ಸ್ಯಾಂಡಲ್‌ವುಡ್ ಶಿವರಾಜ್ ಕುಮಾರ್ (Shiva Rajkumar Special Day) ಎಲ್ಲರ ನೆಚ್ಚಿನ ನಾಯಕ ನಟ ಆಗಿದ್ದಾರೆ. ಶಿವಣ್ಣ ಅಂದ್ರೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ ಇದ್ದೇ ಇರುತ್ತದೆ. ಶಿವರಾಜ್ ಕುಮಾರ್ ವ್ಯಕ್ತಿತ್ವವೇ ಹಾಗಿದೆ. ಎಲ್ಲೇ (Sandalwood Shiva Rajkumar) ಹೋದ್ರೂ ಇವರಿಗೆ ಫ್ಯಾನ್ ಫಾಲೋಯಿಂಗ್ ಇರುತ್ತದೆ. ಆತ್ಮೀಯರು ಆ ಕೂಡಲೇ ಹುಟ್ಟುಕೊಳ್ಳುತ್ತಾರೆ. ಅಷ್ಟು ಸ್ಪೆಷಲ್ ಆಗಿರೋ ಈ ನಾಯಕನ ಜೀವನದಲ್ಲಿ (Shiva Rajkumar Latest Update) ಆ ಹುಡುಗಿ ಪ್ರವೇಶ ಆದ್ಮೇಲೆ ಲಕ್ ಅನ್ನೋದು ಕೈ ಕೊಡಲೇ ಇಲ್ಲ. ಕೈ ಹಿಡಿದು ಜೊತೆ ಜೊತೆಗೆ ಸಾಗುತ್ತಿದೆ. ಹಾಗೆ ಸಾಗಿ ಬಂದ ದಾರಿಗೆ ಈಗ 37 ವರ್ಷ ಆಗಿದೆ. ಆ ಹುಡುಗಿ ಯಾರು ? ಏನ್ ಇದು ಶಿವಣ್ಣನ ಹೊಸ ಕಥೆ ? ಈ ಎಲ್ಲ ಸ್ಪೆಷಲ್ ವಿಚಾರ ಇಲ್ಲಿದೆ.
ಶಿವಣ್ಣ ಜೀವನದಲ್ಲಿ ಸಿನಿಮಾರಂಗಕ್ಕೆ ಬರೋ ಮೊದಲೇ ಬಂದ ಆ ಹುಡುಗಿ ಯಾರು ಗೊತ್ತೆ? ಹೌದು ಈ ಒಂದು ಕುತೂಹಲದ ಪ್ರಶ್ನೆಗೆ ಈಗಲೇ ಉತ್ತರ ಕೊಡ್ತಿವಿ ಬಿಡಿ. ಈ ವಿಷಯ ಎಲ್ಲರಿಗೂ ಗೊತ್ತಿರೋದೇ, ಎಲ್ಲರೂ ಈ ವಿಷಯವನ್ನ ಅಷ್ಟೇ ಗೌರವದಿಂದಲೇ ಕಾಣುತ್ತಾರೆ.
ಮೇ-19,1986 ಶಿವಣ್ಣನ ಜೀವನದ ಸ್ಪೆಷಲ್ ಡೇ
ಶಿವರಾಜ್ ಕುಮಾರ್ ಜೀವನದಲ್ಲಿ ಮೇ-19,1986 ತುಂಬಾ ಸ್ಪೆಷಲ್ ಡೇ ಆಗಿದೆ. ಈ ದಿನವೇ ಶಿವಣ್ಣ ಜೀವನದಲ್ಲಿ ಆ ಹುಡುಗಿಯ ಎಂಟ್ರಿ ಆಗಿದೆ. ಆ ಹುಡುಗಿ ತಂದೆ ಸಿನಿಮಾದವರಲ್ಲ, ರಾಜಕಾರಣಿ ಅನ್ನೋದು ಅಷ್ಟೇ ಸತ್ಯ.
ಶಿವಣ್ಣನ ಜೀವನದ ಸ್ಪೆಷಲ್ ಹುಡುಗಿ ಇವರೇ ನೋಡಿ
ನಾವು ಹೇಳ್ತಿರೋ ಆ ಹುಡುಗಿ ಬೇರೆ ಯಾರೋ ಅಲ್ಲ. ಗೀತಾ ಶಿವರಾಜ್ ಕುಮಾರ್ ಅನ್ನೋದು ಅಷ್ಟೇ ಸತ್ಯ. ಶಿವಣ್ಣನ ಜೀವನದಲ್ಲಿ ಗೀತಾ ಶಿವರಾಜ್ ಕುಮಾರ್ ಬಂದು ಈಗ 37 ವರ್ಷಗಳೆ ಕಳೆದಿವೆ. ಶಿವಣ್ಣನ ಬಾಳ ಸಂಗಾತಿಯಾಗಿ 37 ವರ್ಷ ಜೀವನ ಸಾಗಿಸಿದ್ದಾರೆ.
ಅರಮನೆ ಮೈದಾನದಲ್ಲಿ ದೊಡ್ಮನೆ ಮದುವೆ ಸಂಭ್ರಮ
ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಮದುವೆ ಪ್ಯಾಲೆಸ್ ಗ್ರೌಂಡ್‌ನಲ್ಲಿ ನಡೆದಿತ್ತು. ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಇವರ ಮದುವೆ ದಿನ ಅಣ್ಣಾವ್ರು ಕೂಡ ಊಟ ಮಾಡದೇ ಹಾಗೆ ಬಂದಿದ್ದರು ಅನ್ನೋ ಮಾತು ಇದೆ.
ರಾಜ್ ಫ್ಯಾಮಿಲಿಗೆ ಆ ದಿನ ನಿಜಕ್ಕೂ ತುಂಬಾ ಸ್ಪೆಷಲ್
ಇದರ ಹೊರತಾಗಿ ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಮದುವೆ ಅದ್ಧೂರಿಯಾಗಿಯೇ ನಡೆದಿತ್ತು. ತುಂಬಾ ಜನ ಇಲ್ಲಿ ಆಗಮಿಸಿದ್ದರು. ಈ ದಿನ ರಾಜ್ ಫ್ಯಾಮಿಲಿಯಲ್ಲಿ ಅಷ್ಟೇ ವಿಶೇಷವಾಗಿಯೇ ಇತ್ತು. ಹಾಗೆ ಅದ್ಧೂರಿ ಮದುವೆ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ 37 ವರ್ಷ ಸುಖಿ ಜೀವನ ಸಾಗಿಸಿಕೊಂಡು ಬಂದಿದ್ದಾರೆ.
ಶಿವಣ್ಣನ ಜೀವನದಲ್ಲಿ ಗೀತಾ ಯಾಕೆ ಸ್ಪೆಷಲ್ ಗೊತ್ತೇ?
ಶಿವರಾಜ್ ಕುಮಾರ್ ಪ್ರತಿ ಹೆಜ್ಜೆಯಲ್ಲೂ ಗೀತಾ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ. ಶಿವಣ್ಣನ ಪ್ರತಿ ವಿಷಯವನ್ನ ಗಮನಸಿಕೊಂಡು ಬಂದಿರೋ ಗೀತಾ ಶಿವರಾಜ್ ಕುಮಾರ್ ಸಪೋರ್ಟ್ ಮಾಡ್ತಾನೇ ಬಂದಿದ್ದಾರೆ.
ಶಿವಣ್ಣ-ಗೀತಾ ಪ್ರೀತಿಗೆ ಸಾಟಿನೇ ಇಲ್ಲ ನೋಡಿ
ಇವರ ಈ ಒಂದು ಅಗಾಧ ಪ್ರೀತಿಗೆ ಸಾಟಿನೇ ಇಲ್ಲ ಬಿಡಿ. ಶಿವರಾಜ್ ಕುಮಾರ್ ಅವರನ್ನ ಪ್ರೀತಿಸೋ ಫ್ಯಾನ್ಸ್ ಗೀತಾ ಶಿವರಾಜ್ ಕುಮಾರ್ ಅವರನ್ನೂ ಅಷ್ಟೇ ಗೌರವಿಸುತ್ತಾರೆ. ಗೀತಾ ಶಿವರಾಜ್ ಕುಮಾರ್ ಜನ್ಮ ದಿನ ಇದ್ರೂ ಅಷ್ಟೇ ಮನೆಗೆ ಬಂದು ಸೆಲೆಬ್ರೇಟ್ ಮಾಡುತ್ತಾರೆ.
ಇದನ್ನೂ ಓದಿ: Abhishek Ambareesh: ಬ್ಯಾಡ್‌ಮ್ಯಾನರ್ಸ್ ಸಿನಿಮಾದ ಯಂಗ್ ರೆಬೆಲ್ ಸ್ಟಾರ್ ಲುಕ್ ರಿವೀಲ್
ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಶಿವಣ್ಣ-ಗೀತಾ
ಶಿವರಾಜ್ ಕುಮಾರ್ ಅವರಿಗೆ ಕೊಡುವ ಗೌರವವನ್ನ ಗೀತಾ ಅವರಿಗೂ ಕೊಡ್ತಾನೇ ಬಂದಿದ್ದಾರೆ. ಅಷ್ಟು ಯಶಸ್ವಿ ಜೀವನ ಸಾಗಿಸಿದ ಈ ಜೋಡಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿಯೇ ಇದ್ದಾರೆ. ಆ ದಿನಗಳನ್ನ ಮೆಲುಕು ಹಾಕುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ