ಪಕ್ಷಿಗಳಿಗೆ ನೆರವಾಗಿ ಎಂದ ಜಾಗೃತಿ ಮೂಡಿಸಿದ ಸ್ಯಾಂಡಲ್​​ವುಡ್​ ಸ್ಟಾರ್​​ಗಳು

ಮನುಷ್ಯರಾದರೇ ಎಲ್ಲಾದರೂ ದುಡ್ಡು ಕೊಟ್ಟು ಅಥವಾ ನೀರು ಕೇಳಿ ಕುಡಿಯುತ್ತಾರೆ. ಆದರೆ ಪ್ರಾಣಿ ಪಕ್ಷಿಗಳ ಗತಿಯೇನು..? ಈ ನಿಟ್ಟಿನಲ್ಲಿ ಹಲವಾರು ಮಂದಿ ತಮ್ಮ ತಮ್ಮ ಮನೆಯ ಮೇಲೆ ನೀರನ್ನು ಇಟ್ಟಿದ್ದಾರೆ

G Hareeshkumar | news18
Updated:April 22, 2019, 10:44 PM IST
ಪಕ್ಷಿಗಳಿಗೆ ನೆರವಾಗಿ ಎಂದ ಜಾಗೃತಿ ಮೂಡಿಸಿದ ಸ್ಯಾಂಡಲ್​​ವುಡ್​ ಸ್ಟಾರ್​​ಗಳು
ಸ್ಯಾ.ಡಲ್​​​ವುಡ್​​ ಸ್ಟಾರ್​​ಗಳು
G Hareeshkumar | news18
Updated: April 22, 2019, 10:44 PM IST
ಬೇಸಿಗೆ ಈಗಾಗಲೇ ಆರಂಭವಾಗಿದ್ದು, ಮನುಷ್ಯರಿಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹೀಗಿರುವಾಗ ಪ್ರಾಣಿ – ಪಕ್ಷಿಗಳ ಗತಿಯೇನು ಎಂಬುದು ಈಗಾಗಲೇ ಗೊತ್ತಾಗಿದೆ. ಮನುಷ್ಯರಾದರೇ ಎಲ್ಲಾದರೂ ದುಡ್ಡು ಕೊಟ್ಟು ಅಥವಾ ನೀರು ಕೇಳಿ ಕುಡಿಯುತ್ತಾರೆ. ಆದರೆ ಪ್ರಾಣಿ ಪಕ್ಷಿಗಳ ಗತಿಯೇನು..? ಈ ನಿಟ್ಟಿನಲ್ಲಿ ಹಲವಾರು ಮಂದಿ ತಮ್ಮ ತಮ್ಮ ಮನೆಯ ಮೇಲೆ ನೀರನ್ನು ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ವಸಿಷ್ಠ ಸಿಂಹ, ನಟಿ ಅಂದ್ರಿತಾ ರೇ ಕೂಡ ಮನೆಯ ಮೇಲೆ ನೀರು ಇಟ್ಟು ಜಾಗೃತಿ ಮೂಡಿಸಿದ್ದಾರೆ.

ಪಕ್ಷಿಗಳಿಗೆ ನೀರು ಇಡಿ ಎಂದ ವಸಿಷ್ಠ

ಖಳನಾಯಕನಾಗಿ, ನಾಯಕನಾಗಿ ಕಾಣಿಸಿಕೊಳ್ಳುವ ನಟ ವಸಿಷ್ಠ ಇದೀಗ ಪ್ರಾಣಿ ಪಕ್ಷಿಗಳಿಗೆ ನೆರವಾಗುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಬೇಸಿಗೆಯ ಬಿಸಿ ಜೋರಾಗಿದ್ದು, ಧಗೆಯ ಪರಿಸ್ಥಿತಿ ಉಂಟಾಗಿದೆ. ಅದಕ್ಕಾಗಿಯೇ ಮನೆಗಳ ಬಳಿ, ಟೆರೇಸ್​ ಗಳಲ್ಲಿ ನೀರು ಇಡುವ ಮೂಲಕ ನೀವು ನಿಮ್ಮ ನಿಮ್ಮ ಮನೆ ಬಳಿ ನೀರು ಇಡಿ, ಪಕ್ಷಿಗಳಿಗೆ ನೆರವಾಗಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮುದ್ದಿನ ಮಗಳ ಮದುವೆಗೆ ತಾನೇ ಲಗ್ನಪತ್ರಿಕೆ ವಿನ್ಯಾಸ ಮಾಡಿದ ಕ್ರೇಜಿಸ್ಟಾರ್​ ರವಿಮಾಮ..!

ಇನ್ನೂ ತಮ್ಮ ಮನೆಯ ಮೇಲೆ ಪಾಟ್ ನಲ್ಲಿ ನೀರು ಇಟ್ಟಿದ್ದಾರೆ. ಬೇಸಿಗೆ ಬಿಸಿ ಹೆಚ್ಚಾಗಿದೆ. ಹಾಗಾಗಿ ಪಕ್ಷಿಗಳಿಗೆ ನೀರು ಬಿಡುವ ಮೂಲಕ ಅವುಗಳನ್ನು ಬದುಕಿಸೋಣ ಎಂಬ ಮಾತನ್ನು ಹೇಳಿದ್ದಾರೆ.

ಅಂದ್ರಿತಾ ರೇ ಕೂಡ ತಮ್ಮ ಏರುತ್ತಿರುವ ಬಿಸಿಲಿನ ತಾಪ ಬಾಯಾರಿ ನೀರು ಹುಡುಕುತ್ತ ಹಾರಾಡುವ ಪಕ್ಷಿಗಳಿಗೆ ನೀರು ಪೂರೈಸಲು ನೀವು ಮಾಡಬೇಕಾದದ್ದು ಇಷ್ಟೆ  ನಮಗೆ ಕರೆ ನೀಡಿ  ನಿಮ್ಮ ಸಮೀಪಕ್ಕೆ ನೀರಿನ ಬಟ್ಟಲು ತಲುಪಿಸುವೆವು. ಶುದ್ಧವಾದ ನೀರು ತುಂಬಿಸಿ ಹಕ್ಕಿಗಳಿಗೆ ಕುಡಿಯಲು ನೀರು ಇಡಿ ಎಂದು ಮನವಿ ಮಾಡಿದ್ದಾರೆ.


 

First published:April 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ