ಸ್ಯಾಂಡಲ್​ವುಡ್​ನಲ್ಲಿ ಯಾರು ಬಾಸ್? ಶಿವಣ್ಣ, ಸುದೀಪ್, ಗಣೇಶ್, ಯಶ್ ಅವರಿರೋ ಈ ವಿಡಿಯೋದಲ್ಲಿ ಇದೆ ಉತ್ತರ..!


Updated:September 23, 2018, 6:45 PM IST
ಸ್ಯಾಂಡಲ್​ವುಡ್​ನಲ್ಲಿ ಯಾರು ಬಾಸ್? ಶಿವಣ್ಣ, ಸುದೀಪ್, ಗಣೇಶ್, ಯಶ್ ಅವರಿರೋ ಈ ವಿಡಿಯೋದಲ್ಲಿ ಇದೆ ಉತ್ತರ..!
  • Share this:
ನ್ಯೂಸ್​-18 ಕನ್ನಡ

ಬೆಂಗಳೂರು(ಸೆ.23): ಇತ್ತೀಚೆಗೆ ಸ್ಯಾಂಡಲ್​ವುಡ್​ನಲ್ಲಿ 'ಬಾಸ್' ಪಟ್ಟಕ್ಕಾಗಿ ಸ್ಟಾರ್​ಗಳ ನಡುವೆ ಕಾಳಗ ನಡೆದಿದ್ದು ಗೊತ್ತಿರುವ ಸಂಗತಿ. ದರ್ಶನ್, ಶಿವಣ್ಣ, ಯಶ್ ಅಭಿಮಾನಿಗಳ ಮಧ್ಯೆ ಶುರುವಾಗಿದ್ದ 'ಬಾಸ್' ವಾರ್ ಗೋಲ್ಡನ್ ಸ್ಟಾರ್ ಗಣೇಶ್ ಅಂಗಳಕ್ಕೆ ಬಂದು ನಿಂತಿತ್ತು. 'ಬಾಸ್' ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ ಎನ್ನುತ್ತಿದ್ದ ಬೆನ್ನಲ್ಲೇ ಎಲ್ಲರ ಅಭಿಮಾನಿಗಳಿಗೂ ಸಿಹಿ ಸುದ್ದಿಯೊಂದಿದೆ.

ಶಿವಣ್ಣನ ನಿವಾಸದಲ್ಲಿ ನಿನ್ನೆ ರಾತ್ರಿ ಸುದೀಪ್​​, ಯಶ್​​, ಗಣೇಶ್​ ಎಲ್ಲರೂ ಸೇರಿ ಒಂದೇ ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ಧಾರೆ. ಈ ಮೂಲಕ ಯಾರಾದ್ರೂ ಬಾಸ್ ಆಗಲಿ, ಅದರ ಬಗ್ಗೆ ನಮಗೆ ಕತರಾರು ಇಲ್ಲ. ದರ್ಶನ್, ಯಶ್, ಪುನೀತ್ ಅವ್ರು ಯಾರೇ ಬಾಸ್ ಆದ್ರೂ ಪ್ರಾಬ್ಲಾಂ ಇಲ್ಲ. ಅವರವರ ಮನೆಯಲ್ಲಿ ಅವರುಗಳೇ ಬಾಸು, ನಮ್ಮೆಲ್ಲರಿಗಿಂತ ಮೇಲೊಬ್ಬ ಇದ್ದಾನೆ, ಅವನೇ ಬಿಗ್ ಬಾಸ್ ಎಂದು ಒಳ್ಳೆಯ ಸಂದೇಶ ಸಾರಿದ್ದಾರೆ.ಈ ಹಿಂದೆ ಶಿವಣ್ಣ ಅಭಿಯನದ ‘ದಿ ವಿಲನ್ ಚಿತ್ರದ ‘ನೆನ್ನೆ ಮೊನ್ನೆ ಬಂದವ್ರೆಲ್ಲಾ ನಂಬರ್ ಒನ್ ಅಂತಾರೋ’ ಎಂಬ ಸಾಂಗ್ ಬಾಸ್​​ ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿತ್ತು. ಈ ವಿಚಾರಕ್ಕೆ ಸುದೀಪ್​​-ದರ್ಶನ್​​ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣನ ವಿರುದ್ಧ ಗರಂ ಆಗಿದ್ದರು. ಬಳಿಕ ಕಿಚ್ಚ ಸುದೀಪ್​ ಅವರೇ ತನ್ನ ಅಭಿಮಾನಿಗಳ ಬಳಿ ಕಿತ್ತಾಡದಂತೆ ಮನವಿ ಮಾಡಿ ತಣ್ಣಗಾಗಿಸಿದ್ದರು.

ಶಿವಣ್ಣ ವಿಚಾರದಲ್ಲಿ ತಣ್ಣಗಾಗಿದ್ದ ಸುದೀಪ್ ಅಭಿಮಾನಿಗಳು​​ ವಿಡಿಯೋದರಲ್ಲಿ ಯಶ್, ಕಿಚ್ಚ ಸುದೀಪ್ ಅವರನ್ನು ಹೆಸರು ಇಟ್ಟು ಕರೆದಿದ್ದನ್ನು ನೋಡಿ ಮತ್ತೆ ಕಿಡಿಕಾರಿದ್ದರು. ಸುದೀಪ್ ಅವರನ್ನು ಸರ್ ಎಂದು ಹೇಳಿ ಕರೆಯಬೇಕಿತ್ತು. ಆದರೆ ಬರೀ ಸುದೀಪ್ ಎಂದು ಹೇಳಿ ಕರೆದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಯಶ್​ಗೆ ತರಾಟೆಗೆ ತೆಗೆದುಕೊಂಡಿದ್ದರು.

ಕಿಚ್ಚ ಸುದೀಪ್ ನಟ ಯಶ್‍ಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದರು. ಸುದೀಪ್ ಚಾಲೆಂಜ್ ಸ್ವೀಕರಿಸಿದ ಯಶ್ ತಮ್ಮ ಸ್ನೇಹಿತನ ಫಿಟ್ನೆಸ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅದಕ್ಕೆ, “ಹಾಯ್ ಸುದೀಪ್ ನೀವು ನನಗೆ ಒಂದು ಚಾಲೆಂಜ್ ಕೊಟ್ಟಿದ್ದೀರಾ ಧನ್ಯವಾದಗಳು ಎಂದಿದ್ದು ಎಲ್ಲದಕ್ಕೂ ಕಾರಣವಾಗಿತ್ತು.ಇನ್ನು ಟಗರು' ಚಿತ್ರದ ಸಂಭ್ರಮಾಚರಣೆಯಲ್ಲಿ ನಟ ಶಿವರಾಜ್ ಕುಮಾರ್​ ಅವರಿಗೆ 'ಬಾಸ್ ಆಫ್ ಸ್ಯಾಂಡಲ್​ವುಡ್' ಎಂಬ ಬಿರುದು ಅಭಿಮಾನಿಗಳು ನೀಡಿದ್ದರು. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ದರ್ಶನ್ ಅಭಿಮಾನಿಗಳು, ನಾವು ಈಗಾಗಲೇ ಚಾಲೆಂಜಿಂಗ್ ಸ್ಟಾರ್​ಗೆ 'ಬಾಸ್' ಬಿರುದು ನೀಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ವಾದ ಮಂಡಿಸಿದ್ದರು.

ಶಿವಣ್ಣ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಬಾಸ್ ಚರ್ಚೆ ತಾರಕ್ಕೇರಿದ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ತಮ್ಮ ಕಾರಿಗೆ BOSS ಎನ್ನುವ ನಂಬರನ್ನು ರಿಜಿಸ್ಟರ್ ಮಾಡಿಸಿದ್ದರು. ಅಷ್ಟರಲ್ಲಿ 'ಬಾಸ್' ತಿಕ್ಕಾಟಕ್ಕೆ ಯಶ್​ ಅಭಿಮಾನಿಗಳ ಎಂಟ್ರಿಯಾಗಿತ್ತು. ಇದರ ನಡುವೆ ನಟ ದರ್ಶನ್ 'ಬಾಸ್' ನಂಬರಿನ ಅಭಿಮಾನಿಯೊಬ್ಬರ ಬೈಕ್ ಒಂದನ್ನು ಓಡಿಸುವ ಮೂಲಕ ನಾನೇ ಸ್ಯಾಂಡಲ್​ವುಡ್ ಬಾಸ್ ಎಂದು ಸಾರಿದ್ದರು.

ಈ ಎಲ್ಲದಕ್ಕೂ ಸದ್ಯ ಒಂದೆ ವೇದಿಕೆಯಲ್ಲಿ ಕಾಣಿಸಿಕೊಂಡು ಕುಣಿದು ಕುಪ್ಪಳಿಸಿದ ಶಿವಣ್ಣ, ಯಶ್​, ಸುದೀಪ್, ಗಣೇಶ್​​ ಅವರು ನಾವೆಲ್ಲ ಒಂದೆ ಎಂದು ತೋರಿದ್ದಾರೆ. ಎಲ್ಲಾ ಸ್ಟಾರ್​ಗಳು ಅಪರೂಪಕ್ಕೆ ಒಟ್ಟಿಗೆ ಸೇರುವುದೆ ಕಷ್ಟ. ಆದರೆ ಶಿವಣ್ಣನ ಮನೆಯಲ್ಲಿ ಎಲ್ಲರೂ ಒಟ್ಟಗೆ ಸೇರಿ ಕುಣಿದು ಕುಪ್ಪಳಿಸಿದ್ಧಾರೆ. ​​
First published:September 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ