Jogi Prem: ಅಮ್ಮನ ನೆನಪಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದ ಜೋಗಿ ಪ್ರೇಮ್, ಇದಕ್ಕಿಂತ ಒಳ್ಳೆ ಕೆಲ್ಸ ಬೇರೊಂದಿಲ್ಲ!

ಅಮ್ಮನ ನೆನಪಿನಲ್ಲಿ ಹುಟ್ಟೂರಾದ ಮದ್ದೂರು(Maddur) ಬಳಿಯಿರುವ ಬೆಸಗರಹಳ್ಳಿಯಲ್ಲಿ " ಅಮ್ಮನ ತೋಟ"(Ammana Thota) ಮಾಡಿದ್ದಾರೆ.  10 ಎಕರೆಗೂ ಹೆಚ್ಚು ಕೃಷಿ ಜಮೀನು ಖರೀದಿಸಿ ಅದಕ್ಕೆ ಅಮ್ಮನ ತೋಟ ಎಂದು ಹೆಸರಿಟ್ಟು ಸಿನಿಮಾ ಜೊತೆಗೆ ಕೃಷಿ ಮತ್ತು ಹಸು ಸಾಕಾಣಿಕೆಯಲ್ಲಿ ಅಮ್ಮನ ಕಾಣ್ತಿದ್ದಾರೆ  ಜೋಗಿ ಪ್ರೇಮ್.

ನಿರ್ದೇಶಕ ಜೋಗಿ ಪ್ರೇಮ್​

ನಿರ್ದೇಶಕ ಜೋಗಿ ಪ್ರೇಮ್​

  • Share this:
ತಾಯಿ ಸೆಂಟಿಮೆಂಟ್(Mother Sentiment) ಚಿತ್ರಗಳ ಮೂಲಕ ಕನ್ನಡಿಗರ ಮನೆ ಮನ ಗೆದ್ದಿದ್ದಾರೆ ಜೋಗಿ ಪ್ರೇಮ್(Jogi Prem). ಪ್ರತಿ ಚಿತ್ರದಲ್ಲೂ ತಾಯಿಯ ಮಹತ್ವದ ಸಂದೇಶ ಹೊತ್ತು ತರುವ ಪ್ರೇಮ್ ನಿಜ ಜೀವನದಲ್ಲೂ ತಾಯಿ(Mother) ಅಂದರೆ ಅಪಾರ ಪ್ರೀತಿ ಹೊಂದಿದ್ದಾರೆ. ಅದರೆ ಆ ವಿಧಿ ಸಿನಿಮಾ ಪ್ರೇಮ್ ಸಿನಿಮಾಗಳಂತೆಯೆ  ಪ್ರೇಮ್  ಜೀವನದಲ್ಲಿ ತಾಯಿಯನ್ನು ಬೇಗ ಕಿತ್ತು ಕೊಂಡು ಬಿಟ್ಟಿದ್ದಾನೆ. ತನ್ನ ತಾಯಿ ಭಾಗ್ಯಮ್ಮರನ್ನು ಅಪಾರವಾಗಿ ಪ್ರೀತಿಸ್ತಿದ್ದ ಪ್ರೇಮ್ ಅಮ್ಮನನ್ನು ಕಳೆದುಕೊಂಡ ಮೇಲೆ ಅಮ್ಮನ ನೆನಪಿನಲ್ಲಿ ಹುಟ್ಟೂರಾದ ಮದ್ದೂರು(Maddur) ಬಳಿಯಿರುವ ಬೆಸಗರಹಳ್ಳಿಯಲ್ಲಿ " ಅಮ್ಮನ ತೋಟ"(Ammana Thota) ಮಾಡಿದ್ದಾರೆ.  10 ಎಕರೆಗೂ ಹೆಚ್ಚು ಕೃಷಿ ಜಮೀನು ಖರೀದಿಸಿ ಅದಕ್ಕೆ ಅಮ್ಮನ ತೋಟ ಎಂದು ಹೆಸರಿಟ್ಟು ಸಿನಿಮಾ ಜೊತೆಗೆ ಕೃಷಿ ಮತ್ತು ಹಸು ಸಾಕಾಣಿಕೆಯಲ್ಲಿ ಅಮ್ಮನ ಕಾಣ್ತಿದ್ದಾರೆ  ಜೋಗಿ ಪ್ರೇಮ್. ಅಮ್ಮನ ತೋಟದಲ್ಲಿ ಈಗಾಗಲೇ ಗಿರ್, ರಾಟೆ, ಮುರ್ರಾ ಹಾಗೂ ಹಳ್ಳಿ ಕಾರ್ ತಳಿಯ ರಾಸುಗಳ ಸಾಕಿರುವ ಪ್ರೇಮ್, ಈಗ ಮತ್ತೆ 10 ಸಾಯಿ ವಾಲ್(Sahiwal) ಹೆಸರಿನ ದೇಶಿತಳಿಯ ಹಸುಗಳ ಖರೀದಿ ಮಾಡಿದ್ದಾರೆ. ವಿಶೇಷ ಅಂದ್ರೆ ಪ್ರೇಮ್ ಇತ್ತೀಚಿಗೆ ಹರಿಯಾಣದಲ್ಲಿರುವ ಕಾಮಧೇನು ಗೋಶಾಲೆಗೆ ಹೋಗಿದ್ದಾರೆ.

10 ಹಸು ಖರೀದಿಸಿದ ನಿರ್ದೇಶಕ ಪ್ರೇಮ್​!

ಪ್ರೇಮ್​ ಅಲ್ಲಿಗೆ ಹೋಗಿದ್ದು ಸಿನಿಮಾಗೆ ಲೊಕೇಷನ್ ನೋಡುವುದಕ್ಕೆ ಅಲ್ಲ, ಬದಲಿಗೆ ಔಷದಿ ಗುಣವಿರುವ ಹಾಲನ್ನು ಕೊಡುವ ಸಾಯಿವಾಲ್ ತಳಿಯ ಹಸುಗಳ ಖರೀದಿಸಲು. ಸಾಯಿವಾಲ್ ತಳಿಯ ಹಸುಗಳ ಹಾಲಿಗೆ ಸಖತ್ ಬೇಡಿಕೆ ಇದೆ. ಹೀಗಾಗಿ ಪ್ರೇಮ್ ಸಾಯಿವಾಲ್ ಹಸುಗಳ ಖರೀದಿ ಮಾಡಿದ್ದಾರೆ. ಜೊತೆಗೆ ಲಕ್ಷಾಂತ ರೂ ಕೊಟ್ಟು ಕಪ್ಪು ಬಣ್ಣದ ಹೋರಿಯನ್ನು ಖರೀದಿ ಮಾಡಿದ್ದಾರೆ. ಜೊತೆಗೆ ಆ ಹೋರಿಗೆ " ಭೈರವ " ಎಂದು ನಾಮಕರಣ ಮಾಡಿದ್ದಾರೆ. ಅಷ್ಟಕ್ಕೂ ಸಾಲು ಸಾಲು ಸಿನಿಮಾಗಳು ಕೈಯಲಿದ್ದರು ಪ್ರೇಮ್ ಅದ್ಯಾಕೆ ಇಷ್ಟೋಂದು ರಿಸ್ಕ್ ತಗೋಂಡಿದ್ದಾರೆ ಅಂದ್ರೆ ಪ್ರೇಮ್ ಅವರ ಅಮ್ಮ ಭಾಗ್ಯಮ್ಮನಿಗೆ ಹಸು ಸಾಕಣಿಕೆ ಅಂದ್ರೆ ತುಂಭಾ ಇಷ್ಟ ಇತ್ತು.

ಇದನ್ನು ಓದಿ: ಸೆಂಚುರಿ ಸ್ಟಾರ್ ಮೇಲೆ ಕಣ್ಣಿಟ್ಟ ಹೊಂಬಾಳೆ ಫಿಲ್ಮ್ಸ್​, ಸಂತೋಷ್​ ಆನಂದ್​ರಾಮ್​ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ!

ತಾಯಿಯ ನೆನಪಲ್ಲಿ ಫಾರ್ಮ್ ಮಾಡಿದ ಪ್ರೇಮ್​

ತಾಯಿಯ ನೆನಪಲ್ಲಿ ಸ್ವಂತ ಬ್ರಾಂಡ್​ನ ಡೈರಿ ಫಾರ್ಮ್ ಮಾಡುವುದರ ಜೊತೆಗೆ ಅಳಿವಿನ ಅಂಚಿನಲ್ಲಿರು ದೇಶಿ  ತಳಿಯ ಹಸುಗಳ ಬ್ರೀಡಿಂಗ್ ಮತ್ತು ಸಾಕಾಣಿಕೆಗೆ  ಸಜ್ಜಾಗಿದ್ದಾರೆ ಪ್ರೇಮ್. ಅದಕ್ಕೆ ಪೂರಕವಾಗಿ ಹಳ್ಳಿ ಹೈದ ಪ್ರೇಮ್ ಅಮ್ಮನ ತೋಟದಲ್ಲಿ ವಿದೇಶಿ ತಳಿಗಳ ಹಸುಗಳಿಗೆ ನೋ ಎಂಟ್ರಿ ಎಂದಿದ್ದಾರೆ. ದೇಶಿ ತಳಿಗಳು ದುಬಾರಿಯಾದರೂ ಸರಿ  ನಮ್ಮ ನೆಲದ ಹಸುಗಳನ್ನೆ ಸಾಕಬೇಕು ಅನ್ನುವ ನಿಟ್ಟಿನಲ್ಲಿ ಕೋಟ್ಯಾಂತರ ಬಂಡವಾಳವನ್ನು ದೇಶಿ ತಳಿಗಳ ಮೇಲೆ ಹಾಕಿದ್ದಾರೆ. ಸಿನಿಮಾ ಕೆಲಸಕ್ಕೆ ಬಿಡುವು ಸಿಕ್ಕಾಗೆಲ್ಲ ಅಮ್ಮನ ತೋಟಸೇರುವ ಪ್ರೇಮ್  ಅಲ್ಲಿರುವ ಹಸುಗಳ ಆರೈಕೆ ಮಾಡುವ ಮೂಲಕ ಕಾಲ ಕಳೆಯುತ್ತಾರೆ.





ಇದನ್ನು ಓದಿ: ಅಭಿಮಾನಿಗಳಿಂದ `ರಾಜರತ್ನ’ ಮೂರ್ತಿ ಪ್ರತಿಷ್ಠಾಪನೆ, ಪುನೀತ್​ ತತ್ವ-ಆದರ್ಶ ಪಾಲನೆಗಾಗಿ ಪತ್ರಿಮೆ ಅನಾವರಣ!

ಸ್ವಂತ ಡೈರಿ ಫಾರ್ಮ್ ಕಟ್ಟುವ ಆಸೆ ಹೊಂದಿರುವ ನಿರ್ದೇಶಕ!

ಪ್ರೇಮ್ ಈಗಾಗಲೇ ಗಿರ್ ತಳಿಯ ಹಸುವಿನ ಹಾಲನ್ನು ಮಾರಾಟ ಮಾಡ್ತಿದ್ದು  ಅತೀ ಶೀಘ್ರದಲ್ಲೇ ಸ್ವಂತ ಡೇರಿ ಫಾರ್ಮ್ ಕಟ್ಟಿ ಅಮೃತಕ್ಕೆ ಸಮಾನವಾಗಿರು ದೇಶಿ ಆಕಳಿನ‌ ಹಾಲನ್ನು ಮಾರುಕಟ್ಟೆಗೆ ತರಲಿದ್ದಾರೆ. ಜೊತೆಗೆ ನಮ್ಮ ನೆಲದ ಹಸುಗಳ ಸಂತತಿಯನ್ನು ಕಾಪಡಿ ಇಂದಿನ ಪೀಳಿಗೆಗೆ ಅವುಗಳ ಮಹತ್ವ ಸಾರಲು ಪ್ಲಾನ್ ಮಾಡಿಕೊಂಡಿದ್ದಾರೆ. ಅದರಲ್ಲೂ ಗೋಮಾತೆಗಳನ್ನು ಸಾಕಿ ಸಲಹುವುದಕ್ಕಿಂತ ಒಳ್ಳೆಯ ಇನ್ನೊಂದಿಲ್ಲ ಅಲ್ವಾ?
Published by:Vasudeva M
First published: