Kichcha Sudeep: ಶಿವಣ್ಣ, ದರ್ಶನ್ ಆಯ್ತು ಈಗ ಸುದೀಪ್; ಪ್ರವಾಹ ಪೀಡಿತರ ಬೆನ್ನಿಗೆ ನಿಂತ ‘ಕಿಚ್ಚ’

ಸದೀಪ್​ ವಿಡಿಯೋ ನೋಡಿದ ಅವರ ಅಭಿಮಾನಿಗಳು ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಅಲ್ಲಿ ಏನು ಅಗತ್ಯವಿದೆ ಎನ್ನುವ ಬಗ್ಗೆ ನಾವು ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.

Rajesh Duggumane | news18
Updated:August 8, 2019, 10:11 AM IST
Kichcha Sudeep: ಶಿವಣ್ಣ, ದರ್ಶನ್ ಆಯ್ತು ಈಗ ಸುದೀಪ್; ಪ್ರವಾಹ ಪೀಡಿತರ ಬೆನ್ನಿಗೆ ನಿಂತ ‘ಕಿಚ್ಚ’
Kiccha Sudeep
Rajesh Duggumane | news18
Updated: August 8, 2019, 10:11 AM IST
ದರ್ಶನ್, ಸುದೀಪ್, ಶಿವರಾಜ್​ಕುಮಾರ್​ ಸೇರಿ ಸಾಕಷ್ಟು ಸ್ಯಾಂಡಲ್​ವುಡ್​ ನಟರು​ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುವುದರ ಜೊತೆಗೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಈಗ ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಗೆ ಸ್ಯಾಂಡಲ್​ವುಡ್​ ನಟರ ಮನ ಮಿಡಿದಿದೆ. ಪ್ರವಾಹ ಪೀಡಿತರ ಬೆಂಬಲಕ್ಕೆ ನಿಲ್ಲಿ ಎಂದು ದರ್ಶನ್​ ಕೋರಿದ್ದರು. ಈಗ ನಟ ಕಿಚ್ಚ ಸುದೀಪ್​ ಕೂಡ ಇದೇ ರೀತಿಯ ಮನವಿ ಮಾಡಿದ್ದಾರೆ.

ಈ ಬಗ್ಗೆ ವಿಡಿಯೋ ಮಾಡಿ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ಸುದೀಪ್​, “ಉತ್ತರ ಕರ್ನಾಟಕದಲ್ಲಿ ಪ್ರವಾಹದ ಚಿತ್ರಗಳು ಮತ್ತು ವಿಡಿಯೋಗಳನ್ನಷ್ಟೇ ನೋಡಿದ್ದೇವೆ. ಆದರೆ, ಸ್ಥಳದಲ್ಲಿ ನೈಜ ಪರಿಸ್ಥಿತಿ ಹೇಗಿದೆ ಎನ್ನುವುದು ಗೊತ್ತಿಲ್ಲ. ಹೀಗಾಗಿ ಪ್ರವಾಹ ಪೀಡಿತ ಪ್ರದೇಶಕ್ಕೆ ಸುತ್ತ ಮುತ್ತಲಿನವರು ಹೋಗಿ ಸಹಾಯಕ್ಕೆ ನಿಲ್ಲಿ,” ಎಂದು ಕೋರಿದ್ದಾರೆ.

ಅಲ್ಲಿ ಏನು ಕುಂದು ಕೊರತೆ ಇದೆ ಎಂದು ತಿಳಿಸಿದರೆ ಸಹಕಾರ ನೀಡುವುದಾಗಿ ಸುದೀಪ್​ ತಿಳಿಸಿದ್ದಾರೆ. “ಸ್ಥಳಕ್ಕೆ ಹೋದವರು ಏನುಬೇಕು ಎಂದು ತಿಳಿಸಿದರೆ ಸಮಸ್ಯೆಯಲ್ಲಿರುವವರ ಸಹಾಯಕ್ಕೆ ನಾವೂ ಕೈಜೋಡಿಸಬಹುದು. ಆದಷ್ಟು ಬೇಗ ತೆರಳಿ ನಮಗೆ ಮಾಹಿತಿ ನೀಡಿ,” ಎಂದು ಸುದೀಪ್​ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪ್ರವಾಹ ಸಂತ್ರಸ್ಥರ ನೆರವಿಗೆ ನಿಲ್ಲುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ನಟ ದರ್ಶನ್​​​

ಈ ವಿಡಿಯೋ ನೋಡಿದ ಅವರ ಅಭಿಮಾನಿಗಳು ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಅಲ್ಲಿ ಏನು ಅಗತ್ಯವಿದೆ ಎನ್ನುವ ಬಗ್ಗೆ ನಾವು ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.



ಈ ಬಗ್ಗೆ ಟ್ವೀಟ್ ಮಾಡಿದ್ದ ದರ್ಶನ್​, “ನಮ್ಮ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಹಲವು ಹಳ್ಳಿಗಳು ಪ್ರವಾಹದ ಅಬ್ಬರಕ್ಕೆ ನೀರಿನಲ್ಲಿ ಮುಳುಗಿ ಹೋಗಿವೆ. ಅಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿರುತ್ತದೆ. ಎಲ್ಲರೂ ತಮ್ಮ ಕೈಲಾದ ಸೇವೆಯನ್ನು ಇದರ ನಿಟ್ಟಿನಲ್ಲಿ ಮಾಡಬೇಕಾಗಿ ವಿನಂತಿ, ಎಂದು ಕೋರಿದ್ದರು.

First published:August 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...