ಯೂರ್ನಿವರ್ಸಲ್ ಬಾಸ್(Universal Boss), ಬಾದ್ಷಾ, ಪಡೆಯಪ್ಪ. ತಲೈವಾ, ಸೂಪರ್ ಸ್ಟಾರ್, ಕಬಾಲಿ, ಕಾಲಾ, ಅಣ್ಣಾತೆ ಹೀಗೆ ಒಬ್ಬ ಸ್ಟಾರ್ಗೆ ನೂರಾರು ಹೆಸರಿನಿಂದ ಕರೆಸಿಕೊಳ್ಳುತ್ತಾರೆ ಅಂದರೆ, ಅದು ಒನ್ ಎಂಡ್ ಓನ್ಲಿ ರಜನಿಕಾಂತ್(One and Only Rajinikanth). ಭಾರತವಷ್ಟೇ ಅಲ್ಲದೇ ವಿದೇಶಗಳಲ್ಲೂ ಮೊದಲ ಬಾರಿಗೆ ಕ್ರೇಜ್(Craze) ಹುಟ್ಟಿಸಿದ ಭಾರತೀಯ ನಟ ಅಂದರೆ, ಅದೇ ತಲೈವಾ ರಜಿನಿಕಾಂತ್(Rajinikanth). ಇವರ ಸಿನಿಮಾ ರಿಲೀಸ್ ಇರಲಿ, ಹೊಸ ಸಿನಿಮಾ ಸೆಟ್ಟೇರಿದರೂ ಸಾಕು ಅವರ ಅಭಿಮಾನಿಗಳು ಹಬ್ಬವನ್ನೇ ಮಾಡುತ್ತಾರೆ. ಇತ್ತ ಸ್ಯಾಂಡಲ್ವುಡ್ (Sndalwood) ನಲ್ಲಿ ಶಿವರಾಜ್ಕುಮಾರ್ (Shivarajkumar) ಸಿನಿಮಾ ರಿಲೀಸ್ ಅಂದರೆ ಅವರ ಅಭಿಮಾನಿಗಳು ಹಬ್ಬ ಮಾಡುತ್ತಾರೆ. ಈಗೆಲ್ಲಾ ಪ್ಯಾನ್ ಇಂಡಿಯಾ (Pan India) ಸಿನಿಮಾಗಳದ್ದೇ ಹವಾ. ಹೀಗಾಗಿ ಶಿವಣ್ಣ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ನಿರ್ಧಾರ ಮಾಡಿದ್ದಾರಂತೆ. ವಿಶೇಷ ಅಂದರೆ, ತಮಿಳು ಸೂಪರ್ ಸ್ಟಾರ್ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ.
ತಮಿಳು ಸೂಪರ್ ಸ್ಟಾರ್ ಜೊತೆ ಸೆಂಚುರಿ ಸ್ಟಾರ್!
ನಟ ಶಿವರಾಜ್ ಕುಮಾರ್ ಬೇರೆ ಭಾಷೆ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರಂತೆ. ತಮಿಳಿನ ದೊಡ್ಡ ಚಿತ್ರ ಒಂದರಲ್ಲಿ ನಟ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎನ್ನುವ ಗುಸು ಗುಸು ಕೇಳಿ ಬರುತ್ತಿದೆ. ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಜೊತೆಗೆ ಕನ್ನಡದ ಸ್ಟಾರ್ ನಟ ಶಿವರಾಜ್ಕುಮಾರ್ ಅಭಿನಯಿಸಲಿದ್ದಾರೆ ಅಂತ ಮೂಲಗಳು ಹೇಳುತ್ತಿವೆ. ರಜನಿಕಾಂತ್ ಮುಂದಿನ ಚಿತ್ರವನ್ನು ನಿರ್ದೇಶಕ ನೆಲ್ಸನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ 'ತಲೈವರ್ 169' ಎಂದು ಹೆಸರಿಸಲಾಗಿದೆ. ಮೂಲಗಳ ಪ್ರಕಾರ, ಇದೇ ಚಿತ್ರದಲ್ಲಿ ಶಿವರಾಜ್ಕುಮಾರ್ ಸೂಪರ್ಸ್ಟಾರ್ ರಜನಿಕಾಂತ್ ಜೊತೆಗೆ ನಟಿಸಲಿದ್ದಾರಂತೆ.
ನೆಲ್ಸನ್ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣ!
ಅಣ್ಣಾತೆ ಸಿನಿಮಾ ಬಳಿಕ ರಜನಿಕಾಂತ್ ಮುಂದಿನ ಸಿನಿಮಾ ಯಾರ ಜೊತೆ ಅಂತ ಎಲ್ಲರೂ ಕಾತುರರಿಂದ ಕಾಯುತ್ತಿದ್ದರು.ರಜನಿಕಾಂತ್ ನಟನೆಯ 169ನೇ ಸಿನಿಮಾ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಚಿತ್ರಕ್ಕೆ ಯುವ ನಿರ್ದೇಶಕರು ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಅದರಲ್ಲೂ ರಜಿನಿಕಾಂತ್ ಅವರ 169ನೇ ಚಿತ್ರಕ್ಕೆ ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಬೀಸ್ಟ್ ಸಿನಿಮಾ ಫ್ಲಾಪ್ ಆದರೂ, ರಜನಿಕಾಂತ್ ಯಾಕೆ ಈ ನಿರ್ದೇಶಕನ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಶಿವಣ್ಣ - ರಜನಿಕಾಂತ್ ಜೊತೆಯಾಗಲಿದ್ದಾರೆ.
ಇದನ್ನೂ ಓದಿ: ಕಾಪು ಮಾರಿಗುಡಿಗೆ ಪೂಜಾ ಹೆಗ್ಡೆ ಭೇಟಿ! ದೇವರ ಬಳಿ ಇದೊಂದು ಆಸೆ ಪೂರೈಸುವಂತೆ ಕೇಳಿಕೊಂಡ ನಟಿ
ನೆಲ್ಸನ್ ದಿಲೀಪ್ ಅವರು ಈ ಮೊದಲು ‘ಡಾಕ್ಟರ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅವರು ರಜನಿಕಾಂತ್ ಜತೆ ಈಗ ಕೈಜೋಡಿಸುತ್ತಿದ್ದಾರೆ. ಇದೊಂದು ವಿಶಿಷ್ಟವಾದ ಕಥೆಯನ್ನು ಹೊಂದಿರಲಿದ್ಯಂತೆ. ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಹೇಳಿ ಮಾಡಿಸಿದ ಕಥೆಯಂತೆ. ಏಪ್ರಿಲ್ ಕೊನೆಯ ವಾರದಲ್ಲಿ ಸಿನಿಮಾ ಸೆಟ್ಟೇರಲಿದೆ. ಮುಂದಿನ ವರ್ಷ ಸಂಕ್ರಾಂತಿಗೆ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿಕೊಂಡಿದ್ಯಂತೆ ಚಿತ್ರತಂಡ.
ಇದನ್ನೂ ಓದಿ: Dhanush ಟೈಮ್ ಸರಿನೇ ಇಲ್ಲ-ಡಿವೋರ್ಸ್ ಆಯ್ತು, ಈಗ ಮತ್ತೊಂದು ಟೆನ್ಶನ್! ತಮಿಳು ಸ್ಟಾರ್ ನಟನಿಗೆ ಸಮನ್ಸ್
ಬೆಂಗಳೂರಿಗೆ ಬರಲಿದ್ದಾರಂತೆ ನೆಲ್ಸನ್
ಚಿತ್ರಕ್ಕಾಗಿ ನಿರ್ದೇಶಕ ನೆಲ್ಸನ್, ಶಿವಣ್ಣ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಸೆಂಚುರಿ ಸ್ಟಾರ್ ಜೊತೆಗೆ ಹೆಚ್ಚಿನ ಚರ್ಚೆ ನಡೆಸಲು ನಿರ್ದೇಶಕ ಶೀಘ್ರದಲ್ಲೇ ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ