Untold Story: ಅನಂತ್ ನಾಗ್ ಮತ್ತು ವಿಷ್ಣವರ್ಧನ್ ಅವರನ್ನ ಒಂದು ಮಾಡಿದ ಆ ಕೋಗಿಲೆ ಯಾವುದು?

ಒಂದೇ ಕಾಲಘಟ್ಟದಲ್ಲಿ ಬಂದ ವಿಶೇಷ ಕಲಾವಿದರು

ಒಂದೇ ಕಾಲಘಟ್ಟದಲ್ಲಿ ಬಂದ ವಿಶೇಷ ಕಲಾವಿದರು

ಅನಂತ್ ನಾಗ್ ಮತ್ತು ವಿಷ್ಣುವರ್ಧನ್ ಯಾಕೆ ಒಟ್ಟಿಗೆ ಅಭಿನಯಿಸಲಿಲ್ಲ.18 ವರ್ಷದ ಬಳಿಕ ಈ ಜೋಡಿಯನ್ನ ಒಟ್ಟಿಗೆ ತೆರೆ ಮೇಲೆ ತಂದ ಆ ನಿರ್ದೇಶಕ ಯಾರು ಗೊತ್ತೇ? ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲೂ ಈ ಜೋಡಿ ಅಭಿನಯಸಿದೆ. ಆ ಚಿತ್ರ ಯಾವುದು? ಇಲ್ಲಿದೆ ಒಂದಷ್ಟು ಸ್ಪೆಷಲ್ ಮ್ಯಾಟರ್.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗದಲ್ಲಿ ಮಲ್ಟಿ ಸ್ಟಾರರ್ (Untold Story of Retro Movie) ಸಿನಿಮಾಗಳು ಸಾಕಷ್ಟು ಬಂದಿವೆ. ತಾಜಾ ಉದಾಹರಣೆ ಅಂದ್ರೆ ಅದಕ್ಕೆ ಕಬ್ಜ ಅಂತಲೇ ಹೇಳಬಹುದು. ಈ ಮೊದಲು ಹಬ್ಬ ಚಿತ್ರದಲ್ಲಿ ಎಲ್ಲರೂ ಇದ್ದರು. ಕನ್ನಡ (Vishnu-Anant Special Movie) ತಾರೆಯರ ಈ ಚಿತ್ರ ಬೆಳ್ಳಿ ತೆರೆ ಮೇಲೆ ದೊಡ್ಡ ಹಬ್ಬವನ್ನ ಮಾಡಿತ್ತು. ಕನ್ನಡದ ಎಲ್ಲ ತಾರೆಯರ ಅಭಿಮಾನಿಗಳು ಅಂದು ಹಬ್ಬ ಮಾಡಿದ್ದರು. ಒಂದು ಮಾತಂತು ಸತ್ಯ ನೋಡಿ. ಒಬ್ಬ (Untol Story of Special Stars) ನಿರ್ಮಾಪಕ ಇಲ್ಲವೇ ಒಬ್ಬ ನಿರ್ದೇಶಕ ಅಂದುಕೊಂಡರೂ ಕೂಡ ಮಲ್ಟಿಸ್ಟಾರರ್ ಸಿನಿಮಾ ಮಾಡೋಕೆ ಸಾಧ್ಯವಾಗೋದಿಲ್ಲ. ತುಂಬಾ ಆತ್ಮೀಯ ತಾರೆಯರಾಗಿದ್ದರೂ ಸಹ ಒಂದೇ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ತೆರೆ ಹಂಚಿಕೊಳ್ಳೊಕೆ ಆಗೋದಿಲ್ಲ.


ಈ ಒಂದು ವಿಷಯ ಇಂದು ನಿನ್ನೆಯದಲ್ಲ. ಈ ಒಂದು ಸತ್ಯ ಹಿಂದಿನಿಂದಲೂ ಇದೆ. ಅನಂತ್ ನಾಗ್ (Kannada Retro Movie Story) ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ ಅವರೂ ಒಳ್ಳೆ ಸ್ನೇಹಿತರೇ ಆಗಿದ್ದರು. ಆದರೆ ಇವರು ಒಟ್ಟಿಗೆ ಒಂದು ಚಿತ್ರದಲ್ಲಿ ನಟಿಸೋಕೆ ಹೆಚ್ಚು ಕಡಿಮೆ 18 ವರ್ಷಗಳೇ ಬೇಕಾಯಿತು.


Sandalwood Special Stars Untold Story
ಇದು ವಿಷ್ಣು-ಅನಂತ್ ಸ್ಕ್ರೀನ್ ಹಂಚಿಕೊಂಡ ಮೊದಲ ಸಿನಿಮಾ


ಕನ್ನಡದ ವಿಭಿನ್ನ-ವಿಶೇಷ ಮತ್ತು ಅದ್ಭುತ ಕಲಾವಿದರು


ಸಾಹಸ ಸಿಂಹ ಕನ್ನಡ ಚಿತ್ರರಂಗದಲ್ಲಿ ವಂಶವೃಕ್ಷ ಚಿತ್ರದ ಮೂಲಕ 1972 ರಲ್ಲಿ ಕಾಲಿಟ್ಟಿರು. ತಮ್ಮದೇ ರೀತಿಯಲ್ಲಿಯೇ ಗುರುತಿಸಿಕೊಂಡರು. ನಾಗರಹಾವು ಚಿತ್ರದಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ರೂಪದಲ್ಲಿ ಕಾಣಿಸಿಕೊಂಡು ಹೊಸ ಅಲೆಯನ್ನ ಎಬ್ಬಿಸಿದರು.




ಒಂದೇ ಕಾಲಘಟ್ಟದಲ್ಲಿ ಬಂದ ವಿಶೇಷ ಕಲಾವಿದರು


ವಿಷ್ಣುವರ್ಧನ್ ಅವರ ಸಿನಿಪಯಣ ವಿಶೇಷವಾಗಿಯೇ ಸಾಗಿ ಬಂದಿತ್ತು. ಪುಟ್ಟಣ್ಣನವರ ಸಿನಿಮಾ ಮೂಲಕ ಇಡೀ ನಾಡಿನ ಜನರ ಹೃದಯಗೆದ್ದ ವಿಷ್ಣುವರ್ಧನ್ ಮತ್ತೆ ಹಿಂದೆ ತಿರುಗಿ ನೋಡಲಿಲ್ಲ ಬಿಡಿ. ಅತ್ಯದ್ಬುತ ಪಾತ್ರಗಳ ಮೂಲಕ ಎಲ್ಲರ ಹೃದಯವನ್ನ ಗೆಲ್ಲುತ್ತಲೇ ಬಂದ್ರು.


ವಿಷ್ಣು ಬಂದು ಒಂದು ವರ್ಷಕ್ಕೇನೆ ಅನಂತ್ ನಾಗ್ ಅವರೂ ಕನ್ನಡ ಇಂಡಸ್ಟ್ರೀಗೆ ಕಾಲಿಟ್ಟರು. 1973 ರಲ್ಲಿ ಬಂದ ಸಂಕಲ್ಪ ಚಿತ್ರದ ಮೂಲಕ ಇವರನ್ನ ಡಾಕ್ಟರ್ ರಾಜು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಈ ಮೂಲಕ ಅನಂತ್‌ನಾಗ್ ತಮ್ಮದೇ ವಿಶೇಷ ಮತ್ತು ಸಹಜ ನಟನೆ ಮುಖಾಂತರ ಎಲ್ಲರನ್ನ ಸೆಳೆಯುತ್ತಲೇ ತಮ್ಮದೇ ಪ್ರತ್ಯೇಕ ಹಾದಿಯನ್ನ ಮಾಡಿಕೊಂಡಿದ್ದರು.


ವಿಷ್ಣು ಮತ್ತು ಅನಂತ್ ಬಾಂಧವ್ಯ ಚೆನ್ನಾಗಿಯೇ ಇತ್ತು


ಹೆಚ್ಚು ಕಡಿಮೆ ಒಂದೇ ಕಾಲಘಟ್ಟದಲ್ಲಿ ಬಂದ ಈ ತಾರೆಯರು ಒಂದೇ ಸ್ಕ್ರೀನ್‌ನಲ್ಲಿ ಬರಲೇ ಇಲ್ಲ. ಹಾಗಂತ ಇವರ ನಡುವೆ ಜಗಳವಿತ್ತೇ ಅಂತ ನೀವು ಕೇಳಿದ್ರೆ, ಅಲ್ಲಿ ನೋ ಅನ್ನುವ ಉತ್ತರವೇ ಬರುತ್ತದೆ. ವಿಷ್ಣುವರ್ಧನ್ ಮತ್ತು ಅನಂತ್ ನಾಗ್ ಅವರ ನಡುವೆ ಒಳ್ಳೆ ಸ್ನೇಹ ಇತ್ತು. ಆದರೆ ಇವರನ್ನ ಒಟ್ಟಿಗೆ ಒಂದು ಸ್ಕ್ರೀನ್‌ನಲ್ಲಿ ತರುವ ಪ್ರಯತ್ನ ಆಗಿರಲಿಲ್ಲ? ಇಲ್ಲವೇ ಯಾರೂ ಈ ರೀತಿ ಯೋಚನೆ ಮಾಡಿರಲಿಲ್ಲವೋ.


ಆದರೆ ಕನ್ನಡದ ಪ್ರತಿಭಾವಂತ ನಿರ್ದೇಶಕರು ಈ ಒಂದು ಸಾಹಸ ಮಾಡಿದರು. ನಿರ್ಮಾಪಕ ಎಸ್.ಶಂಕರ್ ಅವರ ಸಪೋರ್ಟ್‌ನಿಂದ ಇದು ಸಾಧ್ಯವಾಯಿತು. ಹೌದು, 1990 ರಲ್ಲಿ ತೆರೆಗೆ ಬಂದ ಮತ್ತೆ ಹಾಡಿತು ಕೋಗಿಲೆ ಸಿನಿಮಾದಿಂದಲೇ ಇದು ಸಾಧ್ಯ ಆಗಿದೆ.


ಇದು ವಿಷ್ಣು-ಅನಂತ್ ಸ್ಕ್ರೀನ್ ಹಂಚಿಕೊಂಡ ಮೊದಲ ಸಿನಿಮಾ


ನಿರ್ದೇಶಕ ಎಚ್.ಆರ್.ಭಾರ್ಗವ್ ನಿರ್ದೇಶನದಲ್ಲಿ ಬಂದ ಈ ಚಿತ್ರದಲ್ಲಿ ವಿಷ್ಣುವರ್ಧನ್ ಮತ್ತು ಅನಂತ್ ನಾಗ್ ಅಭಿನಯಿಸಿದರು. ವಿಷ್ಣುವರ್ಧನ್ ಅವರು ಆನಂದ್ ಅನ್ನೋ ಪಾತ್ರವನ್ನ ನಿರ್ವಹಿಸಿದ್ದರು. ಅನಂತ್ ನಾಗ್ ಪ್ರಸನ್ನ ಕುಮಾರ್ ಅನ್ನುವ ರೋಲ್ ನಿರ್ವಹಿಸಿದ್ದರು.


ಇವರ ಈ ಮೊದಲ ಚಿತ್ರದಲ್ಲಿ ಇನ್ನು ಹಲವು ಪಾತ್ರಗಳೂ ಇದ್ದವು. ನಟಿ ಭವ್ಯ ಮತ್ತು ನಟಿ ರೂಪಿಣಿ ಕೂಡ ಈ ಚಿತ್ರದಲ್ಲಿ ಅಭಿನಯಸಿದ್ದರು. ಇವರ ಈ ಚಿತ್ರದಲ್ಲಿ ಅನಂತ್ ನಾಗ್ ಅವರು ಈ ಚಿತ್ರದಲ್ಲಿ ಎನ್‌ಆರ್‌ಐ ಪಾತ್ರವನ್ನ ಮಾಡಿದ್ದರು.


ಆನಂತ್ ಪಾತ್ರಧಾರಿ ವಿಷ್ಣುವರ್ಧನ್ ಒಬ್ಬ ಸ್ಟೇಜ್ ಸಿಂಗರ್ ರೋಲ್‌ ಅನ್ನ ನಿವರ್ಹಿಸಿದ್ದರು. ತುಂಬಾ ವಿಶೇಷ ಕಥೆಯನ್ನ ಹೊಂದಿದ್ದ ಮತ್ತೆ ಹಾಡಿತು ಕೋಗಿಲೆ ಚಿತ್ರದಲ್ಲಿ ರಾಜನ್ ನಾಗೇಂದ್ರ ಸಂಗೀತ ಮಾಡಿದ್ದರು. ಚಿ.ಉದಯ್‌ ಶಂಕರ್ ಹಾಡುಗಳನ್ನ ಬರೆದುಕೊಟ್ಟಿದ್ದರು.


ಜನರ ಮನ ಗೆದ್ದ ಮತ್ತೆ ಹಾಡಿತು ಕೋಗಿಲೆ ಚಿತ್ರದ ಹಾಡುಗಳು


ಮತ್ತೆ ಹಾಡಿತು ಕೋಗಿಲೆ ಅಂದ್ಮೇಲೆ ಇಲ್ಲಿ ಒಳ್ಳೆ ಹಾಡುಗಳು ಇಲ್ಲದೇ ಇದ್ದ್ರೇ ಹೇಗೆ? ಅದಕ್ಕೇನೆ ಡೈರೆಕ್ಟರ್ ಭಾರ್ಗವ್ ಅವರು ಚಿತ್ರದಲ್ಲಿ ಉತ್ತಮ ಹಾಡುಗಳನ್ನೆ ಪ್ಲಾನ್ ಮಾಡಿದ್ದರು. ಚಿತ್ರದ ಕಥೆಯ ಜೊತೆಗೆ ಮಿಳಿತಕೊಂಡಿದ್ದ ಹಾಡುಗಳು ಸೂಪರ್ ಆಗಿಯೇ ಬಂದಿದ್ದವು. ಜನರಿಗೂ ಇಷ್ಟ ಆಗಿದ್ದವು.


ಇಷ್ಟು ಒಳ್ಳೆಯ ಸಿನಿಮಾ ಆದ್ಮೇಲೆ ಅನಂತ್ ನಾಗ್ ಮತ್ತು ವಿಷ್ಣುವರ್ಧನ್ ಮತ್ತೆ ಜೋಡಿಯಾಗಿಯೇ ಸಿನಿಮಾ ಮಾಡಲಿಲ್ಲ. ಅದಕ್ಕೂ ಕಾರಣ ಏನೂ ಅನ್ನೋದು ತಿಳಿಯದು. ಆದರೆ ಈ ಜೋಡಿ ಮತ್ತೊಮ್ಮೆ ಒಂದೇ ಚಿತ್ರದಲ್ಲಿ ಸ್ಕ್ರೀನ್ ಹಂಚಿಕೊಳ್ಳಲು ಮೂರು ವರ್ಷಗಳೇ ಬೇಕಾಯಿತು.


Sandalwood Special Stars Untold Story
ಜನರ ಮನ ಗೆದ್ದ ಮತ್ತೆ ಹಾಡಿತು ಕೋಗಿಲೆ ಚಿತ್ರದ ಹಾಡುಗಳು


ನಿಷ್ಕರ್ಷ ಚಿತ್ರದಲ್ಲಿ ಒಟ್ಟಿಗೆ ಅಭಿನಯಸಿದ ವಿಷ್ಣು-ಅನಂತ್ ನಾಗ್


ಹಾಗೆ ಬಂದ ಇವರ ಚಿತ್ರದ ಹೆಸರು ನಿಷ್ಕರ್ಷ. ಇವರನ್ನ ಒಂದೇ ಚಿತ್ರದಲ್ಲಿ ಕರೆತರೋ ಕೆಲಸ ಮಾಡಿದವರು ಸುನಿಲ್ ಕುಮಾರ್ ದೇಶಾಯಿ ಅವರು. ಇವರ ಚಿತ್ರದಲ್ಲೂ ವಿಷ್ಣು ಮತ್ತು ಅನಂತ್ ನಾಗ್ ಅವರು ಸ್ಪೆಷಲ್ ಆಗಿಯೇ ಕಾಣಿಸಿಕೊಂಡರು.


ಅನಂತ್ ನಾಗ್ ಈ ಚಿತ್ರದಲ್ಲಿ ಪೊಲೀಸ್ ಕಮಿಷನರ್ ಸುಭಾಷ್ ಚಂದ್ರ ರೋಲ್ ಮಾಡಿದ್ದರು. ವಿಷ್ಣುವರ್ಧನ್ ಇಲ್ಲಿ ಭಯೋತ್ಪಾದಕ ನಿಗ್ರಹ ದಳದ ಕಮಾಂಡೋ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಹೃದಯ ಗೆದ್ದರು.

ಇದನ್ನೂ ಓದಿ: Actor Nani: ದಸರಾ ಶೂಟಿಂಗ್ ವೇಳೆ ನನಗೆ ನರಕ ದರ್ಶನವಾಯ್ತು! ಈ ಆಘಾತದಿಂದ ಹೊರಬರಲು 2 ತಿಂಗಳೇ ಬೇಕಾಯ್ತು


ಹಾಗೆ ಈ ಇವರ ಚಿತ್ರಗಳನ್ನ ನೋಡಿದ ಜನ ತುಂಬಾ ಇಷ್ಟಪಟ್ಟರು. ಈ ಬಂಧನ ಮತ್ತು ಜೀವನದಿ ಚಿತ್ರದಲ್ಲಿ ಕೂಡ ಈ ಸ್ಟಾರ್ಸ್ ಸ್ಕ್ರೀನ್ ಹಂಚಿಕೊಂಡಿದ್ದರು. ಹಾಗೇನೆ ಈಗ ಮಲ್ಟಿಸ್ಟಾರರ್ ಸಿನಿಮಾಗಳು ಮತ್ತೆ ಕನ್ನಡದಲ್ಲಿ ಹೆಚ್ಚಾಗುತ್ತಿವೆ ಅಂತಲೇ ಹೇಳಬಹುದು.

First published: