ತಾರೆಗಳ ಸಮಾಗಮ: ನಮ್ಮ ಭಾರತ ವಿಶೇಷ ಗೀತೆ ನಾಳೆ ರಿಲೀಸ್

ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವಾತಂತ್ರೋತ್ಸವವನ್ನು ಮುಕ್ತವಾಗಿ ಸಂಭ್ರಮಿಸಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಆದರೂ ಸಂಭ್ರಮ ಕಳೆಗುಂದಬಾರದು.

news18-kannada
Updated:August 14, 2020, 9:17 PM IST
ತಾರೆಗಳ ಸಮಾಗಮ: ನಮ್ಮ ಭಾರತ ವಿಶೇಷ ಗೀತೆ ನಾಳೆ ರಿಲೀಸ್
ನಮ್ಮ ಭಾರತ
  • Share this:
ಕನ್ನಡ ಚಿತ್ರರಂಗದಲ್ಲಿ ತಾರಾ ಸಮಾಗಮ ಆಗುವುದೇ ಅಪರೂಪ. ಅದರಲ್ಲೂ ಕೊರೋನಾ ಕಾಲದಲ್ಲಿ ಎಲ್ಲರನ್ನು ಒಂದು ಹಾಡಿನಲ್ಲಿ ಸೇರಿಸುವುದೆಂದರೆ ಇನ್ನೂ ಕಷ್ಟದ ಕೆಲಸ. ಆದರೆ ಅಂತಹದೊಂದು ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ ವರುಣ್ ಸ್ಟುಡಿಯೋಸ್.

ಹೌದು, ಈ ಹಿಂದೆ ಸ್ಯಾಂಡಲ್​ವುಡ್ ಚಿರ ಯುವಕ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 58ನೇ ವಸಂತಕ್ಕೆ ಲಕ್ ಲಕ್ ಲಕ್​ಪತಿ ಕರುನಾಡಿಗೆ ಅಧಿಪತಿ...ಭರ್ಜರಿ ಸಾಂಗ್ ಅರ್ಪಿಸಿದ್ದ ವರುಣ್ ಸ್ಟುಡಿಯೋಸ್ ಈ ಬಾರಿ ದೇಶ ಭಕ್ತಿ ಗೀತೆಯೊಂದನ್ನು ಕನ್ನಡಿಗರ ಮುಂದಿಡುತ್ತಿದ್ದಾರೆ.

'ನಮ್ಮ ಭಾರತ' ಶೀರ್ಷಿಕೆಯೊಂದಿಗೆ ಮೂಡಿ ಬರುತ್ತಿರುವ ಈ ವಿಶೇಷ ವಿಡಿಯೋ ಸಾಂಗ್​ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಶ್ರೀಮುರಳಿ, ವಿಜಯ ರಾಘವೇಂದ್ರ, ನೀನಾಸಂ ಸತೀಶ್, ರಕ್ಷಿತಾ, ಡೈರೆಕ್ಟರ್ ಪ್ರೇಂ, ರಚಿತಾ ರಾಮ್, ಅನುಶ್ರೀ, ನವೀನ್ ಸಜ್ಜು, ಡಾಲಿ ಧನಂಜಯ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ.

ಇವರುಗಳೊಂದಿಗೆ ಮತ್ತಷ್ಟು ಸ್ಯಾಂಡಲ್​ವುಡ್ ನಟ-ನಟಿಯರೂ ಕೂಡ ಇದ್ದು, ಹಾಗೆಯೇ ಮಲಯಾಳಂ ಚಿತ್ರರಂಗದ ಖ್ಯಾತ ನಟರೊಬ್ಬರೂ ಕೂಡ ಈ ಕನ್ನಡ ಹಾಡಿನಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಅವರು ಯಾರು ಎಂಬುದು ನಾಳೆ ಬಹಿರಂಗವಾಗಲಿದೆ.

ದೇಶ ಭಕ್ತಿ ಸಾರುವ ಈ ಹಾಡಿಗೆ ಭಜರಂಗಿ ಮೋಹನ್ ಸಾಹಿತ್ಯ ಬರೆದಿದ್ದು, ಅದ್ವಿಕ್ ಸಂಗೀತಕ್ಕೆ ಅನಿರುದ್ದ್ ಶಾಸ್ತ್ರಿ ಕಂಠದಾನ ಮಾಡಿದ್ದಾರೆ. ಈ ವಿಡಿಯೋ ಸಾಂಗ್ ಅನ್ನು ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ನಾಳೆ ಬೆಳಗ್ಗೆ (ಆಗಸ್ಟ್​ 15) 7:29 ಕ್ಕೆ ವರುಣ್ ಸ್ಟುಡಿಯೋಸ್ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ ಮಾಡಲಿದ್ದಾರೆ.

ನಮ್ಮ ಭಾರತ ಹಾಡಿನ ಟೀಸರ್ ಝಲಕ್​ ಇಲ್ಲಿದೆ ನೋಡಿ...
ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವಾತಂತ್ರೋತ್ಸವವನ್ನು ಮುಕ್ತವಾಗಿ ಸಂಭ್ರಮಿಸಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಆದರೂ ಸಂಭ್ರಮ ಕಳೆಗುಂದಬಾರದು. ಯುವ ಸಮುದಾಯದಲ್ಲಿ ದೇಶಪ್ರೇಮ‌ ಪ್ರಜ್ವಲಿಸುತ್ತಿರಬೇಕು ಎಂಬ‌ ಮಹತ್ತರ ಉದ್ದೇಶದಿಂದ ಚಲನಚಿತ್ರ ನಟ ನಟಿಯರು ಈ ವಿಡಿಯೋ ಸಾಂಗ್ ಹೊರ ತಂದಿರುವುದಾಗಿ ನಿರ್ಮಾಪಕರಾದ ವರುಣ್ ಗೌಡ ತಿಳಿಸಿದ್ದಾರೆ.
Published by: zahir
First published: August 14, 2020, 9:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading