Srujan Lokesh Direction: ನಿರ್ದೇಶನಕ್ಕೆ ಇಳಿದ ಟಾಕಿಂಗ್ ಸ್ಟಾರ್ ಸೃಜನ ಲೋಕೇಶ್, ಮೊದಲ ಚಿತ್ರ ಯಾವುದು?

ಹಿರಿಯ ನಿರ್ಮಾಪಕರಾದ "ಸಂದೇಶ ನಾಗರಾಜ್" ಅವರ ಆಶೀರ್ವಾದದೊಂದಿಗೆ ಹೊಸ ಪ್ರಯತ್ನಕ್ಕೆ ಶುಭಾರಂಭ. "ಲೋಕೇಶ್ ಪ್ರೊಡಕ್ಷನ್ಸ್" ಹಾಗೂ "ಸಂದೇಶ ಪ್ರೊಡಕ್ಷನ್ಸ್" ಸಂಸ್ಥೆ ಅಡಿಯಲ್ಲಿ ಹೊಸ ಚಿತ್ರ ನಿರ್ಮಾಣ, ಮತ್ತಷ್ಟು ವಿವರಗಳು ಅತಿ ಶೀಘ್ರದಲ್ಲಿ. ನಿರ್ದೇಶಕನಾಗಿ ನನ್ನ ಮೊದಲ ಪ್ರಯತ್ನ ನಿಮ್ಮ ಹಾರೈಕೆ ಸದಾ ನಮ್ಮ ಮೇಲೆ ಇರಲಿ.

ಸೃಜನ್ ಲೋಕೇಶ್​

ಸೃಜನ್ ಲೋಕೇಶ್​

 • Share this:
  ಸ್ಯಾಂಡಲ್‍ವುಡ್ (Sandalwood) ನಟ (Hero) ಸೃಜನ್ ಲೋಕೇಶ್ (Srujan Lokesh) ಒಬ್ಬ ನಟ, ದೂರದರ್ಶನ ನಿರೂಪಕ, ರೇಡಿಯೋ ನಿರೂಪಕ (Anchor) ಮತ್ತು ನಿರ್ಮಾಪಕ. ಪ್ರಸಿದ್ಧ ರಂಗಭೂಮಿ ಕಲಾವಿದ ಮತ್ತು ಚಲನಚಿತ್ರ ನಟ ಲೋಕೇಶ್, ನಟಿ ಗಿರೀಜಾ ಲೋಕೇಶ್ ಅವರ ಪುತ್ರ. ಮಜಾ ಟಾಕೀಸ್ ಮೂಲಕ ಇನ್ನು ಹೆಚ್ಚು ಜನಪ್ರಿಯ ಗಳಿಸಿದ್ದವರು. ಸದ್ಯ ಕಲರ್ಸ್ ಕನ್ನಡದಲ್ಲಿ ರಾಜಾ-ರಾಣಿ ಸೀಸನ್ 2 ಸೀಸನ್ ಜಡ್ಜ್ ಆಗಿದ್ದಾರೆ. ಗಿಚ್ಚಿ ಗಿಲಿ ಗಿಲಿ ಶೋಗೂ ಸ್ಪಲ್ಪ ದಿನ ಜಡ್ಜ್ ಆಗಿದ್ರು. ಲೋಕೇಶ್ ಪ್ರೊಡಕ್ಷನ್ಸ್ (Lokesh Production) ಅನ್ನು ಸೃಜನ್ ಲೋಕೇಶ್ ಮತ್ತು ಅವರ ತಾಯಿ ಗಿರಿಜಾ ಲೋಕೇಶ್ ಅವರು 2013 ರಲ್ಲಿ ಸ್ಥಾಪಿಸಿದರು. ಈಗ ಸೃಜನ ಲೋಕೇಶ್ ನಿರ್ದೇನದತ್ತ (Director) ಹೆಜ್ಜೆ ಹಾಕಿದ್ದಾರೆ.

  ಪ್ರೊಡಕ್ಷನ್ಸ್ ಹೌಸ್
  ಲೋಕೇಶ್ ಪ್ರೊಡಕ್ಷನ್ಸ್ ಅನ್ನು ಸೃಜನ್ ಲೋಕೇಶ್ ಮತ್ತು ಅವರ ತಾಯಿ ಗಿರಿಜಾ ಲೋಕೇಶ್ ಅವರು 2013 ರಲ್ಲಿ ಸ್ಥಾಪಿಸಿದರು. ಪ್ರೊಡಕ್ಷನ್ಸ್ ಹೌಸ್ ಚಾಲೆಂಜ್, ಚೋಟಾ ಚಾಂಪಿಯನ್ ಮತ್ತು ಕಾಸಿಗೆ ಟಾಸ್ ಸೇರಿದಂತೆ ದೂರದರ್ಶನದಲ್ಲಿ ಹಲವಾರು ಯಶಸ್ವಿ ರಿಯಾಲಿಟಿ ಶೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ. ಇಷ್ಟು ದಿನ ಪ್ರೊಡಕ್ಷನ್ ಹೌಸ್ ಮಾತ್ರ ಇತ್ತು, ಈಗ ನಿರ್ದೇಶನಕ್ಕೂ ಇಳಿದಿದ್ದಾರೆ.

  ನಿರ್ದೇಶಕನಾಗಿ ನನ್ನ ಮೊದಲ ಪ್ರಯತ್ನ
  ಹಿರಿಯ ನಿರ್ಮಾಪಕರಾದ "ಸಂದೇಶ ನಾಗರಾಜ್" ಅವರ ಆಶೀರ್ವಾದದೊಂದಿಗೆ ಹೊಸ ಪ್ರಯತ್ನಕ್ಕೆ ಶುಭಾರಂಭ. "ಲೋಕೇಶ್ ಪ್ರೊಡಕ್ಷನ್ಸ್" ಹಾಗೂ "ಸಂದೇಶ ಪ್ರೊಡಕ್ಷನ್ಸ್" ಸಂಸ್ಥೆ ಅಡಿಯಲ್ಲಿ ಹೊಸ ಚಿತ್ರ ನಿರ್ಮಾಣ, ಮತ್ತಷ್ಟು ವಿವರಗಳು ಅತಿ ಶೀಘ್ರದಲ್ಲಿ. ನಿರ್ದೇಶಕನಾಗಿ ನನ್ನ ಮೊದಲ ಪ್ರಯತ್ನ ನಿಮ್ಮ ಹಾರೈಕೆ ಸದಾ ನಮ್ಮ ಮೇಲೆ ಇರಲಿ ಎಂದು ಸೃಜನ್ ಲೋಕೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಶೇರ್ ಮಾಡಿದ್ದಾರೆ.

  ಇದನ್ನೂ ಓದಿ: Ismart Jodi: ಇದೇ ಭಾನುವಾರ ಇಸ್ಮಾರ್ಟ್ ಜೋಡಿ ಗ್ರ್ಯಾಂಡ್ ಫಿನಾಲೆ, ಯಾರಿಗೆ ವಿಜಯಮಾಲೆ? 

  ಯಾವುದು ಮೊದಲ ಚಿತ್ರ?
  ಸೃಜನ ಲೋಕೇಶ್ ಅವರ ಸದ್ಯ ತಾವು ನಿರ್ದೇಶನ ಮಾಡುತ್ತಿರುವುದರ ಬಗ್ಗೆ ಹೇಳಿದ್ದಾರೆ. ಯಾವ ಚಿತ್ರ, ಏನು ಅಂತ ಹೇಳಿಲ್ಲ. ಆದಷ್ಟು ಬೇಗ ಯಾವ ಚಿತ್ರ, ನಾಯಕ, ನಾಯಕಿ ಯಾರು ಅನ್ನುವುದರ ಬಗ್ಗೆ ತಿಳಿಸಲಿದ್ದಾರಂತೆ.


  ಸೃಜನ ಲೋಕೇಶ್ ಬಗ್ಗೆ ಮಾಹಿತಿ
  ಸೃಜನ್ ಲೋಕೇಶ್ ಅವರು ತಮ್ಮ ವೃತ್ತಿ ಜೀವನವನ್ನು 2002ರಲ್ಲಿ ನೀಲಾ ಮೇಘ ಶ್ಯಾಮ ಚಿತ್ರದ ಮೂಲಕ ಪ್ರಾರಂಭಿಸಿದರು. ರಾಧಿಕಾ ಕುಮಾರಸ್ವಾಮಿ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರವು ಬಾಕ್ಸ್ ಆಫೀಸ್‍ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ನಂತರ, ಸೃಜನ್ ಲೋಕೇಶ್ ಪೆÇರ್ಕಿ, ನವಗ್ರಹ, ಚಿಂಗಾರಿ, ಎದೆಗಾರಿಕೆ, ಅಂದರ ಬಾಹರ್, ಸ್ನೇಹಿತರು, ಐಪಿಸಿ ಸೆಕ್ಷನ್ 300 ಮುಂತಾದ ಹಲವಾರು ಚಿತ್ರಗಳಲ್ಲಿ ಪೆÇೀಷಕ ಪಾತ್ರಗಳು ಮತ್ತು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.

  ಇದನ್ನೂ ಓದಿ: Puttakkana Makkalu: 200 ಸಂಚಿಕೆಗಳ ಸಂಭ್ರಮದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಮುಂದಿನ ಟ್ವಿಸ್ಟ್ ಏನು?

  ಡ್ಯಾನ್ಸ್ ರಿಯಾಲಿಟಿ ಶೋ ಮತ್ತು ಹಲವಾರು ಇತರ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಅವರು ವಾತ್ಸಲ್ಯ ಮುಂತಾದ ಕೆಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮಜಾ ವಿಥ್ ಸೃಜಾ, ಸೃಜನ್ ಲೋಕೇಶ್ ಅವರು ನಡೆಸಿಕೊಟ್ಟ ಜನಪ್ರಿಯ ದೂರದರ್ಶನ ಕಾರ್ಯಕ್ರಮ. ಹನ್ನೊಂದು ವರ್ಷಗಳ ನಂತರ, 2013 ರಲ್ಲಿ, ಸೃಜನ್ ಲೋಕೇಶ್ ತಮ್ಮ ಎರಡನೇ ಚಿತ್ರ ಆನೆ ಪಟಾಕಿಗೆ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾರೆ.
  Published by:Savitha Savitha
  First published: