ಸಾಹಿತಿ ಕೆ.ಎಸ್​ ನಿಸಾರ್​ ಅಹಮದ್​ ನಿಧನಕ್ಕೆ ಕಂಬನಿ ಮಿಡಿದ ಸ್ಯಾಂಡಲ್​ವುಡ್​ ತಾರೆಯರು

Nisar ahmed: ನಟರಾದ ರಿಯಲ್​ ಸ್ಟಾರ್​ ಉಪೇಂದ್ರ, ಪುನೀತ್​ ರಾಜ್​ ಕುಮಾರ್​​, ಪ್ರೇಮ್​​​, ಸತೀಶ್​ ನೀನಾಸಂ, ವಸಿಷ್ಠ ಸಿಂಹ  ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ

ಕವಿ ಕೆ.ಎಸ್ ನಿಸಾರ್ ಅಹಮದ್

ಕವಿ ಕೆ.ಎಸ್ ನಿಸಾರ್ ಅಹಮದ್

 • Share this:
  ನಿತ್ಯೋತ್ಸವ ಕವಿ ಕೆ.ಎಸ್ ನಿಸಾರ್ ಅಹಮದ್ ಇಂದು ನಿಧನರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆ.ಎಸ್ ನಿಸಾರ್ ಅಹಮದ್ ವಿಧಿವಶರಾಗಿದ್ದಾರೆ. ಕನ್ನಡದ ಶ್ರೇಷ್ಠ ಕವಿಯ ಅಗಲಿಕೆಗೆ ಸ್ಯಾಂಡಲ್​ವುಡ್​ ತಾರೆಯರಯ ಕಂಬನಿ ಮಿಡಿದಿದ್ದಾರೆ.

  ನಟರಾದ ರಿಯಲ್​ ಸ್ಟಾರ್​ ಉಪೇಂದ್ರ, ಪುನೀತ್​ ರಾಜ್​ ಕುಮಾರ್​​, ಪ್ರೇಮ್​​​, ಸತೀಶ್​ ನೀನಾಸಂ, ವಸಿಷ್ಠ ಸಿಂಹ  ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ

  ನಟ ಉಪೇಂದ್ರ ಅವರು ಟ್ವೀಟ್ ಮಾಡಿದ್ದು, ‘ಕನ್ನಡದ ಹಿರಿಯ ಸಾಹಿತಿ, ನಿತ್ಯೋತ್ಸವದ ಕವಿ, ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಕನ್ನಡ ಪರ ಚಿಂತಕ, ನಾಡೋಜ ಶ್ರೀ ಕೆ ಎಸ್ ನಿಸಾರ್ ಅಹಮದ್ ರವರ ಅಗಲಿಕೆ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬವರ್ಗ, ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ. ಓಂ ಶಾಂತಿ‘ ಎಂದು ಬರೆದುಕೊಂಡಿದ್ದಾರೆ.

     ಪುನೀತ್​ ರಾಜ್​​ ಕುಮಾರ್​ ಅವರು, ‘ನಿತ್ಯೋತ್ಸವ ಸಾಲುಗಳು‘ ನೀಡಿದ ಕನ್ನಡದ ಮಹಾನ್ ಕವಿ ಪದ್ಮಶ್ರೀ ಕೆ. ಎಸ್. ನಿಸಾರ್ ಅಹಮದ್ ಸರ್ ಇನ್ನಿಲ್ಲ! ಸಾಹಿತ್ಯಲೋಕಕ್ಕೆ ಅವರ ಕೊಡುಗೆ ಅಜರಾಮರ!‘ ಎಂದು ಟ್ವೀಟ್​ ಮಾಡಿದ್ದಾರೆ.

     ನಿರ್ದೇಶಕ ಪವನ್​ ಒಡೆಯರ್​​ ಅವರು ‘ನಿತ್ಯೋತ್ಸವ ಕವಿ. K. S.ನಿಸಾರ್ ಅಹ್ಮದ್ ಸರ್ ನಮ್ಮೆಲ್ಲರನ್ನೂ ಅಗಲಿದ್ದಾರೆ ಎಂಬುದು ಬಹಳ ನೋವ್ವಿನ ಸಂಗತಿ. ನೀವು ರಚಿಸಿದ. ಕಚೇರಿ, ಪೇಟೆ, ಬಸ್ಟಾಪ್ಪು, ಎಲ್ಲೆಲ್ಲೂ ಈತನೇ. ಹಾಡನ್ನು ಹಲವಾರು ಬಾರಿ ಹಾಡಿ. ಮೊದಲ ಸ್ಥಾನ ಪಡೆದಿದ್ದೆ. ಕನ್ನಡ ಸಾಹಿತ್ಯಕ್ಕೆ ನಿಮ್ಮ ಕೊಡುಗೆ ಅಪಾರ ಎಂದು ಟ್ವೀಟ್​ ಮಾಡುವ ಮೂಲಕ ಅಗಲಿದ ನಿತ್ಯೋತ್ಸವ ಕವಿಗೆ ನಮನ ಸಲ್ಲಿಸಿದ್ದಾರೆ.

     ನಟ ವಸಿಷ್ಠ ಸಿಂಹ ‘ಕನ್ನಡೋತ್ಸವವನ್ನು ನಿತ್ಯೋತ್ಸವವನ್ನಾಗಿಸಿದ ಮಹಾಕವಿ ಕೆ.ಎಸ್.ನಿಸಾರ್ ಅಹಮ್ಮದ್ ನಮ್ಮನ್ನಗಲಿದ್ದಾರೆ.. ಅವರ ಆತ್ಮಕ್ಕೆ ಶಾಂತಿ ಕೋರೋಣ..ಓಂ ಶಾಂತಿ‘ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

     ಪದ್ಮಶ್ರೀ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿದ್ದ "ನಿತ್ಯೋತ್ಸವ" ಕವಿ ಕೆ. ಎಸ್. ನಿಸಾರ್ ಅಹಮದ್ ಅವರು ನಮ್ಮೆಲ್ಲರನ್ನೂ ಅಗಲಿದ್ದಾರೆ. ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ಹಾಗೂ ಕನ್ನಡ ನಾಡಿಗೆ ತುಂಬಲಾರದ ನಷ್ಟ.. ಮತ್ತೆ ಹುಟ್ಟಿ ಬನ್ನಿ ಸರ್.. ಎಂದು ನಟ ಪ್ರೇಮ್​ ಅವರು ಟ್ವೀಟ್​ ಮಾಡಿದ್ದಾರೆ.

     ನೀನಾಸಂ ಸತೀಶ್​, ‘ಹಿರಿಯ ಕವಿ ಪ್ರೊಫೆಸರ್ ಕೆ. ಎಸ್. ನಿಸಾರ್ ಅಹಮದ್ ಅವರಿಗೆ ಅಂತಿಮ ನಮನಗಳು‘ ಎಂದು ಟ್ವೀಟ್​ ಮಾಡುವ ಮೂಲಕ ಕನ್ನಡದ ನಿತ್ಯೋತ್ಸವದ ಕವಿಗೆ ಸಂತಾಪ ಸೂಚಿಸಿದ್ದಾರೆ

        First published: