• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Shiva Rajkumar: ಜೈ ಬಾಲಯ್ಯ ಎಂದ ಶಿವಣ್ಣ! ಮತ್ತೊಮ್ಮೆ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರಾ ಈ ಸ್ಟಾರ್ಸ್?

Shiva Rajkumar: ಜೈ ಬಾಲಯ್ಯ ಎಂದ ಶಿವಣ್ಣ! ಮತ್ತೊಮ್ಮೆ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರಾ ಈ ಸ್ಟಾರ್ಸ್?

ಟಾಲಿವುಡ್‌ ಬಾಲಯ್ಯ ಜೊತೆಗೆ ಶಿವಣ್ಣನ ಮತ್ತೊಂದು ಸಿನಿಮಾ

ಟಾಲಿವುಡ್‌ ಬಾಲಯ್ಯ ಜೊತೆಗೆ ಶಿವಣ್ಣನ ಮತ್ತೊಂದು ಸಿನಿಮಾ

ಶಿವರಾಜ್ ಕುಮಾರ್ ಮತ್ತೊಮ್ಮೆ ಟಾಲಿವುಡ್‌ಗೆ ಹೊರಟ್ರೇ ? ಶಿವಣ್ಣ ಮತ್ತು ಬಾಲಯ್ಯ ಮತ್ತೆ ಸಿನಿಮಾ ಮಾಡ್ತಾರಂತೆ ಹೌದಾ ? ಶಿವಣ್ಣ ಈ ಬಗ್ಗೆ ಕೊಟ್ಟ ಮಾಹಿತಿ ಏನು ? ಇಲ್ಲಿದೆ ನೋಡಿ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್ ಹೀರೋ ಶಿವರಾಜ್ (Sandalwood Shiva Rajkumar) ಕುಮಾರ್ ಮತ್ತೆ ಟಾಲಿವುಡ್‌ಗೆ ಹೊರಟ್ರೇ ? ಈ ಒಂದು ಪ್ರಶ್ನೆ ಹುಟ್ಟಲು ಕಾರಣ ಏನು ? ಶಿವಣ್ಣ ಈ ಬಗ್ಗೆ ಅಧಿಕೃತವಾಗಿಯೇ (Shiva Rajkumar Tollywood Movie) ಹೇಳಿದ್ದಾರೆಯೇ ? ಶಿವಣ್ಣ ಮತ್ತು ಬಾಲಯ್ಯ ಒಟ್ಟಿಗೆ ಈ ಹಿಂದೆ ಮಾಡಿರೋ ಸಿನಿಮಾ ಯಾವುದು ? ಈ ಸಲ ಈ ಕಲಾವಿದರ ಮಾಡ್ತಿರೋ ಸಿನಿಮಾ ಯಾವುದು ? ಈ (Shiva Rajkumar Movie Updates) ಬಗ್ಗೆ ಶಿವಣ್ಣ ಹೇಳಿದ್ದೆಲ್ಲಿ ? ಶಿವಣ್ಣ ಮಾಡ್ತಿರೋ ಆ ಹೊಸ ಸಿನಿಮಾ ಡೈರೆಕ್ಟರ್ ಯಾರು ? ಪ್ರೋಡಕ್ಷನ್ ಹೌಸ್ ಯಾವುದು ? ಚಿತ್ರಕ್ಕೆ ಟೈಟಲ್ ಫೈನಲ್ (Tollywood Movie Updates) ಆಗಿದಿಯೇ ? ಈ ಎಲ್ಲ ಪ್ರಶ್ನೆಗಳ ಸುತ್ತದ ಒಂದು ಸ್ಟೋರಿ ಇಲ್ಲಿದೆ ಓದಿ.


6 ವರ್ಷದ ಬಳಿಕ ಮತ್ತೆ ಒಂದಾಗ್ತಿರೋ ಶಿವಣ್ಣ ಬಾಲಯ್ಯ


ಹ್ಯಾಟ್ರಿಕ್ ಹೀರೊ ಶಿವರಾಜ್‌ ಕುಮಾರ್ ಮತ್ತೊಮ್ಮೆ ಟಾಲಿವುಡ್‌ಗೆ ಹೊರಟು ನಿಂತಿದ್ದಾರೆ. ತಮ್ಮ ನಿರ್ಮಾಣದ ವೇದ ಚಿತ್ರದ ಮೂಲಕವೇ ಈಗಾಗಲೇ ಶಿವಣ್ಣ ಟಾಲಿವುಡ್‌ನಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ಆದರೆ ಅದೇ ಶಿವಣ್ಣ ಈಗ ಮತ್ತೊಮ್ಮೆ ಟಾಲಿವುಡ್‌ ಸಿನಿಮಾ ಮಾಡುತ್ತಿದ್ದಾರೆ.


Sandalwood Shiva Rajkumar another Tollywood Movie Announced Further Details Yet to be Reveal
6 ವರ್ಷದ ಬಳಿಕ ಮತ್ತೆ ಒಂದಾಗ್ತಿರೋ ಶಿವಣ್ಣ ಬಾಲಯ್ಯ


ಸೂಪರ್ ಸ್ಟಾರ್ ಬಾಲಕೃಷ್ಣ ಅಭಿನಯದ ಗೌತಮಿಪುತ್ರ ಶಾತಕರ್ಣಿ ಸಿನಿಮಾ ಮೂಲಕವೇ ಶಿವರಾಜ್‌ ಕುಮಾರ್ ಟಾಲಿವುಡ್‌ಗೆ ಎಂಟ್ರಿಕೊಟ್ಟಿದ್ರು. ಅದಾಗಿ ಈಗ 6 ವರ್ಷಗಳೇ ಆಗಿದೆ. ಆದರೆ ಇದೀಗ ಶಿವಣ್ಣ ಮತ್ತೊಮ್ಮೆ ಬಾಲಯ್ಯ ಜೊತೆಗೆ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ.




ಬಾಲಯ್ಯ ಮತ್ತು ಶಿವಣ್ಣನ ಹೊಸ ಸಿನಿಮಾ ಹೇಗಿರುತ್ತೇ ?


ಇದೀಗ ಶಿವಣ್ಣ ಮತ್ತು ಬಾಲಯ್ಯ ಮತ್ತೊಮ್ಮೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಶಿವಣ್ಣ ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಈ ವಿಷಯವನ್ನ ರಿವೀಲ್ ಮಾಡಿದ್ದಾರೆ.




ಶಿವರಾಜ್‌ ಕುಮಾರ್ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಹೋಗಿದ್ದರು. ಆ ಕಾರ್ಯಕ್ರಮದಲ್ಲಿ ಬಾಲಯ್ಯ ಕೂಡ ಇದ್ದರು. ಒಟ್ಟಿಗೆ ವೇದಿಕೆ ಮೇಲೆ ಕಾಣಿಸಿಕೊಂಡರು. ಇದೇ ವೇಳೆ ಡಯಾಸ್ ಮೇಲೆ ಇದ್ದ ಶಿವಣ್ಣನ ಬಳಿ ಬಂದ ಬಾಲಯ್ಯ ನಮ್ಮ-ನಿಮ್ಮ ಸಿನಿಮಾ ಬಗ್ಗೆ ಹೇಳಿ ಅಂತಲೇ ತಿಳಿಸಿದರು.


ಟಾಲಿವುಡ್‌ ಬಾಲಯ್ಯ ಜೊತೆಗೆ ಶಿವಣ್ಣನ ಮತ್ತೊಂದು ಸಿನಿಮಾ


ಆ ಕೂಡಲೇ ಶಿವಣ್ಣ ಅಸಲಿ ವಿಷಯ ಹೇಳಿಯೇ ಬಿಟ್ಟರು. " ಹೌದು ನಾನು ಮತ್ತು ಬಾಲಯ್ಯ ಅವರು ಮತ್ತೊಮ್ಮೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದೇವೆ" ಹೀಗೆ ಹೇಳಿದ್ದೇ ತಡ, ಬಾಲಯ್ಯ ತುಂಬಾ ಖುಷಪಟ್ಟರು. ಶಿವಣ್ಣನ ಜೊತೆಗೆ ಕೆಲಸ ಮಾಡೋಕೆ ಹೆಚ್ಚು ಇಷ್ಟಪಡೋ ಬಾಲಯ್ಯ, ಈ ಮಾತು ಕೇಳಿದಾಕ್ಷಣ ಮಂದಹಾಸ ಬೀರಿದರು.


Sandalwood Shiva Rajkumar another Tollywood Movie Announced Further Details Yet to be Reveal
ಶಿವಣ್ಣನ ಪರ ಭಾಷೆ ಸಿನಿಮಾ ಜರ್ನಿ ಸೂಪರ್


ಆದರೆ ಸಿನಿಮಾ ಯಾವುದು ? ಸಿನಿಮಾ ಟೈಟಲ್ ಏನು ? ಯಾರು ಡೈರೆಕ್ಟರ್ ? ಯಾರು ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ ? ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇಲ್ಲ. ಆದರೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ತಿರೊ ಮಾಹಿತಿ ಮಾತ್ರ ಈಗ ಅಧಿಕೃತವಾಗಿಯೇ ಹೊರ ಬಿದ್ದಿದೆ.


ಶಿವಣ್ಣನ ಪರ ಭಾಷೆ ಸಿನಿಮಾ ಜರ್ನಿ ಸೂಪರ್


ಶಿವರಾಜ್ ಕುಮಾರ್ ಈ ಹಿಂದೆ ಕೇವಲ ಕನ್ನಡಕ್ಕೆ ಸೀಮತವಾಗಿದ್ದರು. ಗೌತಮಿಪುತ್ರ ಶಾತಕರ್ಣಿ ಚಿತ್ರದಿಂದ ಪರಭಾಷೆಯ ಸಿನಿಮಾಗಳಲ್ಲೂ ಅಭಿನಯಿಸೋಕೆ ಆರಂಭಿಸಿದ್ದು ಈಗಾಗಲೇ ತಮಿಳು ಸಿನಿಮಾದಲ್ಲೂ ಶಿವಣ್ಣ ಅಭಿನಯಿಸಿ ಬಂದಿದ್ದಾರೆ.


ಇದನ್ನೂ ಓದಿ: Pramod Shetty: ಪಂಜುರ್ಲಿ ದೈವದ ಮೊರೆ ಹೋದ ಕಾಂತಾರ ನಟ! ಪ್ರಮೋದ್ ಶೆಟ್ಟಿ ಹೇಳಿದ್ದೇನು?

top videos


    ಇನ್ನು ಗೌತಮಿಪುತ್ರ ಶಾತಕರ್ಣಿ ಸಿನಿಮಾದಲ್ಲಿ ಕಾಳಹಸ್ತೇಶ್ವರ ಪಾತ್ರದ ಮೂಲಕವೇ ಶಿವಣ್ಣ ಗಮನ ಸೆಳೆದಿದ್ದರು. ಬಾಲಯ್ಯನ ಈ ಸಿನಿಮಾದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದರು. ತಮ್ಮ ಪರ ಭಾಷಾ ಸಿನಿಮಾದ ಜರ್ನಿಯನ್ನ ಕೂಡ ಆರಂಭಿಸಿದ್ದರು.

    First published: