ಸ್ಯಾಂಡಲ್‌ವುಡ್ ಕಿಚ್ಚ ಸುದೀಪ್ ಆ ಒಂದು (Movie Unknown Facts) ಸಿನಿಮಾ ಮಾಡಬೇಕು ಅಂದುಕೊಂಡಿದ್ದರು. ರೆಬಲ್ ಸ್ಟಾರ್ ಅಂಬರೀಶ್ ಅವರ ಗೆಟಪ್ ಧರಿಸಿಕೊಂಡು ಫೋಟೋ ಶೂಟ್ ಕೂಡ ಮಾಡಿಸಿದ್ರು ಅನಿಸುತ್ತದೆ. ಒಂದಷ್ಟು ದೃಶ್ಯಗಳ (Kannada Movie Intresting Facts) ಚಿತ್ರೀಕರಣ ಕೂಡ ಆದಂತೆ ಇತ್ತು. ಆದರೆ ಆ ಸಿನಿಮಾ ಸೆಟ್ಟೇರಲೇ ಇಲ್ಲ. ಸಿನಿಮಾ ಶುರು ಆಗೋ ಮುಂಚೇನೆ ಚಿತ್ರ ಟೈಟಲ್ ವಿಚಾರದಲ್ಲಿ ಕಿರಿಕ್ ಆಗಿತ್ತು. ಇಬ್ಬರು ನಿರ್ಮಾಪಕರು (Sandalwood Film Updates) ಒಂದೇ ಟೈಟಲ್ ಇಟ್ಟುಕೊಂಡು ನಾನು ಸಿನಿಮಾ ಮಾಡ್ತಿನಿ ಅಂತಲೇ ಗುದ್ದಾಡಿದರು. ಆ ಸದ್ದು-ಗದ್ದಲದ ಮಧ್ಯ ಆ ಚಿತ್ರ ಟೇಕ್ ಆಫ್ ಆಗಲೇ ಇಲ್ಲ. ಆ ಚಿತ್ರದ ಒಂದಷ್ಟು ಫೋಟೋ ಮತ್ತು (New Movie Updates) ಒಂದಿಷ್ಟು ಕಥೆ ಇಲ್ಲಿದೆ ಓದಿ.
ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಅಂತ ಸಿನಿಮಾ ಎಲ್ಲರಿಗೂ ಸ್ಪೂರ್ತಿನೇ ಆಗಿತ್ತು. ಈ ಚಿತ್ರದ ಅಂಬರೀಶ್ ಹೇಳೋ ಕನ್ವರ್‌ಲಾಲ್ ಡೈಲಾಗ್ ಎಲ್ಲರಿಗೂ ಇಷ್ಟ ಆಗಿತ್ತು. ಚಿತ್ರದ ಕಥೆ ಕೂಡ ಎಲ್ಲರ ಮನದಲ್ಲಿ ಜಾಗ ಮಾಡಿಕೊಂಡಿತ್ತು.
ಕನ್ವರ್‌ಲಾಲ್ ಸಿನಿಮಾ ಟೇಕ್ ಆಫ್ ಆಗಲೇ ಇಲ್ವೇ ?
ಕನ್ನಡದ ಮಟ್ಟಿಗೆ ತುಂಬಾ ವಿಶೇಷ ಅನಿಸೋ ಅಂತ ಸಿನಿಮಾದ ಕಥೆ ಈಗಲೂ ಸ್ಪೂರ್ತಿನೇ ನೋಡಿ, ಅಂಬರೀಶ್ ಜನ್ಮದ ಅಂಗವಾಗಿ ಈಗಾಗಲೇ ಹೊಸ ಟಚ್‌ನೊಂದಿಗೆ ಈ ಚಿತ್ರ ರಿಲೀಸ್ ಕೂಡ ಆಗಿದೆ.
ಆದರೆ, 2010 ರ ಸಮಯದಲ್ಲಿ ಕಿಚ್ಚ ಸುದೀಪ್ ಒಂದು ಚಿತ್ರ ಒಪ್ಪಿದ್ದರು. ಆ ಚಿತ್ರಕ್ಕೆ ಒಂದಷ್ಟು ಪ್ಲಾನ್ ಕೂಡ ಮಾಡಿದ್ದರು. ಚಿತ್ರಕ್ಕೆ ಒಂದು ಸುಂದರವಾದ ಹೆಸರು ಕೂಡ ಇತ್ತು ಆ ಹೆಸರು "ಕನ್ವರ್‌ಲಾಲ್" ಅನ್ನೋದೇ ಆಗಿತ್ತು. ಈ ಒಂದು ಟೈಟಲ್‌ಗೆ ಸ್ಪೂರ್ತಿ ಆಗಿದ್ದು ಕೂಡ ಅಂಬರೀಶ್ ಅವರ ಅದೇ ಅಂತ ಸಿನಿಮಾನೇ ಆಗಿತ್ತು.
ಕನ್ವರ್‌ಲಾಲ್ ಚಿತ್ರದ ಫೋಟೋ ಶೂಟ್ ಆಗಿತ್ತಾ ?
ಈ ಚಿತ್ರದಲ್ಲಿ ಅಭಿನಯಿಸಬೇಕು ಅಂತಲೇ ಕಿಚ್ಚ ಸುದೀಪ್ ಕೂಡ ರೆಡಿ ಆಗಿದ್ದರು. ಫೋಟೋ ಶೂಟ್ ಕೂಡ ಆಗಿತ್ತು ಅನಿಸುತ್ತದೆ. ಹಾಗೆ ಈ ಚಿತ್ರವನ್ನ ನಿರ್ಮಾಪಕ ಹಾಗೂ ಕಿಚ್ಚ ಸುದೀಪ್ ಅವರ ಸ್ನೇಹಿತ ಶಂಕರ್ ಗೌಡ ನಿರ್ಮಿಸಲು ಮುಂದಾಗಿದ್ದರು.
ಆದರೆ ಈ ಸಿನಿಮಾದ ಟೈಟಲ್ ವಿಚಾರದಲ್ಲಿ ಕಿರಿಕ್ ಆಗಿತ್ತು. ಕನ್ನಡದ ಮತ್ತೊಬ್ಬ ನಿರ್ಮಾಪಕರಾದ ದಿನೇಶ್ ಗಾಂಧಿ ಕೂಡ ಟೈಟಲ್ ರಿಜಿಸ್ಟರ್ ಮಾಡಿಸಿದ್ದರು. ಕನ್ವರ್‌ಲಾಲ್ ಟೈಟಲ್ ನನ್ನದು ಅಂತಲೇ ದಿನೇಶ್ ಗಾಂಧಿ ಹೇಳಿದರು. ನಾನೇ ಸಿನಿಮಾ ಮಾಡುವೇ ಅಂತಲೇ ಹೇಳಿದ್ದರು.
ಕನ್ವರ್‌ಲಾಲ್ ಟೈಟಲ್ ಕಿರಿಕ್ ಆಗಿದ್ದು ಯಾಕೆ ?
ದಿನೇಶ್ ಗಾಂಧಿ ಅವರಿಗೆ ಕಿಚ್ಚನ ಡೇಟ್ಸ್ ಸಿಗಲಿಲ್ಲ. ಅತ್ತ ಶಂಕರ್ ಗೌಡ ಸುದೀಪ್ ಅವರನ್ನ ಹಾಕಿಕೊಂಡು ಕನ್ವರ್‌ಲಾಲ್ ಸಿನಿಮಾ ಮಾಡಲು ಮುಂದಾಗಿದ್ದರು.
ಈ ಒಂದು ಸ್ಥಿತಿಯಲ್ಲಿ ಕನ್ವರ್‌ಲಾಲ್ ಸಿನಿಮಾ ಟೇಕ್ ಆಫ್ ಆಗಲೇ ಇಲ್ಲ. ಶುರು ಆಗೋ ಮೊದಲೇ ಸಿನಿಮಾದ ಸದ್ದು ಅಡಗಿ ಹೋಯಿತು.
ಕನ್ವರ್‌ಲಾಲ್ ಸಿನಿಮಾಗೂ ಅಂತ ಚಿತ್ರಕ್ಕೂ ಲಿಂಕ್ ಇದಿಯಾ ?
ಕನ್ವರ್‌ಲಾಲ್ ಚಿತ್ರದಲ್ಲಿ ಹೊಸ ರೀತಿಯ ಕಥೆಯನ್ನ ಪ್ಲಾನ್ ಮಾಡಲಾಗಿತ್ತು. ಕನ್ವರ್‌ಲಾಲ್ ಅನ್ನೋ ಟೈಟಲ್ ಇದ್ದರೂ ಕೂಡ "ಅಂತ" ಸಿನಿಮಾಕ್ಕೂ ಈ ಚಿತ್ರಕ್ಕೂ ಎಲ್ಲೂ ಏನೂ ಲಿಂಕ್ ಇರಲಿಲ್ಲ. ಕನ್ವರ್‌ಲಾಲ್ ಸಿನಿಮಾ ಸ್ಟೈಲಿಶ್ ಆಗಿಯೇ ಬೆಳ್ಳಿ ಪರದೆ ಮೇಲೆ ಮೂಡಿ ಬರೋದಿತ್ತು.
ಇದನ್ನೂ ಓದಿ: Dhruva Sarja Movie: ಮಾರ್ಟಿನ್ ಚಿತ್ರದ ಬಗ್ಗೆ ಹೊರ ಬಿತ್ತು ಹೊಸ ಅಪ್‌ಡೇಟ್ಸ್
ಅದೆಲ್ಲ ಈಗ ಕೇವಲ ಒಂದು ಇಂಟ್ರಸ್ಟಿಂಗ್ ವಿಷಯವಾಗಿಯೇ ಉಳಿದಿದೆ. 13 ವರ್ಷದ ಬಳಿಕವೂ ಈ ಚಿತ್ರದ ಫೋಟೋಗಳು ಮತ್ತು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದು ಅಂಬರೀಶ್ ಅವರ ಪವರ್ ಅಲ್ಲದೇ ಇನ್ನೇನು
ಅಲ್ವೇ ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ