• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Shiva Rajkumar: ಸ್ಯಾಂಡಲ್‌ವುಡ್‌ಗೆ ಶಿವಣ್ಣ ಯಾರನ್ನ ಇಂಟ್ರಡ್ಯೂಸ್ ಮಾಡ್ತಿದ್ದಾರೆ ಗೊತ್ತಾ?

Shiva Rajkumar: ಸ್ಯಾಂಡಲ್‌ವುಡ್‌ಗೆ ಶಿವಣ್ಣ ಯಾರನ್ನ ಇಂಟ್ರಡ್ಯೂಸ್ ಮಾಡ್ತಿದ್ದಾರೆ ಗೊತ್ತಾ?

ಕಳ್ಳನ ಕಥೆಗೆ ಶಿವನ ಕಂಠಸಿರಿಯ ಸ್ಪರ್ಶ

ಕಳ್ಳನ ಕಥೆಗೆ ಶಿವನ ಕಂಠಸಿರಿಯ ಸ್ಪರ್ಶ

ಕನ್ನಡಕ್ಕೆ ಶಿವರಾಜ್ ಕುಮಾರ್ ಪರಿಚಿಸ್ತಿರೋ ಟಾಲಿವುಡ್‌ನ ಆ ನಾಯಕ ಯಾರು? ಶಿವಣ್ಣ ಯಾವ ಹೀರೋನ ಕಥೆಯನ್ನ ಇಲ್ಲಿ ಹೇಳ್ತಿದ್ದಾರೆ. ಈ ಬಗೆಗಿನ ಇತರ ಮಾಹಿತಿ ಇಲ್ಲಿದೆ ಓದಿ.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar New Updates) ಯಾರಿಗೂ ಬೇಸರ ಮಾಡೋದಿಲ್ಲ. ಯಾರ ಮನಸ್ಸಿಗೂ ಹರ್ಟ್ ಮಾಡಿರೋದು ಇಲ್ಲ. ಸಿನಿಮಾ ಇಂಡ್ಟ್ರೀಯಲ್ಲಿ ಎಲ್ಲರಿಗೂ ಬೇಕಾಗೋ ನಟ ಯಾರೂ (Sandalwood Shiva Rajkumar) ಅಂತ ಕೇಳಿದ್ರೆ, ಅಲ್ಲಿ ಶಿವರಾಜ್ ಕುಮಾರ್ ಹೆಸರು ಮೊದಲು ಬರುತ್ತದೆ. ಈ ಒಂದು ಭಾವನೆ ಕನ್ನಡ ಇಂಡಸ್ಟ್ರೀಯಲ್ಲಿ ಮಾತ್ರ ಇದೆ ಅನ್ಕೋಬೇಡಿ. ಪಕ್ಕದ (New Telugu Movie Latest News) ಟಾಲಿವುಡ್‌ನಲ್ಲೂ ಶಿವಣ್ಣನ ಆತ್ಮೀಯರಿದ್ದಾರೆ. ಅವರನ್ನ ಕರೆದು ತಮ್ಮ ಸಿನಿಮಾದಲ್ಲಿ ಆ್ಯಕ್ಟ್ ಮಾಡುವಂತೆ ಪ್ರೀತಿಯಿಂದ ಕೇಳುವ ಸ್ನೇಹಿತರು ಇದ್ದಾರೆ. ಅಷ್ಟೊಂದು (Sandalwood Shiva Latest Update) ಪ್ರೀತಿ ಗಳಿಸಿರೋ ಶಿವರಾಜ್ ಕುಮಾರ್ ತಮ್ಮ ಕಂಠಸಿರಿಯಲ್ಲಿ ಆ ಒಬ್ಬ ನಟನನ್ನ ಕನ್ನಡಕ್ಕೆ ಪರಿಚಯಿಸುತ್ತಿದ್ದಾರೆ. ಆ ಕುರಿತು ಸ್ಟೋರಿ ಇಲ್ಲಿದೆ.


ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾ ಸದ್ದು ಮಾಡಿದೆ. ತೆಲುಗು ಚಿತ್ರರಂಗದಲ್ಲೂ ಈ ಚಿತ್ರ ಹವಾ ಕ್ರಿಯೇಟ್ ಮಾಡಿತ್ತು. ಈ ಸಿನಿಮಾ ಮುಗಿದ್ಮೇಲೆ ಶಿವಣ್ಣ ಏನ್ ಮಾಡ್ತಾರೆ ಅನ್ನುವ ಪ್ರಶ್ನೆಗೆ ಇದೀಗ ಭೈರತಿ ರಣಗಲ್ ಅಂತ ಹೇಳಬಹುದು.


Sandalwood Shiva Rajkumar Gave Voice to New Telugu Movie
ಟೈಗರ್ ನಾಗೇಶ್ವರ್ ರಾವ್ ಚಿತ್ರಕ್ಕೆ ಶಿವಣ್ಣನ ಕಂಠಸಿರಿ


ಕನ್ನಡಕ್ಕೆ ಆ ನಾಯಕನನ್ನ ಪರಿಚಯಸ್ತಿರೋ ಶಿವರಾಜ್ ಕುಮಾರ್


ಸಿನಿಮಾಗಳ ಕೆಲಸದ ಮಧ್ಯೆ ಎಲೆಕ್ಷನ್ ಪ್ರಚಾರ ಕೂಡ ಮಾಡಿದ್ದರು ಶಿವರಾಜ್ ಕುಮಾರ್. ಆದರೆ ಈಗ ಇನ್ನೂ ಒಂದು ಕೆಲಸ ಮಾಡಿದ್ದಾರೆ. ಆ ಕೆಲಸ ಟಾಲಿವುಡ್‌ನ ಅ ಒಬ್ಬ ಹೀರೋಗೆ ತುಂಬಾನೇ ಖುಷಿಕೊಟ್ಟಿದೆ.
ಶಿವರಾಜ್ ಕುಮಾರ್ ಈಗ ಟಾಲಿವುಡ್‌ನ ಸಿನಿಮಾ ಒಂದಕ್ಕೆ ತಮ್ಮ ವಾಯ್ಸ್ ಕೊಟ್ಟಿದ್ದಾರೆ. ಆದರೆ ಅದು ಕನ್ನಡ ಅನ್ನೋದೇ ವಿಶೇಷವಾಗಿದೆ. ಟೈಗರ್‌ ನಾಗೇಶ್ವರ್ ರಾವ್ ಸಿನಿಮಾದ ಫಸ್ಟ್ ಲುಕ್ ಟೀಸರ್‌ಗೆ ಶಿವಣ್ಣ ಧ್ವನಿಯಾಗಿದ್ದಾರೆ.
ಟೈಗರ್ ನಾಗೇಶ್ವರ್ ರಾವ್ ಚಿತ್ರಕ್ಕೆ ಶಿವಣ್ಣ ಕಂಠಸಿರಿ


ಬೆಂಗಳೂರಿನ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಟೈಗರ್ ನಾಗೇಶ್ವರ್ ರಾವ್ ಚಿತ್ರದ ಫಸ್ಟ್ ಲುಕ್ ಟೀಸರ್ ಗೆ ಹಿನ್ನೆಲೆ ಧ್ವನಿಯನ್ನ ಕ್ಯಾಪ್ಚರ್ ಮಾಡಲಾಗಿದೆ.  ಚಿತ್ರದ ಡೈರೆಕ್ಟರ್ ವಂಶಿ ಸ್ವತಃ ಇಲ್ಲಿಗೆ ಬಂದು ಆ ಕೆಲಸ ಮಾಡಿಕೊಂಡಿದ್ದಾರೆ.


ಟೈಗರ್ ನಾಗೇಶ್ವರ್ ರಾವ್ ಚಿತ್ರದ ಕನ್ನಡ ಫಸ್ಟ್ ಲುಕ್ ಟೀಸರ್‌ಗೆ ಶಿವಣ್ಣನ ವಾಯ್ಸ್ ಇರಲಿದೆ. ಇದೇ 24 ರಂದು ಸಿನಿಮಾದ ಪಂಚ ಭಾಷೆಯ ಟೀಸರ್ ರಿಲೀಸ್ ಆಗಲಿದೆ.ಕಳ್ಳನ ಕಥೆಗೆ ಶಿವನ ಕಂಠಸಿರಿಯ ಸ್ಪರ್ಶ


ಚಿತ್ರದ ಕಥೆ ಬಗ್ಗೆ ಹೇಳೋದಾದ್ರೆ, ಇದೊಂದು ಕಳ್ಳನ ಕಥೆ ಆಗಿದೆ. 70 ರ ದಶಕದಲ್ಲಿ ಸ್ಟುವರ್ಟ್‌ ಪುರಂ ನಲ್ಲಿ ಒಬ್ಬ ಕಳ್ಳ ಇದ್ದ. ಅವರ ಕಥೆಯನ್ನೇ ಇಲ್ಲಿ ಸಿನಿಮಾ ಮಾಡಲಾಗಿದೆ.


Sandalwood Shiva Rajkumar Gave Voice to New Telugu Movie
ಮಾಸ್ ಮಹಾರಾಜ್ ರವಿತೇಜ ವಿಭಿನ್ನ ಸಿನಿಮಾ


ಈ ಕಳ್ಳನ ಕಥೆಯನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲಾಗುತ್ತಿದೆ. ವಂಶಿ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಕಾರ್ತಿಕೇಯನ್ ಮತ್ತು ಕಾಶ್ಮೀರಿ ಫೈಲ್ಸ್ ದಂತಹ ಚಿತ್ರ ನಿರ್ಮಿಸಿರೋ ಅಭಿಷೇಕ್ ಅಗರವಾಲ್ ಈ ಚಿತ್ರಕ್ಕೂ ದುಡ್ಡುಹಾಕಿದ್ದಾರೆ.


ಮಾಸ್ ಮಹಾರಾಜ್ ರವಿತೇಜ ವಿಭಿನ್ನ ಸಿನಿಮಾ


ಮಾಸ್ ಮಹಾರಾಜ ರವಿತೇಜ ಈ ಚಿತ್ರದಲ್ಲಿ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ. ಈ ಹಿಂದಿನ ಚಿತ್ರಗಳಿಗಿಂತಲೂ ಈ ಸಿನಿಮಾದಲ್ಲಿ ರವಿತೇಜ ಬೇರೆನೆ ಕಾಣಿಸುತ್ತಿದ್ದಾರೆ. ಇನ್ನು ಈ ನಾಯಕನಿಗೆ ಇಲ್ಲಿ ನೂಪುರ್ ಸೆನೋನ್ ಹಾಗೂ ಗಾಯಿತ್ರಿ ಭಾರದ್ವಾಜ್ ಜೋಡಿ ಆಗಿದ್ದಾರೆ.


ಇದನ್ನೂ ಓದಿ: The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್‌ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ

top videos


  ಆರ್ ಮಧಿ ಚಿತ್ರಕ್ಕೆ ಕ್ಯಾಮೆರಾವರ್ಕ್ ಮಾಡಿದ್ದಾರೆ. ವಿ. ಪ್ರಕಾಶ್ ಕುಮಾರ್ ಸಂಗೀತ ಕೊಟ್ಟಿದ್ದಾರೆ. ಶ್ರೀಕಾಂತ್ ವೀಸಾ ಖಡಕ್ ಡೈಲಾಗ್ ಬರೆದುಕೊಟ್ಟಿದ್ದಾರೆ. ಒಟ್ಟಾರೆ, ಮಾಸ್ ಮಹಾರಾಜನ ಈ ಸಿನಿಮಾ ದೊಡ್ಡಮಟ್ಟದಲ್ಲಿಯೇ ಅಕ್ಟೋಬರ್-22 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ.

  First published: