾ ಹಿನ್ನಲೆ ಇ್ಲಲದೇ ಬಂದವರು ಎನ್ನುವುದು ಇನ್ನೂ ವಿಶೇಷ. ಮಂಡ್ಯ ನಗರದ ನಿವಾಸಿ ಈರೇಗೌಡರು ಮತ್ತು ರಾಮ್ ರೆಡ್ಡಿಯವರ ಚಿತ್ರಕಥೆ ಮಾಡಿದ್ದರು|ಈ ಚಿತ್ರವು ರಾಷ್ಟ್ರೀಯ ಪ್ರಶಸ್ತಿ ಮತ್ತು ಅಂತಾರಾಷ್ಟ್ರೀಯ ಚಲಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದಿದೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ