• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Shivarajkumar Movie: ಅಯ್ಯೋ ಮುಹೂರ್ತದ ದಿನವೇ 45 ಚಿತ್ರದ ಎಲ್ಲಾ ಸೀಕ್ರೆಟ್ ರಿವೀಲ್ ಮಾಡಿದ್ರಾ ಶಿವಣ್ಣ?

Shivarajkumar Movie: ಅಯ್ಯೋ ಮುಹೂರ್ತದ ದಿನವೇ 45 ಚಿತ್ರದ ಎಲ್ಲಾ ಸೀಕ್ರೆಟ್ ರಿವೀಲ್ ಮಾಡಿದ್ರಾ ಶಿವಣ್ಣ?

ಅರ್ಜುನ್ ಜನ್ಯ ಮೊದಲ ಸಿನಿಮಾ ಸೀಕ್ರೆಟ್ ರಿವೀಲ್ ಮಾಡಿದ ಶಿವಣ್ಣ

ಅರ್ಜುನ್ ಜನ್ಯ ಮೊದಲ ಸಿನಿಮಾ ಸೀಕ್ರೆಟ್ ರಿವೀಲ್ ಮಾಡಿದ ಶಿವಣ್ಣ

ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾ ಸೀಕ್ರೆಟ್ಸ್ ಬಿಟ್ಟು ಕೊಟ್ರೇ ಶಿವಣ್ಣ? ಚಿತ್ರದ ಮುಹೂರ್ತದ ದಿನ ಇಡೀ ಕಥೆ ಹೇಳಿ ಬಿಟ್ಟರೇ ಶಿವರಾಜ್ ಕುಮಾರ್? ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar 45 Movie Updates) ತಮ್ಮ ಚಿತ್ರ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ತಮ್ಮ ಒಂದು ಸಿನಿಮಾ ಸೆಟ್ಟೇರೋ ಮೊದಲೇ ನೋಡಿ ಬಿಟ್ಟಿದ್ದಾರೆ. ಒಂದು ಬಾರಿ ಅಲ್ಲ ಎರಡು (Arjun Janya First Direction Movie) ಬಾರಿ ಇಡೀ ಚಿತ್ರವನ್ನ ವೀಕ್ಷಿಸಿದ್ದಾರೆ. ಹೌದು, ನಾವು ಹೇಳುತ್ತಿರೋ ಆ ಚಿತ್ರದ ಹೆಸರು 45 ಅನ್ನೋದು ಈಗಾಗಲೇ ನಿಮಗೂ ಗೊತ್ತಾಗಿದೆ. ನಿಜ, ಈ (Multi Stars in Kannada 45 Movie) ಚಿತ್ರದ ಮುಹೂರ್ತ ಮೈಸೂರಿನ ರೆಸಾರ್ಟ್‌ ನಲ್ಲಿ ನಡೆದಿದ್ದು, ಚಿತ್ರ ಸೆಟ್ಟೇರಿದ ಬಳಿಕ ಇಡೀ ಸಿನಿಮಾ ತಂಡ ಚಿತ್ರದ ಒಂದಷ್ಟು ಇಂಟ್ರಸ್ಟಿಂಗ್ ವಿಷಯವನ್ನ ಕೂಡ ರಿವೀಲ್ ಮಾಡಿದೆ.


ಅದರಲ್ಲಿ (Music Director Arjun Janya Movie) ಚಿತ್ರದ ನಾಯಕ ಶಿವರಾಜ್ ಕುಮಾರ್ ತಮ್ಮ ಈ ಚಿತ್ರದ ಬಗ್ಗೆ ಭಾರೀ ಭರವಸೆ ಮಾತುಗಳನ್ನ ಆಡಿದ್ದಾರೆ. ಅದರ ಒಂದಷ್ಟು ಚಿತ್ರಣ ಇಲ್ಲಿದೆ ಓದಿ.


Sandalwood Star Shiva Rajkumar Reveal All Secrets of 45 Movie Launch at Mysore
ಮೊದಲ ನಿರ್ದೇಶನದ 45 ಚಿತ್ರದ ಡೈರೆಕ್ಷನ್‌ಗೆ ಅರ್ಜುನ್ ಜನ್ಯ ರೆಡಿ


ಕನ್ನಡದ ಮಲ್ಟಿ ಸ್ಟಾರರ್ ಸಿನಿಮಾ ಅಂತಲೇ ಕರೆಸಿಕೊಳ್ಳುತ್ತಿರೋ 45 ಚಿತ್ರ ಸೆಟ್ಟೇರಿದೆ. ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದಲೇ ಚಿತ್ರದ ತಯಾರಿ ಬಲು ಜೋರಾಗಿಯೇ ನಡೆಯುತ್ತಿದೆ. ಟೆಕ್ನಾಲಜಿಯ ಸಹಾಯದಿಂದ ಡೈರೆಕ್ಟರ್ ಅರ್ಜುನ್ ಜನ್ಯ ಇಡೀ ಚಿತ್ರವನ್ನಈಗಲೇ ಡೈರೆಕ್ಟ್ ಮಾಡಿ ಬಿಟ್ಟಿದ್ದಾರೆ.
ಕನ್ನಡ ಮಲ್ಟಿ ಸ್ಟಾರರ್ 45 ಸಿನಿಮಾ ಆರಂಭ


ಪಕ್ಕಾ ಪ್ಲಾನ್ ಮಾಡಿಕೊಂಡು ಮಾಡ್ತಿರೋ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿದ್ದಾರೆ. ರಾಜ್‌ ಬಿ. ಶೆಟ್ಟಿ ನಟಿಸಿದ್ದಾರೆ. ನಟಿ ಕೌಸ್ತುಭ ಮಣಿ ಇಡೀ ಸಿನಿಮಾದ ಇನ್ನೂ ಒಂದು ಅಟ್ರ್ಯಾಕ್ಷನ್ ಅಂತಲೇ ಹೇಳಬಹುದು.


ಇವರ ಮಧ್ಯೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದಾರೆ. ಇವರ ಚಿತ್ರ ಜೀವನದಲ್ಲಿ ಇಲ್ಲಿವರೆಗೂ ಶಿವಣ್ಣ ಯಾವುದೇ ಚಿತ್ರವನ್ನ ಸೆಟ್ಟೇರೋ ಮೊದಲೇ ನೋಡಿರಲಿಲ್ಲ. ಆದರೆ ಮೊದಲ ಬಾರಿಗೆ ಡೈರೆಕ್ಷನ್‌ಗೆ ಇಳಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಈಗಾಗಲೇ ತೋರಿಸಿದ್ದಾರೆ.


ಸೆಟ್ಟೇರೋ ಮೊದಲೇ 45 ಚಿತ್ರ ವೀಕ್ಷಿಸಿದ ಹ್ಯಾಟ್ರಿಕ್ ಹೀರೋ ಶಿವಣ್ಣ


ಕಳೆದ ಒಂದು ವರ್ಷದಿಂದ 45 ಚಿತ್ರದ ಪ್ರತಿ ಹಂತವನ್ನು ಬಿಟ್ ಬಾಯ್ ಬಿಟ್ ತೋರಿಸುತ್ತಲೇ ಬಂದಿದ್ದಾರೆ. ಆದರೆ ಮೊನ್ನೆ ಇಡೀ ಸಿನಿಮಾವನ್ನ ಒಮ್ಮೇಲೆ ಶಿವಣ್ಣನಿಗೆ ಅರ್ಜುನ್ ಜನ್ಯ ತೋರಿಸಿದ್ದಾರೆ. ಇದನ್ನ ನೋಡಿದ ಶಿವಣ್ಣ ಫುಲ್ ಖುಷಿಯಾಗಿದ್ದಾರೆ.


ಹೌದು,ತಮ್ಮ ಈ ಚಿತ್ರದ ಪಕ್ಕಾ ಪ್ಲಾನ್ ಅನ್ನ ಟೆಕ್ನಾಲಜಿ ಸಹಾಯದಿಂದ ಈಗಲೇ ಶಿವಣ್ಣ ನೋಡಿ ಬಿಟ್ಟಿದ್ದಾರೆ. ಅದನ್ನ ನೋಡಿರೋ ಶಿವಣ್ಣ ಅದೇ ಡಿಸೈನ್ಡ್‌ ಕ್ಯಾರೆಕ್ಟರ್‌ಗೆ ನಮ್ಮ ಮುಖವನ್ನ ಅಂಟಿಸಿ ರಿಲೀಸ್ ಮಾಡಿ ಬಿಡಿ ಅಂತಲೂ ಅರ್ಜುನ್ ಜನ್ಯ ಅವರಿಗೆ ತಮಾಷೆಯಾಗಿ ಸಲಹೆ ಕಟ್ಟೊದ್ದಾರೆ. ಅಷ್ಟು ಪಕ್ಕಾ ಆಗಿಯೇ ಸಿನಿಮಾ ಬಂದಿದೆ. ಅದನ್ನ ಶಿವಣ್ಣ ಚಿತ್ರದ ಮುಹೂರ್ತದ ಸಮಯದಲ್ಲಿ ಹೇಳಿಕೊಂಡಿದ್ದಾರೆ.


ಅರ್ಜುನ್ ಜನ್ಯ ಮೊದಲ ಸಿನಿಮಾ ಸೀಕ್ರೆಟ್ ರಿವೀಲ್ ಮಾಡಿದ ಶಿವಣ್ಣ


ಅರ್ಜುನ್ ಜನ್ಯ ಅಭಿನಯದ 45 ಸಿನಿಮಾ ಒಂದು ಫಿಲಾಸಫಿಕಲ್ ಎಂಟರಟೈನರ್ ಚಿತ್ರ ಆಗಿದೆ. ಅರ್ಜುನ್ ಜನ್ಯ ತುಂಬಾ ಚೆನ್ನಾಗಿಯೇ ಸಿದ್ದತೆ ಮಾಡಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ, ರಿಯಲ್ ಸ್ಟಾರ್ ಉಪೇಂದ್ರ, ಸೇರಿದಂತೆ ನನ್ನ ಪಾತ್ರವೂ ಅದ್ಭುತವಾಗಿಯೇ ಇದೆ.


ಇಂತಹ ಒಂದು ಚಿತ್ರದಲ್ಲಿ ನಾನೂ ಇದ್ದೇನೆ ಅನ್ನೋದು ತುಂಬಾನೇ ಖುಷಿ ತಂದಿದೆ. ಹಾಗಾಗಿಯೇ ಈ ಚಿತ್ರ ನನ್ನ ಜೀವನದ ಸ್ಪೆಷಲ್ ಸಿನಿಮಾ ಆಗಿದೆ ಅಂತಲೂ ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ. ಸಿನಿಮಾಗಳಲ್ಲಿ 100 ದಿನ 150 ದಿನ ಹೀಗೆ ಚಿತ್ರೀಕರಣ ಮಾಡಿಕೊಂಡು ಹೋಗ್ತಾನೇ ಇರುತ್ತೇವೆ.


Sandalwood Star Shiva Rajkumar Reveal All Secrets of 45 Movie Launch at Mysore
ಅರ್ಜುನ್ ಜನ್ಯ ಮೊದಲ ಸಿನಿಮಾ ಸೀಕ್ರೆಟ್ ರಿವೀಲ್ ಮಾಡಿದ ಶಿವಣ್ಣ


ಮೊದಲ ನಿರ್ದೇಶನದ 45 ಚಿತ್ರದ ಡೈರೆಕ್ಷನ್‌ಗೆ ಅರ್ಜುನ್ ಜನ್ಯ ರೆಡಿ

ಆದರೆ ಅರ್ಜುನ್ ಜನ್ಯ ಅವರ 45 ಸಿನಿಮಾ ಹಾಗೆ ಆಗೋದಿಲ್ಲ. ಎಲ್ಲ ಪಕ್ಕಾ ಆಗಿಯೇ ಆಗುತ್ತದೆ ಎಂದು ಶಿವಣ್ಣ ವಿಶ್ವಾಸದಲ್ಲಿಯೇ ಹೇಳಿಕೊಂಡಿದ್ದಾರೆ. ಅರ್ಜುನ್ ಜನ್ಯ ತಮ್ಮ ಈ ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನ ಇಟ್ಟಿದ್ದಾರೆ.


ಇದನ್ನೂ ಓದಿ:  The Kerala Story: ವೈರಲ್ ಆಗ್ತಿರೋ ಕೇರಳ ಸ್ಟೋರಿ ಏನು? ಇದಿಷ್ಟು ಟ್ರೆಂಡ್ ಆಗ್ತಿರೋದೇಕೆ?

top videos


  ಇದನ್ನ ಎಂಟರಟೈನಿಂಗ್ ಆಗಿಯೇ ಇಲ್ಲಿ ಹೇಳುತ್ತಿದ್ದಾರೆ. ಸದ್ಯ ಚಿತ್ರ ಸೆಟ್ಟೇರಿದೆ. ಮೊದಲೆ ಅಂದುಕೊಂಡಂತೆ ಸಿನಿಮಾ ಮುಗಿಸುವದು ಪಕ್ಕಾ ಅನ್ನೋಮಟ್ಟಿಗೆ ಎಲ್ಲ ಸಿದ್ದತೆ ಮಾಡಿಕೊಂಡಿ ಅರ್ಜುನ್ ಜನ್ಯ ಡೈರೆಕ್ಷನ್‌ಗೆ ಇಳಿದಿದ್ದಾರೆ. ಇವರ ಈ ಒಂದು ಮೊದಲ ಸಾಹಸಕ್ಕೆ ಆತ್ಮೀಯರು ಶುಭ ಹಾರೈಸಿದ್ದಾರೆ.

  First published: