ಹೌದು ಸ್ವಾಮಿ, ನಾಳೆಯಿಂದ ಅಸಲಿ ಆಟ ಶುರುವಾಗಲಿದೆ. ಕನ್ನಡ (Kannada) ಬಿಗ್ ಬಾಸ್ ಒಟಿಟಿ (Bigg Boss OTT) ನಾಳೆಯಿಂದ ಪ್ರಾರಂಭವಾಗಲಿದೆ. ವೂಟ್ ಆ್ಯಪ್ನಲ್ಲಿ (Voot App) ನಾಳೆಯಿಂದ ಬಿಗ್ ಬಾಸ್ ಒಟಿಟಿ ಸ್ಟ್ರೀಮಿಂಗ್ (Streaming) ಆಗಲಿದೆ. ಬಿಗ್ ಬಾಸ್ ಕನ್ನಡದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಕಿಚ್ಚ ಸುದೀಪ್ (Kichcha Sudeep) ಅವರೇ ಇದನ್ನು ನಡೆಸಿಕೊಡಲಿದ್ದಾರೆ. ಈ ಬಾರಿ ಇಲ್ಲಿಯೂ 16 ಸ್ಪರ್ಧಿಗಳು (Contestants) ಇರಲಿದ್ದಾರೆ. ಆದರೆ ಈವರೆಗೂ ಯಾವ ಸ್ಪರ್ಧಿಗಳು ದೊಡ್ಮನೆ ಒಳಗೆ ಪ್ರವೇಶಿಸಲಿದ್ದಾರೆ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಇದೀಗ ವೂಟ್ ನಲ್ಲಿ ಬಿಡುಗಡೆ ಆಗಿರುವ ಹೊಸ ಪ್ರೋಮೋ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ವಾಸುಕಿ ವೈಭವ್:
ಹೌದು, ಬಿಗ್ ಬಾಸ್ ಹಳೆಯ ಸ್ಪರ್ಧಿ ಮತ್ತು ಸ್ಯಾಂಡಲ್ವುಡ್ನ ಖ್ಯಾತ ಸಿಂಗರ್ ವಾಸುಕಿ ವೈಭವ್ ಬಿಗ್ ಬಾಸ್ ಮನೆಯೊಳಗೆ ಎಂಟ್ರಿಕೊಟ್ಟಿದ್ದಾರೆ. ಇದೇನಪ್ಪಾ ಎಂದು ಶಾಕ್ ಆಗ್ಬೇಡಿ, ಏಕೆಂದರೆ ಇವರು ಸ್ಪರ್ಧಿಯಾಗಿ ಇಲ್ಲಿ ಬಂದಿಲ್ಲ. ಬದಲಿಗೆ ಬಿಗ್ ಬಾಸ್ ಓಟಿಟಿಗಾಗಿ ವಿಶೇಷ ಹಾಡೊಂದನ್ನು ಬರೆದಿದ್ದು, ಅದನ್ನು ವೇದಿಕೆ ಮೇಲೆ ಹಾಡಿದ್ದು, ಕೇಳಲು ಸಖತ್ ಮಜವಾಗಿದೆ. ಅಲ್ಲದೇ ಈ ವೇಳೆ ಅವರು ಬಿಗ್ ಬಾಸ್ ಹೊಸ ಮನೆಯೊಳಗೂ ಪ್ರವೇಶ ಮಾಡಿ ಬಂದಿದ್ದಾರೆ. ಈ ಕುರಿತ ಪ್ರೋಮೋವನ್ನು ವೂಟ್ ನಲ್ಲಿ ಪ್ರಸಾರ ಮಾಡಲಾಗುತ್ತಿದೆ.
ಓವರ್ ದಿ ಟಾಪ್' ಹಾಡಿಗೆ 'ಓವರ್ ದಿ ಟಾಪ್' ಚಪ್ಪಾಳೆ!
ಕರ್ಟನ್ ರೈಸರ್ ಆಗಸ್ಟ್ 6, ಬೆಳಗ್ಗೆ 7 | ಬಿಗ್ಬಾಸ್ OTT ಕನ್ನಡ Grand premiere ಆಗಸ್ಟ್ 6, ಸಂಜೆ 7
ಇಂತಹದೊಂದು ಪ್ರಶ್ನೆ ಇದೀಗ ಎಲ್ಲರಲ್ಲಿಯೂ ಮೂಡಿದೆ. ಇದಕ್ಕೆ ಉತ್ತರ ನೀಡಿರುವ ಕಲರ್ಸ್ ಕನ್ನಡ ಬಿಗ್ನೆಸ್ ಹೆಡ್ ಪ್ರಮೇಶ್ವರ್ ಗುಂಟ್ಕಲ್ ಈ ಬಾರಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಕಿರುತೆರೆ ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲವನ್ನು ಹುಟ್ಟುಹಾಕಿದ್ದಾರೆ.
The time has come for the big reveal! Are you ready to see the #BiggBossOTT house?🤩
ಇನ್ನು, ವಿಶೇಷ ಎಂಬಂತೆ ಈ ಬಾರಿ ಬಿಗ್ ಬಾಸ್ ಓಟಿಟಿ 42 ದಿನಗಳ ಕಾಲ ನಡೆಯಲಿದೆ. ಅಲ್ಲದೇ ಇದು 24/7 ಲೈವ್ ಇರಲಿದ್ದು, ಇನ್ನಷ್ಟು ಮನೋರಂಜನೆಯನ್ನು ನೀಡಲಿದೆಯಂತೆ. ಜೊತೆಗೆ ಬಿಗ್ ಬಾಸ್ ನಲ್ಲಿ ಸಿಕ್ರೇಟ್ ರೂಂ ಸಹ ಇರುವುದಿಲ್ಲ ಮತ್ತು ಇಲ್ಲಿ ಕೊನೆಯಲ್ಲಿ ಉಳಿಯುವ ಟಾಪ್ ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ 9ರಲ್ಲಿ ಮತ್ತೆ ಭಾಗವಹಿಸಲಿದ್ದಾರಂತೆ.
ಹೌದು, ಪ್ರತಿ ಬಾರಿಯೂ ಬಿಗ್ ಬಾಸ್ ಮನೆ ಅದ್ದೂರಿಯಾಗಿರುತ್ತದೆ. ಹಲವು ವಿಶೇಷತೆಗಳಿಂದ ಈ ಮನೆ ಕೂಡಿರುತ್ತದೆ. ಐಷಾರಾಮಿ ಮನೆಯಲ್ಲಿ ಸ್ಪರ್ಧಿಗಳು ಈ ಬಾರಿ 6 ವಾರಗಳ ಕಾಲ ಇರುತ್ತಾರೆ. ಹಾಗಾದರೆ ಈ ಬಾರಿ ಮನೆ ಹೇಗಿರಲಿದೆ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ. ಹೌದು, ಪರಮೇಶ್ವರ್ ಗುಂಟ್ಕಲ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಿಗ್ ಬಾಸ್ ಮನೆಯ ಫೋಟೋ ಹಂಚಿಕೊಂಡಿದ್ದು, Over the top! ಎಂದು ಬರೆದುಕೊಂಡಿದ್ದಾರೆ. ಒಂದು ಗೊಂಬೆಯ ಕಣ್ಣನ್ನು ಹಾಗೂ ಕುತ್ತಿಗೆಯನ್ನು 2 ಕೈಗಳು ಹಿಡಿರುವ ಚಿತ್ರ ಇದಾಗಿದ್ದು, ಪ್ರೇಕ್ಷಕರಲ್ಲಿ ಬಿಗ್ ಬಾಸ್ ಹೌಸ್ ಕುರಿತು ಕುತೂಹಲ ಹೆಚ್ಚಿದ್ದು, ಇದಕ್ಕೆಲ್ಲಾ ಆಗಸ್ಟ್ 6ರಂದು ತೆರೆಬೀಳಲಿದೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ